ನಂ.1 ಮಾರುತಿಯಿಂದ ಮಗದೊಂದು ಕೊಡುಗೆ ರೆಡಿ!
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ, ನೂತನ ಸಿಯಾಝ್ ಕಾನ್ಸೆಪ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿತ್ತು.
ಮಾರುತಿ ಸುದ್ದಿಗಳಿಗಾಗಿ ಭೇಟಿ ಕೊಡಿರಿ
ಈ ಬಹುನಿರೀಕ್ಷಿತ ಕಾರು ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ವರದಿಗಳ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮಾರುತಿ ಸಿಯಾಝ್ ಕಾನ್ಸೆಪ್ಟ್ 2014 ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗಲಿದೆ. ನಿಮ್ಮ ಮಾಹಿತಿಗಾಗಿ, ವೈಎಲ್1 ಕೋಡ್ ಪೆಡದುಕೊಂಡಿರುವ ಮಾರುತಿಯ ನೂತನ ಸಿಯಾಝ್ ಪ್ರಮುಖವಾಗಿಯೂ ಎಸ್‌ಎಕ್ಸ್4 ಸೆಡಾನ್ ಆವೃತ್ತಿ ಬದಲಿ ಕಾರಾಗಿರಲಿದೆ.

ಅಷ್ಟಕ್ಕೂ ಮಾರುತಿ ಸುಜುಕಿ ಸಿಯಾಝ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಸದ್ಯಕ್ಕೆ ಲಭ್ಯವಿಲ್ಲ. ಆದರೆ ಚೀನಾದಲ್ಲಿ ಸುಜುಕಿ ಆಂಥೆಟಿಕ್ ಎಸ್ ಕಾನ್ಸೆಪ್ಟ್‌ನೊಂದಿಗೆ ಸಿಯಾಝ್ ತನ್ನ ಜೀವನವನ್ನು ಆರಂಭಿಸಿತ್ತು. ಈ ಮೂಲಕ ಜಾಗತಿಕ ಮಾದರಿಯ ಪಟ್ಟ ಕಟ್ಟಿಕೊಂಡಿತ್ತು.

ನೀವು ನೋಡುತ್ತಿರುವ ನೂತನ ಸಿಯಾಝ್ ಕಾನ್ಸೆಪ್ಟ್ ಕಾರು ನಿಜಕ್ಕೂ ಎಸ್‌ಎಕ್ಸ್4 ಆವೃತ್ತಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಇದು ಕ್ರೀಡಾತ್ಮಕ ವಿನ್ಯಾಸದ ಜತೆಗೆ ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಕಾರಿನೊಳಗೂ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗುತ್ತಿದ್ದು, ವಿಶ್ವದರ್ಜೆಯ ಗುಣಮಟ್ಟದ ಇಂಟಿರಿಯರ್‌ಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.

ನೂತನ ಸಿಯಾಝ್ ಕಾರಿನಲ್ಲಿ ಆಟೋ, ಕ್ಲೈಮೆಟ್, ಸ್ಯಾಟಲೈಟ್ ನೇವಿಗೇಷನ್, ರಿಯರ್ ಏರ್ ಕಾನ್, ಹೈ ಎಂಡ್ ಮಾಹಿತಿ ಮನರಂಜನಾ ಸಿಸ್ಟಂಗಳಂತಹ ವೈಶಿಷ್ಟ್ಯಗಳನ್ನು ನಿರೀಕ್ಷಿಸಲಾಗುತ್ತಿದೆ.

ಇದು ಹೋಂಡಾ ಸಿಟಿ, ಹ್ಯುಂಡೈ ವರ್ನಾ ಹಾಗೂ ಫೋಕ್ಸ್‌ವ್ಯಾಗನ್ ವೆಂಟೊ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿದೆ.

ಇದುವರೆಗೆ ಎಂಜಿನ್ ಮಾನದಂಡಗಳ ಬಗ್ಗೆ ಯಾವುದೇ ಮಾಹಿತಿಗಳು ಲಭಿಸಿಲ್ಲ. ಹಾಗಿದ್ದರೂ 1.4 ಕೆ ಸಿರೀಸ್ ಪೆಟ್ರೋಲ್ ಹಾಗೂ 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಹೊರತಾಗಿಯೂ ಸುಜುಕಿಯ ನೂತನ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ.

ಇನ್ನು ಅಂತಿಮವಾಗಿ ಸ್ವಯಂಚಾಲಿತ ಪ್ರಸರಣ ತಂತ್ರಾಂಶವನ್ನು (ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್) ಸಿಯಾಝ್ ಪಡೆದುಕೊಳ್ಳಲಿದೆ. ಇದು ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದೆ.


Click it and Unblock the Notifications








