ಪ್ರಾಣ ತೆಗೆಯುವ 8 ಕೇರ್ ಲೆಸ್ ಡ್ರೈವಿಂಗ್ ಹ್ಯಾಬಿಟ್

ನಮ್ಮ ದೈನಂದಿನ ಜೀವನದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಲು ವಾಹನಗಳನ್ನು ಆಶ್ರಯಿಸಿರುತ್ತೇವೆ. ಹಾಗಿರುವಾಗ ಡ್ರೈವಿಂಗ್ ಎಂಬ ಕಲೆ ಕರಗತ ಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ.

ಡ್ರೈವಿಂಗ್ ಎಂಬ ಕಲೆಯನ್ನು ಅತಿ ಜಾಗರೂಕತೆಯಿಂದ ಪಾಲಿಸಬೇಕಾಗಿರುವುದು ಅಷ್ಟೇ ಮುಖ್ಯವಾಗಿದೆ. ಸ್ವಲ್ಪನೂ ಗಮನ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಕೆಲವು ಬಾರಿ ಡ್ರೈವಿಂಗ್ ಸಂದರ್ಭದಲ್ಲಿ ಸಣ್ಣ ಪುಟ್ಟ ಕೆಟ್ಟ ನಡವಳಿಕೆಗಳು ನಿಮ್ಮ ಪ್ರಾಣಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆಯಿದೆ.

ಹಾಗಾಗಿ ಅಂತಹ ವಿಚಾರಗಳನ್ನು ಖಂಡಿತ ನಿರ್ಲಕ್ಷಿಸಬಾರದು. ಡ್ರೈವ್ ಸ್ಪಾರ್ಕ್‌ನ ವಾಹನ ಸಲಹೆ ವಿಭಾಗವು ಈ ಬಗ್ಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದು, ಇಂತಹ ಕೇರ್ ಲೆಸ್ ನಡವಳಿಕೆಗಳ ಬಗ್ಗೆ ಪಟ್ಟಿ ಮಾಡಿದೆ. ಒಂದು ವೇಳೆ ತಿಳಿದೋ ತಿಳಿಯದೆಯೋ ನೀವಿದ್ದನ್ನು ಅನುಸರಿಸುತ್ತಿದ್ದಲ್ಲಿ ಆದಷ್ಟು ಬೇಗನೇ ಇಂತಹ ಚಟಗಳನ್ನು ಕೈಬಿಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

8 Bad Habbits That Can Kill You

ಇಲ್ಲಿ ಕೊಡಲಾಗಿರುವ ಫೋಚೊ ಫೀಚರನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿರಿ... ನಿಮ್ಮ ಸವಾಲಿಗಿರುವ ಉತ್ತರ ದೊರಕಲಿದೆ.

Tailgating

Tailgating

ಡ್ರೈವಿಂಗ್ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದಂತೆ ಚಾಲಕ ಗಮನ ವಹಿಸಬೇಕಾಗುತ್ತದೆ. ಯಾಕೆಂದರೆ ಕೆಲವೊಂದು ಬಾರಿ ಅಶಿಸ್ತಿನ ಡ್ರೈವಿಂಗ್ ಪ್ರಾಣಕ್ಕೆ ಕುತ್ತು ತರಬಲ್ಲದು. ಯಾವುದೇ ರೀತಿ ಉದ್ರೇಕಕ್ಕೆ ಒಳಗಾಗದೇ ನಿಮ್ಮ ಮುಂದಿರುವ ವಾಹನವನ್ನು ಅಡ್ಡಾಡ್ಡಿಕೊಂಡು ಹೋಗುವ ಪರಿಸ್ಥಿತಿಯನ್ನು ತಪ್ಪಿಸಬೇಕಾಗುತ್ತದೆ.

Talking on mobile while driving

Talking on mobile while driving

ಮೊಬೈಲ್ ಸಂಭಾಷಣೆ ಸಲ್ಲ

ಇಂದಿನ ಯಾಂತ್ರಿಕ ಯುಗದಲ್ಲಿ ಎಲ್ಲವೂ ಮೊಬೈಲ್‌ಮಯ. ಮೊಬೈಲ್ ಇಲ್ಲದೆ ಯಾವುದೇ ವ್ಯವಹಾರ ನಡೆಯದು. ಹಾಗಿರುವಾಗ ಡ್ರೈವಿಂಗ್ ಸಂದರ್ಭದಲ್ಲಿ ಫೋನ್‌ನಲ್ಲಿ ಮಾತನಾಡುವುದನ್ನು ತಪ್ಪಿಸಿಕೊಳ್ಳಬೇಕು. ಇದರಿಂದ ನಿಮ್ಮ ಏಕಾಗ್ರತೆ ಭಂಗವನ್ನುಂಟು ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಫೋನ್ ಕರೆ ಸ್ವೀಕರಿಸಬೇಕಾಗಿರುವುದು ಅನಿವಾರ್ಯವಾಗಿದ್ದರೆ ವಾಹನವನ್ನು ಬದಿಗೆ ನಿಲ್ಲಿಸಿ ಮಾತನಾಡಬಹುದು. ಆಮೇಲೆ ಸುಖ ಪ್ರಯಾಣವನ್ನು ಮುಂದುವರಿಸಬಹುದು.

Over Speeding

Over Speeding

ಮುಖ್ಯವಾಗಿಯೂ ಇಂದಿನ ಯುವ ಜನಾಂಗ ಡ್ರೈವಿಂಗ್ ಮೇಲೆ ಅತೀವ ಕ್ರೇಜ್ ಹೊಂದಿರುತ್ತಿದ್ದು, ಅಪರಿಮಿತ ವೇಗದಲ್ಲಿ ಕಾರು ಅಥವಾ ಬೈಕ್ ಚಲಾಯಿಸುವುದನ್ನು ಇಷ್ಟಪಡುತ್ತಾರೆ. ಡ್ರೈವಿಂಗ್ ಸಂದರ್ಭದಲ್ಲಿ ರೋಡ್ ಪರಿಸ್ಥಿತಿಯನ್ನು ಅರಿತುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.

Not Using Seat Belts

Not Using Seat Belts

ಈಗಲೂ ಹಲವರಿಗೆ ಸೀಟ್ ಬೆಲ್ಟ್ ಮಹತ್ವದ ಬಗ್ಗೆ ತಿಳಿದಿಲ್ಲ. ಹಾಗಾಗಿ ನಿರ್ಲಕ್ಷ ಮಾಡುತ್ತಾರೆ. ಆದರೆ ಅಪಘಾತದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಖಂಡಿತವಾಗಿಯೂ ನಿಮ್ಮ ನೆರವಿಗೆ ಬರಬಹುದು. ಇನ್ನು ಕೆಲವು ಬಾರಿ ಟ್ರಾಫಿಕ್ ಪೊಲೀಸರಿಂದ ಬಚಾವಾಗಲು ಮಾತ್ರ ಸೀಟ್ ಬೆಲ್ಟ್ ಧರಿಸುತ್ತಾರೆ. ಅಂತವರು ಸಿಗ್ನಲ್ ದಾಟಿದ ಕೂಡಲೇ ತಮ್ಮ ಸೀಟ್ ಬೆಲ್ಟ್ ಕಳಚಿಡುತ್ತಾರೆ. ಆದರೆ ಇವೆಲ್ಲ ತಪ್ಪು ನೀತಿಯಾಗಿದ್ದು, ಅಪಘಾತ ಯಾವ ಸಂದರ್ಭದಲ್ಲಾದರೂ ಸಂಭವಿಸಬಹುದು. ಹಾಗಾಗಿ ನಿಮ್ಮ ಸ್ವಯಂ ರಕ್ಷಣೆಗಾಗಿ ಸೀಟ್ ಬೆಲ್ಟ್ ಧರಿಸುವುದನ್ನು ಮರೆಯಬಾರದು.

Ignoring Traffic Signs

Ignoring Traffic Signs

ಇನ್ನು ಹಲವು ಬಾರಿ ತಮ್ಮ ಮನೆ, ಕಚೇರಿಗಳಿಗೆ ತೆರಳುವ ಭರಸದಲ್ಲಿ ಚಾಲಕರು ಟ್ರಾಫಿಕ್ ಸಿಗ್ನಲ್‌ಗಳನ್ನು ಉಲ್ಲಂಘಿಸುತ್ತಾರೆ. ಆದರೆ ನಿಮಗೆ ಹೇಳಬಯಸುವುದೇನೆಂದರೆ ಜೀವನದಲ್ಲಿ ಪ್ರತಿಯೊಬ್ಬನೂ ಬ್ಯುಸಿಯಾಗಿರುತ್ತಾನೆ. ಆದರೆ ಯಾರು ಬುದ್ಧಿವಂತಿಕೆ ಉಪಯೋಗಿಸಿ ಮುಂದಕ್ಕೆ ತೆರಳುತ್ತಾನೋ ಕಟ್ಟಕಡೆಗೆ ಆತನೇ ವಿಜಯಿಯೆನಿಸುತ್ತಾನೆ. ಹಾಗಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಉಲ್ಲಂಘಿಸದೇ ನಿಧಾನವಾಗಿ ಪಯಣಿಸಲು ಪ್ರಯತ್ನಿಸಿ. ಎಚ್ಚರವೇ ಪ್ರಧಾನ..!

Road Rage

Road Rage

ಇದು ಅಪಾಯಕಾರಿ ಮಾತ್ರವಲ್ಲದೆ ಘಾತಕವಾಗಿದೆ. ಕೆಲವು ಬಾರಿ ಓವರ್‌ಟೇಕ್ ಸಂದರ್ಭದಲ್ಲಿ ಚಾಲಕರು ಒಬ್ಬರನ್ನೊಬ್ಬರು ಬೈದಾಡಿಕೊಳ್ಳುವ ಪ್ರಸಂಗ ಎದುರಾಗುತ್ತದೆ. ಇದರಿಂದ ಚಾಲಕನ ಏಕಾಗ್ರತೆಗೆ ಭಂಗವುಂಟಾಗುವ ಸಾಧ್ಯತೆಯಿದೆ. ಒಂದು ವೇಳೆ ನಿಮ್ಮ ವಿರುದ್ಧ ನಿಂದನೀಯ ಶಬ್ದ ಎದುರಾದರೂ ಅದರತ್ತ ಕಿವಿಗೂಡದೇ ಡ್ರೈವಿಂಗ್‌ನತ್ತ ಗಮನ ವಹಿಸಿ.

Drunken Driving

Drunken Driving

ಇತ್ತೀಚೆಗಿನ ದಿನಗಳಲ್ಲಿ ಸುರಕ್ಷಿತ ಪಯಣಕ್ಕಾಗಿ ಟ್ರಾಫಿಕ್ ಪೊಲೀಸರಿಂದ ಅನೇಕ ಸುರಕ್ಷಾ ಫಲಕಗಳನ್ನು ಮಾರ್ಗ ಮಧ್ಯೆಗಳಲ್ಲಿ ಹಾಕಲಾಗುತ್ತದೆ. ಹಾಗಿದ್ದರೂ ಪಾನಮತ್ತರಾಗಿ ಡ್ರೈವಿಂಗ್ ಮಾಡುವ ಸಂಖ್ಯೆಯಲ್ಲಿ ಯಾವುದೇ ಇಳಿಕೆವುಂಟಾಗಿಲ್ಲ. ತಡ ರಾತ್ರಿಯ ವರೆಗೂ ಪಾರ್ಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಂತವರು ಲೋಕಜ್ಞಾನವಿಲ್ಲದೆ ಡ್ರೈವಿಂಗ್‌ ಮಾಡುವ ಮೂಲಕ ತಮ್ಮ ಪ್ರಾಣವನ್ನೇ ಅಡವಿಡುತ್ತಾರೆ. ನಿಮ್ಮ ಮಾಹಿತಿಗಾಗಿ, ರಸ್ತೆಗಳಲ್ಲಾಗುವ ಶೇಕಡಾ 70ರಷ್ಟು ಅಪಘಾತಗಳಿಗೆ ಕಾರಣ ಡ್ರಿಂಕ್ ಆಂಡ್ ಡ್ರೈವ್ ಆಗಿದೆ ಎಂದು ಸಮೀಕ್ಷಾ ವರದಿ ತಿಳಿಸುತ್ತಿದೆ.

Not being Attentive

Not being Attentive

ಇನ್ನು ಕೆಲವು ಬಾರಿ ಮಾನಸಿಕ ಅಸ್ವಸ್ಥತೆಯಿಂದಾಗಿ ಚಾಲಕರು ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುತ್ತಾರೆ. ಕುಟುಂಬದಲ್ಲಿರುವ ವೈಮನಸ್ಸು, ಕಚೇರಿಯಲ್ಲಿ ಮೇಲಾಧಿಕಾರಿಗಳ ಒತ್ತಡ, ಆರ್ಥಿಕ ಅಥವಾ ದೈಹಿಕ ಸಮಸ್ಯೆಯಿಂದಾಗಿ ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುವ ಸಂಭವವಿದೆ. ಹಾಗಾಗಿ ಡ್ರೈವಿಂಗ್ ಸಂದರ್ಭದಲ್ಲಿ ಏಕಾಗ್ರತೆಗೆ ಭಂಗವುಂಟಾಗದಂತೆ ಅತೀವ ಎಚ್ಚರಿಕೆ ವಹಿಸಬೇಕಾಗುತ್ತದೆ.

ಮೇಲೆ ಕೊಡಲಾದ ಈ ಎಲ್ಲ ಸಲಹೆಗಳು ನಿಮ್ಮ ಸುರಕ್ಷಿತ ಡ್ರೈವಿಂಗ್‌ಗೆ ನೆರವು ಮಾಡುವ ಭರವಸೆಯನ್ನು ಡ್ರೈವ್ ಸ್ಪಾರ್ಕ್ ಹೊಂದಿದೆ. ಇದೀಗ ನಿಮ್ಮ ಅನಿಸಿಕೆ ಹಾಗೂ ಅನುಭವಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

Most Read Articles

Kannada
English summary
Driving is generally considered a pleasurable experience. But pleasure can turn to pain if you are involved in a road accident. There are several common habbits that while appearing normal, can cause a fatal accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X