ಮಳೆಗಾಲದಲ್ಲಿ ಘಾಟಿ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್

By Nagaraja

ಮಳೆಗಾಲ ಬಂತೆಂದರೆ ಅದ್ಯಾಕೋ ಘಾಟಿ ಪ್ರದೇಶದಲ್ಲಿ ಸಂಚರಿಸುವುದೆಂದರೆ ಭಯ ಶುರುವಾಗಿಬಿಡುತ್ತದೆ. ರಾತ್ರಿ ವೇಳೆಯಲ್ಲಿ ಜೋರಾಗಿ ಸುರಿಯುವ ವರುಣನ ಮುಂದೆ ಸೋಲೋಪ್ಪಿಕೊಳ್ಳದೇ ಬೇರೆ ದಾರಿ ಇರುವುದಿಲ್ಲ. ಇಂತಹ ನರಕಯಾತನೆಯಿಂದ ಪಾರಾಗುವುದಾದರೂ ಹೇಗೆ?

Also Read : ಚಕ್ರಗಳಿಗೆ ಸಂಬಂಧಿಸಿದ 10 ಕಟ್ಟುಕತೆ ಹಾಗೂ ಸತ್ಯಗಳು

ಹಾಗಿದ್ದರೂ ಕೆಲವೊಂದು ಸುರಕ್ಷಿತ ಚಾಲನಾ ನಿಯಮಗಳನ್ನು ಪಾಲಿಸಿದರೆ ಸಾಧ್ಯವಾದಷ್ಟು ಘಾಟಿ ಪ್ರದೇಶದ ರಸ್ತೆಯಲ್ಲಿ ಎದುರಾಗುವ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಪಶ್ಚಿಮ ಘಟ್ಟದ ಹಸಿರು ತೋರಣಗಳಿಂದ ಕಂಗೊಳಿಸುವ ನಮ್ಮ ಕರ್ನಾಟಕದ ಮಲೆನಾಡಿನ ಉದ್ದಕ್ಕೂ ಹರಡಿರುವ ಘಾಟಿ ರಸ್ತೆಯ ಕಡಿದಾದ ತಿರುವುಗಳಿಂದ ಕೂಡಿರುವ ರಸ್ತೆಗಳಲ್ಲಿ ಸಂಚರಿಸುವಾಗ ಪಾಲಿಸಬೇಕಾದ ಎಚ್ಚರಗಳ ಬಗ್ಗೆ ನಾವಿಲ್ಲಿ ವಿವರವಾಗಿ ತಿಳಿಸಲಿದ್ದೇವೆ.

01. ನಿಧಾನವೇ ಪ್ರಧಾನ

01. ನಿಧಾನವೇ ಪ್ರಧಾನ

ಇದು ಕೇವಲ ಘಾಟಿ ರಸ್ತೆಗೆ ಮಾತ್ರ ಸೀಮಿತವಲ್ಲ. ನೀವು ಎಲ್ಲೇ ಚಾಲನೆ ಮಾಡುವುದಿದ್ದರೂ ಮುಂಭಾಗದಲ್ಲಿನ ರಸ್ತೆ ಸ್ಪಷ್ಟವಾಗಿ ಗೋಚರಿಸದ ಹೊರತಾಗಿ ವೇಗವನ್ನು ಹೆಚ್ಚಿಸುವ ಗೋಜಿಗೆ ಹೋಗಬಾರದು. ಮಳೆಗಾಲದಂತೂ ಅಮಿತ ವೇಗದಲ್ಲಿ ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದೆಡೆ ಒದ್ದೆಯಾದ ರಸ್ತೆ ಸ್ಕಿಡ್ ಆಗುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಇವೆಲ್ಲದರಿಂದಾಗಿ ವಾಹನಗಳ ನಡುವೆ ಅಂತರ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯ.

02. ಚಕ್ರಗಳನ್ನು ಪರೀಶೀಲಿಸಿ

02. ಚಕ್ರಗಳನ್ನು ಪರೀಶೀಲಿಸಿ

ಮಳೆಗಾಲ ಆರಂಭವಾಗುವುದಕ್ಕಿಂತಲೂ ಮೊದಲು ಕಾರನ್ನು ಕೂಲಂಕುಷವಾಗಿ ಪರೀಕ್ಷೆಗೆ ಒಳಪಡಿಸಬೇಕಾಗಿರುವುದು ಅತಿ ಅಗತ್ಯ. ಅದರಲ್ಲೂ ನಿಮ್ಮ ಕಾರನ್ನು ರಸ್ತೆಗೆ ನೇರವಾಗಿ ಸಂಪರ್ಕಿಸುವ ಚಕ್ರಗಳ ಸುರಕ್ಷತೆ ಅತಿ ಮುಖ್ಯವಾಗಿರುತ್ತದೆ.

03. ವೈಪರ್

03. ವೈಪರ್

ವಾಹನಗಳ ಗಾಜಿನ (ವಿಂಡ್ ಸ್ಕ್ರೀನ್) ಮೇಲಿರುವ ನೀರನ್ನು ಒರೆಸುವ ಸಲಕರಣೆಯಾಗಿರುವ ವೈಪರ್ ಗಳು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

04. ಹೆಡ್ ಲೈಟ್ ಗಳ ಬಳಕೆ

04. ಹೆಡ್ ಲೈಟ್ ಗಳ ಬಳಕೆ

ಜೋರಾಗಿ ಮಳೆ ಸುರಿಯುತ್ತಿದ್ದು, ಹಗಲು ವೇಳೆಯಲ್ಲೂ ಕತ್ತಲು ಆವರಿಸಿದ್ದರೆ ಹೆಡ್ ಲೈಟ್ ಬಳಕೆ ಮಾಡಲು ಮರೆಯದಿರಿ. ಇದರಿಂದಾಗಿ ಮುಂಭಾಗದಿಂದ ಬರುವ ವಾಹನಗಳಿಗೂ ನಿಮ್ಮ ಸಾನಿಧ್ಯದ ಬಗ್ಗೆ ಅರಿವಾಗಲಿದೆ. ಹೆಡ್ ಲೈಟ್ ಪರಿಣಾಮಕಾರಿಯಲ್ಲದಿದ್ದಲ್ಲಿ ಬೇಗನೇ ಬದಲಾಯಿಸುವುದು ಉತ್ತಮ.

05. ಗೇರ್ ಬದಲಾವಣೆ

05. ಗೇರ್ ಬದಲಾವಣೆ

ಸಾಮಾನ್ಯವಾಗಿ ಘಾಟಿ ಪ್ರದೇಶದಲ್ಲಿ ಚಾಲನೆ ಮಾಡುವಾಗ ಸರಿಯಾದ ಗೇರ್ ಬಳಕೆ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿರಬೇಕಾಗುತ್ತದೆ. ಘಾಟಿ ಪ್ರದೇಶದ ಇಳಿಜಾರಿನಿಂದ ಕೂಡಿರುವ ರಸ್ತೆಯಲ್ಲಿ ಯಾವತ್ತೂ ಸಾಮಾನ್ಯಕ್ಕಿಂತ ಒಂದು ಗೇರ್ ಹೆಚ್ಚಿದ್ದರೆ ಒಳಿತು. ಯಾಕೆಂದರೆ ಇದು ಬ್ರೇಕ್ ಒತ್ತುವ ಪ್ರಯಾಸವನ್ನು ಕಡಿಮೆ ಮಾಡುತ್ತದೆ. ಇಳಿಜಾರಿನಲ್ಲಿ ಯಾವುದೇ ಕಾರಣಕ್ಕೂ ಗಾಡಿ ನ್ಯೂಟ್ರಲ್ ನಲ್ಲಿ ಚಲಾಯಿಸಬೇಡಿರಿ. ಇದರಿಂದಾಗಿ ಬ್ರೇಕ್ ಫೇಲ್ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ.

06. ತಿರುವುಗಳಲ್ಲಿ ಗೇರ್ ಕಡಿಮೆ ಮಾಡಿ

06. ತಿರುವುಗಳಲ್ಲಿ ಗೇರ್ ಕಡಿಮೆ ಮಾಡಿ

ಕಡಿದಾದ ತಿರುವುಗಳಲ್ಲಿ ಗೇರ್ ಕಡಿಮೆ ಮಾಡುವುದು (ಮೂರರಿಂದ ಎರಡಕ್ಕೆ) ಅತಿ ಮುಖ್ಯ. ಇದರಿಂದ ಗಾಡಿ ಸಮತೋಲನ ಕಾಪಾಡಿಕೊಳ್ಳಲು ನೆರವಾಗಲಿದೆ. ತಿರುವುಗಳಲ್ಲಿ ವೇಗವಾಗಿ ಬರುವ ಕಾರುಗಳು ಲೇನ್ ತಪ್ಪಿ ಬರುವುದನ್ನು ನೀವು ಗಮನಿಸಿರಬಹುದು. ಇದರಿಂದ ಇಂತಹ ಪರಿಸ್ಥಿತಿಯನ್ನು ತಪ್ಪಿಸಬಹುದು.

07. ಹಾರ್ನ್ ಬಳಕೆ

07. ಹಾರ್ನ್ ಬಳಕೆ

ಕಡಿದಾದ 'ಕುರುಡು' ತಿರುವುಗಳಲ್ಲಿ ಹಾರ್ನ್ ಬಳಕೆಯನ್ನು ಕಡ್ಡಾಯವಾಗಿ ಪಾಲಿಸಿ. ಹಾಗೊಂದು ವೇಳೆ ಮುಂಭಾಗದಲ್ಲಿ ಬರುವ ವಾಹನಗಳು ಹಾರ್ನ್ ಹಾಕಿದರೆ ನೀವು ಕೂಡಾ ಅದಕ್ಕೆ ಪ್ರತ್ಯುತ್ತರವಾಗಿ ಹಾರ್ನ್ ಮೂಲಕವೇ ನಿಮ್ಮ ಸಾನಿಧ್ಯವನ್ನು ವ್ಯಕ್ತಪಡಿಸಿರಿ.

08. ಲೇನ್ ಪಾಲಿಸಿ

08. ಲೇನ್ ಪಾಲಿಸಿ

ಘಾಟಿ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳೂ ಪಾಲಿಸಬೇಕಾದ ಅತಿ ಮಹತ್ವದ ನಿಯಮ ಇದಾಗಿದ್ದು, ಲೇನ್ ಸಂಚಾರವನ್ನು ತಪ್ಪದೇ ಪಾಲಿಸಿರಿ. ಸಾಮಾನ್ಯವಾಗಿ ಕೆಳಗಡೆಯಿಂದ ಮೇಲ್ಗಡೆ ಹತ್ತುವ ಘನ ವಾಹನಗಳು ನಿಧಾನವಾಗಿ ಸಂಚರಿಸುವುದರಿಂದ ವೇಗವಾಗಿ ಇಳಿಮುಖವಾಗಿ ಬರುವ ವಾಹನಗಳು ಮಾರ್ಯಾದೆ ನೀಡುವುದನ್ನು ಕಲಿತುಕೊಳ್ಳಬೇಕು.

09. ಮೊಬೈಲ್ ಬಳಕೆ ಬೇಡ

09. ಮೊಬೈಲ್ ಬಳಕೆ ಬೇಡ

ಯಾವುದೇ ಕಾರಣಕ್ಕೂ ಘಾಟಿ ರಸ್ತೆಯಲ್ಲಿ ಸಂಚರಿಸುವಾಗ ಮೊಬೈಲ್ ಫೋನ್ ಬಳಕೆ ಮಾಡಬಾರದು. ಹಾಗೆಯೇ ಕಾರಿನೊಳಗೆ ಸ್ಟೀರಿಯೋಗಳನ್ನು ಗಟ್ಟಿಯಾಗಿ ಪ್ಲೇ ಮಾಡಬಾರದು. ಯಾಕೆಂದರೆ ನಿಮ್ಮ ಮನರಂಜನೆಯು ಜೀವನದ ಕೊನೆಯ ಮೋಜು ಆಗುವ ಭೀತಿಯೂ ಇದೆ.

10. ಓವರ್ ಟೇಕಿಂಗ್ ಬೇಡ, ತಾಳ್ಮೆಯಿರಲಿ

10. ಓವರ್ ಟೇಕಿಂಗ್ ಬೇಡ, ತಾಳ್ಮೆಯಿರಲಿ

ಸಾಮಾನ್ಯ ಹೆದ್ದಾರಿಗಿಂತಲೂ ವಿಭಿನ್ನವಾಗಿ ಕಡಿದಾದ ತಿರುವುಗಳನ್ನು ಹೊಂದಿರುವ ಘಾಟಿ ರಸ್ತೆಗಳಲ್ಲಿ ಓವರ್ ಟೇಕಿಂಗ್ ಅವಕಾಶ ತೀರಾ ಕಡಿಮೆಯಾಗಿರುತ್ತದೆ. ಹಾಗಾಗಿ ವಾಹನಗಳ ನಡುವೆ ಸರಿಯಾದ ಅಂತರ ಪಾಲಿಸಿ ಮುನ್ನುಗ್ಗಿರಿ.

11. ಕೆಸರಿನ ರಸ್ತೆ, ಗುಂಡಿ

11. ಕೆಸರಿನ ರಸ್ತೆ, ಗುಂಡಿ

ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುವ ಸಾಧ್ಯತೆಯಿರುವುದರಿಂದ ಅಪಾಯವನ್ನು ಆಹ್ವಾನಿಸುವ ಮೊದಲು ಸ್ವಲ್ಪ ಎಚ್ಚರಿಕೆಯಿಂದ ಮುಂದುವರಿದರೆ ಒಳಿತು.

12. ನಿಲುಗಡೆ

12. ನಿಲುಗಡೆ

ಇನ್ನು ಕಾರನ್ನು ಅಗತ್ಯ ಬಂದ್ದಲ್ಲಿ ಮಾತ್ರ ನಿಲ್ಲಿಸಿರಿ. ಇದಕ್ಕಾಗಿ ಎರಡು ಕಡೆಗಳಿಂದ ಗೋಚರಿಸುವಂತಹ ಪ್ರದೇಶವನ್ನೇ ಆಯ್ಕೆ ಮಾಡಿ. ಈ ಸಂದರ್ಭದಲ್ಲಿ ಹಜಾರ್ಡ್ (ಅಪಾಯ) ಬೆಳಕು ಆನ್ ಮಾಡಿಡಲು ಮರೆಯದಿರಿ.

ಇವನ್ನೂ ಓದಿ

ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

Most Read Articles

Kannada
English summary
Ghat road driving is very different to driving in the plains, so here are some tips for a safer drive in the ghats.
Story first published: Tuesday, July 14, 2015, 16:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X