ಮಹೀಂದ್ರ ಬೊಲೆರೊ ವಿಶೇಷ ಆವೃತ್ತಿ ಲಾಂಚ್; ವಿಶಿಷ್ಟತೆಗಳೇನು?

Written By:

ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ನೂತನ ಬೊಲೆರೊ ವಿಶೇಷ ಆವೃತ್ತಿಯನ್ನು ಲಾಂಚ್ ಮಾಡಿದೆ. ಪ್ರಸ್ತುತ ಲಾಂಚ್ ಆಗಿರುವ ಮಹೀಂದ್ರ ಬೊಲೆರೊ ಪ್ರಮುಖ ವೈಶಿಷ್ಟ್ಯ ಏನೆಂದರೆ ಸುರಕ್ಷತೆಗೆ ಹೆಚ್ಚು ಆದ್ಯತೆ ಕೊಡಲಾಗಿದ್ದು, ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಸೌಲಭ್ಯವಿರಲಿದೆ.

ನಿಮ್ಮ ಮಾಹಿತಿಗಾಗಿ, ಇದೇ ಮೊದಲ ಬಾರಿಗೆ ಮಹೀಂದ್ರ ಬೊಲೆರೊದಲ್ಲಿ ಎಬಿಎಸ್ ಸುರಕ್ಷತಾ ತಂತ್ರಜ್ಞಾನ ಆಳವಡಿಕೆಯಾಗುತ್ತಿದೆ. ಕೇವಲ ಎಬಿಎಸ್ ಮಾತ್ರವಲ್ಲ, ಇತರ ಅನೇಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಅವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಬಿಳಿ ಮುತ್ತಿನಂತಹ ಬಾಡಿ ಕಲರ್,
  • ವಿಶೇಷ ಸ್ಪೋರ್ಟಿ ಡಿಕಾಲ್,
  • ಐಷಾರಾಮಿ ಯುರೋಪಿಯನ್ ಲೆಥರ್ ಇಂಟಿರಿಯರ್,
ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಬ್ಲೂ ವರ್ಷನ್ ಹೆಡ್‌ಲ್ಯಾಂಪ್
  • ಮ್ಯೂಸಿಕ್ ಸಿಸ್ಟಂ, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ,
ಮಹೀಂದ್ರ ಬೊಲೆರೊ ವಿಶೇಷ ಆವೃತ್ತಿ ಲಾಂಚ್; ವಿಶಿಷ್ಟತೆಗಳೇನು?

ಅಂದ ಹಾಗೆ ಮಹೀಂದ್ರ ಬೊಲೆರೊ ವಿಶೇಷ ಆವೃತ್ತಿಯು 2.5 ಲೀಟರ್ ಎಂ2ಡಿಐಸಿಆರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 62 ಅಶ್ವಶಕ್ತಿ ಉತ್ಪಾದಿಸುವ ಶಕ್ತಿ (195 ಎನ್‌ಎಂ ಟಾರ್ಕ್) ಹೊಂದಿರಲಿದೆ.

ಮಹೀಂದ್ರ ಬೊಲೆರೊ ವಿಶೇಷ ಆವೃತ್ತಿ ಲಾಂಚ್; ವಿಶಿಷ್ಟತೆಗಳೇನು?

ಪ್ರಸ್ತುತ ವಿಶೇಷ ಬೊಲೆರೊ ಆವೃತ್ತಿಯು ಸೀಮಿತ 500 ಯುನಿಟ್‌ಗಳಷ್ಟೇ ಲಭ್ಯವಾಗಲಿದ್ದು, ಸ್ಟಾಂಡರ್ಡ್ ವರ್ಷನ್‌ಗಿಂತಲೂ (7.5 ಲಕ್ಷ ರು. ದೆಹಲಿ ಎಕ್ಸ್ ಶೋ ರೂಂ) 50,000 ರು.ಗಳಷ್ಟು ದುಬಾರಿಯಾಗಲಿದೆ.

ಮಹೀಂದ್ರ ಬೊಲೆರೊ ವಿಶೇಷ ಆವೃತ್ತಿ ಲಾಂಚ್; ವಿಶಿಷ್ಟತೆಗಳೇನು?

ಅಷ್ಟಕ್ಕೂ ಮಹೀಂದ್ರ ವಿಶೇಷ ಆವೃತ್ತಿ ನಿಮ್ಮ ಗಮನ ಸೆಳೆಯಿತೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

English summary
Premium pearl white exteriors, leather interiors, blue vision headlamps, music system with Bluetooth connectivity & much more.
Story first published: Tuesday, March 25, 2014, 17:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark