ಟಾಟಾ ಕಾರು ಖರೀದಿಗಿದು ಸುವರ್ಣಾವಕಾಶ!

Written By:

ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನಿಕಟ ಭವಿಷ್ಯದಲ್ಲೇ ತನ್ನದೇ ಆದ ನೂತನ ಕಾರು ಫ್ಲಾಟ್‌ಫಾರ್ಮ್‌ವೊಂದನ್ನು ನಿರ್ಮಿಸಲಿದೆ ಎಂಬುದರ ಬಗ್ಗೆ ನಾವು ಈ ಹಿಂದೆಯೇ ಮಾಹಿತಿ ಕೊಟ್ಟಿದ್ದೆವು. ಈ ಮೂಲಕ ಟಾಟಾ ಕಾರುಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಎತ್ತುವವರಿಗೆ ಕಡಾಕ್ ಜಬಾಬ್ ನೀಡಲು ಟಾಟಾ ಮುಂದಾಗುತ್ತಿದೆ.

ಅಷ್ಟಕ್ಕೂ ಈ ನೂತನ ಕಾರುಗಳ ತಯಾರಿ ಕಾರ್ಯ 2016ರ ವೇಳೆಗೆ ಆರಂಭವಾಗಲಿದೆ. ಅಲ್ಲಿಯ ವರೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜನಪ್ರಿಯ ಆವೃತ್ತಿಗಳ ಪರಿಷ್ಕೃತ ಆವೃತ್ತಿಗಳನ್ನು ಲಾಂಚ್ ಮಾಡಲು ಟಾಟಾ ಇರಾದೆ ಹೊಂದಿದೆ.

ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ಟಾಟಾ, ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಯಲ್ಲೂ ಗ್ರಾಹಕರಿಗೆ ಹೊಸ ಹೊಸ ಆಫರುಗಳನ್ನು ಮುಂದಿರಿಸಿದೆ. ಟಾಟಾ ಮೋಟಾರ್ಸ್‌‍ನ 'ನಾಚೋ ಗಾವೋ ತ್ಯೋಹಾರ್ ಮಾನವೋ' ಅಭಿಯಾನದ ಮುಖಾಂತರ ಗ್ರಾಹಕರಿಗೆ ಭಾರಿ ರಿಯಾಯಿತಿ ದೊರಕಲಿದ್ದು, 1. ಕೆ.ಜಿ. ವರೆಗೆ ಚಿನ್ನ ಗೆಲ್ಲುವ ಅವಕಾಶವಿದೆ. ಅಂತೆಯೇ ರು. 1ರಲ್ಲಿ ಮೂರು ವರ್ಷಗಳ ವಿಮೆ ಸೌಲಭ್ಯ, 1ಗ್ರಾಂ ಚಿನ್ನದ ನಾಣ್ಯ ಹಾಗೂ ಇತರ ಆಕರ್ಷಕ ನಗದು ಉಳಿತಾಯದ ಆಫರುಗಳನ್ನು ಟಾಟಾ ಮುಂದಿಡುತ್ತಿದೆ.

To Follow DriveSpark On Facebook, Click The Like Button
ಟಾಟಾ ಕಾರು ಖರೀದಿಗಿದು ಸುವರ್ಣಾವಕಾಶ!

2013 ಅಕ್ಟೋಬರ್ 1ರಿಂದ ಆರಂಭವಾಗಿರುವ ಈ ಆಫರ್ 31ರ ವರೆಗೆ ಮುಂದುವರಿಯಲಿದೆ. ಅಂದ ಹಾಗೆ ಟಾಟಾದ ಯಾವ ಯಾವ ಮಾದರಿಗಳಿಗೆ ಎಷ್ಟೆಷ್ಟು ಆಫರ್ ಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ...

ಟಾಟಾ ಸಫಾರಿ ಸ್ಟ್ರೋಮ್ ಪ್ರೀಮಿಯಂ ಆಫ್ ರೋಡರ್

ಟಾಟಾ ಸಫಾರಿ ಸ್ಟ್ರೋಮ್ ಪ್ರೀಮಿಯಂ ಆಫ್ ರೋಡರ್

ಒಟ್ಟು ಉಳಿತಾಯ: ರು. 1,23,000 ವರೆಗೆ

ಟಾಟಾ ಸುಮೋ ಗೋಲ್ಡ್ ಎಂಪಿವಿ

ಟಾಟಾ ಸುಮೋ ಗೋಲ್ಡ್ ಎಂಪಿವಿ

ಒಟ್ಟು ಉಳಿತಾಯ: ರು. 60,500 ವರೆಗೆ

ಟಾಟಾ ಇಂಡಿಕಾ ಹ್ಯಾಚ್‌ಬ್ಯಾಕ್

ಟಾಟಾ ಇಂಡಿಕಾ ಹ್ಯಾಚ್‌ಬ್ಯಾಕ್

ಒಟ್ಟು ಉಳಿತಾಯ: ರು. 44,000 ವರೆಗೆ

ಟಾಟಾ ಇಂಡಿಗೊ ಇಸಿಎಸ್ ಸೆಡಾನ್

ಟಾಟಾ ಇಂಡಿಗೊ ಇಸಿಎಸ್ ಸೆಡಾನ್

ಒಟ್ಟು ಉಳಿತಾಯ: ರು. 54,000 ವರೆಗೆ

ಟಾಟಾ ವಿಸ್ಟಾ

ಟಾಟಾ ವಿಸ್ಟಾ

ಒಟ್ಟು ಉಳಿತಾಯ: ರು. 89,000 ವರೆಗೆ

ಟಾಟಾ ಮಾಂಝಾ ಸೆಡಾನ್

ಟಾಟಾ ಮಾಂಝಾ ಸೆಡಾನ್

ಒಟ್ಟು ಉಳಿತಾಯ: ರು. 1,41,000 ವರೆಗೆ

ಹೊಸ ಟಾಟಾ ನ್ಯಾನೋ

ಹೊಸ ಟಾಟಾ ನ್ಯಾನೋ

ಅಚ್ಚರಿಯೆಂಬಂತೆ ಟಾಟಾ ನ್ಯಾನೋಗೆ ಯಾವುದೇ ಆಫರುಗಳನ್ನು ಉಲ್ಲೇಖ ಮಾಡಲಾಗಿಲ್ಲ. ಬದಲಾಗಿ ಹೊಸ ನ್ಯಾನೋ ಇದೀಗ ಶೋ ರೂಂಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದೆ.

ಟಾಟಾ ಕಾರು ಖರೀದಿಗಿದು ಸುವರ್ಣಾವಕಾಶ!

ಒಟ್ಟಿನಲ್ಲಿ ಆಕರ್ಷಕ ಆಫರುಗಳನ್ನು ಘೋಷಿಸುವ ಮುಖಾಂತರ ಮೂಲಕ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ಇರಾದೆಯನ್ನು ಟಾಟಾ ಮೋಟಾರ್ಸ್ ಹೊಂದಿದೆ. ಇದೀಗ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
Tata Motors has began the ‘Nacho Gao Tyohaar Manao' campaign. This offer will not only provide discounts on Tata Motor vehicles, but will also provide buyers with an opportunity to win up to 1 kilo of gold
Story first published: Tuesday, October 8, 2013, 10:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark