ಟ್ರಾಫಿಕ್ನಲ್ಲಿ ಬೈಕ್ ಇಂಧನ ಉಳಿಸೋದು ಹೇಗೆ?

ಇಲ್ಲಿವರೆಗೆ ಬೈಕ್ ಮೈಲೇಜ್ ಹೆಚ್ಚಿಸುವ ಸಲಹೆ ಮಾಲಿಕೆಯಲ್ಲಿ ಹಲವು ಅಂಶಗಳನ್ನು ತಿಳಿದುಕೊಂಡಿರಿ. ಈ ಎಲ್ಲಾ ಸಲಹೆಗಳ ಜೊತೆ ಇನ್ನೊಂದು ಪ್ರಮುಖ ವಿಷಯವಿದೆ. ನೀವು ಒಂದು ನೋಟ್ ಬುಕ್ ಮಾಡಿಟ್ಟುಕೊಳ್ಳಿ. ಅದರಲ್ಲಿ ಬೈಕಿಗೆ ಇಂಧನ ತುಂಬಿಸಿದ ದಿನಾಂಕ ಬರೆದಿಟ್ಟುಕೊಳ್ಳಿ. ಎಷ್ಟು ದೂರ ಪ್ರಯಾಣಿಸಿದಿರಿ, ಅದಕ್ಕೆ ಎಷ್ಟು ಇಂಧನ ಬಳಕೆಯಾಗಿದೆ ಎಂದು ಲೆಕ್ಕ ಮಾಡಿ. ಪ್ರತಿದಿನ ಈ ರೀತಿ ಬರೆಯೋ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಡ್ರೈವಿಂಗ್/ರೈಡಿಂಗ್ ಕಾರ್ಯಕ್ಷಮತೆ ಹೆಚ್ಚುತ್ತದೆ.
ಈ ಎಲ್ಲಾ ಸಲಹೆಗಳನ್ನು ನೀವು ಪಾಲಿಸಿದರೆ ದಿನಕ್ಕೆ ನಿಮಗೆ ಕೆಲವು ರೂಪಾಯಿಯಾದರೂ ಉಳಿತಾಯವಾಗಬಹುದು. ಬರೀ ದುಡ್ಡುಮಾತ್ರವಲ್ಲ, ನಿಮ್ಮ ಅತ್ಯುತ್ತಮ ರೈಡಿಂಗ್ ಹವ್ಯಾಸವೂ ವಾಯುಮಾಲಿನ್ಯವನ್ನು ಸಹ ತಗ್ಗಿಸುತ್ತದೆ. ನಾಳೆಯ ಹೊಸ ಸಲಹೆಗಾಗಿ ಕಾಯಿರಿ (ದಿನಕ್ಕೊಂದು ಸಲಹೆ).


Click it and Unblock the Notifications








