ಬಂದಿದೆ ನೋಡಿ ಸ್ವಿಫ್ಟ್ ಪ್ರತಿಸ್ಪರ್ಧಿ ಹ್ಯುಂಡೈ 'ಐ10 ಗ್ರಾಂಡ್'

ಕಳೆದ ಕೆಲವು ತಿಂಗಳುಗಳಲ್ಲಿ ಹ್ಯುಂಡೈನಿಂದ ಅನಾವರಣಗೊಳ್ಳಲಿರುವ ನೂತನ ಐ15 ಕಾರು ವಾಹನ ಪ್ರಿಯರಲ್ಲಿ ಭಾರಿ ಕ್ರೇಜ್ ಸೃಷ್ಟಿ ಮಾಡುವಲ್ಲಿ ಕಾರಣವಾಗಿತ್ತು. ಐ10 ಹಾಗೂ ಐ20 ಮಧ್ಯೆ ಕಾಣಿಸಿಕೊಳ್ಳಲಿರುವ ಈ ನೂತನ ಹ್ಯಾಚ್‌ಬ್ಯಾಕ್ ಕಾರು ದೇಶದ ವಾಹನೋದ್ಯಮದಲ್ಲಿ ಹೊಸ ಅಲೆ ಸೃಷ್ಟಿ ಮಾಡಲಿದೆಯೆಂಬ ನಿರೀಕ್ಷೆಗಳಿದ್ದವು.

ಇದಕ್ಕೆ ಪೂರಕವೆಂಬಂತೆ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ, ನೂತನ ಐ10 ಗ್ರಾಂಡ್ ಕಾರನ್ನು ಅನಾವರಣಗೊಳಿಸಿದೆ. ಸಂಪೂರ್ಣವಾಗಿ ಹೊಸ ಫ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಿದ್ದರಿಂದ ಹೊಸ ಕಾರಿನ ಬಗ್ಗೆ ಹಲವಾರು ಊಹಾಪೋಹಗಳಿದ್ದವು. ಆದರೆ ನೂತನ ಕಾರು ಐ15 ಹೆಸರಿಸಿಕೊಳ್ಳುವ ಬದಲು ಐ10 ಗ್ರಾಂಡ್ ಎಂದು ಅರಿಯಲ್ಪಡಲಿದೆ. ಹೆಸರಲ್ಲೇ ಸೂಚಿಸಿರುವಂತೆಯೇ ಹೆಚ್ಚು ಪ್ರೀಮಿಯಂ ಲುಕ್ ಹೊಂದಲಿರುವ ಐ10 ಗ್ರಾಂಡ್ ಹ್ಯಾಚ್‌ಬ್ಯಾಕ್ ಕಾರು ಮಾರುತಿಯ ಜನಪ್ರಿಯ ಆವೃತ್ತಿಯಾದ ಮಾರುತಿ ಸ್ವಿಫ್ಟ್‌ಗೆ ಪ್ರಮುಖ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ.

ಈ ಮೂಲಕ ಬಿಎ ಎಂಬ ಕೋಡ್ ಪಡೆದುಕೊಂಡಿರುವ ಐ10 ಗ್ರಾಂಡ್ ಕಾರನ್ನು ಹ್ಯುಂಡೈ ಕೊನೆಗೂ ಅನಾವರಣಗೊಳಿಸಿದೆ. ಮುಂದಿನ ದಿನಗಳಲ್ಲಿ ಐ10 ಗ್ರಾಂಡ್ ಗ್ರಾಹಕರ ಫೇವರಿಟ್ ಎನಿಸಿಕೊಂಡರೂ ಅಚ್ಚರಿಯೇನಿಲ್ಲ.

ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿ

ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿ

ಪ್ರಮುಖವಾಗಿಯೂ ದೇಶದ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಐ10 ಗ್ರಾಂಡ್ ರಸ್ತೆಗಿಳಿಯಲಿದೆ. ಇದರ ದರದ ಬಗ್ಗೆ ಹೆಚ್ಚಿನ ಮಾಹಿತಿಗಳು ಬಂದಿಲ್ಲ. ಕಂಪನಿಯ ಪ್ರಕಾರ ಐ10 ಗ್ರಾಂಡ್ ಸೆಪ್ಟೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದ್ದು, ಈ ವೇಳೆಯಲ್ಲಿ ದರದ ಬಗ್ಗೆ ಮಾಹಿತಿ ಸಿಗಲಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ 4.4 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಎಂಜಿನ್

ಎಂಜಿನ್

ಈ ಹಿಂದೆ ಹಲವು ಬಾರಿ ಟೆಸ್ಟಿಂಗ್ ವೇಳೆ ರಹಸ್ಯ ಕ್ಯಾಮೆರಾ ಕಣ್ಣುಗಳಿಗೆ ಸೆರೆಸಿಕ್ಕಿದ್ದ ಐ10 ಗ್ರಾಂಡ್, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದೆ. ಪೆಟ್ರೋಲ್ ವೆರಿಯಂಟ್‌ನಲ್ಲಿ 1.2 ಲೀಟರ್ ಕಪ್ಪ ಮಿಲ್ ಎಂಜಿನ್ ಹೊಂದಿರಲಿದ್ದು, 85 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಡೀಸೆಲ್ ವರ್ಷನ್ 1.1 ಲೀಟರ್ ಎಂಜಿನ್ ಪಡೆದುಕೊಳ್ಳಲಿದೆ.

ಹೆಚ್ಚಿನ ಸ್ಥಳಾವಕಾಶ

ಹೆಚ್ಚಿನ ಸ್ಥಳಾವಕಾಶ

ಐ10 ಆವೃತ್ತಿಗೆ ಹೋಲಿಸಿದರೆ ನೂತನ ಐ10 ಗ್ರಾಂಡ್ ವರ್ಷನ್ 100ಎಂಎಂ ಉದ್ದ ಹಾಗೂ ಅಗಲ ಹಾಗೂ 70ಎಂಎಂ ಉದ್ದವಾದ ವೀಲ್ ಬೇಸ್ ಪಡೆದುಕೊಳ್ಳಲಿದೆ. ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಾಣವಾಗಿರುವ ಐ10 ಗ್ರಾಂಡ್, ಹಿಂಬದಿ ಪ್ರಯಾಣಿಕರಿಗೂ ಆರಾಮದಾಯಕವಾಗಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯನ್ನು ಹೊಂದಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಉಳಿದಂತೆ ಐ10 ಹಾಗೂ ಐ20 ನಡುವೆ ಕಾಣಿಸಿಕೊಳ್ಳಲಿರುವ ನೂತನ ಐ10 ಗ್ರಾಂಡ್, ಸ್ವಯಂಚಾಲಿತ ಮಡಚಬಹುದಾದ ಹೊರಂಗಿನ ಮಿರರ್, ಮ್ಯೂಸಿಕ್ ಸಿಸ್ಟಂ ಜತೆ 1 ಜಿಬಿ ಮೆಮರಿ ಸ್ಟೋರೆಜ್, ರಿಯರ್ ಎಸಿ ವೆಂಟ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಕೂಲ್ಡ್ ಗ್ಲೋವ್ ಬಾಕ್ಸ್, 14 ಇಂಚು ಅಲಾಯ್ ವೀಲ್, ಸ್ಟಾರ್ಟ್/ಸ್ಟಾಪ್ ಬಟನ್, ಸ್ಮಾರ್ಟ್ ಕೀ, ಏರ್ ಬ್ಯಾಗ್ ಹಾಗೂ ಎಬಿಎಸ್ ತಂತ್ರಜ್ಞಾನಗಳನ್ನು ಹೊಂದಿರಲಿದೆ.

ಫ್ರಾಂಕ್‌ಫರ್ಟ್ ಮೋಟಾರ್ ಶೋ

ಫ್ರಾಂಕ್‌ಫರ್ಟ್ ಮೋಟಾರ್ ಶೋ

ಮುಂದಿನ ದಿನಗಳಲ್ಲಿ ಐ10 ಆವೃತ್ತಿಗೆ ಬದಲಿ ವ್ಯವಸ್ಥೆಯಾಗಲಿರುವ ಐ10 ಗ್ರಾಂಡ್ ಮುಂಬರುವ ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಜಾಗತಿಕವಾಗಿ ಪ್ರದರ್ಶನ ಕಾಣಲಿದೆ. ಆ ಬಳಿಕ ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿದೆ

ಹ್ಯುಂಡೈ ಯೋಜನೆ

ಹ್ಯುಂಡೈ ಯೋಜನೆ

ಅಂದ ಹಾಗೆ 2015ರ ವೇಳೆಗೆ 4 ಮೀಟರ್ ಸೆಡಾನ್, 7 ಸೀಟಿನ ಎಂಪಿವಿ ಹಾಗೂ ಕಾಂಪಾಕ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುವ ಬೃಹತ್ ಯೋಜನೆಯನ್ನು ದೇಶದ ನಂ.2 ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ಹೊಂದಿದೆ.

Most Read Articles

Kannada
English summary
Codenamed BA, Hyundai has finally revealed their all new hatchback for India, called i10 Grand. Price is not revealed, but expect it to be in the range of Maruti Suzuki Swift, or about Rs 4.4 lakhs. Official launch will take place in September 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X