ಪ್ರಸಕ್ತ ಸಾಲಿನಲ್ಲಿ ಮಹೀಂದ್ರದಿಂದ ಕಾರುಗಳ ಹಬ್ಬ

Written By:

2013ನೇ ಇಸವಿ ಕಾರು ಮಾರುಕಟ್ಟೆ ಪಾಲಿಗೆ ಮಿಶ್ರ ಪ್ರತಿಕ್ರಿಯೆ ತಂದಿಕ್ಕಿತ್ತು. ಇಲ್ಲಿ ಮಿಶ್ರ ಪ್ರತಿಕ್ರಿಯೆ ಎನ್ನುವುದಕ್ಕಿಂತಲೂ ಕುಸಿತದಲ್ಲಿ ಅಂತ್ಯ ಕಂಡಿತ್ತು ಎಂದು ಉಲ್ಲೇಖಿಸುವುದು ಹೆಚ್ಚು ಸೂಕ್ತವಾದಿತು. ಯಾಕೆಂದರೆ ಕೆಲವೊಂದು ನಿರ್ದಿಷ್ಟ ವೆರಿಯಂಟ್‌ಗಳನ್ನು ಹೊರತುಪಡಿಸಿದರೆ ಇತರೆಲ್ಲ ಮಾದರಿಗಳು ವೈಫಲ್ಯ ಅನುಭವಿಸಿತ್ತು.

ಬಹುತೇಕ ಎಲ್ಲ ಕಾರು ಸಂಸ್ಥೆಗಳು ಮಾರಾಟ ಕುದುರಿಸಿಕೊಳ್ಳಲು ಹಲವು ರೀತಿಯ ಯೋಜನೆಗಳನ್ನು ಹೊರತಂದಿದ್ದರೂ ಗ್ರಾಹಕರನ್ನು ಮುಟ್ಟುವಲ್ಲ ಮಾತ್ರ ಯಶಸ್ವಿಯನ್ನು ಕಂಡಿರಲಿಲ್ಲ. ಇದರಿಂದ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆ ಕೂಡಾ ಹೊರತಾಗಿಲ್ಲ. ದೇಶದ ಮಾರುಕಟ್ಟೆಯಲ್ಲಿ ಯುವ ಕಾರು ತಯಾರಕ ಸಂಸ್ಥೆ ಎನಿಸಿಕೊಂಡಿರುವ ಮಹೀಂದ್ರ ಕಳೆದ ವರ್ಷ ಹಲವಾರು ಯೋಜನೆಗಳೊಂದಿಗೆ ಮುಂದೆ ಬಂದಿದ್ದವು. ಆದರೆ ಅವುಗಳೆಲ್ಲವೂ ವಿಫಲಗೊಂಡಿದ್ದವು. ಈ ಪೈಕಿ ವೆರಿಟೊ ವೈಬ್ ಹಿನ್ನಡೆ ಸಂಸ್ಥೆಯ ಮಾರಾಟಕ್ಕೆ ಬಲವಾದ ಪೆಟ್ಟು ನೀಡುವಂತಾಗಿತ್ತು.

To Follow DriveSpark On Facebook, Click The Like Button
ಪ್ರಸಕ್ತ ಸಾಲಿನಲ್ಲಿ ಮಹೀಂದ್ರದಿಂದ ಕಾರುಗಳ ಹಬ್ಬ

ಹಾಗಿದ್ದರೂ ತನ್ನ ಯೋಜನೆಯಿಂದ ಹಿಂಜರಿಯದ ದೇಶದ ಮುಂಚೂಣಿಯ ಸಂಸ್ಥೆಗಳಲ್ಲಿ ಒಂದಾಗಿರುವ ಮಹೀಂದ್ರ 2014ನೇ ಸಾಲಿನಲ್ಲಿ 7ರಿಂದ 8 ಹೊಸ ಮಾದರಿಗಳನ್ನು ಪರಿಚಯಿಸುವ ಇರಾದೆ ಹೊಂದಿದೆ.

ಪ್ರಸಕ್ತ ಸಾಲಿನಲ್ಲಿ ಮಹೀಂದ್ರದಿಂದ ಕಾರುಗಳ ಹಬ್ಬ

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಹೀಂದ್ರ ಆಂಡ್ ಮಹೀಂದ್ರ ಆಟೋಮೋಟಿವ್ ಡಿವಿಷನ್ ಕಾರ್ಯನಿರ್ವಾಹಕ ಮುಖ್ಯಸ್ಥ ಪ್ರವೀಣ್ ಷಾ, ಈ ಸಾಲಿನಲ್ಲಿ 7ರಿಂದ 8 ವೆರಿಯಂಟ್‌ಗಳನ್ನು ಪರಿಚಯಿಸಲಿದ್ದೇವೆ ಎಂದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಮಹೀಂದ್ರದಿಂದ ಕಾರುಗಳ ಹಬ್ಬ

2014ನೇ ಸಾಲಿನಲ್ಲಿ ಪರಿಸ್ಥಿತಿ ಸುಧಾರಣೆಗೊಳ್ಳಲಿದೆಯೆಂಬ ನಂಬಿಕೆ ವ್ಯಕ್ತಪಡಿಸಿರುವ ಅವರು, ತಕ್ಷಣದಲ್ಲಿ ಮ್ಯಾಜಿಕ್ ನಿರೀಕ್ಷಿಸುತ್ತಿಲ್ಲವಾದರೂ ಸಂಸ್ಥೆಯ ಕೆಲವೊಂದು ನೀತಿಗಳಲ್ಲಿ ಬದಲಾವಣೆ ಕಂಡುಬರಲಿದೆ ಎಂದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಮಹೀಂದ್ರದಿಂದ ಕಾರುಗಳ ಹಬ್ಬ

ಹೀಗೆ ಪಟ್ಟಿ ಮಾಡಿ ನೋಡಿದರೆ ಈಗಿರುವ ವೆರಿಟೊ, ವೆರಿಟೊ ವೈಬ್ ಮತ್ತು ಸ್ಕಾರ್ಪಿಯೊ ಮಾದಿರಗಳನ್ನು ಮಹೀಂದ್ರ ಪರಿಷ್ಕೃತಗೊಳಿಸಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಪ್ರಸಕ್ತ ಸಾಲಿನಲ್ಲಿ ಮಹೀಂದ್ರದಿಂದ ಕಾರುಗಳ ಹಬ್ಬ

ಈ ಪೈಕಿ ಮಹೀಂದ್ರ ಸ್ಕಾರ್ಪಿಯೊ ಹಲವು ಬಾರಿ ರಸ್ತೆ ಪರೀಕ್ಷೆ ನಡೆಸುತ್ತಿರುವುದು ಕಂಡುಬಂದಿತ್ತು. ಇನ್ನು ಕ್ವಾಂಟೊ ಕ್ರಾಸೋವರ್ ಬಗ್ಗೆಯೂ ಮಹೀಂದ್ರ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿದೆ. ಒಟ್ಟಿನಲ್ಲಿ ಪರಿಷ್ಕೃತ ಮಾದರಿಗಳನ್ನು ಲಾಂಚ್ ಮಾಡುವುದು ಅಥವಾ ಹೊಸ ಮಾಡೆಲ್ ಪರಿಚಯಿಸುವುದು ಮಹೀಂದ್ರ ಪರಿಗಣನೆಯಲ್ಲಿದೆ.

English summary
"We will introduce 7-8 variants in our portfolio," Mahindra & Mahindra Automotive Division Chief Executive Pravin Shah said while speaking to reporters.
Story first published: Monday, January 6, 2014, 6:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark