ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಕಡಿಮೆ ಬೆಲೆಯಲ್ಲಿ ಉತ್ತಮವಾದ ಸ್ವಂತದೊಂದು ಕಾರು ಹೊಂದಬೇಕೆಂಬ ಆಸೆಗಳು ಮಧ್ಯಮ ವರ್ಗದ ಬಹುತೇಕರಲ್ಲಿ ಇದ್ದೆ ಇರುತ್ತೆ.

By Rahul Ts

ಕಡಿಮೆ ಬೆಲೆಯಲ್ಲಿ ಉತ್ತಮವಾದ ಸ್ವಂತದೊಂದು ಕಾರು ಹೊಂದಬೇಕೆಂಬ ಆಸೆಗಳು ಮಧ್ಯಮ ವರ್ಗದ ಬಹುತೇಕರಲ್ಲಿ ಇದ್ದೆ ಇರುತ್ತೆ. ಆದ್ರೆ ಕಡಿಮೆ ಬೆಲೆಗಳಲ್ಲಿ ಉತ್ತಮ ಕಾರು ಯಾವವು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಕೆಲ ಬಾರಿ ತಪ್ಪು ಆಯ್ಕೆಗಳು ಸಾಧ್ಯತೆ ಇರುತ್ತೆ. ಈ ಹಿನ್ನೆಲೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಕಾರು ಖರೀದಿಸುವ ಗ್ರಾಹಕರಿಗಾಗಿ ಕಡಿಮೆ ಲಭ್ಯವಿರುವ ಉತ್ತಮ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸೌಲಭ್ಯವುಳ್ಳ ಕಾರುಗಳ ಮಾಹಿತಿಯನ್ನು ನೀಡಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಮಾರುತಿ ಸುಜುಕಿ ಆಲ್ಟೊ ಕೆ10(AMT)

ಈಗಾಗಲೇ ಭಾರತೀಯ ರಸ್ತೆಗಳಲ್ಲಿ ಜನಪ್ರಿಯತೆ ಸಾಧಿಸಿರುವ ಆಲ್ಟೊ ಕಾರುಗಳು ಗ್ರಾಹಕ ಸ್ನೇಹಿಯಾಗಿವೆ. ಮಿನಿ ಹ್ಯಾಚ್‍ಬ್ಯಾಕ್ ಮಾದರಿಯಾಗಿರುವ ಆಲ್ಟೋ ಕೆ10 ಈ ಕಾರು 3.50 ಲಕ್ಷದಿಂದ 4 ಲಕ್ಷದೊಳಗೆ ಖರೀದಿಸಬಹುದಾಗಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಕಾರಿನ ವೈಶಿಷ್ಟ್ಯತೆಗಳು

998 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಆಲ್ಟೊ ಕೆ10 ಕಾರುಗಳು, 67 ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸಿಗೆ ಜೋಡಿಸಲಾಗಿದೆ. ಇದಲ್ಲದೆ 35 ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಪ್ರತಿ ಲೀಟರ್‌ಗೆ 24 ಕಿಮಿ ಮೈಲೇಜ್ ನೀಡಲಿವೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ ಭಾರತದ ಮಾರುಕಟ್ಟೆಗೆ ಆಗಮಿಸಿದ್ದ ಮೊದಲ ಎಎಂಟಿ ಯೂನಿಟ್ ಹೊಂದಿರುವ ಕಾರು ಮಾದರಿಯಾಗಿದ್ದು, ಇದರ ಬೆಲೆಯು 4.50 ರಿಂದ 5 ಲಕ್ಷದವರಿಗೆ ಲಭ್ಯವಿರಲಿವೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

998ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 67 ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 35 ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿದೆ. ಅಲ್ಲದೆ ಪ್ರತಿ ಲೀಟರ್ ಪೆಟ್ರೋಲ್‍ಗೆ 23.1ಕಿಲೋಮೀಟರ್ ಮೈಲೇಜ್ ನೀಡಲಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಹ್ಯುಂಡೈ ಗ್ರ್ಯಾಂಡ್ ಐ10

2017ರಲ್ಲಿ ಬಿಡುಗಡೆಗೊಂಡ ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳು ಬಿಡುಗಡೆಯ ನಂತರ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲೇ 4 ವಿವಿಧ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಇದರ ಬೆಲೆಯು ಮಾರುಕಟ್ಟೆಯಲ್ಲಿ 4.55 ಲಕ್ಷದಿಂದ ಶುರುವಾಗಲಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಪೆಟ್ರೋಲ್ ಆವೃತ್ತಿಯು 1.2 ಲೀಟರ್ ಎಂಜಿನ್ ಹೊಂದಿದ್ದು, 82 ಬಿಹೆಚ್‍ಪಿ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 4 ಸ್ಪೀಡ್ ಆಟೊಮ್ಯಾಟಿಕ್ ಜೊತೆ 5 ಸ್ಪೀಡ್ ಮ್ಯಾನುವಲ್ ಗೇರ್‍‍‍ಬಾಕ್ಸ್‌ಗೆ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಆವೃತ್ತಿಯು 1.2 ಲೀಟರ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸಿಗೆ ಜೋಡಿಸಲಾಗಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಹೋಂಡಾ ಬ್ರಿಯೊ

ಬಿಡುಗಡೆಗೊಂಡ ಕೆಲದಿನಗಳಲ್ಲಿ ಜನಪ್ರಿಯತೆಯನ್ನು ಪಡೆದ ಕಾರುಗಳಲ್ಲಿ ಹೋಂಡಾ ಬ್ರಿಯೊ ಕೂಡಾ ಒಂದು. ಮಾರುಕಟ್ಟೆಯಲ್ಲಿ ಇದರ ಬೆಲೆಯು 5.12 ಲಕ್ಷ ರೂ ದಿಂದ ಶುರುವಾಗಲಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

1198 ಸಿಸಿ 4 ಸಿಲಿಂಡರ್ ಎಂಜಿನ್ ಹೊಂದಿದ್ದು, 87 ಬಿಹೆಚ್‍ಪಿ ಮತ್ತು 109 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದೆ. ಇನ್ನು ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸಿಗೆ ಜೋಡಿಸಲಾಗಿದ್ದು, ಪ್ರತಿ ಲೀಟರ್‌ಗೆ 18.50 ಕಿ.ಮಿ ಮೈಲೇಜ್ ನೀಡಲಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ನಿಸ್ಸಾನ್ ಮೈಕ್ರಾ

2017ರಲ್ಲಿ ನಿಸ್ಸಾನ್ ಮೈಕ್ರಾ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಇದರ ಬೆಲೆಯು ದೆಹಲಿ ಎಕ್ಸ್ ಶೋರಂ ಪ್ರಕಾರ 5.99 ಲಕ್ಷದಿಂದ ಆರಂಭಗೊಳಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಪೆಟ್ರೋಲ್ ಆವೃತ್ತಿಯು 1.2 ಲೀಟರ್ ಎಂಜಿನ್ ಪಡೆದಿದ್ದು, ಪ್ರತಿ ಲೀಟರ್‍‍ಗೆ 19.34ಕಿಲೋಮೀಟರ್ ಮೈಲೆಜ್ ಅನ್ನು ನೀಡಲಿದೆ. ಹಾಗೆಯೇ ಡೀಸೆಲ್ ಆವೃತ್ತಿಯು 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಮಾದರಿಯು ಪ್ರತಿ ಲೀಟರಿಗೆ 23.08 ಕಿಮಿ ಮೈಲೇಜ್ ಅನ್ನು ಪಡೆದುಕೊಂಡಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಟಾಟಾ ಜೆಸ್ಟ್

2014ರಲ್ಲಿ ಟಾಟಾ ಜೆಸ್ಟ್ ಬಿಡುಗಡೆಗೊಂಡಿದ್ದು, ಇದು ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಇದಲ್ಲದೆ ಪೆಟ್ರೋಲ್ ಆವೃತ್ತಿಯು 4 ಮಾದರಿಯಲ್ಲಿ ಮತ್ತು ಡೀಸೆಲ್ ಆವೃತ್ತಿಯು 5 ಮಾದರಿಗಳಲ್ಲಿ ಲಭ್ಯವಿರಲಿದ್ದು, ಪೆಟ್ರೋಲ್ ಆವೃತ್ತಿಯ ಬೆಲೆಯು 4.69 ಲಕ್ಷದಿಂದ ಶುರುವಾಗಲಿದ್ದು, ಡೀಸೆಲ್ ಆವೃತ್ತಿಯ ಬೆಲೆಯು 5.73 ಲಕ್ಷದಿಂದ ಶುರುವಾಗಲಿದೆ.

ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಎಂಟಿ ಸೌಲಭ್ಯವುಳ್ಳ ಕಾರುಗಳಿವು...

ಪೆಟ್ರೋಲ್ ಆವೃತ್ತಿಯು ರೆವಾಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರಿಗೆ 17.6 ಕಿಮಿ ಮೈಲೇಜ್ ನೀಡಿದ್ದಲ್ಲಿ ಡೀಸೆಲ್ ಆವೃತ್ತಿಯು 1.3 ಲೀಟರ್ ಡೀಸೆಲ್ ಎಂಜಿನ್ ಪ್ರತಿ ಲೀಟರಿಗೆ 23 ಕಿ.ಮಿ ಮೈಲೇಜ ಅನ್ನು ನೀಡಲಿದೆ.

Most Read Articles

Kannada
Read more on auto tips
English summary
Cheapest Automatic Cars in India Under ₹ 8 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X