ಸೆಲೆರಿಯೊ ಬೆನ್ನಲ್ಲೇ ಆಲ್ಟೊ, ವ್ಯಾಗನಾರ್ ಆಟೋಮ್ಯಾಟಿಕ್ ರೆಡಿ!

By Nagaraja

ಬಹುನಿರೀಕ್ಷಿತ ಸೆಲೆರಿಯೊ ಆಟೋಮ್ಯಾಟಿಕ್ ಹ್ಯಾಚ್‌ಬ್ಯಾಕ್ ಕಾರಿನ ಬುಕ್ಕಿಂಗ್ ಭರದಿಂದ ಸಾಗುತ್ತಿದೆ. ಇದರಲ್ಲಿ ಆಳವಡಿಸಲಾಗಿರುವ ಆಟೋಮ್ಯಾಟಿಕ್ ಗೇರ್ ಶಿಫ್ಟ್ ತಂತ್ರಗಾರಿಕೆ ಗ್ರಾಹಕರಲ್ಲಿ ಅತಿ ಹೆಚ್ಚು ಆಕರ್ಷಣೆಗೆ ಕಾರಣವಾಗಿದೆ.

ಮಾರುತಿ ಸೆಲೆರಿಯೊ ಭರ್ಜರಿ ಲಾಂಚ್

ಇದೀಗ ಸೆಲೆರಿಯೊ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇದೇ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ತಂತ್ರಗಾರಿಕೆಯನ್ನು ತನ್ನ ಜನಪ್ರಿಯ ಆಲ್ಟೊ ಕೆ10 ಹಾಗೂ ವ್ಯಾಗನಾರ್ ಆವೃತ್ತಿಗಳಿಗೂ ಆಳವಡಿಸುವುದರತ್ತ ಮಹತ್ತರ ಹೆಜ್ಜೆಯನ್ನಿಟ್ಟಿದೆ.

ಸೆಲೆರಿಯೊ ಬೆನ್ನಲ್ಲೇ ಆಲ್ಟೊ, ವ್ಯಾಗನಾರ್ ಆಟೋಮ್ಯಾಟಿಕ್ ರೆಡಿ!

ಪ್ರಮುಖವಾಗಿಯೂ ನಗರ ಪ್ರದೇಶಗಳಲ್ಲಿ ಆಟೋಮ್ಯಾಟಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸಾಮಾನ್ಯ ಮ್ಯಾನುವಲ್ ಕಾರುಗಳಿಗೆ ಹೋಲಿಸಿದರೆ ಆಟೋಮ್ಯಾಟಿಕ್ ಕಾರುಗಳು ವಿಪರೀತ ವಾಹನ ದಟ್ಟಣೆಯಲ್ಲಿ ಚಾಲಕರ ಚಾಲನೆಯನ್ನು ಸುಲಭಗೊಳಿಸುತ್ತದೆ.

ಸೆಲೆರಿಯೊ ಬೆನ್ನಲ್ಲೇ ಆಲ್ಟೊ, ವ್ಯಾಗನಾರ್ ಆಟೋಮ್ಯಾಟಿಕ್ ರೆಡಿ!

ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲು ಯಶಸ್ವಿಯಾಗಿರುವುದು ಸೆಲೆರಿಯೊ ಯಶಸ್ಸಿನ ಹಿಂದಿರುವ ಗುಟ್ಟಾಗಿದೆ. ಕಂಪನಿ ಈಗಾಗಲೇ ಬಹಿರಂಗಪಡಿಸಿರುವಂತೆಯೇ ಸೆರಿರಿಯೊ ಒಟ್ಟು ಬುಕ್ಕಿಂಗ್‌ನ ಅರ್ಧದಷ್ಟು ಅಂದರೆ ಶೇಕಡಾ 51ರಷ್ಟು ಆಟೋಮ್ಯಾಟಿಕ್ ವೆರಿಯಂಟ್‌‌ಗಳು ಆಗಿವೆ.

ಸೆಲೆರಿಯೊ ಬೆನ್ನಲ್ಲೇ ಆಲ್ಟೊ, ವ್ಯಾಗನಾರ್ ಆಟೋಮ್ಯಾಟಿಕ್ ರೆಡಿ!

ಇದೀಗ ಮಾರುತಿ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಅತ್ಯುತ್ತಮ ಮಾರಾಟದ ಕಾರಾಗಿರುವ ಆಲ್ಟೊ ಕೆ10 ಹಾಗೂ ವ್ಯಾಗನಾರ್ ಕಾರುಗಳಿಗೂ ಸದ್ಯದಲ್ಲೇ ಆಟೋಮ್ಯಾಟಿಕ್ ತಂತ್ರಜ್ಞಾನ ಆಳವಡಿಕೆಯಾಗಲಿದೆ.

ಸೆಲೆರಿಯೊ ಬೆನ್ನಲ್ಲೇ ಆಲ್ಟೊ, ವ್ಯಾಗನಾರ್ ಆಟೋಮ್ಯಾಟಿಕ್ ರೆಡಿ!

ಹಾಗೊಂದು ವೇಳೆ ಆಲ್ಟೊ ಕೆ10ಗೆ ಆಟೋಮ್ಯಾಟಿಕ್ ತಂತ್ರಾಂಶ ಆಳವಡಿಕೆಯಾದ್ದಲ್ಲಿ ಈ ಹ್ಯಾಚ್‌ಬ್ಯಾಕ್ ಕಾರಿನ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆಯೆಂದು ನಿರೀಕ್ಷಿಸಲಾಗಿದೆ. ಇದನ್ನೇ ವ್ಯಾಗನಾರ್ ಹಿಂಬಾಲಿಸಲಿದೆ. ವ್ಯಾಗನಾರ್ ಎಎಂಟಿ ತಂತ್ರಗಾರಿಕೆಯು 2015ನೇ ಸಾಲಿನಲ್ಲಿ ಆಗಮನವಾಗುವ ಸಾಧ್ಯತೆಯಿದೆ.

ಸೆಲೆರಿಯೊ ಬೆನ್ನಲ್ಲೇ ಆಲ್ಟೊ, ವ್ಯಾಗನಾರ್ ಆಟೋಮ್ಯಾಟಿಕ್ ರೆಡಿ!

ವರದಿಗಳ ಪ್ರಕಾರ ಟಾಟಾ ನ್ಯಾನೋ ಆಟೋಮ್ಯಾಟಿಕ್ ಕಾರು ಸಹ ನಿಕಟ ಭವಿಷ್ಯದಲ್ಲೇ ಆಗಮನವಾಗಲಿದೆ. ಇದು ಮಾರುಕಟ್ಟೆಯಲ್ಲಿ ಇನ್ನಷ್ಟು ಪೈಪೋಟಿ ಸೃಷ್ಟಿ ಮಾಡುವುದಲ್ಲದೆ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವಂತೆ ಪ್ರೇರೇಪಿಸಲಿದೆ.

ಸೆಲೆರಿಯೊ ಬೆನ್ನಲ್ಲೇ ಆಲ್ಟೊ, ವ್ಯಾಗನಾರ್ ಆಟೋಮ್ಯಾಟಿಕ್ ರೆಡಿ!

ಇದು ಇನ್ನಷ್ಟೇ ಆಗಮನವಾಗಲಿರುವ ದಟ್ಸನ್ ಗೊ ಓಟವನ್ನು ಸಹ ತಡೆಯಲು ಸಹಕಾರಿಯಾಗಲಿದೆ. ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಶೇರನ್ನು ಮಾರುತಿ ವಶಪಡಿಸಿಕೊಂಡಿದೆ.

Most Read Articles

Kannada
English summary
Automated Manual Transmission (AMT) is all the rage these days and several Indian automakers are ready to jump into bandwagon in the near future. But Maruti Suzuki already has the first movers advantage with the Celerio AMT.
Story first published: Friday, March 7, 2014, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X