ಮೈಲೇಜ್ ಟಿಪ್ಸ್, ಜೊತೆಗೊಂದು ಬೋನಸ್ ಟಿಪ್ಸ್

ಇಂದಿನ ಸಲಹೆ: ಎಂಜಿನ್ ಕೇವಲ ಬೈಕನ್ನು ಓಡಿಸಲು ಮಾತ್ರ ಸಹಕರಿಸುತ್ತಿಲ್ಲ. ವೇಗವಾಗಿ ಸಾಗುವ ಬೈಕಿನ ವೇಗವನ್ನು ತಗ್ಗಿಸಲು, ಮುಖ್ಯವಾಗಿ ಓಡುವ ಬೈಕನ್ನು ನಿಲ್ಲಿಸುವಲ್ಲಿ ಎಂಜಿನ್ ಪ್ರಮುಖ ಮಾತ್ರ ವಹಿಸುತ್ತದೆ. ಇದಕ್ಕೆ ಎಂಜಿನ್ ಬ್ರೇಕಿಂಗ್ ಎಂದು ಹೆಸರು.
ಹೀಗೆ ಓಡುವ ಬೈಕನ್ನು ನಿಲ್ಲಿಸುವ ಎಂಜಿನ್ ಥ್ರೋಟಲ್ ಕೆಲಸದಲ್ಲೂ ಹೆಚ್ಚು ಇಂಧನ ಬಳಕೆಯಾಗುತ್ತದೆ. ಸ್ಲೋ ಮೂವಿಂಗ್ ಟ್ರಾಫಿಕ್ ನಲ್ಲಿ ಹಾರ್ಡಾಗಿ ಒಮ್ಮೆಗೆ ಬ್ರೇಕ್ ಹಾಕುವ ಬದಲು ನಿಧಾನವಾಗಿ ಥ್ರೋಟಲ್ ರಿಲೀಸ್ ಮಾಡಿದರೆ ಇಂಧನ ಉಳಿತಾಯವಾಗುತ್ತದೆ. ಮೃದುವಾಗಿ ಬ್ರೇಕ್ ಹಾಕೋದು ಹೇಗೆ ಎಂದು ಬರೆಯುವುದು ಕಷ್ಟ. ನಿಮ್ಮ ಅತ್ಯುತ್ತಮ ರೈಡಿಂಗ್ ಹ್ಯಾಬಿಟ್ ನಿಮಗಿದನ್ನು ಕಲಿಸುತ್ತದೆ. ಸ್ಮೂತಾಗಿ ಬ್ರೇಕ್ ಹಾಕುವ ಕಲೆ ನಿಮಗೆ ಒಲಿಯಲಿ.
ಭಾನುವಾರದ ಬೋನಸ್ ಸಲಹೆ: ಹೆಡ್ ಲ್ಯಾಂಪನ್ನು ಅನಗತ್ಯವಾಗಿ ಬಳಸಬೇಡಿ. ಬ್ಯಾಟರಿ ಚಾರ್ಜ್ ಮಾಡಲು ಎಂಜಿನ್ ಬೇಕಾಗುತ್ತದೆ. ಇದಕ್ಕಾಗಿ ಹೆಚ್ಚು ಇಂಧನ ವ್ಯಯವಾಗುತ್ತದೆ. ಇದರೊಂದಿಗೆ ಬೈಕಿನಲ್ಲಿ ಅನಗತ್ಯವಾಗಿರುವ ಎಲೆಕ್ಟ್ರಿಕ್ ಸಾಧನಗಳನ್ನು ಬಳಕೆಮಾಡಬೇಡಿ.
ಬೈಕಿಗೆ ಯಾವುದು ರಾಹುಕಾಲ? ಯಾವುದು ಯಮಗಂಡಕಾಲ?


Click it and Unblock the Notifications








