2015 ಜನವರಿಯಲ್ಲಿ ಬಿಡುಗಡೆಯಾಗಲಿರುವ ಕಾರುಗಳು

By Nagaraja

ಹೊಸ ವರ್ಷ ಪಾದಾರ್ಪಣೆ ಮಾಡಿರುವಂತೆಯೇ ದೇಶದೆಲ್ಲ ಮುಂಚೂಣಿಯ ಸಂಸ್ಥೆಗಳು ಬೆಲೆ ಏರಿಕೆ ನೀತಿಯನ್ನು ಅನುಸರಿಸಿವೆ. ಒಂದೆಡೆ ಇದು ಮಾರಾಟ ಕುಸಿತದ ಭೀತಿಗೆ ಕಾರಣವಾದರೂ ಸಹ ವಾಹನ ಸಂಸ್ಥೆಗಳು ಮಾತ್ರ ತಾಜಾ ಮಾದರಿಗಳನ್ನು ಬಿಡುಗಡೆ ಮಾಡುವುದರಿಂದ ಹಿಂದೆ ಸರಿದಿಲ್ಲ.

ಇವನ್ನೂ ಓದಿ: ಮುಂಬರುವ ಕಾರುಗಳು

ನಾವು ಈಗಾಗಲೇ 2015ನೇ ಸಾಲಿನಲ್ಲಿ ಬಿಡುಗಡೆಯಾಗಲಿರುವ 25ರಷ್ಟು ಮಾದರಿಗಳ ಪೈಕಿ ಪ್ರಮುಖ ಕಾರುಗಳ ಬಗ್ಗೆ ಮಾಹಿತಿ ಕೊಟ್ಟಿರುತ್ತೇವೆ. ಇದರ ಮುಂದುವರಿದ ಭಾಗವೆಂಬಂತೆ 2015 ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿರುವ ಮಾದರಿಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಿದ್ದೇವೆ. ಈ ಮೂಲಕ ವಾಹನ ಸಂಸ್ಥೆಗಳು ಮಾರಾಟಕ್ಕೆ ಉತ್ತೇಜನ ನೀಡುವ ಪ್ರಯತ್ನದಲ್ಲಿದೆ.

ದಟ್ಸನ್ ಗೊ ಪ್ಲಸ್

ದಟ್ಸನ್ ಗೊ ಪ್ಲಸ್

ಜನವರಿ 15ರಂದು ಬಿಡುಗಡೆಯಾಗುತ್ತಿರುವ ದಟ್ಸನ್ ಗೊ ಪ್ಲಸ್, ದೇಶಕ್ಕೆ ಪ್ರವೇಶಿಸುತ್ತಿರುವ ಚೊಚ್ಚಲ ಕಾಂಪಾಕ್ಟ್ ಎಂಪಿವಿ ಕಾರಾಗಿದೆ. ಈ ಸಬ್ ಫೋರ್ ಮೀಟರ್ ಕಾರಿನಲ್ಲಿ ಏಳು ಸೀಟುಗಳ ವ್ಯವಸ್ಥೆಯನ್ನು ಒದಗಿಸಲಿದೆ.

ದಟ್ಸನ್ ಗೊ ಪ್ಲಸ್

ದಟ್ಸನ್ ಗೊ ಪ್ಲಸ್

ಕಳೆದ ವರ್ಷದ ಗೊ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡಿದ್ದ ನಿಸ್ಸಾನ್‌ನ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ಈಗ ಗೊ ಪ್ಲಸ್ ಎಂಪಿವಿ ಕಾರಿನೊಂದಿಗೆ ಮೋಡಿ ಮಾಡುವ ವಿಶ್ವಾಸದಲ್ಲಿದೆ. ಇದು 1198ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಆದರೆ ಸದ್ಯಕ್ಕೆ ಆಟೋಮ್ಯಾಟಿಕ್ ವೆರಿಯಂಟ್ ಲಭ್ಯವಿರುವುದಿಲ್ಲ.

ಟಾಟಾ ಬೋಲ್ಟ್

ಟಾಟಾ ಬೋಲ್ಟ್

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್‌ನ ಹೊಸತಾದ ಹೊರಿಝೋನೆಕ್ಸ್ಟ್ ಸಿದ್ಧಾಂತದಲ್ಲಿ ನಿರ್ಮಾಣವಾಗಿರುವ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಗೂ ಮುನ್ನವೇ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಇದು ಟಾಟಾ ಕಾರುಗಳ ಪೈಕಿ ಹೊಸ ಮೈಲುಗಲ್ಲು ಸೃಷ್ಟಿ ಮಾಡುವ ಸಾಧ್ಯತೆಯಿದೆ.

ಟಾಟಾ ಬೋಲ್ಟ್

ಟಾಟಾ ಬೋಲ್ಟ್

ಜನವರಿ 20ರಂದು ಬಿಡುಗಡೆಯಾಗಲಿರುವ ಟಾಟಾ ಬೋಲ್ಟ್ 1.2 ಲೀಟರ್ ರೆವೊಟ್ರಾನ್ ಟರ್ಬೊ ಪೆಟ್ರೋಲ್ ಎಂಜಿನ್ 140 ಎನ್‌ಎಂ ತಿರುಗುಬಲದಲ್ಲಿ 90 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಇದು ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿರುವುದು ವಿಶೇಷವೆನಿಸಿದೆ. ಹಾಗೆಯೇ ಫಿಯೆಟ್‌ನ 1.3 ಲೀಟರ್ ಡೀಸೆಲ್ ಮೋಟಾರು ಎಂಜಿನ್ 190 ಎನ್‌ಎಂ ತಿರುಗುಬಲದಲ್ಲಿ 75 ಪಿಎಸ್ ಪವರ್ ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ. ಆದರೆ ಎಎಂಟಿ ಅಲಭ್ಯತೆ ಕಾಡಲಿದೆ.

ಮರ್ಸಿಡಿಸ್ ಬೆಂಝ್ ಸಿಎಲ್‌ಎ ಕ್ಲಾಸ್

ಮರ್ಸಿಡಿಸ್ ಬೆಂಝ್ ಸಿಎಲ್‌ಎ ಕ್ಲಾಸ್

2015ನೇ ಸಾಲಿನಲ್ಲಿ ಬೆಂಝ್‌ನಿಂದ ಬಿಡುಗಡೆಯಾಗಲಿರುವ ಮೊದಲ ಮಾದರಿ ಸಿಎಲ್‌ಎ ಕ್ಲಾಸ್ ಆಗಿರಲಿದೆ. ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದ್ದ ಬೆಂಝ್ ಸಿಎಲ್‌ಎ ಕ್ಲಾಸ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಇದರ ಪೆಟ್ರೋಲ್ 2.0 ಲೀಟರ್ ಎಂಜಿನ್ 181 ಅಶ್ವಶಕ್ತಿ (300 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 2.2 ಲೀಟರ್ ಡೀಸೆಲ್ ಎಂಜಿನ್ 134 ಅಶ್ವಶಕ್ತಿ (300 ತಿರುಗುಬಲ) ಪಡೆಯಲಿದೆ. ಇವೆರಡು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

 ಫಿಯೆಟ್ ಅಬಾರ್ತ್ 595 ಕಾಂಪಿಟಿಷನ್

ಫಿಯೆಟ್ ಅಬಾರ್ತ್ 595 ಕಾಂಪಿಟಿಷನ್

ಕಳೆದ ಸಾಲಿನಲ್ಲಿ ಅವೆಂಚ್ಯುರಾ ಕ್ರಾಸೋವರ್ ಮಾದರಿಯನ್ನು ಬಿಡುಗಡೆ ಮಾಡಿರುವ ಐಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಟೆಯ್, ಇದೇ ತಿಂಗಳಲ್ಲಿ ಅಬಾರ್ತ್ 595 ಕಾಂಪಿಟಿಷನ್ (Competizione)ಮಾದರಿಯನ್ನು ಬಿಡುಗಡೆ ಮಾಡಲಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು 1.4 ಲೀಟರ್ ಟಿ-ಜೆಟ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 160 ಅಶ್ವಶಕ್ತಿ (201 ತಿರುಗುಬಲ) ಉತ್ಪಾದಿಸಲಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಭಾರತ ಪ್ರವೇಶಿಸಲಿರುವ ಈ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರು 25ರಿಂದ 30 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗೆಯೇ ಬಿಎಂಡಬ್ಲ್ಯು ಮಿನಿ ಕೂಪರ್ ಕಾರಿಗೆ ಪ್ರತಿಸ್ಪರ್ಧೆ ಒಡ್ಡಲಿದೆ.

Most Read Articles

Kannada
English summary
In this article we'll talk about the cars launching in the first month of 2015.
Story first published: Monday, January 5, 2015, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X