ಸಲಹೆ: ಸ್ಟಿಯರಿಂಗ್ ವೀಲ್ ಹಿಡಿಯೋದು ಹೇಗೆ?

Posted By:
To Follow DriveSpark On Facebook, Click The Like Button
ವಾಹನದ ನಿಯಂತ್ರಣವು ಚುಕ್ಕಾಣಿ ಅಥವಾ ಸ್ಟಿಯರಿಂಗ್ ವೀಲ್ ನಲ್ಲಿರುತ್ತದೆ. ಸ್ಟಿಯರಿಂಗ್ ವೀಲ್ ಹಿಡಿದುಕೊಳ್ಳುವ ವಿಧಾನ ಸಮರ್ಪಕವಾಗಿದ್ದರೆ ವಾಹನ ಚಾಲನೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಇವತ್ತಿನ ದಿನಕ್ಕೊಂದು ಸಲಹೆ ಅಂಕಣದಲ್ಲಿ ವಾಹನದ ಸ್ಟಿಯರಿಂಗ್ ವೀಲ್ ಹೇಗೆ ಹಿಡಿದುಕೊಳ್ಳಬೇಕೆಂಬ ಪಾಠವಿದೆ.

ಆರಂಭದಲ್ಲಿ ಗೋಡೆ ಗಡಿಯಾರದ ಅಂಕಿಗಳ ಸ್ಥಾನವನ್ನು ನೆನಪಿಸಿಕೊಳ್ಳಿ. ಗಡಿಯಾರದ ಅಂಕೆ 10 ಮತ್ತು 2 ಗಂಟೆ ಇರುವಂತೆ ಹೆಚ್ಚಿನ ಜನರು ಸ್ಟಿಯರಿಂಗ್ ವೀಲ್ ಹಿಡಿದುಕೊಳ್ಳುತ್ತಾರೆ. ಹೀಗೆ ಸ್ಟಿಯರಿಂಗ್ ಹಿಡಿದುಕೊಳ್ಳುವುದು ರಾಂಗ್. ನೀವು ಇನ್ನೂ ಹಳೆ ಜಮಾನದಲ್ಲಿದ್ದು, ಅಪ್ ಡೇಟ್ ಆಗಿಲ್ಲವೆಂದು ತಿಳಿದುಕೊಳ್ಳಬಹುದು.

ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಆಡಳಿತ(ಎಎಎ) ಪ್ರಕಾರ ಗಡಿಯಾರದ 9 ಮತ್ತು 3 ಅಂಕೆಗಳಿರುವಲ್ಲಿ. ಬೇಕಿದ್ರೆ ಅದಕ್ಕಿಂತ ಕೆಳಗೆ ಅಂದರೆ 8 ಮತ್ತು 4 ಗಂಟೆ ಅಂಕಿ ಇರುವಲ್ಲಿ ಸ್ಟಿಯರಿಂಗ್ ವೀಲ್ ಹಿಡಿದುಕೊಳ್ಳಬೇಕು. ಹೀಗೆ ಹಿಡಿದುಕೊಂಡರೆ ಸುರಕ್ಷಿತವಾಗಿ ಸವಾರಿ ಮಾಡಬಹುದು ಎಂದು ಎಎಎ ಹೇಳುತ್ತದೆ.

ನೂತನ ಸುರಕ್ಷತೆ ಫೀಚರುಗಳ ಅನುಕೂಲತೆಗೆ ತಕ್ಕಂತೆ ನೀವು ಈ ರೀತಿ ಸ್ಟಿಯರಿಂಗ್ ಹಿಡಿದುಕೊಳ್ಳಬೇಕು(ಚಿತ್ರ ನೋಡಿ). ಗಡಿಯಾರದ ಹತ್ತು ಎರಡು ಅಂಕೆ ಇರುವಲ್ಲಿ ಹಿಡಿದುಕೊಂಡರೆ ಅಪಘಾತದ ಸಂದರ್ಭದಲ್ಲಿ ನಿಮ್ಮ ಕೈಗೆ ಏರ್ ಬ್ಯಾಗ್ ರಕ್ಷಣೆ ನೀಡುವ ಛಾನ್ಸ್ ಕಡಿಮೆ. ಹೀಗೆ ಕೈ ಇಟ್ಟುಕೊಂಡರೆ ಏರ್ ಬ್ಯಾಗ್ ತೆರೆದುಕೊಳ್ಳುವುದಕ್ಕೂ ಅಡ್ಡಿಯಾಗಬಹುದು.

ಸಮಾನಾಂತರ ರೇಖೆ ಅಥವಾ ಗಡಿಯಾರದ 9 ಮತ್ತು 3 ಅಂಕಿ ಇರುವಲ್ಲಿ ಕೈಯಿಡಿದುಕೊಂಡರೆ ಹೆಚ್ಚು ದೃಢವಾಗಿ ವಾಹನ ಚಾಲನೆ ಮಾಡಬಹುದು ಎಂದು ಟೆಕ್ಸಾಸ್ ನ ಸಾರ್ವಜನಿಕ ಸುರಕ್ಷತೆ ವಿಭಾಗವೂ ಹೊಸದಾಗಿ ವಾಹನ ಚಾಲನೆ ಕಲಿತವರಿಗೆ ಗೈಡ್ ಲೈನ್ಸ್ ನೀಡಿದೆ.

ತಿರುವಿನಲ್ಲಿ ಸರಕಾರಿ ಬಸ್ ಸ್ಟಿಯರಿಂಗ್ ವೀಲ್ ತಿರುಗಿಸುವಂತೆ ಕಾರಿನ ಸ್ಟಿಯರಿಂಗ್ ತಿರುಗಿಸುವ ಅಗತ್ಯವಿಲ್ಲ. ಪವರ್ ಸ್ಟಿಯರಿಂಗ್ ತಿರುಗಿಸಲು ಒಂದೆರಡು ಬೆರಳು ಸಾಕು. ಮೇಲ್ಮುಖವಾಗಿ ಒಂದು ಕೈನಲ್ಲಿ, ಕೆಳಮುಖವಾಗಿ ಇನ್ನೊಂದು ಕೈನಲ್ಲಿ ತಿರುಗಿಸಬಹುದು. ಇನ್ಮುಂದೆ ಸ್ಟಿಯರಿಂಗ್ ವೀಲ್ ಹಿಡಿವಾಗ ಗಡಿಯಾರದ 9 ಮತ್ತು 3 ಅಥವಾ 4 ಅಥವಾ 8 ಅಂಕೆ ಗಮನದಲ್ಲಿರಲಿ. (ಕನ್ನಡ ಡ್ರೈವ್ ಸ್ಪಾರ್ಕ್ )

English summary
If you want become a better driver then you must know that how to keep your hand on steering wheel while driving. Here we are going to give some detail about, how to hold car steering wheel?
Story first published: Monday, March 26, 2012, 9:25 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark