ವೋಲ್ವೋ ಬಸ್ಸಿನಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳು ಯಾವುವು?

Posted By:

ಹೈದರಾಬಾದ್‌ನ ಮೆಹಬೂಬ್‌ನಗರ ಹಾಗೂ ರಾಜ್ಯದ ಹಾವೇರಿಯಲ್ಲಿ ನಡೆದ ಎರಡು ವಿಭಿನ್ನ ವೋಲ್ವೋ ಬಸ್ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರವು ವೋಲ್ವೋ ಬಸ್ಸುಗಳಿಗೆ ಕಡ್ಡಾಯವಾಗಿ ತುರ್ತು ನಿರ್ಗಮನ ಆಳವಡಿಸುವಂತೆ ಆದೇಶ ಹೊರಡಿಸಿತ್ತು.

ವೋಲ್ವೋ ಇಂಧನ ಟ್ಯಾಂಕ್ ಸ್ಫೋಟಗೊಳ್ಳಲು ಸಾಧ್ಯವಿಲ್ಲ?

ಈ ಎಲ್ಲ ಘಟನೆಗಳು ವೋಲ್ವೋ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿದೆ. ಮೇಲಿನ ಎರಡೂ ಪ್ರಕರಣಗಳು ಡೀಸೆಲ್ ಟ್ಯಾಂಕ್‌ಗೆ ಆಗ್ನಿ ಆಕಸ್ಮಿಕವಾಗಿದ್ದರಿಂದ ದುರಂತ ಸಂಭವಿಸಿತ್ತು.

ವೋಲ್ವೋ ಬಸ್ ನಿರ್ವಾಹಕರಿಂದ ಭದ್ರತಾ ಲೋಪ..?

ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಮುಂದೆ ಬಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ವೋಲ್ವೋ ಬಸ್ಸಿನಲ್ಲಿ ಏನೆಲ್ಲ ಸುರಕ್ಷತಾ ವೈಶಿಷ್ಟ್ಯಗಳಿರಲಿದೆ ಎಂಬುದರ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವರದಿಯೊಂದನ್ನು ಪ್ರಕಟಿಸಿದೆ. ಕನ್ನಡಿಗರ ಅನುಕೂಲಕ್ಕಾಗಿ ಹಾಗೂ ಸುರಕ್ಷಿತ ವೋಲ್ವೋ ಪಯಣಕ್ಕಾಗಿ ನಾವಿದ್ದನ್ನು ನಿಮ್ಮ ಮುಂದಿಡುತ್ತೇವೆ. ಇಲ್ಲಿ ಹೇಳಿ ಕೊಡಲಾಗುವ ಸುರಕ್ಷತಾ ಸಲಹೆಗಳು ನಿಮ್ಮ ನೆರವಿಗೆ ಖಂಡಿತ ಬರಲಿದೆಯೆಂಬ ವಿಶ್ವಾಸ ನಮ್ಮದ್ದು.

45 ಜನ ಬಲಿಯಾದದ್ದು ಜವರಾಯನಿಗೋ ಇಲ್ಲ ಸಾರಿಗೆ ಇಲಾಖೆಗೋ?

ವೋಲ್ವೋ ಬಸ್ ಸುರಕ್ಷತಾ ವೈಶಿಷ್ಟ್ಯಗಳು

ವೋಲ್ವೋ ಬಸ್ ಸುರಕ್ಷತಾ ವೈಶಿಷ್ಟ್ಯಗಳು

ಚಿತ್ರದಲ್ಲಿ ತೋರಿಸಿರುವಂತೆಯೇ ಮೇಲ್ಬಾಗದಲ್ಲಿ ಎರಡು ಬದಿಗಳಲ್ಲಿ ತುರ್ತು ನಿರ್ಗಮನ ವ್ಯವಸ್ಥೆಯಿರುತ್ತದೆ. ಇನ್ನುಳಿದಂತೆ ಎಮರ್ಜನ್ಸಿ ಎಕ್ಸಿಟ್ ವಿಂಡೋ ಹಾಗೂ ಮುಖ್ಯದ್ವಾರದ ಬಗ್ಗೆ ನಿಖರವಾದ ಮಾಹಿತಿ ಪಡೆದುಕೊಳ್ಳಬಹುದು. ನೆನಪಿರಲಿ ನಾವು ಸಾಮಾನ್ಯ ಬಸ್ಸುಗಳಲ್ಲಿ ನೋಡುತ್ತಿರುವುದಕ್ಕೆ ವಿಭಿನ್ನವಾಗಿ ವೋಲ್ವೋ ಬಸ್ಸುಗಳಲ್ಲಿ ಹಿಂದುಗಡೆ ತುರ್ತು ನಿರ್ಗಮನ ಬಾಗಿಲುಗಳು ಇರುವುದಿಲ್ಲ.

ವೋಲ್ವೋ ಬಸ್ ವಿನ್ಯಾಸ

ವೋಲ್ವೋ ಬಸ್ ವಿನ್ಯಾಸ

ವೋಲ್ವೋ ಬಸ್ ನಕ್ಷೆಯಲ್ಲಿ ತೋರಿಸಿರುವಂತೆಯೇ ವೋಲ್ವೋ ಬಸ್ಸುಗಳಲ್ಲಿ ಎದುರಗಡೆ ಹಾಗೂ ಹಿಂಭಾಗಗಳಲ್ಲಾಗಿ ಎರಡು ಬದಿಯಲ್ಲೂ ತುರ್ತು ನಿರ್ಗಮನ ಕಿಟಕಿಗಳು ಲಗತ್ತಿಸಲಾಗಿರುತ್ತದೆ. ಹಾಗೆಯೇ ಮುಂಭಾಗದ ಹಾಗೂ ಹಿಂಭಾಗದ ಪ್ರಯಾಣಿಕರು ಕಡ್ಡಾಯವಾಗಿ ಸೀಟು ಬೆಲ್ಟ್ ಧರಿಸಿರಬೇಕು. ಇನ್ನು ಆಗ್ನಿ ಶಾಮಕ ಯಂತ್ರ ಸಹ ಮುಂಭಾಗ ಹಾಗೂ ಹಿಂಭಾಗದಲ್ಲಿರುವುದನ್ನು ನೆನಪಿನ್ನಲ್ಲಿಟ್ಟುಕೊಳ್ಳಬೇಕು.

ತುರ್ತು ನಿರ್ಗಮನ (emergency exit)

ತುರ್ತು ನಿರ್ಗಮನ (emergency exit)

ವೋಲ್ವೋ ಬಸ್ಸಿನ ವಿಂಡೋ ಸೀಟಿನ ಬದಿಯಲ್ಲಿರುವ ಗಾಜಿನಲ್ಲಿ 'ಎಮರ್ಜನ್ಸಿ ಎಕ್ಸಿಟ್' ಎಂದು ಆಂಗ್ಲ ಭಾಷೆಯಲ್ಲಿ ದೊಡ್ಡ ಅಕ್ಷರಗಳಲ್ಲಿ ಎದ್ದು ಕಾಣುವಂತೆ ಬರೆಯಲಾಗಿರುತ್ತದೆ. ಬಸ್ಸಿನ ಎರಡು ಬದಿಗಳಲ್ಲೂ ಇದರ ವ್ಯವಸ್ಥೆಯಿರುತ್ತದೆ.

ಸುತ್ತಿಗೆ (hammer)

ಸುತ್ತಿಗೆ (hammer)

ಇಂತಹ ಎಮರ್ಜನ್ಸಿ ಎಕ್ಸಿಟ್ ವಿಂಡೋ ಪಕ್ಕದಲ್ಲಿಯೇ ಸುತ್ತಿಗೆಯನ್ನು ಲಗತ್ತಿಸಲಾಗಿರುತ್ತದೆ. ಇದು ಅಪಘಾತ ಸಂದರ್ಭಗಳಲ್ಲಿ ಗಾಜನ್ನು ಒಡೆಯಲು ಸಹಕಾರಿಯಾಗುತ್ತದೆ.

ಅಪಘಾತ ವೇಳೆಯಲ್ಲಿ...

ಅಪಘಾತ ವೇಳೆಯಲ್ಲಿ...

ಇನ್ನು ಅಪಘಾತ ವೇಳೆಯಲ್ಲಿ ಗಾಜಿನ ಒಂದು ಬದಿಯಿಂದ ಸುತ್ತಿಗೆ ನೆರವಿನಿಂದ ಒಡೆಯಿರಿ. ಗಾಜು ಒಡೆಯುವ ಗಲಿಬಿಲಿಯಲ್ಲಿ ಕೈಗೆ ಏಟಾಗದಂತೆ ನೋಡಿಕೊಳ್ಳಿರಿ...

ಪಾರಾಗಿರಿ...

ಪಾರಾಗಿರಿ...

ಗಾಜು ಒಡೆದ ಬಳಿಕ ಎಚ್ಚರಿಕೆಯಿಂದ ಹೊರಹೋಗಿರಿ. ಈ ಮೂಲಕ ನಿಮ್ಮ ಸಹ ಪ್ರಯಾಣಿಕರನ್ನು ಅಪಘಾತದಿಂದ ರಕ್ಷಿಸಬಹುದಾಗಿದೆ.

ಮುಖ್ಯ ಬಾಗಿಲು (main door)

ಮುಖ್ಯ ಬಾಗಿಲು (main door)

ಇನ್ನು ಅಪಘಾತ ವೇಳೆಯಲ್ಲಿ ಮುಖ್ಯ ಬಾಗಿಲು ತೆರೆಯಲು ಚಾಲಕನ ಡ್ಯಾಶ್‌ಬೋರ್ಡ್‌ನಲ್ಲಿ ಲಗತ್ತಿಸಲಾಗಿರುವ ಸ್ವಿಚ್ಚನ್ನು ಬಲಬದಿಗೆ ತಿರುಗಿಸಿದರಾಯಿತು.

ಆಗ್ನಿ ಶಾಮಕ ಯಂತ್ರ (fire extinguisher)

ಆಗ್ನಿ ಶಾಮಕ ಯಂತ್ರ (fire extinguisher)

ವೋಲ್ವೋ ಬಸ್ಸುಗಳಲ್ಲಿ ಒಟ್ಟು ಎರಡು ಆಗ್ನಿ ಶಾಮಕ ಯಂತ್ರಗಳನ್ನು ಆಳವಡಿಸಲಾಗಿರುತ್ತದೆ. ಮೊದಲನೆಯದ್ದು ಸಹ ಚಾಲಕ ಸೀಟಿನ ಬದಿಯಲ್ಲೂ ಇನ್ನೊಂದನ್ನು ಕೊನೆಯ ಸಾಲಿನ ನಡುಭಾಗದಲ್ಲಾಗಿ ಲಗತ್ತಿಸಲಾಗಿದೆ.

ರೂಫ್ ಹ್ಯಾಚ್ ಎಕ್ಸಿಟ್ (roof hatch exit)

ರೂಫ್ ಹ್ಯಾಚ್ ಎಕ್ಸಿಟ್ (roof hatch exit)

ಹಾಗೆಯೇ ಬಸ್ಸು ಮಗುಚಿದಂತಹ ಸಂದರ್ಭ ಎದುರಾದಾಗ ಮೇಲ್ಛಾವಣಿ ತೆರೆದುಕೊಂಡು ಪಾರಾಗಬಹುದಾಗಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಾಗಿ ಎರಡು ತುರ್ತು ಮೇಲ್ಚಾವಣಿ ನಿರ್ಗಮನ ಬಾಗಿಲುಗಳಿವೆ.

ಸೀಟು ಬೆಲ್ಟ್

ಸೀಟು ಬೆಲ್ಟ್

ಮೊದಲನೇಯ ಸಾಲಿನ ನಾಲ್ಕು ಆಸನ, ಸಹ ಚಾಲಕ ಮತ್ತು ಕೊನೆಯ ಸಾಲಿನ ನಡುಭಾಗದಲ್ಲಿರುವ ಸೀಟುಗಳಿಗೆ ಸೀಟು ಬೆಲ್ಟ್ ಲಗತ್ತಿಸಲಾಗಿರುತ್ತದೆ. ಪಯಣದ ವೇಳೆ ಇದನ್ನು ಕಡ್ಡಾಯವಾಗಿ ಆಳವಡಿಸಲು ಯಾವುದೇ ಕಾರಣಕ್ಕೂ ಮರೆಯದಿರಿ. (ಸಾಂಧರ್ಬಿಕ ಚಿತ್ರ)

English summary
Emergency Exit And Safety Instructions for Volvo Buses

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark