ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

Written By:

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಬಹುನಿರೀಕ್ಷಿತ ಮಾರುತಿ ಸೆಲೆರಿಯೊ ಹ್ಯಾಚ್‌ಬ್ಯಾಕ್ ಕಾರು ಮುಂಬರುವ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಲಾಂಚ್ ಆಗಲಿದೆ. ಇದರಂತೆ ವಾಹನ ಪ್ರೇಮಿಗಳಲ್ಲಿ ಅತಿ ಹೆಚ್ಚು ಕುತೂಲಹಕ್ಕೆ ಕಾರಣವಾಗಿರುವ ಮಾರುತಿ ಸೆಲೆರಿಯೊ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಳಿಸಲಾಗಿದೆ. ಈ ಸಂಬಂಧ ನೂತನ ವೆಬ್‌ಸೈಟ್ ಕೂಡಾ ಕಂಪನಿ ಬಿಡುಗಡೆಗೊಳಿಸಿದೆ. (http://www.marutisuzuki.com/celerio/Celeriohome.aspx)

ಮೇಲೆ ತಿಳಿಸಲಾಗಿರುವ ವೆಬ್‌ಸೈಟ್‌ನಲ್ಲಿ ಸದ್ಯದಲ್ಲೇ ಮಾರುತಿ ಸೆಲೆರಿಯೊ ಲಾಂಚ್ ಆಗುವುದಾಗಿ ಮಾಹಿತಿ ಕೊಡಲಾಗಿದೆ. ಅಲ್ಲದೆ ಸುಲಭ ಚಾಲನಾ ತಂತ್ರಜ್ಞಾನದ ಬಗ್ಗೆ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ.

To Follow DriveSpark On Facebook, Click The Like Button
ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಇದೇ ಮೊದಲ ಬಾರಿಗೆ ಸೆಮಿ ಆಟೋಮ್ಯಾಟಿಕ್ ತಂತ್ರಜ್ಞಾನ ಸೆಲೆರಿಯೊದಲ್ಲಿ ಅವಿಷ್ಕಾರವಾಗುತ್ತಿದೆ. ಅಂದರೆ ಇನ್ನು ಮುಂದೆ ನಿಮ್ಮನ್ನು ಪದೇ ಪದೇ ಗೇರ್ ಬದಲಾಯಿಸುವ ತೊಂದರೆ ಕಾಡಲ್ಲ. ದೇಶದಲ್ಲಿ ಇದೇ ಮೊದಲ ಬಾರಿಗೆ ಆಟೋ ಗೇರ್ ಶಿಫ್ಟ್ ಆಳವಡಿಸಲಾಗುತ್ತಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಇನ್ನು ಕಂಪನಿಯ ಪ್ರಕಾರ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ಮಾರುತಿ ಸೆಲೆರಿಯೊ ಯಶಸ್ವಿಯಾಗಲಿದೆ. ಇದು ಪ್ರತಿ ಲೀಟರ್‌ಗೆ 23.1 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಸೆಲೆರಿಯೊ ನಿಮ್ಮ ಪಯಣವನ್ನು ಹೇಗೆ ಆರಾಮದಾಯಕವಾಗಿಸಲಿದೆ ಎಂಬುದರ ಬಗ್ಗೆಯೂ ವೀಡಿಯೋ ಮೂಲಕ ಮಾಹಿತಿ ಕೊಡಲಾಗಿದೆ. ಇದರಲ್ಲಿ ಪ್ರಮುಖವಾಗಿಯು ಐದು ಅಂಶಗಳನ್ನು ಪಟ್ಟಿ ಮಾಡಿಕೊಡಲಾಗಿದೆ. ಅವುಗಳೆಂದರೆ

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ
  • ಸುಲಭ ಚಾಲನೆ
  • ಸುಲಭ ತಂತ್ರಗಾರಿಕೆ
  • ಸುಲಭ ವಿನ್ಯಾಸ
  • ಸ್ಥಳಾವಕಾಶ
  • ಇತರ ವೈಶಿಷ್ಟ್ಯಗಳು
ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ನೂತನ ಸೆಲೆರಿಯೊದಲ್ಲಿ ಕೆ - ನೆಕ್ಸ್ಟ್ ಎಂಜಿನ್ ಆಳವಡಿಸಲಾಗಿದೆ. ಇದು ಔಟ್ ಡೇಟಡ್ ಎಸ್ಟಾರ್ ಹಾಗೂ ಜೆನ್ ಎಸ್ಟಿಲೊ ಮಾದರಿಗಳಿಗೆ ಬದಲಿ ಮಾದರಿಯಾಗಿರಲಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಸೆಲೆರಿಯೊದಲ್ಲಿ ಆಳವಡಿಸಲಾದ ನೂತನ ಗೇರ್ ಬಾಕ್ಸ್ ಪ್ರಮುಖ ಆಕರ್ಷಣೆಯಾಗಿರಲಿದೆ. ಅದೇ ರೀತಿ ಸಿಕೊ (ಕರ್ವ್ ಇನ್ ಕರ್ವ್ ಔಟ್) ವಿನ್ಯಾಸವನ್ನು ಪಡೆದುಕೊಂಡಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ನೂತನ ಸೆಲೆರಿಯೊ ಆಟೋಮ್ಯಾಟಿಕ್ ವರ್ಷನ್‌ನಲ್ಲಿ ಮಾತ್ರ ಲಭ್ಯವಾಗಲಿದೆ ಎಂದು ಅಂದುಕೊಂಡರೆ ತಪ್ಪಾದಿತು. ಹಾಗೊಂದು ವೇಳೆ ನೀವು ಮ್ಯಾನುವಲ್ ವರ್ಷನ್ ಸೆಲೆರಿಯೊ ಬಯಸುವುದಾದ್ದಲ್ಲಿ ಇದು ಕೂಡಾ ಲಭ್ಯವಿರುತ್ತದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಇನ್ನು ಕ್ಯಾಬಿನ್‌ ಒಳಗಡೆ ಎಕ್ಸ್‌ಪ್ಯಾನ್ ವಿನ್ಯಾಸ ಕಲ್ಪಿಸಿಕೊಡಲಾಗಿದೆ. ಇದು ಹೆಚ್ಚು ಹೆಡ್ ರೂಂ, ಲೆಗ್ ರೂಂ ಮತ್ತು ಶೋಲ್ಡರ್ ರೂಂ ಪಡೆದುಕೊಂಡಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಇದರ ಜತೆಗೆ ಡ್ಯುಯಲ್ ಟೋನ್ ಇಂಟಿರಿಯರ್, 15 ಸ್ಮಾರ್ಟ್ ಯುಟಿಲಿಟಿ ಸ್ಪೇಸ್, 235 ಲೀಟರ್ ಬೂಟ್ ಸ್ಪೇಸ್ ಮಾರುತಿ ಸೆಲೆರಿಯೊವನ್ನು ಇನ್ನಷ್ಟು ವಿಶೇಷವಾಗಿಸಲಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಇನ್ನುಳಿದಂತೆ ಸ್ಟೀರಿಯೊ ಜತೆ ಬ್ಲೂಟೂತ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಜತೆಗೆ ಹಲವಾರು ವೈಶಿಷ್ಟ್ಯಗಳು ಲಭ್ಯವಿರಲಿದೆ. ಇಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಅಂತಿಮವಾಗಿ ದರದ ಬಗ್ಗೆ ಮಾತ್ರ ಕಂಪನಿ ಯಾವುದೇ ಮಾಹಿತಿ ಬಹಿರಂಗಪಡಿಸಲಿಲ್ಲ. ಈ ಬಗ್ಗೆ ಬಿಡುಗಡೆ ವೇಳೆಯಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಇದೀಗ ಎಲ್ಲವೂ ಅಂತಿಮ; ಸೆಲೆರಿಯೊ ರೆಡಿ, ಬುಕ್ಕಿಂಗ್ ಆರಂಭ

ಅಷ್ಟಕ್ಕೂ ಮಾರುತಿ ಸೆಲೆರಿಯೊ ಬುಕ್ಕಿಂಗ್ ಮಾಡುವ ಮೊದಲು ಈ ಬಹುನಿರೀಕ್ಷಿತ ಕಾರನ್ನು ನೀವು ಕೂಡಾ ಟೆಸ್ಟ್ ಡ್ರೈವ್ ಮಾಡಬಹುದಾಗಿದೆ. ಇದಕ್ಕಾಗಿ ನಿಮ್ಮ ಮೊಬೈಲ್ ತೆರೆದು CELERIO ಎಂದು ಟೈಪ್ ಮಾಡಿ 53636 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಿ. ಇದಲ್ಲದಿದ್ದರೆ ಮೇಲೆ ತಿಳಿಸಿದ ವೆಬ್‌ಸೈಟ್ ಅಥವಾ ಮಾರುತಿಯ ಟೋಲ್ ಫ್ರಿ 1800 102 1800 ಸಂಖ್ಯೆಗೆ ಕರೆ ಮಾಡಿದರಾಯಿತು.

English summary
Maruti Suzuki Celerio, the car that will replace the Alto (A-Star in India) globally will be launched at the Auto Expo 2014 which starts on Feb 5th. Ahead of its launch Maruti has made live the Celerio website which reveals a load of information about the upcoming small car.
Story first published: Friday, January 24, 2014, 16:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark