ಕುಡಿದು ಸ್ಟಿಯರಿಂಗ್ ಮುಟ್ತಿರಾ? ಡೇಂಜರ್, ಡೇಂಜರ್!

ಇಂದಿನ ಸಲಹೆ: ಡೋಂಟ್ ಡ್ರಿಂಕ್ ಆಂಡ್ ಡ್ರೈವ್
ಇಡೀ ಜಗತ್ತಿನಲ್ಲಿ ನಡೆಯುವ ಹೆಚ್ಚಿನ ವಾಹನ ಅಪಘಾತಗಳ ಹಿಂದಿರುವ ಪ್ರಮುಖ ಶಕ್ತಿ ಆಲ್ಕೋಹಾಲ್. ನಿಶೆಯಲ್ಲಿ ವಾಹನ ಚಲಾಯಿಸಿ ಸಾವಿರಾರು ಜನರು ರಸ್ತೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಕುಡಿದಿದ್ದರೆ ಖಂಡಿತವಾಗಿಯೂ ಸ್ಟಿಯರಿಂಗ್ ಮುಟ್ಟಬೇಡಿ. ಬಾರ್ ಅಥವಾ ಪಬ್ ಗೆ ಹೋಗಿದ್ದರೆ ಕುಡಿಯದ ವ್ಯಕ್ತಿಯೊಬ್ಬ ನಿಮ್ಮ ಜೊತೆಗಿರಲಿ. ಆತ ನಿಮ್ಮನ್ನು ಮನೆಯವರೆಗೆ ಸುರಕ್ಷಿತವಾಗಿ ತಲುಪಿಸಬಲ್ಲ. ಅದು ಸಾಧ್ಯವಾಗದಿದ್ದರೆ ಕಾರನ್ನು ಅಲ್ಲೇ ಬಿಟ್ಟು ಟ್ಯಾಕ್ಸಿ ಹತ್ತಿ.
ಕಳೆದ ವರ್ಷ ರಸ್ತೆ ಅಪಘಾತದಿಂದ ಭಾರತದಲ್ಲಿ ಅಂದಾಜು 1,26,896 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡವರ, ಕೈಕಾಲು ಕಳೆದುಕೊಂಡವರ ಸಂಖ್ಯೆ ಇದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚಿದೆ. ಅಪಘಾತದಿಂದ ಶಾಶ್ವತ ಅಂಗವ್ಯಕಲ್ಯಕ್ಕೆ ಈಡಾಗಿ ಜೀವನಪೂರ್ತಿ ಕೊರಗಬೇಕಾದೀತು. ಹೀಗಾಗಿ ಕುಡಿದು ವಾಹನ ಚಲಾಯಿಸಬೇಡಿ.


Click it and Unblock the Notifications








