2016ರಲ್ಲಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ?

Written By:

ಸಮಕಾಲೀನ ಮಾರುಕಟ್ಟೆಯಲ್ಲಿ ದೇಶದ ಅತಿ ಬೇಡಿಕೆಯ ಕಾರಾಗಿರುವ ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ವರ್ಷನ್ ಭಾರತವನ್ನು 2016ನೇ ಇಸವಿಯಲ್ಲಿ ಪ್ರವೇಶಿಸಲಿದೆಯೆಂದು ಮೂಲವೊಂದು ತಿಳಿಸಿದೆ.

ಫೋರ್ಡ್ ಇಕೊಸ್ಪೋರ್ಟ್ ಟೆಸ್ಟ್ ಡ್ರೈವ್ ಹಾಗೂ ಅಪಘಾತ

ಸ್ಟೈಲಿಷ್ ಲುಕ್, ನಿರ್ವಹಣೆ, ಹಣಕ್ಕೆ ತಕ್ಕ ಮೌಲ್ಯ, ಇಂಧನ ಕ್ಷಮತೆ ಮುಂತಾದ ವಿಚಾರಗಳಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿರುವ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಉತ್ತಮ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದರ ಬೇಡಿಕೆ ಎಷ್ಟರ ಮಟ್ಟಿಗಿತ್ತೆಂದರೆ ಸಂಸ್ಥೆಯು ಬುಕ್ಕಿಂಗ್ ಪ್ರಕ್ರಿಯೆಯನ್ನು ನಿಲುಗಡೆಗೊಳಿಸುವಂತಾಗಿತ್ತು.

2016ರಲ್ಲಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ?

ವರದಿಗಳ ಪ್ರಕಾರ ಚೆನ್ನೈನ ಘಟಕದಲ್ಲಿ ವಾರ್ಷಿಕವಾಗಿ 55,000-70,000 ಯುನಿಟ್ ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ಫೋರ್ಡ್, 2016ರಲ್ಲಿ ಅಮೆರಿಕಕ್ಕೂ ರಫ್ತು ಕಾರ್ಯ ಕೈಗೊಳ್ಳಲಿದೆ.

2016ರಲ್ಲಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ?

ಫೋರ್ಡ್ ಪಾಲಿಗೆ, ಭಾರತವು ಪ್ರಮುಖ ರಫ್ತು ಕೇಂದ್ರವಾಗಿ ಮಾರ್ಪಾಡುಗೊಂಡಿದೆ. ಕಳೆದ ಆರ್ಥಿಕ ಸಾಲಿನಲ್ಲೇ ಒಟ್ಟು ತಯಾರಿ ಮಾಡಿರುವ 1.3 ಲಕ್ಷ ಯುನಿಟ್‌ಗಳ ಪೈಕಿ ಶೇಕಡಾ 35ರಷ್ಟನ್ನು ರಫ್ತು ಮಾಡಿಕೊಂಡಿತ್ತು.

2016ರಲ್ಲಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ?

ಈ ಎಲ್ಲದರ ನಡುವೆ ಫೋರ್ಡ್‌ನಲ್ಲೇ ಪೈಪೋಟಿ ಆರಂಭವಾಗುತ್ತದೆ. ಫೋರ್ಡ್‌ನಲ್ಲಿರುವ ಕೆಲವು ಅಧಿಕಾರಿಗಳ ಪ್ರಕಾರ ವಿದೇಶಕ್ಕೆ ರಫ್ತು ಪ್ರಮಾಣವನ್ನು ಕಡಿಮೆ ಮಾಡಿದ್ದಲ್ಲಿ ದೇಶದ ಗ್ರಾಹಕರಿಂದ ವ್ಯಕ್ತವಾಗುತ್ತಿರುವ ಬೇಡಿಕೆಯನ್ನು ಈಡೇರಿಸಬಹುದಾಗಿದೆ. ಫೋರ್ಡ್ ಈ ವರೆಗೆ 50,000 ಕಾಂಪಾಕ್ಟ್ ಎಸ್‌ಯುವಿಗಳನ್ನು ದೇಶದಲ್ಲಿ ಮಾರಾಟ ಮಾಡಿವೆ.

2016ರಲ್ಲಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ?

ಅಂದ ಹಾಗೆ 2014ನೇ ಸಾಲಿನಲ್ಲಿ ಒಟ್ಟು 1.6 ಲಕ್ಷ ಯುನಿಟ್‌ಗಳನ್ನು ಉತ್ಪಾದಿಸಲು ಫೋರ್ಡ್ ಗುರಿ ಹೊಂದಿದೆ. ಈ ಪೈಕಿ 1.19 ಲಕ್ಷ ಯುನಿಟ್‌ಗಳು ಇಕೊಸ್ಪೋರ್ಟ್ ಆಗಿರಲಿದೆ.

2016ರಲ್ಲಿ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಬಿಡುಗಡೆ?

ವಿಷಯ ಏನೇ ಆದರೂ ಮಾರುಕಟ್ಟೆಯಲ್ಲಿ ಮಾತ್ರ ಉತ್ತಮ ಬೇಡಿಕೆ ಕಾಯ್ದುಕೊಳ್ಳಲು ಸಾಧ್ಯವಾಗಿರುವುದು ಇಕೊಸ್ಪೋರ್ಟ್ ಯಶಸ್ಸಿಗೆ ಇನ್ನಷ್ಟು ಸ್ಪೂರ್ತಿ ತುಂಬುವಂತಾಗಿದೆ.

Story first published: Thursday, May 15, 2014, 10:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark