ಐ20 ಆಕ್ಟಿವ್ ಕ್ರಾಸೋವರ್ ಡಿಸೈನ್ ನಿಮ್ಮ ಮನ ಸೆಳೆಯಿತೇ?

Written By:

ಐ20 ಆಕ್ಟಿವ್ ಮೂಲಕ ಕ್ರಾಸೋವರ್ ಎಂಬ ಹೊಸ ಸೆಗ್ಮೆಂಟ್‌ಗೆ ಲಗ್ಗೆಯಿಡುತ್ತಿರುವ ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಇದೇ ಬರುವ 2015 ಮಾರ್ಚ್ 17ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಡುಗಡೆ ಮಾಡಲಿದೆ.

ಇದಾದ ಬೆನ್ನಲ್ಲೇ ಮಾರ್ಚ್ 18ರಂದು ಮುಂಬೈ ಹಾಗೂ ಮುಂಬರುವ ದಿನಗಳಲ್ಲಿ ದೇಶದ ಇತರ ಪ್ರಮುಖ ನಗರಗಳಲ್ಲಿ ಸ್ಥಳೀಯ ಲಾಂಚ್ ಕಾಣಲಿದೆ. ಅಷ್ಟಕ್ಕೂ ಯುರೋಪ್‌ ಖಂಡದ ಜರ್ಮನಿಯಲ್ಲಿರುವ ಹ್ಯುಂಡೈ ಮೋಟಾರ್ಸ್ ಡಿಸೈನ್ ಸೆಂಟರ್‌ನಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಹ್ಯುಂಡೈ ಹೊಸ ಆಕ್ಟಿವ್ ಕ್ರಾಸೋವರ್ ಕಾರಿನ ವಿನ್ಯಾಸ ನಿಮ್ಮ ಮೆಚ್ಚೆಗೆಗೆ ಪಾತ್ರವಾಯಿತೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ.

ಹ್ಯುಂಡೈ ಎಲೈಟ್ ಐ20 ಕ್ರಾಸೋವರ್ ಮಾದರಿಯು ಹ್ಯಾಚ್‌ಬ್ಯಾಕ್ ಮಾದರಿಯಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಳ್ಳಲಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್

ಇದು 1.4 ಲೀಟರ್ ಡೀಸೆಲ್ ಎಂಜಿನ್ ಸಹ ಪಡೆದುಕೊಳ್ಳಲಿದ್ದು, 89 ಅಶ್ವಶಕ್ತಿ (220 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಪ್ರಮುಖವಾಗಿಯೂ ಫಿಯೆಟ್ ಅವೆಂಚ್ಯುರಾ, ಟೊಯೊಟಾ ಎಟಿಯೋಸ್ ಕ್ರಾಸ್ ಹಾಗೂ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್

ಇಲ್ಲಿ ಗಮನಾರ್ಹ ವಿಷೆಯವೆಂದರೆ ಆಟೋಮ್ಯಾಟಿಕ್ ಮಾದರಿಯಲ್ಲೂ ಎಲೈಟ್ ಐ20 ಕ್ರಾಸೋವರ್ ಮಾದರಿಯನ್ನು ಫಿಯೆಟ್ ಒದಗಿಸಲಿದೆ. ಹಾಗೆಯೇ ಡೇ ಟೈಮ್ ರನ್ನಿಂಗ್ ಹೆಡ್ ಲೈಟ್ ಕಾರನ್ನು ಹೆಚ್ಚು ಆಕರ್ಷಕವಾಗಿಸಲಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್

ಇನ್ನುಳಿದಂತೆ ಸೈಡ್ ಬಾಡಿ ಕ್ಲಾಡಿಂಗ್, ರೂಫ್ ರೈಲ್, ಸ್ಕಿಡ್ ಪ್ಲೇಟ್, ಹೊಸ ಅಲಾಯ್ ವೀಲ್ ಹಾಗೂ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು ಲಭ್ಯವಾಗಲಿದೆ.

ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್

ಅಷ್ಟಕ್ಕೂ ಭಾರತ ಮಾರುಕಟ್ಟೆಯಲ್ಲಿ ಐ20 ಆಕ್ಟಿವ್ ಕಾರಿನ ಬೆಲೆ ನಿರ್ಣಾಯಕ ಘಟಕವೆನಿಸಲಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಇದರ ಎಕ್ಸ್ ಶೋ ರೂಂ ಬೆಲೆ ಏಳು ಲಕ್ಷ ರು.ಗಳಿಂದ 12.50 ಲಕ್ಷ ರು.ಗಳ ವರೆಗಿರುವ ಸಾಧ್ಯತೆಯಿದೆ.

English summary
Hyundai i20 Active Ready to Hit Indian Market 
Story first published: Saturday, March 14, 2015, 10:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark