ಬರುತ್ತಿದೆ ಚಾಲಕರಿಲ್ಲದ ವೋಲ್ವೋ ಸ್ವಯಂಚಾಲಿತ ಕಾರು

Written By:

ಚಾಲಕರಿಲ್ಲದ ಸ್ವಯಂಚಾಲಿತ ಕಾರುಗಳ ಬಗ್ಗೆ ನೀವು ಈ ಹಿಂದೆಯೂ ಕೇಳಿರುವಿರಿ. 'ಗೂಗಲ್ ಟೊಯೊಟಾ ಪ್ರಯಸ್' ಕಾರು ಈ ಹಿಂದೆ ಭಾರಿ ಸದ್ದು ಮಾಡಿತ್ತು. ಇದೀಗ ಈ ಮಹತ್ತರ ಯೋಜನೆಯನ್ನು ಜಗತ್ತಿನ ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ವೋಲ್ವೋ ಕೈಗೆತ್ತಿಕೊಂಡಿದೆ. ಹೌದು, ವೋಲ್ವೋ ಸ್ವಯಂಚಾಲಿತ ಕಾರು 2017ನೇ ಇಸವಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಅಷ್ಟಕ್ಕೂ ಸ್ವಯಂಚಾಲಿತ ಕಾರು ಎಂದರೇನು?

ನಿಮ್ಮ ಮಾಹಿತಿಗಾಗಿ, ಸ್ವಯಂಚಾಲಿತ ಅಥವಾ ಸೆಲ್ಫ್ ಡ್ರೈವ್ ಕಾರಿನಲ್ಲಿ ಚಾಲಕರ ಅಗತ್ಯವಿರುವುದಿಲ್ಲ. ಇಲ್ಲಿ ಚಾಲಕ ಕೂಡಾ ಇತರ ಪ್ರಯಾಣಿಕರಂತೆ ಪ್ರಯಾಣಿಸುತ್ತಾರೆ. ಇದರಲ್ಲಿ ಆಳವಡಿಸಲಾದ ವಿಶೇಷ ತಂತ್ರಜ್ಞಾನ ಭರಿತ ಸೆನ್ಸಾರ್, ಕಾರು ಹೋಗಬೇಕಾದ ಜಾಗವನ್ನು ತಾನೇ ಅರಿತುಕೊಳ್ಳುತ್ತದೆ. ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳು, ಟ್ರಾಫಿಕ್, ತಿರುವು, ಸಿಗ್ನಲ್, ಲೇನ್ ಹಾಗೂ ಪಾದಚಾರಿ ಇವೆಲ್ಲವನ್ನೂ ಗುರುತಿಸಿಕೊಂಡು ಚಲಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಸ್ವಯಂಚಾಲಿತವಾಗಿ ವೇಗ ಹೆಚ್ಚಿಸಿಕೊಳ್ಳುವ, ಸ್ಟೀರಿಂಗ್ ತಿರುಗಿಸುವ ಹಾಗೂ ಬ್ರೇಕ್ ಹಾಕಿಕೊಳ್ಳುವ ಸಾಮರ್ಥ್ಯವುಳ್ಳದ್ದಾಗಿದೆ.

ವೋಲ್ವೋ ಸ್ವಯಂಚಾಲಿತ ಕಾರು

ಕೇವಲ ವೋಲ್ವೋ ಮಾತ್ರವಲ್ಲ. ಗೂಗಲ್ ಬಳಿಕ ಮರ್ಸಿಡಿಸ್ ಬೆಂಝ್ ಮತ್ತು ನಿಸ್ಸಾನ್ ಸಂಸ್ಥೆಗಳು ಸಹ ತನ್ನ ಸೆಲ್ಫ್ ಡ್ರೈವ್ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಆದರೆ ಇವೆಲ್ಲದಕ್ಕಿಂತಲೂ ಒಂದು ಹೆಜ್ಜೆ ಮುಂದಿಟ್ಟಿರುವ ಸ್ವೀಡನ್‌ನ ಗುಟ್ಟೆನ್‌ಬರ್ಗ್ ನಗರದಲ್ಲಿ 100 ಆಟೋಮ್ಯಾಟಿಕ್ ಕಾರುಗಳನ್ನು ಓಡಿಸುವ ಗುರಿಯನ್ನು ವೋಲ್ವೋ ಹೊಂದಿದೆ.

ವೋಲ್ವೋ ಸ್ವಯಂಚಾಲಿತ ಕಾರು

'ಡ್ರೈವ್ ಮಿ ಸೆಲ್ಫ್ ಡ್ರೈವಿಂಗ್ ಕಾರ್ಸ್ ಫಾರ್ ಸಸ್ಟೈನಬಲ್ ಮೊಬಿಲಿಟಿ' ಎಂಬ ಯೋಜನೆಯಡಿ ಈ ಕಾರುಗಳು ಬಿಡುಗಡೆಗೊಳ್ಳಲಿದೆ. ವೋಲ್ವೋ ಸಂಸ್ಥೆಯ ಈ ಮಹತ್ತರ ಯೋಜನೆಗೆ ಸ್ವೀಡನ್ ಸಾರಿಗೆ ಅಧಿಕಾರಿಗಳು, ಏಜೆನ್ಸಿ, ಲಿಂಡೊಲ್‌ಮೆನ್ ಸೈನ್ಸ್ ಪಾರ್ಕ್ ಮತ್ತು ಗುಟ್ಟೆನ್‌ಬರ್ಗ್ ನಗರಗಳ ಬೆಂಬಲವಿರಲಿದೆ. ಯೋಜನೆಯ ಮೊದಲ ಹಂತವು 2014ರಲ್ಲಿ ಆರಂಭವಾಗಲಿದೆ.

ವೋಲ್ವೋ ಸ್ವಯಂಚಾಲಿತ ಕಾರು

ಯೋಜನೆಯ ಪ್ರಾರಂಭಿಕ ಹಂತವಾಗಿ ಸಂಪೂರ್ಣ ಸ್ವಯಂಚಾಲಿತ ಕಾರುಗಳನ್ನು ಬಿಡಲಾಗುವುದಿಲ್ಲ. ಬದಲಾಗಿ ಬಹುತೇಕ ಆಟೋಮ್ಯಾಟಿಕ್ ತಂತ್ರಗಾರಿಕೆಯನ್ನು ಹೊಂದಿರುವ ಆಯೋನೊಮಸ್ ಕಾರುಗಳನ್ನು ಪರಿಚಯಿಸಲಾಗುವುದು. ಇದಕ್ಕೂ ಮೊದಲು ಗ್ರಾಹಕ ಸಂಶೋಧನೆ, ಬಳಕೆ, ಅಭಿವೃದ್ಧಿ ಹಾಗೂ ನಿರ್ವಹಣೆಯ ಬಗೆಗಿನ ಕುಂದು ಕೊರತೆಗಳನ್ನು ಸರಿಪಡಿಸಿಕೊಳ್ಳಲಾಗುವುದು.

ವೋಲ್ವೋ ಸ್ವಯಂಚಾಲಿತ ಕಾರು

ಮೂಲಭೂತ ಸೌಲಭ್ಯ ಲಭ್ಯವಾದ ಬಳಿಕ ನಗರದ ಆಯ್ದ ರಸ್ತೆಗಳಲ್ಲಿ ಆಟೋನೊಮಸ್ ಕಾರುಗಳು 50 ಕೀ.ಮೀ. ವ್ಯಾಪ್ತಿಯಲ್ಲಿ ಚಲಿಸಲಿದೆ. ವೋಲ್ವೋ ಡ್ರೈವ್ ಮಿ ಯೋಜನೆಯ ಮುಖಾಂತರ ವಾಹನ ದಟ್ಟಣೆ ಕಡಿತಗೊಳಿಸುವುದು, ರಸ್ತೆ ಸುರಕ್ಷತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಗುರಿಯಿರಿಸಿಕೊಳ್ಳಲಾಗಿದೆ. ಇದರ ಜತೆಗೆ ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆಯನ್ನು ವೋಲ್ವೋ ಸೆಲ್ಫ್ ಡ್ರೈವ್ ಕಾರುಗಳು ಹೊಂದಿರಲಿದೆ.

ವೋಲ್ವೋ ಸ್ವಯಂಚಾಲಿತ ಕಾರು

ಅಂದ ಹಾಗೆ ವೋಲ್ವೋ ಆಟೋನೊಮಸ್ ಕಾರುಗಳು ಸ್ಕೇಲಬಲ್ ಪ್ರೊಡಕ್ಟ್ ಆರ್ಕಿಟೆಕ್ಜರ್ (ಎಸ್‌ಪಿಎ) ತಲಹದಿಯಲ್ಲಿ ನಿರ್ಮಾಣವಾಗಲಿದೆ. ಮೊದಲ ಎಸ್‌ಪಿಎ ಕಾರಾದ ಎಕ್ಸ್‌ಸಿ90, 2014ರಲ್ಲಿ ರಸ್ತೆ ಪ್ರವೇಶಿಸಲಿದೆ.

English summary
Its now common knowledge that several automakers are working on developing self driving cars, also called autonomous drive vehicles. Mercedes-Benz, Nissan, Volvo among others, have already showcased their capabilities. But now Volvo wants to take it to the next level by running 100 automatic cars in the Swedish city of Gothenburg.
Story first published: Wednesday, December 11, 2013, 10:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark