ನೈಟ್ ಸೇಫ್ ಡ್ರೈವಿಂಗ್‌ಗಾಗಿ 6 ಬಹುಮೂಲ್ಯ ಟಿಪ್ಸ್!

Posted By:

ರಾತ್ರಿ ವೇಳೆ ಡ್ರೈವಿಂಗ್ ಮಾಡುವುದೆಂದರೆ ಅಂದೊಂದು ಉತ್ತಮ ಕಲೆಯೇ ಸರಿ. ಅಂದರೆ ಚಾಲಕನ ಗಮನ ಸ್ವಲ್ಪನೂ ತಪ್ಪಿದರೆ ಅಪಘಾತ ತಪ್ಪಿದ್ದಲ್ಲ. ಹಾಗಾಗಿ ರಾತ್ರಿ ಡ್ರೈವಿಂಗ್ ವೇಳೆ ಚಾಲಕ ಅತಿಯಾದ ಜಾಗರೂಕತೆ ವಹಿಸುವುದು ತುಂಬಾ ಉತ್ತಮ.

ಇನ್ನು ಧೀರ್ಘ ಪಯಣದ ಕುರಿತು ಮಾತನಾಡುವುದಾದರೆ ನಿದ್ರೆಗೆ ಜಾರಿಕೊಳ್ಳದಂತೆ ನೋಡಿಕೊಳ್ಳುವುದು ತುಂಬಾನೇ ಪ್ರಾಮುಖ್ಯವೆನಿಸುತ್ತದೆ. ವಿಶೇಷವಾಗಿಯೂ ಯುವಕರು ರಾತ್ರಿ ಪಯಣವನ್ನು ಇಷ್ಟಪಡುತ್ತಾರೆ.

ಇನ್ನು ನಿಮ್ಮಲ್ಲಿ ಭೀತಿ ಹುಟ್ಟಿಸುವ ವಿಷಯವನ್ನು ಬಹಿರಂಗಪಡಿಸುತ್ತಿದ್ದೇವೆ. ಅದೇನೆಂದರೆ ರಾತ್ರಿ ಪಯಣ ತುಂಬಾನೇ ಅಪಾಯಕಾರಿಯಾಗಿದ್ದು, ವಿಶ್ವದೆಲ್ಲೆಡೆ ನಡೆಯುವ ಹೆಚ್ಚಿನ ಅಪಘಾತಗಳಿಗೆ ರಾತ್ರಿ ಡ್ರೈವಿಂಗ್ ಕಾರಣ ಎಂಬ ಆಘಾತಕಾರಿ ವಿಚಾರವೊಂದನ್ನು ಸಮೀಕ್ಷೆ ಬಹಿರಂಗಪಡಿಸಿದೆ.

ಹಾಗಾಗಿ ನಮ್ಮ ಮೊದಲ ಸಲಹೆ ಏನೆಂದರೆ ರಾತ್ರಿ ಪಯಣವನ್ನು ಸಾಧ್ಯವಾದಷ್ಟು ದೂರಮಾಡಿದರೆ ಉತ್ತಮ. ಇನ್ನು ಕೆಲವು ಸಂದರ್ಭದಲ್ಲಿ ರಾತ್ರಿ ಪಯಣ ಅನಿವಾರ್ಯವೆನಿಸುತ್ತದೆ. ಹಾಗಿರುವಾಗ ನೈಟ್ ವೇಳೆಯಲ್ಲಿ ಚಾಲಕನು ಯಾವ ರೀತಿ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಅಥವಾ ಅವುಗಳನ್ನು ಹೇಗೆ ಪಾಲಿಸಬೇಕು ಎಂಬುದರ ಕುರಿತು ಡ್ರೈವ್ ಸ್ಪಾರ್ಕ್ ಮಾಹಿತಿ ನೀಡಲಿದೆ. ಖಂಡಿತವಾಗಿಯೂ ಸೇಫ್ ಡ್ರೈವಿಂಗ್‌ಗಾಗಿ ನೀವಿದನ್ನು ಪಾಲಿಸುವೀರಾ ಎಂಬ ನಂಬಿಕೆ ಡ್ರೈವ್ ಸ್ಪಾರ್ಕ್‌ ತಂಡಕ್ಕಿದೆ.

To Follow DriveSpark On Facebook, Click The Like Button
How To Drive At Night

ರಾತ್ರಿ ಪಯಣದ ಸಂದರ್ಭದಲ್ಲಿ ಚಾಲಕನ ಗಮನ ಪೂರ್ತಿ ಡ್ರೈವಿಂಗ್‌ನಲ್ಲಿರಬೇಕು. ತುಂಬಾ ಸುಸ್ತಾಗಿದ್ದರೆ ರಾತ್ರಿ ಪಯಣವನ್ನು ತಪ್ಪಿಸುವುದು ಒಳಿತು.

ವೇಗದಲ್ಲಿ ನಿಯಂತ್ರಣ ಸಾಧಿಸಿ

ವೇಗದಲ್ಲಿ ನಿಯಂತ್ರಣ ಸಾಧಿಸಿ

ರಾತ್ರಿ ಪಯಣದ ವೇಳೆ ಗತಿಯಲ್ಲಿ ನಿಯಂತ್ರಣ ಸಾಧಿಸುವುದು ಅತಿ ಅಗತ್ಯ. ಇದು ಸಂಭವಿಸಬಹುದಾದ ಅಪಘಾತವನ್ನು ದೂರ ಮಾಡಲಿದೆ. ಹಾಗೆಯೇ ಅಪರಿಚಿತ ರಸ್ತೆಗಳಲ್ಲಿ ಅಥವಾ ತಿರುವುಗಳಲ್ಲಿ ಸಂಚರಿಸುವಾಗ ಕಾರಿನ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ.

ನಿದ್ರಾದೇವಿಗೆ ಶರಣಾಗದಿರಿ

ನಿದ್ರಾದೇವಿಗೆ ಶರಣಾಗದಿರಿ

ರಾತ್ರಿ ವೇಳೆಯಲ್ಲಿ ಡ್ರೈವಿಂಗ್ ಮಾಡುವಾಗ ನಿದ್ರೆಗೆ ಜಾರದಂತೆ ಜಾಗರೂಕತೆ ವಹಿಸಬೇಕು. ಇದಕ್ಕಾಗಿ ಪಯಣದ ಮೊದಲೇ ನಿದ್ರೆ ಮಾಡುವುದು ಅಥವಾ ಪಯಣದ ಸಂದರ್ಭದಲ್ಲಿ ಆಪ್ತರನ್ನು ಕರೆದುಕೊಂಡು ಹೋಗುವುದು ನಿಮ್ಮ ನೆರವಿಗೆ ಬರಲಿದೆ. ಹಾಗೊಂದು ವೇಳೆ ನಿಮಗೆ ನಿದ್ರೆ ಬರುತ್ತಿದೆ ಎಂದು ಅನಿಸಿದ್ದಲ್ಲಿ ಸುರಕ್ಷಿತ ಜಾಗದ್ದಲ್ಲಿ ಕಾರು ನಿಲ್ಲಿಸಿ ಹೊರಗಿಳಿದ ಬಳಿಕ ಸ್ವಲ್ಪ ಹೊತ್ತು ಪ್ರಶಾಂತ ವಾಯು ಸೇವಿಸಿದ ಬಳಿಕ ನಿಮ್ಮ ಪಯಣವನ್ನು ಮುಂದುವರಿಸಬಹುದು.

ಇಂಡಿಕೇಟರ್ ಪ್ರಯೋಗ

ಇಂಡಿಕೇಟರ್ ಪ್ರಯೋಗ

ಅಪಘಾತಗಳು ಸಣ್ಣ ಸಣ್ಣ ತಪ್ಪುಗಳಿಂದ ಆಗುತ್ತಿರುತ್ತವೆ ಎಂಬುದನ್ನು ನಾವು ಅಲ್ಲಗಳೆಯಬಾರದು. ಹಾಗಾಗಿ ರಾತ್ರಿ ಸಯಮದಲ್ಲಿ ವಾಹನ ನಿಲ್ಲಿಸುವ ಸಂದರ್ಭದಲ್ಲಿ ಸೈಡ್ ಮಿರರ್‌ನ ಸಂಪೂರ್ಣ ಸದುಪಯೋಗ ಪಡೆಯಿರಿ ಹಾಗೆಯೇ ಹಿಂದಿನಿಂದ ಬರುವ ವಾಹನಗಳಿಗೆ ಸಂಪೂರ್ಣ ಗೌರವ ನೀಡಬೇಕು. ಅನಗತ್ಯ ಓವರ್‌ಟೇಕ್‌ಗಳನ್ನು ತಪ್ಪಿಸಿರಿ. ಅಂತೆಯೇ ಸಮಯೋಚಿತವಾಗಿ ಇಂಡಿಕೇಟರ್ ಪ್ರಯೋಗಿಸುವುದು ಅತಿ ಅಗತ್ಯವಾಗಿದೆ.

ನೊ ಶಾರ್ಟ್ ಕಟ್ ಪ್ಲೀಸ್

ನೊ ಶಾರ್ಟ್ ಕಟ್ ಪ್ಲೀಸ್

ರಾತ್ರಿ ಸಯಮದಲ್ಲಿ ಚಲಿಸುವ ವೇಳೆ ಶಾರ್ಟ್ ಕಟ್ ಪಡೆಯುವ ಸಂದರ್ಭವನ್ನು ಸಾಧ್ಯವಾದಷ್ಟು ದೂರಮಾಡಿ. ಹಾಗೆಯೇ ಕಳಪೆ ಮಟ್ಟದ ರಸ್ತೆ ಹಾಗೂ ಕಿರಿದಾದ ರಸ್ತೆಗಳಲ್ಲಿ ಸಂಚರಿಸುವುದು ತುಂಬಾನೇ ಅಪಾಯಕಾರಿ.

ಕಾರು ವಿಂಡೋಗಳ ಬಳಕೆ

ಕಾರು ವಿಂಡೋಗಳ ಬಳಕೆ

ರಾತ್ರಿ ಡ್ರೈವಿಂಗ್ ವೇಳೆ ವಾತಾವರಣ ತುಂಬಾನೇ ತಂಪಾಗಿದ್ದರೆ ಕಾರು ವಿಂಡೋಗಳನ್ನು ಮುಚ್ಚಿಡಬೇಕು. ವಾತಾವರಣ ಹೆಚ್ಚು ತಂಪಾಗಿರದಿದ್ದಲ್ಲಿ ವಿಂಡೋ ಸ್ವಲ್ಪ ತೆಗೆದಿಡಬಹುದು. ಇದರಿಂದ ಹಿಂದಿನಿಂದ ಬರುವ ವಾಹನಗಳ ಶಬ್ದಗಳನ್ನು ಸುಲಭವಾಗಿ ಆಲಿಸಬಹುದು. ಹಾಗೆಯೇ ಸ್ಟಿರಿಯೊ ಬಳಕೆ ಕೂಡಾ ಮಿತವಾಗಿರಿಸಿರಿ.

ಮದ್ಯಪಾನ ಮಾಡಿ ಚಾಲನೆ ಮಾಡದಿರಿ

ಮದ್ಯಪಾನ ಮಾಡಿ ಚಾಲನೆ ಮಾಡದಿರಿ

ಇದು ಎಲ್ಲ ಹಂತದಲ್ಲೂ ಡ್ರೈವಿಂಗ್‌ನಲ್ಲಿ ಪಾಲಿಸಬೇಕಾದ ಅತಿ ಅಗತ್ಯವಾದ ವಿಚಾರ. ಮದ್ಯಪಾನ ಮಾಡಿ ಚಾಲನೆ ಮಾಡುವುದರಿಂದ ಅಪಘಾತ ಕಟ್ಟಿಟ್ಟ ಬುತ್ತಿ. ಹಾಗಾಗಿ ರಾತ್ರಿ ವೇಳೆ ಡ್ರೈವಿಂಗ್ ಸಂದರ್ಭದಲ್ಲಿ ಸಣ್ಣ ಸಣ್ಣ ವಿಚಾರಗಳನ್ನು ಸಹ ನಿರ್ಲಕ್ಷಿಸದೇ ಜಾಗರೂಕರಾಗಿ ಡ್ರೈವಿಂಗ್ ಮಾಡುವುದು ಒಳಿತು. ಯಾಕೆಂದರೆ ಮತ್ತೊಂದು ಬದಿಯಲ್ಲಿ ಕುಟುಂಬದ ಸದಸ್ಯರು ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ನೀವು ಮರೆಯಬಾರದು.

English summary
Driving at night is wonderful, but it's dangerous also. If you are some one who likes to go on joy driving trips or night outs, please do follow some of the safe night driving tips below
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark