ಭಾರತದತ್ತ ಮುಖ ಮಾಡಿದ ಟೊಯೊಟಾ ಹೈಬ್ರಿಡ್ ಕಾರುಗಳು

Written By:

ಭಾರತೀಯ ವಾಹನ ಖರೀದಿಗಾರರಿಗೆ ಪೂರಕವಾಗುವ ನಿಟ್ಟಿನಲ್ಲಿ ದೇಶದಲ್ಲಿ ನೂತನ ಹೈಬ್ರಿಡ್ ವಾಹನಗಳನ್ನು ಲಾಂಚ್ ಮಾಡಲು ಟೊಯೊಟಾ ಯೋಜನೆ ಹಾಕಿಕೊಂಡಿದೆ. ಈ ಸಂಬಂಧ ಟೊಯೊಟಾ ಕಿರ್ಲೊಸ್ಕರ್ ಮೋಟಾರ್ಸ್ ಹಾಗೂ ಟೊಯೊಟಾ ಮೋಟಾರ್ ಕಾರ್ಪೋರೇಷನ್ ಅಧ್ಯಯನದಲ್ಲಿ ತೊಡಗಿದೆ.

ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ 2020 ಯೋಜನೆ ಜಾರಿಗೆ ಬಂದ ಬೆನ್ನಲ್ಲೇ ಟೊಯೊಟಾ ಯೋಜನೆ ಆರಂಭವಾಗಲಿದೆ. ಎಲ್ಲರಿಗೆ ತಿಳಿದಂತೆ ದರ ಸ್ವಲ್ಪ ದುಬಾರಿಯಾಗಿರುವುದು ದೇಶದಲ್ಲಿ ಹೈಬ್ರಿಡ್ ಕಾರುಗಳ ವೈಫಲ್ಯಕ್ಕೆ ಕಾರಣವಾಗಿದೆ.

ಇದಕ್ಕೆ ಹೋಂಡಾ ಸಿಟಿ ಹೈಬ್ರಿಡ್ ಉತ್ತಮ ಉದಾಹರಣೆಯಾಗಿದೆ. ಇದರಿಂದಾಗಿ ಹೈಬ್ರಿಡ್ ಕಾರುಗಳನ್ನು ಲಾಂಚ್ ನಿಲುಗೊಡೆಗೊಳಿಸಬೇಕಾಯಿತು. ಟೊಯೊಟಾ ಪ್ರಯಸ್ ಕೂಡಾ ಇದೇ ಹಾದಿಯನ್ನು ಹಿಡಿದಿತ್ತು.

ವಿದೇಶದಲ್ಲಿ ಹೆಚ್ಚು ಜನಪ್ರಿಯ ಗಿಟ್ಟಿಸಿಕೊಂಡಿರುವ ಹೊರತಾಗಿಯೂ 2010ರಲ್ಲಿ ಭಾರತಕ್ಕೆ ಆಮದಾಗಿದ್ದ ಪ್ರಯಸ್ ಕೇವಲ 170 ಯುನಿಟ್‌ಗಳನ್ನಷ್ಟೇ ಮಾರಾಟ ಮಾಡುವಲ್ಲಿ ಸಾಧ್ಯವಾಗಿತ್ತು. 28 ಲಕ್ಷ ರು.ಗಳಷ್ಟು ದುಬಾರಿಯಾಗಿರುವುದು ಹಿನ್ನಡೆಗೆ ಕಾರಣವಾಗಿತ್ತು.

To Follow DriveSpark On Facebook, Click The Like Button
ಭಾರತದತ್ತ ಮುಖ ಮಾಡಿದ ಟೊಯೊಟಾ ಹೈಬ್ರಿಡ್ ಕಾರುಗಳು

ಇದೀಗ ಚಿಂತಮಗ್ನರಾಗಿರುವ ಎಂಜಿನಿಯರ್‌ಗಳು ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಹೈಬ್ರಿಡ್ ತಳಿಯ ಕಾರುಗಳನ್ನು ಪರಿಚಯಿಸುವ ಯೋಜನೆ ಹೊಂದಿದ್ದಾರೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ಹೈಬ್ರಿಡ್ ಕಾರುಗಳು

ಟೊಯೊಟಾ ಇಟಿಯೋಸ್ ಹಾಗೂ ಕ್ರ್ಯಾಮ್ರಿ ಸೆಡಾನ್ ಹೈಬ್ರಿಡ್ ವೆರಿಯಂಟ್ ಸಿದ್ಧಪಡಿಸುವ ಕುರಿತಂತೆ ಪ್ರಯೋಗಗಳು ನಡೆಯುತ್ತಿದೆ. ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ 2020 ಯೋಜನೆ ಜಾರಿಗೆ ಬಂದ ಮೇಲೆ ಕೇಂದ್ರ ಸರಕಾರದಿಂದ 1.5 ಲಕ್ಷ ರು.ಗಳ ವರೆಗೆ ಸಬ್ಸಿಡಿ ದೊರೆಯಲಿದ್ದು, ಇದರಿಂದ ಹೈಬ್ರಿಡ್ ತಳಿ ಕಾರುಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸಲಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ಹೈಬ್ರಿಡ್ ಕಾರುಗಳು

ಗರಿಷ್ಠ ಇಂಧನ ಕ್ಷಮತೆ, ಕಡಿಮೆ ಹೊರ ಸೂಸುವುದು ಹಾಗೂ ಪರಿಸರ ಸ್ನೇಹಿ ಹೈಬ್ರಿಡ್ ಕಾರುಗಳು ದೇಶದಲ್ಲಿ ನೂತನ ಆವಿಷ್ಕಾರಕ್ಕೆ ಕಾರಣವಾಗಲಿದೆ.

ಭಾರತದತ್ತ ಮುಖ ಮಾಡಿದ ಟೊಯೊಟಾ ಹೈಬ್ರಿಡ್ ಕಾರುಗಳು

ಹೋಂಡಾ ಹೈಬ್ರಿಡ್ ಕಾರು

ಭಾರತದತ್ತ ಮುಖ ಮಾಡಿದ ಟೊಯೊಟಾ ಹೈಬ್ರಿಡ್ ಕಾರುಗಳು

ಟೊಯೊಟಾ ಹೈಬ್ರಿಡ್ ಕಾರು

English summary
Toyota Kirloskar Motors, Toyota Motor Corporation's India subsidy, is studying the feasibility of launching hybrid vehicles for the Indian buyers, ET has learned. The plan is more likely to take off once the National Electric Mobility Mission Plan (NEMMP) 2020 comes into effect.
Story first published: Saturday, June 1, 2013, 14:41 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark