10 ಲಕ್ಷ ಕೌಂಟ್‌ಡೌನ್; ಸ್ವಿಫ್ಟ್ ಕ್ರೀಡಾ ಆವೃತ್ತಿ ಲಾಂಚ್

Written By:

ಕಾರು ಮಾರುಕಟ್ಟೆ ಕುಸಿತದ ಹಂತದಲ್ಲಿದ್ದರೂ ಕಾರು ಉತ್ಪಾದಕ ಸಂಸ್ಥೆಗಳು ಮಾತ್ರ ನೂತನ ಆವೃತ್ತಿಗಳನ್ನು ಬಿಡುಗಡೆ ಮಾಡುವುದರಲ್ಲಿ ಹಿಂಜರಿದಿಲ್ಲ. ಅಂದರೆ ಮುಂಗಾರು ಮಳೆ ಪ್ರವೇಶ ಪಡೆದಂತೆ ಕಾರು ಮಾರುಕಟ್ಟೆಗೀಗ ಸುಗ್ಗಿಯ ಕಾಲವಾಗಿದೆ.

ಈಗಾಗಲೇ ಎ ಕ್ಲಾಸ್, ಇ ಕ್ಲಾಸ್, ಹೋಂಡಾ ಅಮೇಜ್ ಜತೆಗೆ ಫೋರ್ಡ್ ಇಕೊಸ್ಪೋರ್ಟ್ ಮಾರುಕಟ್ಟೆ ಪ್ರವೇಶಿಸಿದೆ. ಇದರ ಬೆನ್ನಲ್ಲೇ ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸ್ವಿಫ್ಟ್ ಆರ್‌ಎಸ್ ಆವೃತ್ತಿಯ ಸ್ಪೋರ್ಟಿ ವರ್ಷನ್ ಬಿಡುಗಡೆ ಮಾಡಿದೆ. ಈ ಮೂಲಕ 10 ಲಕ್ಷ ಯುನಿಟ್ ಮಾರಾಟದ ಕೌಂಟ್‌ಡೌನ್ ಆರಂಭಿಸಿದೆ.

ನಿಮ್ಮ ಮಾಹಿತಿಗಾಗಿ, ಸ್ವಿಫ್ಟ್ ಆರ್‌ಎಸ್ ವರ್ಷನ್ ಕೇವಲ ಸೀಮಿತ ಆವೃತ್ತಿಗಳಲ್ಲಿ ಮಾತ್ರ ಲಭ್ಯವಿದೆ. ಈ ಸ್ಪೋರ್ಟಿ ಪ್ಯಾಕೇಜ್‌ಗಾಗಿ ಹೆಚ್ಚುವರಿ 24,500 ರು. ಪಾವತಿಸಬೇಕಾಗಿದೆ. ಹಾಗಿದ್ದರೆ ಇನ್ಯಾಕೆ ತಡ ನಿಮ್ಮ ಜನಪ್ರಿಯ ಸ್ವಿಫ್ಟ್ ಆವೃತ್ತಿಯನ್ನು ನಿಮ್ಮದಾಗಿಸಿಕೊಳ್ಳಿರಿ...

ಮಾರುತಿ ಸ್ವಿಫ್ಟ್ ಕ್ರೀಡಾ ಆವೃತ್ತಿ ಲಾಂಚ್

ಹೆಸರಲ್ಲೇ ಸೂಚಿಸಿರುವಂತೆಯೇ ನೂತನ ಸ್ವಿಫ್ಟ್ ಕ್ರೀಡಾ ಆವೃತ್ತಿ, ಸ್ಟೈಲಿಷ್ ವಿನ್ಯಾಸ ಹಾಗೂ ಗ್ರಾಫಿಕ್ಸ್ ಪಡೆದುಕೊಂಡಿದೆ.

ಮಾರುತಿ ಸ್ವಿಫ್ಟ್ ಕ್ರೀಡಾ ಆವೃತ್ತಿ ಲಾಂಚ್

ನೂತನ ಲಿಮಿಟೆಡ್ ಎಡಿಷನ್ ಸ್ವಿಫ್ಟ್ ಆರ್‌ಎಸ್ ಸ್ಪೋರ್ಟ್ಸ್ ವರ್ಷನ್, ವಿಎಕ್ಸ್‌ಐ ಪೆಟ್ರೋಲ್ ಹಾಗೂ ವಿಡಿಐ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ. ದೇಶದ ಎಲ್ಲ ಮಾರುತಿ ಸುಜುಕಿ ಅಧಿಕೃತ ಡೀಲರ್‌ಗಳ ಬಳಿ ನೂತನ ಸ್ವಿಫ್ಟ್ ಕ್ರೀಡಾ ವರ್ಷನ್ ಲಭ್ಯವಾಗಲಿದೆ.

ಮಾರುತಿ ಸ್ವಿಫ್ಟ್ ಕ್ರೀಡಾ ಆವೃತ್ತಿ ಲಾಂಚ್

ನೂತನ ಸ್ವಿಫ್ಟ್ ಆರ್‌ಎಸ್ ಸ್ಪೋರ್ಟ್ ವರ್ಷನ್ ಕಪ್ಪು ಹಾಗೂ ನೀಲಿ ಬಣ್ಣದ ಗ್ರಾಫಿಕ್ಸ್ ಟಚ್ ನೀಡಲಾಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಕಪ್ಪು ವೀಲ್ ಕವರ್ ಪರಿಚಯಿಸಲಾಗಿದೆ.

ಮಾರುತಿ ಸ್ವಿಫ್ಟ್ ಕ್ರೀಡಾ ಆವೃತ್ತಿ ಲಾಂಚ್

ಸ್ಪೆಷಲ್ ಎಡಿಷನ್ ಸ್ವಿಫ್ಟ್‌ನಲ್ಲಿ ಹೈ ಎಂಡ್ ಮ್ಯೂಸಿಕ್ ಸಿಸ್ಟಂ, ಸಿಡಿ ಪ್ಲೇಯರ್, ಎಯುಎಕ್ಸ್ ಹಾಗೂ ಯುಎಸ್‌ಬಿ ಸೌಲಭ್ಯ ಲಭ್ಯವಿರಲಿದೆ.

ಮಾರುತಿ ಸ್ವಿಫ್ಟ್ ಕ್ರೀಡಾ ಆವೃತ್ತಿ ಲಾಂಚ್

2005ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಸ್ವಿಫ್ಟ್ ಈ ವರೆಗೆ 9.6 ಲಕ್ಷ ಯುನಿಟ್ ಮಾರಾಟ ಕಂಡುಕೊಂಡಿದೆ. ಇದೀಗ 10 ಲಕ್ಷ ಕೌಂಟ್ ಡೌನ್ ಆರಂಭಗೊಂಡಿರುವಂತೆಯೇ ನೂತನ ಕ್ರೀಡಾ ಆವೃತ್ತಿ ಆಗಮನವಾಗಿದೆ.

English summary
Maruti Suzuki India has introduced a limited edition “Swift RS”, the sporty version of the popular Swift. The Swift RS comes with new styling and graphics and that give it a distinct sporty character and looks. The Swift RS enhancement package, priced at Rs. 24,500.
Story first published: Wednesday, July 3, 2013, 9:34 [IST]
Please Wait while comments are loading...

Latest Photos