ಆಫರ್‌ಗಳಿಗೆ ಬ್ರೇಕ್; ಹ್ಯುಂಡೈ ದರ ಏರಿಕೆ

Written By:

ನಿರೀಕ್ಷಿಸಿದಂತೆ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್), ಇಯಾನ್‌ನಿಂದ ಆರಂಭವಾಗಿ ಸಾಂಟಾ ಫೆ ಮಾಡೆಲ್‌ಗಳ ವರೆಗೂ ದರ ಏರಿಕೆ ಘೋಷಿಸಿದೆ.

ಆಟೋ ಜಗತ್ತು ಕುಸಿದಿರುವ ನಡುವೆಯೂ ಹೊಸ ಆರ್ಥಿಕ ಸಾಲಿನಲ್ಲಿ ಹ್ಯುಂಡೈನಿಂದ ದರ ಏರಿಕೆ ಕಂಡುಬಂದಿದೆ. ಇದನ್ನು ಇತರ ಕಾರು ತಯಾರಕ ಸಂಸ್ಥೆಗಳು ಸಹ ಹಿಂಬಾಲಿಸುವ ಸಾಧ್ಯತೆಗಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹ್ಯುಂಡೈ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಉಪಾಧ್ಯಕ್ಷ ರಾಕೇಶ್ ಶ್ರೀವಾಸ್ತವಾ, ರು. 575ರಿಂದ ಆರಂಭಿಸಿ 2,830 ರು.ಗಳ ವರೆಗೂ ದರ ಏರಿಕೆ ಮಾಡಲಾಗಿದೆ. ಹಾಗೆಯೇ ಗ್ರಾಹಕರಿಗೆ ಪರಿಣಾಮ ಬೀರುವುದನ್ನು ತಪ್ಪಿಸಲು ದರ ಏರಿಕೆಯಲ್ಲಿ ಕಡಿತ ತರಲಾಗಿದೆ ಎಂದಿದ್ದಾರೆ.

ಹ್ಯುಂಡೈ ದರ ಏರಿಕೆ ಎಪ್ರಿಲ್ 1ರಿಂದ ಅನ್ವಯವಾಗಲಿದ್ದು, ಯಾವೆಲ್ಲ ಮಾಡೆಲ್‌ಗಳಿಗೆ ಎಷ್ಟೆಷ್ಟು ದರ ಏರಿಕೆ ಮಾಡಲಾಗಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ತಿಳಿಯೋಣ ಬನ್ನಿ...

To Follow DriveSpark On Facebook, Click The Like Button
ಹ್ಯುಂಡೈ ಇಯಾನ್

ಹ್ಯುಂಡೈ ಇಯಾನ್

ಪೆಟ್ರೋಲ್ ಮಾದರಿ- 2,500 ರು.ಗಳ ವರೆಗೂ ಹೆಚ್ಚಳ

ಸ್ಯಾಂಟ್ರೊ

ಸ್ಯಾಂಟ್ರೊ

ಪೆಟ್ರೋಲ್ ಮಾದರಿ- 2,830 ರು.ಗಳ ವರೆಗೂ ಹೆಚ್ಚಳ

ಹ್ಯುಂಡೈ ಐ10

ಹ್ಯುಂಡೈ ಐ10

ಪೆಟ್ರೋಲ್ ಮಾದರಿ- 600-900 ರು.ಗಳ ವರೆಗೂ ಹೆಚ್ಚಳ

ಹ್ಯುಂಡೈ ಐ20

ಹ್ಯುಂಡೈ ಐ20

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿ- 575 ರು.ಗಳ ವರೆಗೂ ಹೆಚ್ಚಳ

ಹ್ಯುಂಡೈ ವರ್ನಾ

ಹ್ಯುಂಡೈ ವರ್ನಾ

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿ- 1,340 ರು.ಗಳ ವರೆಗೂ ಹೆಚ್ಚಳ

ಹ್ಯುಂಡೈ ಎಲಂಟ್ರಾ

ಹ್ಯುಂಡೈ ಎಲಂಟ್ರಾ

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿ- 1,740 ರು.ಗಳ ವರೆಗೂ ಹೆಚ್ಚಳ

ಸೊನಾಟಾ

ಸೊನಾಟಾ

ಪೆಟ್ರೋಲ್ ಮಾದರಿ- 2,813 ರು.ಗಳ ವರೆಗೂ ಹೆಚ್ಚಳ

ಸಾಂಟಾ ಫೆ

ಸಾಂಟಾ ಫೆ

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿ- 2,813 ರು.ಗಳ ವರೆಗೂ ಹೆಚ್ಚಳ

English summary
Hyundai Motor India Ltd. (HMIL), the country’s largest passenger car exporter and second largest car manufacturer today announced the price increase on across all its models starting from Eon to Santa Fe.
Story first published: Monday, April 1, 2013, 14:29 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark