70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

By Nagaraja

ಬಿಎಂಡಬ್ಲ್ಯು ವಾಹನ ತಯಾರಿಕ ಸಂಸ್ಥೆಯ ಮಗದೊಂದು ಐಷಾರಾಮಿ ವಾಹನ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇಂದು (ಮೇ 29, ಗುರುವಾರ) ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಎಕ್ಸ್5 ಐಷಾರಾಮಿ ಕಾರನ್ನು ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಬಿಡುಗಡೆಗೊಳಿಸಿದರು.

ಆರಂಭದಲ್ಲಿ ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಡ್ರೈವ್ 30ಡಿ ಪ್ಯೂರ್ ಡಿಸೈನ್ ಎಕ್ಸ್‌ಪೀರಿಯನ್ಸ್ ವೆರಿಯಂಟ್‌ನಲ್ಲಿ ಲಭ್ಯವಾಗಲಿದೆ. ಇದರ ಪುಣೆ ಎಕ್ಸ್ ಶೋ ರೂಂ ದರ 70.9 ಲಕ್ಷ ರು.ಗಳಾಗಿದೆ. ಇದು ಪ್ರಮುಖವಾಗಿ ಮರ್ಸಿಡಿಸ್ ಬೆಂಝ್‌ನ ಎಂಎಂಲ್ ಕ್ಲಾಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಈ ಮೂಲಕ ಎಕ್ಸ್1, ಎಕ್ಸ್3 ಹಾಗೂ ಎಕ್ಸ್6 ಸಾಲಿಗೆ ಹೊಸ ಎಸ್‌ಯುವಿ ಆವೃತ್ತಿಯ ಸೇರ್ಪಡೆಯಾಗಿದೆ. ಡ್ರೈವ್ ಸ್ಪಾರ್ಕ್ ಸೆರೆಹಿಡಿದಿರುವ ಬಿಎಂಡಬ್ಲ್ಯು ಎಕ್ಸ್5 ಎಕ್ಸ್‌ಕ್ಲೂಸಿವ್ ಚಿತ್ರ ಹಾಗೂ ವಿವರಗಳಿಗಾಗಿ ಫೋಟೊ ಸ್ಲೈಡರ್‌ನತ್ತ ಮುಂದುವರಿಯಿರಿ.

70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

ಬಿಎಂಡಬ್ಲ್ಯು ಎಕ್ಸ್5 ಭಾರತ ಮಾರುಕಟ್ಟೆಯಲ್ಲಿ ಬಹಳ ಸಮಯದಿಂದಲೇ ಮಾರಾಟದಲ್ಲಿದ್ದರೂ ಇದೀಗೀನ ಅಪ್‌ಗ್ರೇಡ್ ಮಾದರಿ ಈ ಬಹುನಿರೀಕ್ಷಿತ ಎಸ್‌ಯುವಿಯನ್ನು ಇನ್ನಷ್ಟು ಉನ್ನತ ದರ್ಜೆಗೆ ಕೊಂಡೊಯ್ಯಲಿದೆ. ಇದು ಹೊರಗಡೆ ತಾಜಾ ವಿನ್ಯಾಸದ ಹೊರತಾಗಿ ಆಂತರಿಕ ಭಾಗದಲ್ಲೂ ಬದಲಾವಣೆ ಪಡೆದುಕೊಂಡಿದೆ.

70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

ನೂತನ ಬಿಎಂಡಬ್ಲ್ಯು ಎಕ್ಸ್5 ಲೇಟೆಸ್ಟ್ ಜನರೇಷನ್ ಐಡ್ರೈವ್ ಸಿಸ್ಟಂ ಪಡೆದುಕೊಂಡಿದ್ದು, ಟ್ರಿಪ್ ಕಂಪ್ಯೂಟರ್, ಸ್ಟೀರಿಯೋ, ಬ್ಲೂಟೂತ್ ಟೆಕ್ನಾಲಜಿ ಹಾಗೂ ರಿವರ್ಸಿಂಗ್ ಕ್ಯಾಮೆರಾಗಳಂತಹ ಸೇವೆಗಳನ್ನು ನಿಭಾಯಿಸಲಿದೆ.

70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

ಅದೇ ರೀತಿ 4 ಝೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ ಸಹ ಪಡೆದುಕೊಂಡಿದೆ. ಅಲ್ಲದೆ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸ್ಟೀರಿಂಗ್ ಹಾಗೂ ಮುಂಭಾಗದ ಸೀಟು ಸೌಲಭ್ಯಗಳು ಇರಲಿದೆ. ಹಾಗೆಯೇ ಸುರಕ್ಷತೆಗೂ ಗರಿಷ್ಠ ಆದ್ಯತೆ ಕೊಡಲಾಗಿದೆ.

70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಸಂಸ್ಥೆಯೇ ತಿಳಿಸುವಂತೆಯೇ ನೂತನ ಎಕ್ಸ್5, ಡಿಸೈನ್ ಪ್ಯೂರ್ ಎಕ್ಸ್‌ಪೀರಿಯನ್ಸ್ ಪ್ಯಾಕೇಜ್ ಪಡೆದುಕೊಳ್ಳಲಿದೆ. ಇದು ನೂತನ ಎಕ್ಸ್5 ಆವೃತ್ತಿಗೆ ಪರಿಪೂರ್ಣ ನೋಟ ಹಾಗೂ ಕ್ರೀಡಾಸಕ್ತಿ ಪ್ರದಾನ ಮಾಡುತ್ತಿದ್ದು, ಅಡ್ವೆಂಚರ್ ಎನಿಸಿಕೊಂಡಿದೆ.

70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

ಮುಂಭಾಗ ಹಾಗೂ ಹಿಂಭಾಗದಲ್ಲಿ ಸ್ಟೀಲ್ ಹೆಡ್‌ಲೈಟ್, ಐಷಾರಾಮಿ ವುಡ್, ಮೆಟಲ್ ಹಾಗೂ ಲೆಥರ್ ಸ್ಪರ್ಶ ಮಂತಾದ ವೈಶಿಷ್ಟ್ಯಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.

70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

ಹಾಗಿದ್ದರೂ 2014 ಎಕ್ಸ್5 ಏಕಮಾತ್ರ 3 ಲೀಟರ್ ಇನ್‌ಲೈನ್ ಸಿಕ್ಸ್ ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ಮಾತ್ರ ಆಗಮನವಾಗಲಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ಇದು ಗರಿಷ್ಠ 258 ಪಿಎಸ್ ಪವರ್ (560 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

70 ಲಕ್ಷ ದುಬಾರಿಯ ಬಿಎಂಡಬ್ಲ್ಯು ಎಕ್ಸ್5 ಭರ್ಜರಿ ಲಾಂಚ್

ನಿರ್ವಹಣೆಯ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ಎಕ್ಸ್5 ಆವೃತ್ತಿಯು ಕೇವಲ 6.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ ವೇಗವರ್ಧಿಸುವ ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಡ್ರೈವಿಂಗ್ ಮೋಡ್

ಡ್ರೈವಿಂಗ್ ಮೋಡ್

ಮೂರು ಡ್ರೈವಿಂಗ್ ಮೋಡ್‌ಗಳಲ್ಲಿ ಆಗಮನವಾಗಿರುತ್ತದೆ. ಅವುಗಳೆಂದರೆ ಕಂಫರ್ಟ್, ಸ್ಪೋರ್ಟ್ ಹಾಗೂ ಸ್ಪೋರ್ಟ್ ಪ್ಲಸ್.

ಇಂಧನ ಕ್ಷಮತೆ...

ಇಂಧನ ಕ್ಷಮತೆ...

ಬಿಎಂಡಬ್ಲ್ಯು ಪ್ರಕಾರ, ಪರೀಕ್ಷಾರ್ಥ ಸಂದರ್ಭದಲ್ಲಿ ನೂತನ ಎಕ್ಸ್5, ಪ್ರತಿ ಲೀಟರ್‌ಗೆ 15.3 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.

Most Read Articles

Kannada
English summary
BMW's all-new 2014 X5 SUV was launched today in Pune. The flagship SUV of the German manufacturer is going to cost buyers INR 70,90,000. The SUV will initially only be available in the xDrive 30d Pure Design Experience trim - other variants will follow.
Story first published: Thursday, May 29, 2014, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X