ಮರ್ಸಿಡಿಸ್ ಬೆಂಝ್‌ನಿಂದ 3 ತಿಂಗಳಲ್ಲಿ 3 ಕಾರು ಲಾಂಚ್

Written By:
ಲಗ್ಷುರಿ ಕಾರು ಸೆಗ್ಮೆಂಟ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಗಟ್ಟಿ ಮಾಡಲು ಹೊರಟಿರುವ ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್, ಮುಂದಿನ ಮೂರು ತಿಂಗಳೊಳಗೆ ಮೂರು ನೂತನ ಕಾರುಗಳನ್ನು ಲಾಂಚ್ ಮಾಡಲಿರುವುದಾಗಿ ತಿಳಿದು ಬಂದಿದೆ.

ಇದೇ ಆರ್ಥಿಕ ಸಾಲಿನಲ್ಲಿ ಬೆಂಝ್ ನೂತನ ಮಾಡೆಲ್‌ಗಳು ಕಾರುಗಳು ಮಾರುಕಟ್ಟೆಗೆ ಅಪ್ಪಳಿಸಲಿದ್ದು, ಈ ಮುಖಾಂತರ ಮಾರುಕಟ್ಟೆ ಶೇರು ಹೆಚ್ಚಿಸುವ ಗುರಿ ಹೊಂದಿದೆ. 2012ನೇ ಸಾಲಿನಲ್ಲಿ 7000ದಷ್ಟು ಯುನಿಟ್‌ಗಳನ್ನು ಬೆಂಝ್ ಸೇಲ್ ಮಾಡಿತ್ತು. ಹಾಗೆಯೇ 2013ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 5.3ರಷ್ಟು ಪ್ರಗತಿ ಸಾಧಿಸಿತ್ತು. 2012 ಜನವರಿಯಿಂದ 2013 ಮಾರ್ಚ್ ಅವಧಿಯಲ್ಲಿ ಒಟ್ಟು 2,009 ಕಾರುಗಳನ್ನು ಸೇಲ್ ಮಾಡಿತ್ತು.

ಮೇ 16ರಂದು ನವದೆಹಲಿಯಲ್ಲಿ ಮರ್ಸಿಡಿಸ್ ಬೆಂಝ್ ಸ್ಪೋರ್ಟ್ಸ್ ಯುಟಿಲಿಟಿ ವಾಹನವಾದ ಜಿಎಲ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರ ಬೆನ್ನಲ್ಲೇ ಬಿ ಕ್ಲಾಸ್ ಡೀಸೆಲ್ ವೆರಿಯಂಟ್ ಹಾಗೂ ಎ ಕ್ಲಾಸ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳ ಆಗಮನವಾಗಲಿದೆ.

30 ಲಕ್ಷಕ್ಕೂ ಕಡಿಮೆ ಬೆಳೆಬಾಳುವ ಕಾರು ಮಾರುಕಟ್ಟೆಯಲ್ಲಿ ತನ್ನ ಶೇರನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿರುವ ಕಂಪನಿಯು, ಎಸ್‌ಯುವಿ ಸೆಗ್ಮೆಂಟ್‌ನಲ್ಲೂ ನೂತನ ಕಾರು ಲಾಂಚ್ ಬಗ್ಗೆಯೂ ಗಮನ ಕೇಂದ್ರಿತವಾಗಿದೆ.

English summary
To increase its market share in the luxury car segment and clock a double digit growth in this fiscal, Mercedes-Benz will launch three new models in a span of just three months.
Story first published: Monday, April 22, 2013, 13:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark