ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

By Nagaraja

ಬ್ರೆಜಿಲ್‌ನ ಎಲ್ಲೆಡೆ ವಿಶ್ವಕಪ್ ಫುಟ್ಬಾಲ್ ಹಬ್ಬದ ವಾತಾವರಣ ಮನೆ ಮಾಡಿದೆ. ಈ ನಡುವೆ ಬಹುನಿರೀಕ್ಷಿತ ಫೋರ್ಡ್ ಕಾ ಪ್ಲಸ್ (Ford Ka+) ಕಾಂಪಾಕ್ಟ್ ಸೆಡಾನ್ ಕಾರು ಈ ಫುಟ್ಬಾಲ್ ಪ್ರಿಯ ರಾಷ್ಟ್ರದಲ್ಲಿ ಅನಾವರಣಗೊಂಡಿದೆ.

ಈ ವಿಷಯ ಇಲ್ಲಿ ಉಲ್ಲೇಖಿಸಲು ಪ್ರಮುಖ ಕಾರಣವಿದೆ. ಯಾಕೆಂದರೆ ಫೋರ್ಡ್ ಕಾ ಪ್ಲಸ್ ಕಾಂಪಾಕ್ಟ್ ಸೆಡಾನ್ ಕಾರು ಮುಂದಿನ ವರ್ಷ ಅಂದರೆ 2015ರಲ್ಲಿ ಭಾರತ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ನಿಮ್ಮ ಮಾಹಿತಿಗಾಗಿ ಕೆಲವು ದಿನಗಳ ಹಿಂದೆಯಷ್ಟೇ ಫೋರ್ಡ್ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಫೋರ್ಡ್ ಫಿಗೊ ಕಾ ಹ್ಯಾಚ್‌ಬ್ಯಾಕ್ ಕಾರನ್ನು ಅನಾವರಣಗೊಳಿಸಿತ್ತು. ಇದರ ಬೆನ್ನಲ್ಲೇ ಕಾ ಪ್ಲಸ್ ಕಾಂಪಾಕ್ಟ್ ಸೆಡಾನ್ ವರ್ಷನ್ ಅನಾವರಣಗೊಳಿಸಿದೆ.

ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

ಕಾ ಹ್ಯಾಚ್‌ಬ್ಯಾಕ್ ತರಹನೇ ಕಾ ಪ್ಲಸ್ ಕಾಂಪಾಕ್ಟ್ ಸೆಡಾನ್ ಭಾರತದಲ್ಲಿ ಮಾರಾಟವಾಗಲಿದೆ. ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಸೆಡಾನ್ ಕಾರುಗಳಿಗೆ ಅತಿ ಹೆಚ್ಚು ಬೇಡಿಕೆಯಿರುವುದರಿಂದ ಕಾ ಪ್ಲಸ್ ಆವೃತ್ತಿಯು ಹೆಚ್ಚಿನ ಪೈಪೋಟಿ ಸೃಷ್ಟಿ ಮಾಡುವ ನಿರೀಕ್ಷೆಯಿದೆ.

ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ಬ್ರೆಜಿಲ್ ವರ್ಷನ್ ಫೋರ್ಡ್ ಕಾ ಕಾನ್ಸೆಪ್ಟ್ ಕಾರು ನಾಲ್ಕು ಮೀಟರ್ ಪರಿಧಿಯನ್ನು ಮೀರಿ ನಿಂತಿದೆ. ಹಾಗಾಗಿ ಭಾರತದಲ್ಲಿ ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಲು ಕಾರಿನ ಗಾತ್ರದಲ್ಲಿ ಬದಲಾವಣೆ ತರಬೇಕಾಗಿರುವುದು ಅತಿ ಅಗತ್ಯವೆನಿಸುತ್ತಿದೆ. ಈ ಮೂಲಕ ಸ್ಮರ್ಧಾತ್ಮಕ ಬೆಲೆಯನ್ನುಕಾಯ್ದುಕೊಳ್ಳಬಹುದಾಗಿದೆ.

ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲೂ ಫೋರ್ಡ್ ಫಿಗೊ ಸೆಡಾನ್ ಕಾನ್ಸೆಪ್ಟ್ ಕಾರನ್ನು ಪ್ರದರ್ಶಿಸಲಾಗಿತ್ತು. ಹಾಗಾಗಿ ಭಾರತ ಆವೃತ್ತಿಯೂ ನಾಲ್ಕು ಮೀಟರ್‌ಗಳ ಪರಿಧಿಗೆ ಒಳಪಡಲಿದೆಯೇ ಎಂಬುದು ಕುತೂಹಲವೆನಿಸಿದೆ.

ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

ಒಟ್ಟಿನಲ್ಲಿ ಮುಂದಿನ ತಲೆಮಾರಿನ ಫೋರ್ಡ್ ಫಿಗೊ ಆಗಮನದೊಂದಿಗೆ ದೇಶದಲ್ಲಿ ಫೋರ್ಡ್ ಕ್ಲಾಸಿಕ್ ಕಾಲಾವಧಿ ಕೊನೆಗೊಳ್ಳಲಿದೆ. ನೀವು ನೋಡುತ್ತಿರುವಂತೆಯೇ ಬಹುತೇಕ ಫೋರ್ಡ್ ಕಾ ಸೆಡಾನ್ ಕಾರಿನ ಕಾನ್ಸೆಪ್ಟನ್ನು ಇದರಲ್ಲೂ ಉಳಿಸಿಕೊಳ್ಳಲಾಗಿದೆ.

ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

ಅಂದ ಹಾಗೆ ಬ್ರೆಜಿಲ್ ವರ್ಷನ್ ಫೋರ್ಡ್ ಕಾ ಪ್ಲಸ್ 1.5 ಹಾಗೂ 1.0 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇನ್ನು ಭಾರತ ಆವೃತ್ತಿಯು ಇದರ ಜತೆಗೆ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ.

ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

ಇದು ಪ್ರಮುಖವಾಗಿಯೂ ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್‌ಸೆಂಟ್ ಹಾಗೂ ಹೋಂಡಾ ಅಮೇಜ್ ಆವೃತ್ತಿಗಳಿಗೆ ಪ್ರತಿಸ್ಪರ್ಧೆಯೊಡ್ಡಲಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 2015 ದ್ವಿತಿಯಾರ್ಧದಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಿಲಿದೆ.

ನೆಕ್ಸ್ಟ್ ಜನರೇಷನ್ ಫೋರ್ಡ್ ಕಾ ಪ್ಲಸ್ 2015ರಲ್ಲಿ ಭಾರತ ಪ್ರವೇಶ

ಇನ್ನು ಭಾರತ ವರ್ಷನ್ ಫೋರ್ಡ್ ಕಾನ್ಸೆಪ್ಟ್ ಕಾರು ಯಾವ ನಾಮಕರಣ ಪಡೆದುಕೊಳ್ಳಲಿದೆ ಎಂಬುದು ಸಹ ಈ ಹಂತದಲ್ಲಿ ಕುತೂಹವೆನಿಸುತ್ತದೆ.

Most Read Articles

Kannada
English summary
Ford Ka+ Compact Sedan Revealed In Brazil; India Launch Likely In 2015
Story first published: Monday, June 16, 2014, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X