ರೆನೊದಿಂದ ಸಿದ್ಧಗೊಳ್ಳುತ್ತಿದೆ ಎರ್ಟಿಗಾ, ಇನ್ನೋವಾ ಪ್ರತಿಸ್ಪರ್ಧಿ

Written By:

ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಮಲ್ಟಿ ಪರ್ಪಸ್ ವಾಹನಗಳಿಗೆ (ಎಂಪಿವಿ) ಭಾರಿ ಬೇಡಿಕೆಯಿದೆ. ದೇಶದ ನಂ. 1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಎರ್ಟಿಗಾ ಹಾಗೂ ಟೊಯೊಟಾ ಇನ್ನೋವಾ ಆವೃತ್ತಿಗಳು ಯಶಸ್ಸನ್ನು ಕಂಡಿರುವುದು ಇದಕ್ಕೆ ಉದಾಹರಣೆಯಾಗಿದೆ.

ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಮಾರುತಿ ಎರ್ಟಿಗಾ ಹಾಗೂ ಟೊಯೊಟಾ ಇನ್ನೋವಾ ಆವೃತ್ತಿಗಳಿಗೆ ಸದ್ಯದಲ್ಲೇ ಪ್ರತಿಸ್ಪರ್ಧಿಯೊಂದು ಸಿದ್ಧಗೊಳ್ಳಲಿದೆ. ಬಹುನಿರೀಕ್ಷಿತ ರೆನೊ ಬ್ಯಾಡ್ಜ್ ಪಡೆದುಕೊಳ್ಳಲಿರುವ ಡ್ಯಾಸಿಯಾ ಲೋಡ್ಜಿ ಎಂಪಿವಿ ಭಾರತ ಮಾರುಕಟ್ಟೆಯನ್ನು 2014ರ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ರೆನೊದಿಂದಲೇ ಬಿಡುಗಡೆಯಾಗಿದ್ದ ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಭಾರತದಲ್ಲಿ ಅತ್ಯಂತ ಹಚ್ಚು ಯಶಸ್ಸನ್ನು ಕಂಡಿತ್ತು. ಇದೀಗ ಎಂಪಿವಿ ಸೆಗ್ಮೆಂಟ್‌ಗೂ ಕಾಲಿಡಲು ರೆನೊ ತವಕದಲ್ಲಿದೆ.

ರೆನೊ ಬ್ಯಾಡ್ಜ್ ಪಡೆದುಕೊಳ್ಳಲಿರುವ ಲೋಡ್ಜಿ

ರೆನೊ ಬ್ಯಾಡ್ಜ್ ಪಡೆದುಕೊಳ್ಳಲಿರುವ ಲೋಡ್ಜಿ

ನಿಮ್ಮ ಮಾಹಿತಿಗಾಗಿ ಡ್ಯಾಸಿಯಾ ಡಸ್ಟರ್ ರೀತಿಯಲ್ಲಿಯೇ ಪ್ರಸ್ತುತ ಎಂಪಿವಿ ಕಾರು ಭಾರತ ಎಂಟ್ರಿ ಪಡೆಯಲಿದೆ. ಅಂದರೆ ವಿದೇಶದಲ್ಲಿ ಡ್ಯಾಸಿಯಾದಿಂದ ಬಿಡುಗಡೆಯಾಗಲಿರುವ ಲೋಡ್ಜಿ ಭಾರತದಲ್ಲಿ ರೆನೊ ಬ್ಯಾಡ್ಜ್ ಪಡೆಯಲಿದೆ.

2014ರಲ್ಲಿ ಲಾಂಚ್

2014ರಲ್ಲಿ ಲಾಂಚ್

ಕಳೆದ ವರ್ಷದ ಜಿನೆವಾ ಮೋಟಾರ್ ಶೋದಲ್ಲಿ ಅನಾವರಣಗೊಂಡಿದ್ದ ಡ್ಯಾಸಿಯಾ ಲೋಡ್ಜಿ ಎಂಪಿವಿ 2014ರ ಮಧ್ಯಂತರ ಅವಧಿಯಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ದೆಹಲಿ ಆಟೋ ಎಕ್ಸ್‌ಪೋ

ದೆಹಲಿ ಆಟೋ ಎಕ್ಸ್‌ಪೋ

ಈಗಾಗಲೇ ಉಕ್ರೇನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಡ್ಯಾಸಿಯಾ ಲೋಡ್ಜಿ ಎಂಪಿವಿ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆಯಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಈ ಏಳು ಸೀಟಿನ ಲೋಡ್ಜಿ ಮಲ್ಟಿ ಪರ್ಪಸ್ ಕಾರಿನಲ್ಲಿ 1.5 ಲೀಟರ್ ಕೆ9ಕೆ ಟರ್ಬೊ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದರ ಜತೆ ಭಾರತೀಯ ವರ್ಷನ್‌ನಲ್ಲಿ 1.6 ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಹೊಂದಿರುವ ಸಾಧ್ಯತೆಯಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯಲ್ಲಿ ಮಾರುತಿ ಎರ್ಟಿಗಾ, ಷೆವರ್ಲೆ ಎಂಜಾನ್, ಮಹೀಂದ್ರ ಕ್ಸೈಲೋ ಹಾಗೂ ಟೊಯೊಟಾ ಇನ್ನೋವಾ ಆವೃತ್ತಿಗಳಿಗೆ ನೂತನ ರೆನೊ ಲೋಡ್ಜಿ ಎಂಪಿವಿ ನೇರ ಪೈಪೋಟಿ ಒಡ್ಡಲಿದೆ.

English summary
Renault is currently wooing Indian customers by its Duster SUV. However, the company is keeping a close eye on Maruti's recent development and its success with the Ertiga. Renault is looking to bring another product from the Dacia stable to India. The Dacia sourced MPV Lodgy is expected to make its inroads into India by mid-2014.
Story first published: Monday, August 26, 2013, 16:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark