ಸ್ವಿಫ್ಟ್ 'ವಿಂಡ್‌ಸಾಂಗ್' ಸೀಮಿತ ಆವೃತ್ತಿ ಬಿಡುಗಡೆ; ಹೊಸತೇನಿದೆ?

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಭಾರತೀಯ ಗ್ರಾಹಕರಿಗಾಗಿ ಮಾತ್ರ ತನ್ನ ಜನಪ್ರಿಯ ಸ್ವಿಫ್ಟ್ ಆವೃತ್ತಿಯ ವಿಶೇಷ ಎಡಿಷನ್ ಬಿಡುಗಡೆಗೊಳಿಸಿದೆ. ಈಗ ಹೊಸತಾದ ಮಾರುತಿ ಸುಜುಕಿ 'ವಿಂಡ್‌ಸಾಂಗ್' ಲಿಮಿಟೆಡ್ ಎಡಿಷನ್ ಭಾರತದಲ್ಲಿ ಸ್ಥಿತಗೊಂಡಿರುವ ಮಾರುತಿ ಅಧಿಕೃತ ಡೀಲರುಗಳನ್ನು ತಲುಪಲಿದೆ. ಇದು ನೆಚ್ಚಿನ ಸ್ವಿಫ್ಟ್ ಗ್ರಾಹಕರಿಗೆ ಇನ್ನಷ್ಟು ಹೊಸತನವನ್ನು ನೀಡಲಿದೆ.

ಕಳೆದ ಅನೇಕ ವರ್ಷಗಳಲ್ಲಿ ಸಾಮಾನ್ಯ ಆವೃತ್ತಿಗಳಲ್ಲದೆ ಸ್ಪೋರ್ಟಿ, ಟ್ರೆಂಡಿ ಹಾಗೂ ವಿಶೇಷ ಎಡಿಷನ್‌ಗಳನ್ನು ಬಿಡುಗಡೆ ಮಾಡುತ್ತಾ ಬಂದಿರುವ ಮಾರುತಿ ಗ್ರಾಹಕರನ್ನು ಮಗದೊಮ್ಮೆ ಸೆಳೆಯುವ ಪ್ರಯತ್ನ ಮಾಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ 'ವಿಂಡ್‌ಸಾಂಗ್' ಸೀಮಿತ ಆವೃತ್ತಿ ಬಿಡುಗಡೆ

ಹೊಸತಾದ ಮಾರುತಿ ಸುಜುಕಿ ಸ್ವಿಫ್ಟ್ ವಿಂಡ್‌ಸಾಂಗ್ ಸೀಮಿತ ಆವೃತ್ತಿಯು ವಿಎಕ್ಸ್‌ಐ ಮತ್ತು ವಿಡಿಐ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಿರಲಿದೆ. ಇದರ ಪೆಟ್ರೋಲ್ ಮಾದರಿಯು 5.14 ಹಾಗೂ ಡೀಸೆಲ್ ವೆರಿಯಂಟ್ 6.10 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಲಿದೆ.

ಸ್ಟೈಲಿಷ್ ಒಳಮೈ

ಸ್ಟೈಲಿಷ್ ಒಳಮೈ

ಸಾಮಾನ್ಯ ಮಾದರಿಗೆ ಹೋಲಿಸಿದರೆ ವಿಂಡ್‌ಸಾಂಗ್ ಕಾರಿನೊಳಗೆ ಹೆಚ್ಚು ಸ್ಟೈಲಿಷ್, ಕ್ರೀಡಾತ್ಮಕ ಹಾಗೂ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದು ಎಲ್ಲ ಕಪ್ಪುವರ್ಣದ ಇಂಟಿರಿಯರ್ ಜೊತೆಗೆ ಹಳದಿ ಪಟ್ಟಿಯ ಆಕರ್ಷಣೆಯು ಮನಸೆಳೆಯುತ್ತಿದೆ.

ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ

ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ

ಸೋನಿ ಟಚ್ ಸ್ಕ್ರೀನ್ ಮ್ಯೂಸಿಕ್ ಸಿಸ್ಟಂ ಇದರಲ್ಲಿ ಆಳವಡಿಸಲಾಗಿದೆ. ಇದು ಬ್ಲೂಟೂತ್ ಜೊತೆಗೆ ಬಾಹ್ಯ ಮೈಕ್ ಪಡೆಯಲಿದೆ. ಜೊತೆಗೆ ಎಲ್ಲ ಐ ಫೋನ್‌ಗಳಿಗೂ ಕಣ್ಣುಗಳು ಮುಕ್ತ ನಿಯಂತ್ರಣ ಇರಲಿದೆ.

ಟ್ರೆಂಡಿ ಸೀಟು ಕವರ್

ಟ್ರೆಂಡಿ ಸೀಟು ಕವರ್

ಸೀಮಿತ ಆವೃತ್ತಿಯ ಮಾರುತಿ ಸ್ವಿಫ್ಟ್ ಪ್ರೀಮಿಯಂ ಜೊತೆಗೆ ಲಗ್ಷುರಿ ನೋಟದ ಸೀಟು ಕವರ್ ಪಡೆಯಲಿದೆ. ವಿಶೇಷವೆಂದರೆ ಸ್ಟೀರಿಂಗ್ ವೀಲ್ ಸಹ ಹಳದಿ ವರ್ಣಮಯವಾಗಿದೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ರಿವರ್ಸ್ ಪಾರ್ಕಿಂಗ್ ಸೆನ್ಸಾರ್

ಸಂಪೂರ್ಣವಾಗಿ ವಿಂಡ್‌ಸಾಂಗ್ ಹೆಸರಿಗೆ ತಕ್ಕಂತೆ ಸೌಲಭ್ಯಗಳನ್ನು ನೀಡಿರುವ ಮಾರುತಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ವೈಶಿಷ್ಟ್ಯವನ್ನು ನೀಡಿದೆ.

ರಿಯರ್ ಅಪ್ಪರ್ ಸ್ಪಾಯ್ಲರ್

ರಿಯರ್ ಅಪ್ಪರ್ ಸ್ಪಾಯ್ಲರ್

ಇನ್ನು ಕಾರಿಗೆ ಕ್ರೀಡಾತ್ಮಕ ಲುಕ್ ನೀಡುವ ಸಲುವಾಗಿ ಮೇಲ್ಗಡೆ ಸ್ಪಾಯ್ಲರ್ ಆಯ್ಕೆಯನ್ನು ನೀಡಲಾಗಿದೆ. ಇದು ಏರೋಡೈನಾಮಿಕ್ ಪ್ಯಾಕೇಜ್‌ಗೆ ಇನ್ನಷ್ಟು ಮೆರಗು ತುಂಬಲಿದೆ.

ಮ್ಯೂಸಿಕಲ್ ಥೀಮ್ ಗ್ರಾಫಿಕ್ಸ್

ಮ್ಯೂಸಿಕಲ್ ಥೀಮ್ ಗ್ರಾಫಿಕ್ಸ್

ಇನ್ನು ಕಾರಿನ ಬದಿಯಲ್ಲಿ ಮ್ಯೂಸಿಕಲ್ ಥೀಮ್ ಗ್ರಾಫಿಕ್ಸ್ ನೋಡಬಹುದಾಗಿದೆ. ಇದು ವಿಂಡ್‌ಸಾಂಗ್ ಆವೃತ್ತಿಯನ್ನು ವಿಶೇಷವಾಗಿ ಗುರುತಿಸಲು ನೆರವಾಗಲಿದೆ.

ಡೋರ್ ಸಿಲ್ ಗಾರ್ಡ್

ಡೋರ್ ಸಿಲ್ ಗಾರ್ಡ್

ಇನ್ನು ನೀಲಿ ವರ್ಣದಿಂದ ಕಂಗೊಳಿಸುತ್ತಿರುವ ಸ್ವಿಫ್ಟ್ ಲಾಂಛನವನ್ನು ಡೋರ್ ಸಿಲ್ ಗಾರ್ಡ್‌ನಲ್ಲಿ ನೋಡಬಹುದಾಗಿದೆ.

ಇಂಟಿರಿಯರ್ ಲೈಟಿಂಗ್

ಇಂಟಿರಿಯರ್ ಲೈಟಿಂಗ್

ಸ್ವಿಫ್ಟ್ ವಿಶೇಷ ಎಡಿಷನ್‌ನಲ್ಲಿ ನೀಲಿ ವರ್ಣದ ಇಂಟಿರಿಯರ್ ಲೈಟಿಂಗ್ ಸೌಲಭ್ಯ ನೀಡಲಾಗಿದೆ. ಇದು ಕಾರಿಗೆ ಹೆಚ್ಚು ಪ್ರೀಮಿಯಂ ನೋಟ ನೀಡಲಿದೆ.

ಫ್ಲೋರ್ ಮ್ಯಾಟ್

ಫ್ಲೋರ್ ಮ್ಯಾಟ್

ಅಂತೆಯೇ ವಿಶೇಷವಾಗಿ ನಿರ್ಮಿತ ಫ್ಲೋರ್ ಮ್ಯಾಟ್ ಕೂಡಾ ಇದರಲ್ಲಿ ಕಾಣಬಹುದಾಗಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಸ್ವಿಫ್ಟ್ ವಿಂಡ್ ಸಾಂಗ್ ವಿಎಕ್ಸ್‌ಐ - 5.14 ಲಕ್ಷ ರು.

ಸ್ವಿಫ್ಟ್ ವಿಂಡ್ ಸಾಂಗ್ ವಿಡಿಐ - 6.10 ಲಕ್ಷ ರು.

English summary
Japanese automobile giant, Maruti Suzuki has a dominant position in the Indian market. Their products are the most sought after vehicles among Indians. It is also one of the most trusted brands among automobiles across the country.
Story first published: Tuesday, January 27, 2015, 13:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark