TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕಾರಿನ ಇಂಧನಗಳ ಬಗ್ಗೆ ಈ ಕಟ್ಟುಕತೆಗಳನ್ನು ನಂಬಲೇಬೇಡಿ..
ವಾಹನಗಳಿಗೆ ಸರಿಹೊಂದುವ ಇಂಧನದ ಬಗೆ ಡ್ರೈವರ್‍ಗಳು ಬಹಳ ಕಟ್ಟುಕತೆಗಳನ್ನು ನಂಬುತ್ತಾರೆ. ಅವುಗಳಲ್ಲಿಯು ಕೆಲವು ನಂಬಿಕೆಗಳು ನಿಜವಾದರೂ ಇನ್ನು ಕೆಲವುಗಳನ್ನು ನಂಬಿದರೆ ಅವು ನಿಮ್ಮ ಕಾರಿನ ಆರೋಗ್ಯಕ್ಕೆ ಹಾನಿಯಂನ್ನುಂಟು ಮಾಡುತ್ತವೆ. ವಾಹನ ಇಂಧನದ ಬಗ್ಗೆ ಹೆಚ್ಚುವರಿಯಾಗಿ ನಂಬುವ ಕೆಲವು ವಿಷಯಗಳು ಮತ್ತು ಇಂತಹ ಕಟ್ಟುಕತೆಗಳನ್ನು ಖಚಿತವಾಗಿಯು ನಂಬಬಾರದ ವಿಷಯಗಳ ಬಗ್ಗೆ ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.
1. ಮುಂಜಾನೆ ವೇಳೆ ಫ್ಯುಯಲ್ ತುಂಬಿಸಿಕೊಂಡರೆ ಹೆಚ್ಚು ಮೈಲೇಜ್ ದೊರೆಯುತ್ತದೆ.?
ಮುಂಜಾನೆ ವೇಳೆಯಲ್ಲಿ ನಿಮ್ಮ ಕಾರಿಗೆ ಫ್ಯುಯಲ್ ತುಂಬಿಸುವುದೆ ಉತ್ತಮ ಆಲೋಚನೆಯೆ. ಈ ಮಾತು ಬರಲು ಕಾರಣವೇನೆಂದರೆ. ಬಿಸಿಲು ಹೆಚ್ಚಾಗುತ್ತಿದ್ದಂತೆ ಪೆಟ್ರೋಲ್ ಆವಿಯಾಗುತ್ತದೆ. ಅದೇ ಮುಂಜಾವಿನಲ್ಲಿ ಪೆಟ್ರೋಲ್ ತಣ್ಣಗಿರುತ್ತದೆ ಆದ್ದರಿಂದ ಸಾಧ್ಯವಾದಷ್ಟು ಮುಂಜಾವಿನ ವೇಳೆಯಲ್ಲಿ ಇಂಧನವನ್ನು ತುಂಬಿಸಿಕೊಳ್ಳುವುದರಿಂದ ಮೈಲೇಜ್ ಅಧಿಕವಾಗುತ್ತದೆ ಎಂದು ನಂಬುತ್ತಾರೆ.
ನಿಜಕ್ಕೆ ಫ್ಯುಯಲ್ ಟ್ಯಾಂಕ್ ವೆಹಿಕಲ್ ಕೆಳಭಾಗದಲ್ಲಿರುವುದರಿಂದ, ಆಗಲೆ ಎಂಜಿನ್ ಆನ್‍ನಲ್ಲಿರುತ್ತದೆ ಇದರಿಂದ ಫ್ಯುಯಲ್ ಆ ಕ್ಷಣವೇ ಬಿಸಿಯನ್ನು ಗ್ರಹಿಸುತ್ತದೆ. ಇದರಿಂದ ನಾವು ಪ್ಯುಯಲ್ ಅನ್ನು ಯಾವಗ ತುಂಬಿಸಿದರೂ ಟ್ಯಾಂಕ್ ಒಳಗೇ ಹೋದ ಪೆಟ್ರೋಲ್ ಹಾಗೆಯೆ ಇರುತ್ತದೆ. ಆದ್ದರಿಂದ ಈ ಮಾತನ್ನು ನಂಬುವುದು ತಪ್ಪೆಂದೆ ಹೇಳಬಹುದು.
2. ಫ್ಯುಯಲ್ ಕಡಿಮೆ ಇದ್ದಾಗ ವಾಹನವನ್ನು ಚಲಾಯಿಸುವುದರಿಂದ ಎಂಜಿನ್‍ಗೆ ಒಳ್ಳೆಯದು.?
ಫ್ಯುಯಲ್ ಟ್ಯಾಂಕ್‍ನಲ್ಲಿನ ಇಂಧನವು ಕಡಿಮೆ ಇದ್ದಾಗ ವಾಹನವನ್ನು ಚಲಾಯಿಸಿದರೆ, ಟ್ಯಾಂಕ್‍ನ ಕೆಳಗಿರುವ ಮಲೀನಗಳಿಂದ ಇಂಧನವು ಎಂಜಿನ್ ಅನ್ನು ಸೇರಿ, ಎಂಜಿನ್ ಅನ್ನು ಹಾಳು ಮಾಡುತ್ತದೆ ಎಂದು, ಆದ್ದರಿಂದ ಟ್ಯಾಂಕ್‍ನಲ್ಲಿನ ಫ್ಯುಯಲ್ ಲೆವೆಲ್ ಅಧಿಕವಾಗಿದ್ದರೆ ಉತ್ತಮ ಗುಣಮಟ್ಟದ ಇಂಧನವು ಎಂಜಿನ್ ಸೇರುವುದರಿಂದ ಸಮಸ್ಯೆ ಇರಲಾರದು ಎಂದು ನಂಬುತ್ತಾರೆ.
ಅಸಲಿಗೆ ನಂಬಬಾರದ ಮಾತುಗಳಲ್ಲಿ ಇದು ಕೂಡಾ ಒಂದು. ಏಕೆಂದರೆ ಪ್ರತೀ ಫ್ಯುಯಲ್ ಟ್ಯಾಂಕ್‍ನಲ್ಲಿನ ಕೆಳಭಾಗದಿಂದ ಇಂಧನವನ್ನು ಕಳಿಸುವ ಹಾಗೆ ವಿನ್ಯಾಸ ಮಾಡಲಾಗಿರುತ್ತದೆ. ಆದ್ದರಿಂದ ಕಡಿಮೆ ಕೆಪಾಸಿಟ್ ಎಂಜಿನ್ ನಡೆಸಿದರೂ, ಟ್ಯಾಂಕ್ ಫುಲ್ ಮಾಡಿ ಗಾಡಿ ಚಲಾಯಿಸಿದರೂ, ಎಂಜಿನ್‍ಗೆ ಯಾವುದೇ ನಷ್ಟವಿರುವುದಿಲ್ಲ.
3. ನಾನ್ ಪ್ರೀಮಿಯಮ್ ಕಾರಿಗೆ ಪ್ರೀಮಿಯಮ್ ಫ್ಯುಯಲ್ ಉತ್ತಮ ಎಂದು ತಿಳಿಯುವುದು.
ಇದು ಅಕ್ಷರಃ ತಪ್ಪು. ಪೆಟ್ರೋಲ್ ಬಂಕ್‍ಗೆ ಹೋದಾಗ ಪವರ್ ಮತ್ತು ಪ್ರೀಮಿಯಮ್ ಎಂಬ ಹೆಸರಿನಲ್ಲಿ ಇಂಧನವನ್ನು ವಿವಿಧ ಬಗೆಯ ಲುಬ್ರಿಕಂಟ್ಸ್ ಮತ್ತು ಆಯಿಲ್ ಕಲಿಸಿದ ಇಂಧನವನ್ನು ಮಾರಾಟಮಾಡುತ್ತಾರೆ.
ನಿಜಕ್ಕೆ ಸಾಧಾರಣ ಇಂಧನವು ಮತ್ತು ರೆಗ್ಯುಲರ್ ಇಂಧನದ ಮಧ್ಯೆ ದೊಡ್ಡ ವ್ಯಾತ್ಯಾಸವೇನು ಇರುವುದಿಲ್ಲ. ಸತ್ಯವೇನೆಂದರೆ ಹೀಗೆ ಪ್ರತ್ಯೇಕ ಹೆಸರಿನಲ್ಲಿನ ಫ್ಯುಯಲ್ ಬೆಲೆಯು ಅಧಿಕವಾಗಿರುತ್ತದೆ. ಗುಣಮಟ್ಟದ ಪರವಾಗಿ ರೆಗ್ಯುಲರ್ ಫ್ಯುಯಲ್ ಮತ್ತು ಪ್ರೀಮಿಯಮ್ ಫ್ಯುಯಲ್ ಒಂದೇ ರೀತಿ ಇರುತ್ತದೆ.
4. ಮೈಲೇಜ್ ರೀಡಿಂಗ್ಸ್ ತಪ್ಪಾಗಿ ಬರುತ್ತಿದೆ ಎಂದುಕೊಳ್ಳುವುದು
ಮೈಲೇಜ್ ರೀಡಿಂಗ್ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮೈಲೇಜ್ ರೀಡಿಂಗ್ಸ್ ನಲ್ಲಿ ವ್ಯತ್ಯಾಸವು ಇದ್ದೇ ಇರುತ್ತದೆ. ಆದರೆ ರೀಡಿಂಗ್ಸ್ ಪ್ರಕಾರ ಎಲ್ಲಾ ಸರಿಯಾಗಿದೆ ಎಂದು ನಿಮ್ಮ ವಾಹನವು ನಿಮ್ಮನ್ನು ಮೋಸ ಮಾಡುತ್ತಿದೆ ಎಂದು ನಿಮಗೆ ಅನಿಸುತ್ತದೆ. ತಾಂತ್ರಿಕವಾಗಿ ಇದಕ್ಕೆ ಎಂದು ಕಾರಣ ಇದೆ.
ಉದಾಹರಣೆಗೆ : ಹೈವೇಯಲ್ಲಿ 2 ಕಿಲೋಮೀಟರ್‍ನ ಜೊತೆಗೆ 6 ಲೀಟರ್‍ನ ಇಂಧನದ ಜೊತೆ 100ಕಿಲೋಮೀಟರ್ ಪ್ರಯಾಣಿಸಿದ್ದೇ ಆದರೆ, ಆ ತಕ್ಷಣವೇ ಹೈವೇ ಬಿಟ್ಟು ನಗರದ ರಸ್ತೆಗಳನ್ನು ಮುಟ್ತಿ 12 ಲೀಟರ್‍ಗಳ ಇಂಧನದಲ್ಲಿ 100 ಕಿಲೋಮೀಟರ್ ಪ್ರಯಾಣಿಸಿದ್ದೇ ಆದರೆ ಈ ಎರಡೂ ಡ್ರೈವಿಂಗ್ ಪರಿಸ್ಥಿತಿಯನ್ನು ಗಮನಿಸುವುದಕ್ಕೆ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ತನಗೆತಾನು ಅಡ್ಜಸ್ಟ್ ಮಾಡಿಕೊಂಡು ಮೈಲೇಜ್ ತೋರಿಸುವುದಕ್ಕೆ ಕೆಲ ಸಮಯ ತೆಗೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಮೈಲೇಜ್ ಸ್ವಲ್ಪಾ ವ್ಯತ್ಯಾಸದಲ್ಲಿ ಬರಬಹುದು. ಅದಕ್ಕೆ ಮೈಲೇಜ್ ಕಡಿಮೆಯಾಗುದೆ ಎಂದು ತಿಳಿದರೆ ಅದು ತಪ್ಪಾಗುತ್ತದೆ.
5. ಜೆಟ್ ಫ್ಯುಯಲ್‍ನಿಂದ ಕಾರು ಅಧಿಕ ವೇಗಬಾಗಿ ಚಲಿಸುತ್ತದೆ.?
ನಿಜಕ್ಕೆ, ಜೆಟ್ ಫ್ಯುಯಲ್‍ನಿಂಡ ಕಾರು ಅಧಿಕ ವೇಗದಲ್ಲಿ ಚಲಿಸುತ್ತದೆ ಎಂದು ತಿಳಿದುಕೊಳ್ಳುವುದು ತಪ್ಪೆ. ಪೆಟ್ರೋಲ್ ಎಂಜಿನ್‍ಗಳು ಕಿರೋಸಿನ್ (ಜೆಟ್ ಫ್ಯುಯಲ್)ಅನ್ನು ಸಹಕರಿಸುವುದಿಲ್ಲ. ಆದ್ದರಿಂದ ನಿಮ್ಮ ಕಾರಿನಲ್ಲಿನ ರೆಗ್ಯೂಲರ್ ಫ್ಯುಯಲ್ ಅನ್ನು ತುಂಬಿಸುವುದು ಉತ್ತಮ.
ವಾಸ್ಥವದಲ್ಲಿರುವ ಇಂತಹ ಮಾರುಗಳನ್ನು ಯಾವಾಗಲೂ ನಂಬುವುದು ಸರಿಯಲ್ಲ. ಏಕೆಂದರೆ ವೆಹಿಕಲ್‍ನಲ್ಲಿ ನಾವು ಊಹಿಸಿಕೊಳ್ಳುವುದು ಒಂದಾದರೆ, ಅಲ್ಲಿ ನಡೆಯುವುದು ಮತ್ತೊಂದು. ಬಹಳಷ್ಟು ಬಾರಿ ಕಾರು ಉತ್ಪಾದನಾ ಕಂಪೆನಿಗಳು ತಮ್ಮ ಗ್ರಾಹಕರಿಗೆ ಅತ್ಯುತ್ತಮ ಡ್ರೈವಿಂಗ್ ಅನುಭನವನ್ನು ನೀಡಲು ಆಧುನಿಕ ಇಂಜಿನಿಯರಿಂಗ್‍ಗಳ ಸಲಹೆಗಳಿಂದ ಹೆಚ್ಚಾಗಿ ಅತ್ಯಾಧುನಿಕ ಬದಲಾವಣೆಗಳನ್ನು ತರುತ್ತಿವೆ.
ಶೋರಂ ಡೀಲರ್‍ಗಳು ಮತ್ತು ಕಾರು ಉತ್ಪಾದಕ ಸಂಸ್ಥೆಗಳ ಸಲಹೆಗಳನ್ನು ಪಡೆಯುವುದು ಉತ್ತಮವೇ. ಆದ್ದರಿಂದ ಕಟ್ಟುಕತೆಗಳನ್ನು ಬಿಟ್ಟು ಉತ್ತಮ ಡ್ರೈವಿಂಗ್ ಅನುಭವವನ್ನು ಪಡೆಯಿರಿ.