ಒಂದು ಪರಿಪೂರ್ಣ ಎಸ್‌ಯುವಿ - ಹ್ಯುಂಡೈ ಟಕ್ಸನ್

Written By:

ಬಹುನಿರೀಕ್ಷಿತ 2015 ಜಿನೆವಾ ಮೋಟಾರು ಶೋಗಿಂತಲೂ ಮುಂಚಿತವಾಗಿ ಎಲ್ಲ ಹೊಸತನದಿಂದ ಕೂಡಿರುವ ಹ್ಯುಂಡೈ ಟಕ್ಸನ್ ಬಗೆಗಿನ ವಿವರಗಳನ್ನು ದಕ್ಷಿಣ ಕೊರಿಯಾ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ ಬಹಿರಂಗಪಡಿಸಿದೆ.

ವಿನ್ಯಾಸ, ಗುಟಮಟ್ಟತೆ ಹಾಗೂ ತಂತ್ರಜ್ಞಾನದಲ್ಲಿ ಪಾರುಪತ್ಯ ಮೆರೆದಿರುವ ಹೊಸ ಟಕ್ಸನ್ ಸವಾರರಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ. 2015 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗಳ್ಳಲಿರುವ ಹೊಸ ಟಕ್ಸನ್ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ.

ಒಂದು ಪರಿಪೂರ್ಣ ಎಸ್‌ಯುವಿ - ಹ್ಯುಂಡೈ ಟಕ್ಸನ್

ಹೊಸ ಟಕ್ಸನ್ ಮುಖಾಂತರ ಕ್ರೀಡಾ ಬಳಕೆಯ ವಾಹನಗಳ ವಿಭಾಗದಲ್ಲಿ ಹ್ಯುಂಡೈ ಒಂದು ಹೆಜ್ಜೆ ಮುಂದಿಟ್ಟಿದೆ. ಇದರ ಮೊನಚಾದ ವಿನ್ಯಾಸವು ಅತಿ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ.

ಒಂದು ಪರಿಪೂರ್ಣ ಎಸ್‌ಯುವಿ - ಹ್ಯುಂಡೈ ಟಕ್ಸನ್

ಹ್ಯುಂಡೈ ಸಾಂಫಾ ಫೆ ಯಶಸ್ಸಿನ ಬಳಿಕ ಟಕ್ಸನ್ ಹೇಗೆ ಗ್ರಾಹಕರ ಮನ ಗೆಲ್ಲಲಿದೆ ಎಂಬುದು ಬಹಳ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಈಗ ಬಂದಿರುವ ವಿನ್ಯಾಸ ತಂತ್ರಗಾರಿಕೆಯನ್ನು ನೋಡಿದಾಗ ಈ ಬಹುನಿರೀಕ್ಷಿತ ಎಸ್‌ಯುವಿ ಯಶ ಸಾಧಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಒಂದು ಪರಿಪೂರ್ಣ ಎಸ್‌ಯುವಿ - ಹ್ಯುಂಡೈ ಟಕ್ಸನ್

ಹ್ಯುಂಡೈನ ಸಿಗ್ನೇಚರ್ ಹೆಕ್ಸಾಗನಲ್ ಫ್ರಂಟ್ ಗ್ರಿಲ್, ಎಲ್‌ಇಡಿ ಹೆಡ್ ಲೈಟ್, ಬಂಪರ್, ವಿಂಗ್ ರೂಪದ ಗೋಚರತೆ, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಇವೆಲ್ಲವೂ ವಿಶಿಷ್ಟತೆ ಕಾಪಾಡುವಲ್ಲಿ ಸಹಕಾರಿಯಾಗಿದೆ.

ಒಂದು ಪರಿಪೂರ್ಣ ಎಸ್‌ಯುವಿ - ಹ್ಯುಂಡೈ ಟಕ್ಸನ್

ಕಾರಿನೊಳಗೆ 'ವೈನ್ ರೆಡ್' ಲೆಥರ್ ಸ್ಪರ್ಶವನ್ನು ನೀಡಲಾಗಿದೆ. ಇನ್ನು ಹಿಂದುಗಡೆ 513 ಲೀಟರುಗಳ ಲಗ್ಗೇಜ್ ಜಾಗ ಕೂಡಾ ಇರಲಿದೆ. ಅಂತೆಯೇ ಹೀಟಡ್ ಸೀಟು, ಸ್ಮಾರ್ಟ್ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ ಮುಂತಾದ ಸೌಲಭ್ಯಗಳನ್ನು ಪಡೆಯಲಿದೆ.

ಒಂದು ಪರಿಪೂರ್ಣ ಎಸ್‌ಯುವಿ - ಹ್ಯುಂಡೈ ಟಕ್ಸನ್

ಅಂದ ಹಾಗೆ ಆಲ್ ನ್ಯೂ ಟಕ್ಸನ್ 1.6 ಟಿಡಿಐ (135 ಪಿಎಸ್) ಹಾಗೂ 1.6 ಲೀಟರ್ ಟಿ ಜಿಡಿಐ (176 ಪಿಎಸ್) ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಮೂರು ಡೀಸೆಲ್ ಎಂಜಿನ್‌ಗಳಾದ 1.7 ಲೀಟರ್ (115 ಪಿಎಸ್), 2.0 ಲೀಟರ್ ಸ್ಟ್ಯಾಂಡರ್ಡ್ ಪವರ್ (136 ಪಿಎಸ್) ಮತ್ತು 2.0 ಲೀಟರ್ ಹೈ ಪವರ್ (184 ಪಿಎಸ್) ಕೂಡಾ ಇರಲಿದೆ. ಇದು ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಅಥವಾ ಸಿಕ್ಸ್ ಸ್ಪಿಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

English summary
With its worldwide public debut just weeks away at the 2015 Geneva Motor Show, the All-New Hyundai Tucson is set to redefine the Hyundai brand’s C-SUV offering – featuring the highest levels of design, quality and technology which are poised to lead the segment.
Story first published: Thursday, February 19, 2015, 10:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark