ಸ್ಲಿಪ್ಪರ್ ಧರಿಸುವುದು ಚಾಲನೆಗೆ ಅಪಾಯಕಾರಿ- ಅಧ್ಯಯನ ವರದಿ

Posted By:

ಬ್ರಿಟನ್ ವಿಮಾ ಸಂಸ್ಥೆಯೊಂದು ಕೈಗೊಂಡಿರುವ ಅಧ್ಯಯನ ವರದಿಯಲ್ಲಿ, ಡ್ರೈವಿಂಗ್ ವೇಳೆ ಸ್ಲಿಪ್ಪರ್ ಚಪ್ಪಲಿಗಳನ್ನು ಧರಿಸುವುದು ಅಪಾಯಕಾರಿ ಎಂಬ ಆಘಾತಕಾರಿ ವರದಿಯನ್ನು ಬಹಿರಂಗಪಡಿಸಿದೆ.

ಬ್ರಿಟನ್ ಮೂಲದ Sheilas Wheels ಪ್ರಮುಖವಾಗಿ ಮಹಿಳೆಯರನ್ನು ಕೇಂದ್ರವಾಗಿರಿಸಿ ಹಮ್ಮಿಕೊಂಡಿರುವ ಅಧ್ಯಯನದಲ್ಲಿ ಈ ಅಪಾಯಕಾರಿ ವರದಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಅಮೆರಿಕದಲ್ಲಿ ನಡೆಯುತ್ತಿರುವ 1.4 ಮಿಲಿಯನ್‌ಗಳಷ್ಟು ಅಪಘಾತಗಳಿಗೂ ಚಾಲಕರು ಸ್ಲಿಪ್ಪರ್ ಧರಿಸುತ್ತಿರುವುದೇ ಕಾರಣ ಎಂದು ವಿವರಿಸಿದೆ.

To Follow DriveSpark On Facebook, Click The Like Button

ಅಧ್ಯಯನ ವರದಿ ಪ್ರಕಾರ ಚಾಲನೆ ವೇಳೆ ಸ್ಲಿಪ್ಲರ್ ಧರಿಸುವುದರಿಂದ ಬ್ರೇಕ್ ಹಾಗೂ ವೇಗವರ್ಧನೆ ಪೆಡಲ್ ನಡುವಣ ಚಲನೆಯನ್ನು ಕುಂಠಿತಗೊಳಿಸುತ್ತದೆ. ಅಷ್ಟೇ ಅಲ್ಲದೆ ಶೂಗೆ ಹೋಲಿಸಿದಾಗ ಸ್ಲಿಪ್ಪರ್ ಧರಿಸುವುದರಿಂದ ಚಾಲಕರ ಬ್ರೇಕ್ ಬಲ ಶೇಕಡಾ 3ರಷ್ಟು ಕುಂಠಿತಗೊಳಿಸುತ್ತದೆ ಎಂದು ತಿಳಿಸಿದೆ.

ವರದಿಯ ಪ್ರಕಾರ ಅರ್ಧಕ್ಕಿಂತಲೂ ಹೆಚ್ಚು ಮಂದಿ ಡ್ರೈವಿಂಗ್ ವೇಳೆ ಕಾಲಿಗೆ ಸರಿಹೊಂದಿರದ ಪಾದರಕ್ಷೆಗಳನ್ನು ಬಳಸುತ್ತಾರೆ. ಐದರಲ್ಲಿ ಒಬ್ಬರು ಹೀಗೆ ಮಾಡುವುದರಿಂದ ಹಲವು ಬಾರಿ ಅಪಘಾತ ಸ್ವಲ್ಪದರಲ್ಲೇ ತಪ್ಪಿ ಹೋಗಿರಬಹುದು ಎಂದು ವಿವರಿಸಿದೆ.

ನಾಲ್ಕರಲ್ಲಿ ಒಬ್ಬರಿಗೆ ಪೆಡಲ್ ಅಡಿಯಲ್ಲಿ ಕಾಲು ಸಿಕ್ಕಿಹಾಕಿಕೊಂಡಿರುವಂತಹ ಅಪಾಯಕಾರಿ ಅನುಭವವಾಗಿದೆ ಎಂದು ಅಧ್ಯಯನ ಸಂಸ್ಥೆ ತಿಳಿಸಿದೆ. ಇಷ್ಟೆಲ್ಲ ಆದರೂ ಪಾದರಕ್ಷೆಗಳ ಆಯ್ಕೆಯು ಡ್ರೈವಿಂಗ್ ಮೇಲೆ ದೊಡ್ಡ ಪರಿಣಾಮ ಬೀರುತ್ತಿರುವ ಅಂಶವನ್ನು ಚಾಲಕರು ತಿಳಿಯದೇ ಹೋಗಿರುವುದು ಆತಂಕಕಾರಿ ವಿಷಯ ಎಂದಿದೆ.

ಕೋಟಿಗಟ್ಟಲೆ ಜನರು ಸ್ಲಿಪ್ಪರ್ ಧರಿಸಿ ಸುರಕ್ಷಿತವಾಗಿ ವಾಹನ ಚಲಾಯಿಸಬಹುದು ಎಂಬುದನ್ನು ನಂಬುತ್ತಾರೆ. ಆದರೆ ಅದೇ ಅವರ ಪ್ರಾಣಪಾಯಕ್ಕೆ ಕಾರಣವಾಗಬಲ್ಲದು ಎಂಬ ವಿಚಾರವನ್ನು ಮನಗಾನುವುದಿಲ್ಲ. ಈ ಮುಖಾಂತರ ಸ್ವತ: ತಮ್ಮನ್ನು ಮಾತ್ರವಲ್ಲದೇ ತಮ್ಮ ಸಹ ಪ್ರಯಾಣಿಕರಿಗೂ ಅಪಾಯ ಆಹ್ವಾನಿಸುತ್ತಾರೆ ಎಂದು ಅಧ್ಯಯನ ವರದಿ ವಿವರಿಸಿದೆ.

English summary
A Study conducted by Sheilas' Wheels, a British insurance company that mainly caters to women, has found that driving cars wearing flip flops can lead to accidents. Another report states flip flops are behind 1.4 million accidents in the U.S alone.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark