ಹೋಂಡಾ ವಿಷನ್ ಕಾನ್ಸೆಪ್ಟ್ - ಭವಿಷ್ಯದತ್ತ ಹದ್ದುನೋಟ

Written By:

ಭಾರತದ ವಾಹನೋದ್ಯಮದಲ್ಲಿ ಉತ್ತಮ ಹೆಸರು ಉಳಿಸಿಕೊಂಡಿರುವ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಕಾರ್ಸ್, ಇದೀಗಷ್ಟೇ ಅಂತ್ಯಗೊಂಡಿರುವ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ವಿನೂತನ ಕಾನ್ಸೆಪ್ಟ್ ಕಾರೊಂದನ್ನು ಪ್ರದರ್ಸಿಸಿದೆ.

2014 ಆಟೋ ಎಕ್ಸ್ ಪೋ

ಹೌದು, ಜಪಾನ್‌ನ ಈ ದೈತ್ಯ ಆಟೋಮೊಬೈಲ್ ಸಂಸ್ಥೆಯು ನೂತನ ಎಕ್ಸ್‌ಎಸ್-1 ಕಾನ್ಸೆಪ್ಟ್ ಅನಾವರಣಗೊಳಿಸಿದೆ. ನಿಮಗೆ ತಿಳಿದಿರುವಂತೆಯೇ ಹೋಂಡಾ ವೆಜೆಲ್ ಕಾಂಪಾಕ್ಟ್ ಎಸ್‌ಯುವಿ ಭಾರತ ಪ್ರವೇಶ ಪಡೆಯುವುದು ಕಷ್ಟ ಸಾಧ್ಯವಾಗಿದೆ. ಹಾಗಿರುವಾಗ ನೂತನ ಕಾಂಪಾಕ್ಟ್ ಎಸ್‌ಯುವಿ ಅಭಿವೃದ್ಧಿಪಡಿಸುವುದು ಹೋಂಡಾ ಗುರಿಯಾಗಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

ಇಲ್ಲೂ ವೆಜೆಲ್ ತರಹನೇ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್ ಕಾರು ಸಹ ಅನೇಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹೆಚ್ಚು ಕ್ರೀಡಾತ್ಮಕ ಅದೇ ಹೊತ್ತಿಗೆ ಗರಿಷ್ಠ ಸ್ಥಳಾವಕಾಶಕ್ಕೆ ಒತ್ತು ಕೊಡಲಾಗಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

'ಮಾನ್ ಮ್ಯಾಕ್ಸಿಮಮ್ ಮೆಷಿನ್ ಮಿನಿಮಮ್' ತಲಹದಿಯಲ್ಲಿ ನೂತನ ವಿಷನ್ ಎಕ್ಸ್‌ಎಸ್-1 ಕಾರಿನ ವಿನ್ಯಾಸ ರೂಪಿಸಲಾಗಿದೆ. ಹಾಗೆಯೇ ಎಕ್ಸೈಟಿಂಗ್ ಎಚ್ ಡಿಸೈನ್‌ನಿಂದಲೂ ಸ್ಪೂರ್ತಿ ಪಡೆಯಲಾಗಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

ಸಮಕಾಲೀನ ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಈ ಮೂಲಕ ಮಿನಿ ಎಸ್‌ಯುವಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವುದು ಹೋಂಡಾ ಬಯಕೆಯಾಗಿತ್ತು.

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

ಒಟ್ಟು ಮೂರು ಸಾಲುಗಳ ಆಸನ ವ್ಯವಸ್ಥೆಯನ್ನು ಹೋಂಡಾ ಎಕ್ಸ್‌ಎಸ್-1 ಕಾನ್ಸೆಪ್ಟ್ ಕಾರು ಹೊಂದಿದೆ. ಇದರಲ್ಲಿ ಗರಿಷ್ಠ ಏಳು ಮಂದಿ ಕುಳಿತುಕೊಳ್ಳಬಹುದಾಗಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್

ಆದರೆ ಯಾವಾಗ ನಿರ್ಮಾಣ ವರ್ಷನ್ ಪದೆದುಕೊಳ್ಳಲಿದೆ ಎಂಬುದಕ್ಕೆ ಹೋಂಡಾದಿಂದ ಸುಳಿವು ದೊರಕಿಲ್ಲ. ಹಾಗಿದ್ದರೂ ಮುಂಬರುವ ಅಮೇಂಜ್ ಕಾಂಪಾಕ್ಟ್ ಎಸ್‌ಯುವಿ ಅಥವಾ ಕ್ರಾಸೋವರ್ ಇದರಿಂದ ಸ್ಪೂರ್ತಿ ಪಡೆಯುವ ನಿರೀಕ್ಷೆಯಿದೆ.

ಕಾರು ಹೋಲಿಸಿ

ಹೋಂಡಾ ಬ್ರಿಯೊ
ಹೋಂಡಾ ಬ್ರಿಯೊ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
As we all know by now, Honda Vezel compact SUV/crossover will not make it to Indian shores due to pricing issues. In its stead, Honda will develop a new compact SUV based on the Amaze platform that will go on sale here and in neighbouring markets.
Story first published: Wednesday, February 12, 2014, 16:22 [IST]
Please Wait while comments are loading...

Latest Photos