2014ರಲ್ಲಿ ಆಗಮನವಾಗಲಿರುವ ಕಾರುಗಳ ಪಟ್ಟಿ

By Nagaraja

ಕಾರು, ಕಾರು, ಕಾರು, ಎಲ್ಲೆಡೆ ಕಾರು. ಸಾಕಪ್ಪಾ ಸಾಕು ಈ ಬಿಡುವಿಲ್ಲದ ಜೀವನದಲ್ಲಿ ಕಾರುಗಳ ಕಾಟ ಬೇರೆ! ಹೀಗೆ ಯಾರಿಗಾದರೂ ಅನಿಸುತ್ತದೆಯೇ? ಸಾಧ್ಯತೆ ಕಡಿಮೆ. ಯಾಕೆಂದರೆ ನಮ್ಮ ದೇಶದಲ್ಲಿ ಕಾರು ಸಹ ವಿಲಾಸಿ ಜೀವನದ ಒಂದು ಭಾಗವಾಗಿರುತ್ತದೆ. ಹಾಗಿರುವಾಗ ಪ್ರತಿಯೊಬ್ಬರು ಒಂದಲ್ಲ ಒಂದು ದಿನ ಕಾರೊಂದನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಕನಸು ಕಟ್ಟಿಕೊಂಡಿರುತ್ತಾರೆ. ಇದನ್ನೇ ಬೇಳೆ ಬೇಯಿಸುತ್ತಿರುವ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಗಳು ಜನರ ಅಗತ್ಯಗಳಿಗಾನುಸಾರವಾಗಿ ನೂತನ ಮಾದರಿಗಳನ್ನು ಲಾಂಚ್ ಮಾಡುತ್ತಿವೆ.

2014ರಲ್ಲಿ ಲಾಂಚ್ ಆಗಲಿರುವ ಟಾಪ್ 5 ಬೈಕ್‌ಗಳು

ಇತ್ತೀಚೆಗಷ್ಟೇ ನಡೆದ 2014 ಆಟೋ ಎಕ್ಸ್ ಪೋದಲ್ಲೂ ನೂತನ ಕಾನ್ಸಪ್ಟ್‌ಗಳು ಪರಿಚಯವಾಗಿದ್ದವು. ಅಷ್ಟೇ ಅಲ್ಲದೆ 40ರಷ್ಟು ಹೊಸ ಕಾರುಗಳು ಲಾಂಚ್ ಕಂಡಿದ್ದವು. ಸದ್ಯ ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆಗೆ ಅಪ್ಪಳಿಸಲು ಸಾಲು ಗಟ್ಟಿ ನಿಂತಿರುವ ಕಾರುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮ್ಮಲಿಲ್ಲವೇ? ಬನ್ನಿ ಒಂದು ರೌಂಡ್ ನೋಡೋಣ ಬನ್ನಿ...

ದಟ್ಸನ್ ಗೊ ಪ್ಲಸ್

ದಟ್ಸನ್ ಗೊ ಪ್ಲಸ್

ಗೊ ಪ್ಲಸ್ ದಟ್ಸನ್‌ನಿಂದ ಆಗಮನವಾಗಲಿರುವ ಮಗದೊಂದು ಬಜೆಟ್ ಎಂಪಿವಿ ಕಾರಾಗಿರಲಿದೆ. ಈಗಾಗಲೇ ಗೊ ಹ್ಯಾಚ್‌ಬ್ಯಾಕ್ ಕಾರು ಮೂಲಕ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ದಟ್ಸನ್, ಗೊ ಪ್ಲಸ್ ಮಲ್ಟಿ ಪರ್ಪಸ್ ವಾಹನ ಮೂಲಕವೂ ಮೋಡಿ ಮಾಡುವ ನಿರೀಕ್ಷೆಯಲ್ಲಿದೆ. ಇದು ಐದು ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮವಾಗಲಿದೆ.

ಆಡಿ ಎ3

ಆಡಿ ಎ3

ದಟ್ಸನ್ ಗೊ ಪ್ಲಸ್ ಆಯ್ತು. ಇನ್ನು ಐಷಾರಾಮಿ ಗಾಡಿ ಬಗ್ಗೆ ಚರ್ಚಿಸೋಣವೇ. ಆಡಿ ಎ3 ಎಂಟ್ರಿ ಲೆವೆಲ್ ಸೆಡಾನ್ ಕಾರು 25 ಲಕ್ಷ ರು.ಗಳ ಅಸುಪಾಸಿನಲ್ಲಿ ಎಂಟ್ರಿ ಕೊಡಲಿದೆ. ಇದು ಸ್ಥಳೀಯವಾಗಿ ನಿರ್ಮಿಸುತ್ತಿರುವುದು ಹೆಚ್ಚು ಸ್ಮರ್ದಾತ್ಮಕ ದರಗಳಲ್ಲಿ ಮಾರಾಟ ಮಾಡಲು ನೆರವಾಗಲಿದೆ.

ಜೀಪ್

ಜೀಪ್

ಆಟೋ ಎಕ್ಸ್ ಪೋದಲ್ಲಿ ತನ್ನ ಸಾನಿಧ್ಯ ಪ್ರಕಟಿಸದಿದ್ದರೂ ಜೀಪ್ ವ್ರಾಂಗ್ಲರ್ ಮತ್ತು ಚೆರೊಕೆಗಳೆಂಬ ಎರಡು ನೂತನ ಮಾದರಿಗಳು ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ಸಾಧ್ಯತೆಯಿದೆ.

ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ

ಹೋಂಡಾ ಮೊಬಿಲಿಯೊ ಎಂಪಿವಿ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ. ಇದು ಗ್ರಾಹಕರ ಬಹುನಿರೀಕ್ಷಿತ ಕಾರು ಎಂಬುದರಲ್ಲಿ ಸಂಶಯವೇ ಬೇಡ. ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಮತ್ತು ಷೆವರ್ಲೆ ಎಂಜಾಯ್ ಸವಾಲುಗಳನ್ನು ಮೊಬಿಲಿಯೊ ಎದುರಿಸಲಿದೆ.

ಫಿಯೆಟ್ ಅವೆಂಚ್ಯೂರಾ

ಫಿಯೆಟ್ ಅವೆಂಚ್ಯೂರಾ

ದೇಶದ ಜನತೆಯ ಪಾಲಿಗೆ ಫಿಯೆಟ್ ಅವೆಂಚ್ಯೂರಾ ಅಚ್ಚರಿಯ ಪ್ಯಾಕೇಜ್ ಆಗಿರಲಿದೆ. ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ಫಿಯೆಟ್ ಅವೆಂಚ್ಯೂರಾ ಕ್ರಾಸೋವರ್ ಕಾನ್ಸೆಪ್ಟ್ ದೇಶದ ರಸ್ತೆ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ.

ಟೊಯೊಟಾ ಇಟಿಯೋಸ್ ಕ್ರಾಸ್

ಟೊಯೊಟಾ ಇಟಿಯೋಸ್ ಕ್ರಾಸ್

ಈ ಬಾರಿ ಕ್ರಾಸೋವರ್ ಮಾದರಿಯನ್ನು ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಪರಿಚಯಿಸಲಿದೆ. ತನ್ನ ಆಕರ್ಷಕ ವಿನ್ಯಾಸದಿಂದಲೇ ಜನಮನಗೆದ್ದಿರುವ ಇಟಿಯೋಸ್ ಕ್ರಾಸ್ ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಮಾರುತಿ ಸುಜುಕಿ ಎಸ್‌ಎಕ್ಸ್-4 ಎಸ್-ಕ್ರಾಸ್

ಮಾರುತಿ ಸುಜುಕಿ ಎಸ್‌ಎಕ್ಸ್-4 ಎಸ್-ಕ್ರಾಸ್

ಮಾರುತಿ ಹೆಸರು ಕೇಳಿದಾಗಲೇ ಗ್ರಾಹಕರಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುವುದು ಸಾಮಾನ್ಯ. ಯಾಕೆಂದರೆ ಮಾರುತಿ ತನ್ನ ನಿಷ್ಠೆ ಉಳಿಸಿಕೊಳ್ಳುವಲ್ಲಿ ಹೆಸರುವಾಸಿಯಾಗಿದೆ. ಪ್ರಸ್ತುತ ಮಾರುತಿಯಿಂದ ನೂತನ ಎಸ್‌ಎಕ್ಸ್-4 ಎಸ್ ಕ್ರಾಸ್ ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಆಗಮನವಾಗುವ ಸಾಧ್ಯತೆಯಿದೆ.

ಟಾಟಾ ಬೋಲ್ಟ್

ಟಾಟಾ ಬೋಲ್ಟ್

ಈಗಾಗಲೇ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿರುವ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಸದ್ಯದ್ಲಲೇ ರಸ್ತೆ ಪ್ರವೇಶಿಸಲಿದೆ. ಇದು ಟಾಟಾಗೆ ಪುನರುಜ್ಜೀವನ ನೀಡುವ ಭರವಸೆಯಲ್ಲಿದೆ.

ಟಾಟಾ ಜೆಸ್ಟ್

ಟಾಟಾ ಜೆಸ್ಟ್

ಕೇವಲ ಬೋಲ್ಟ್ ಮಾತ್ರವಲ್ಲ. ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ಸಹ ಟಾಟಾ ಯಶಸ್ಸಿಗೆ ಕಾರಣವಾಗಲಿದೆ. ಈಗಾಗಲೇ ನೂತನ ವಿನ್ಯಾಸ ಮೂಲಕ ಮೋಡಿ ಮಾಡಿರುವ ಜೆಸ್ಟ್ ಸಹ ನಿಕಟ ಭವಿಷ್ಯದಲ್ಲೇ ಲಾಂಚ್ ಆಗಲಿದೆ.

ಹ್ಯುಂಡೈ ಎಕ್ಸ್‌ಸೆಂಟ್

ಹ್ಯುಂಡೈ ಎಕ್ಸ್‌ಸೆಂಟ್

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ ಹ್ಯುಂಡೈ ಎಕ್ಸ್‌ಸೆಂಟ್, ಗ್ರಾಂಡ್ ಐ10 ಕಾಂಪಾಕ್ಟ್ ಸೆಡಾನ್ ಕಾರಿನ ತಲಹದಿಯಲ್ಲಿ ರೂಪುಗೊಂಡಿದೆ. ಇದು ಹೋಂಡಾ ಅಮೇಜ್ ಹಾಗೂ ಮಾರುತಿ ಸ್ವಿಫ್ಟ್ ಡಿಜೈರ್ ಆವೃತ್ತಿಗಳಿಗೆ ನಿಕಟ ಪೈಪೋಟಿ ಒಡ್ಡಲಿದೆ.

Most Read Articles

Kannada
English summary
Following is a list of some of the exciting new launches that will take place in India. These include hatchbacks, MPC, SUVs/crossovers and sedans.
Story first published: Wednesday, February 26, 2014, 11:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X