ಹಸಿರು ಸಿರಿಯಲಿ ಮರೆಯದಿರಿ ಪರಿಸರ ಸ್ನೇಹಿ ಸವಾರಿ

Posted By:
To Follow DriveSpark On Facebook, Click The Like Button
Earth-Friendly Tips for Motorists
ಪರಿಸರ ದಿನದಂದು ಕೆಲವು ಮರ ನೆಟ್ಟರೆ ಪರಿಸರ ಉಳಿಯದು.ಪ್ರತಿದಿನ ನಾವು ಪರಿಸರದ ಕುರಿತು ನಿಜವಾದ ಕಾಳಜಿ ವಹಿಸಿದರೆ ಮಾತ್ರ ಪರಿಸರ ಕೊಂಚವಾದರೂ ಉಳಿದಿತ್ತು. ವಾಹನ ಮಾಲಿಕರಾದ ನಾವು ಯಾವ ರೀತಿ ಪರಿಸರ ಉಳಿಸಬಹುದು?

ಇರೋ ಕಾರು ಮಾರಾಟ ಮಾಡಿ ಹೈಬ್ರಿಡ್ ಕಾರು ಖರೀದಿಸಿ ಅಂತ ಹೇಳುವುದು ಕಷ್ಟ. ಆದರೆ ಇರೋ ಕಾರನ್ನು ಸಮರ್ಪಕವಾಗಿ ಬಳಸಿದರೆ ಪರಿಸರಕ್ಕೆ ಆಗುವ ಹೆಚ್ಚಿನ ಅನಾಹುತ ತಡೆಯಬಹುದು.

ಜಾಗತಿಕ ವಾಹನ ಸೇವಾ ಸಂಸ್ಥೆ ಎಎಸ್ಇ ಪರಿಸರ ಸ್ನೇಹಿ ಸವಾರಿಗೆ ಸೂಕ್ತವಾದ ಕೆಲವು ಸಲಹೆಗಳನ್ನು ನೀಡಿವೆ. ಯಾವ ರೀತಿ ವಾಹನವನ್ನು ನೋಡಿಕೊಳ್ಳಬೇಕು. ವೃತ್ತಿಪರರ ನೆರವು ಪಡೆಯಬೇಕು? ವಾಹನದ ದಕ್ಷತೆ ಹೆಚ್ಚಿಸೋದು ಹೇಗೆ? ವಾಹನದಿಂದ ಪರಿಸರ ಹೇಗೆ ಉಳಿಸಬಹುದು? ಇತ್ಯಾದಿ ಪ್ರಶ್ನೆಗಳಿಗೆ ಅದರಲ್ಲಿ ಉತ್ತರವಿದೆ.

ಪ್ರತಿನಿತ್ಯ ವಾಹನದ ಸಮರ್ಪಕ ನಿರ್ವಹಣೆ ಮತ್ತು ಅತ್ಯುತ್ತಮ ಚಾಲನೆ ಹವ್ಯಾಸವನ್ನು ಪ್ರತಿ ವಾಹನ ಚಾಲಕ ರೂಢಿಸಿಕೊಳ್ಳಬೇಕು ಎಂದು ಎಎಸ್ಇ ಸಂಪಾದಕೀಯ ನಿರ್ದೇಶಕ ಮಾರ್ಟಿನ್ ಲಾಸನ್ ಹೇಳುತ್ತಾರೆ. ಎಎಸ್ಇ ತಿಳಿಸಿದ ಹಲವು ಸಲಹೆಗಳು ಈ ಕೆಳಗಿನಂತೆ ಇವೆ.

* ಎಂಜಿನ್ ಕಾರ್ಯಕ್ಷಮತೆ ಅತ್ಯುತ್ತಮವಾಗಿರುವಂತೆ ನೋಡಿಕೊಳ್ಳಿ. ಫಿಲ್ಟರ್ ಮತ್ತು ಫ್ಲೂಡಿಸ್ ಗಳನ್ನು ನಿಯಮಿತವಾಗಿ ಬದಲಾಯಿಸಿಕೊಳ್ಳಬೇಕು.

* ಟೈರ್ ಜೋಡನೆ ಸಮರ್ಪಕವಾಗಿರಲಿ. ಇದರಿಂದ ಎಂಜಿನ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

* ಉತ್ತಮ ಟೆಕ್ನೆಶಿಯನ್ ನನ್ನು ಹುಡುಕಿ. ಇದಕ್ಕಾಗಿ ನಿಮ್ಮ ಸ್ನೇಹಿತರಲ್ಲಿ ವಿಚಾರಿಸಿ. ಪ್ರತಿನಿತ್ಯ ಒಂದೇ ಟೆಕ್ನೆಶಿಯನ್ ಬಳಿಗೆ ಹೋಗುವುದು ಉತ್ತಮ.

* ನಿಮ್ಮ ವಾಹನದಲ್ಲಿರುವ ಏರ್ ಕಂಡಿಷನ್ ರಿಪೇರಿಯನ್ನು ಕೂಡ ನುರಿತ ಟೆಕ್ನೆಶಿಯನ್ ಬಳಿ ಮಾಡಿಸಿಕೊಳ್ಳಿ. ಹಳೆಯ ಏರ್ ಕಂಡಿಷನ್ ಓಝೋನ್ ಪರದೆಗೆ ಹೆಚ್ಚಿನ ಹಾನಿ ಉಂಟು ಮಾಡುತ್ತದೆ.

* ವೇಗದ ಪ್ರಯಾಣ ಮತ್ತು ತಕ್ಷಣ ಆಕ್ಸಿಲರೇಷನ್ ನೀಡುವುದನ್ನು ಅವಾಯ್ಡ್ ಮಾಡಿದೆ. ಸ್ನೇಹಿತರು, ಕುಟುಂಬದ ಸದಸ್ಯರಿಗಾಗಿ ನೀವು ಕಾಯುವ ಸಂದರ್ಭದಲ್ಲಿ ಕಾರಿನ ಎಂಜಿನ್ ಆಫ್ ಮಾಡಿ. ವಾಹನ ಚಾಲನೆಯಲ್ಲಿಲ್ಲದಾಗ ಎಂಜಿನ್ ಆನ್ ಆಗಿಟ್ಟುಕೊಳ್ಳುವುದು ಎಂಜಿನ್ ಮೇಲೆ ಹೆಚ್ಚಿನ ಒತ್ತಡ ನೀಡುತ್ತದೆ.

* ವಾಹನದಲ್ಲಿರುವ ಅನಗತ್ಯ ಲೋಡ್ ಗಳನ್ನು ತೆಗೆಯಿರಿ. ವಾಹನ ಹಗುರವಾಗಿದಷ್ಟು ಮೈಲೇಜ್ ಜಾಸ್ತಿ.

English summary
Motorists who want to go “green” don’t have to change vehicles to help the environment. Changing a few habits can make a big difference, say the experts at the National Institute for Automotive Service Excellence(ASE).
Story first published: Friday, November 25, 2011, 15:38 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark