ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು 15 ಬಹುಮೂಲ್ಯ ಟಿಪ್ಸ್‌ಗಳು

By Nagaraja

ಮೈಲೇಜ್, ಮೈಲೇಜ್, ಮೈಲೇಜ್! ಇದು ಭಾರತೀಯ ವಾಹನೋದ್ಯಮದಲ್ಲಿ ಬಳಕೆಯಲ್ಲಿರುವ ಅತಿ ಸಾಮಾನ್ಯ ಪದ. ಪ್ರತಿಯೊಬ್ಬ ಗ್ರಾಹಕನೂ ಯಾವುದೇ ಒಂದು ಹೊಸತಾದ ಅಥವಾ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಮೊದಲು ಮೈಲೇಜ್ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಅದು ಬೈಕೇ ಹಾಗಿರಬಹುದು ಅಥವಾ ಕಾರು!

ಘಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ?

ಅಂದ ಹಾಗೆ ಪ್ರತಿಯೊಂದು ವಾಹನಗಳಿಗೂ ಭಾರತೀಯ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮೈಲೇಜ್ ಮಾನ್ಯತಾ ಸರ್ಟಿಫೀಕೇಟ್ ನೀಡಿರುತ್ತದೆ. ಇದು ನೈಜ ರಸ್ತೆ ಪರಿಸ್ಥಿತಿಗೂ ಭಿನ್ನವಾಗಿದ್ದರೂ ವಾಹನ ಮಾರಾಟ ವೇಳೆ ಇದೇ ಪ್ರಯಾಣವನ್ನು ಸಂಸ್ಥೆಗಳು ಬಳಸಿಕೊಳ್ಳುತ್ತವೆ. ಅಷ್ಟಕ್ಕೂ ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಿಕೊಳ್ಳುವುದಾದರೂ ಹೇಗೆ? ಪ್ರತಿಯೊಬ್ಬ ಗ್ರಾಹಕನು ಸಹ ಅತ್ಯಂತ ಕಡಿಮೆ ಖರ್ಚಿನಲ್ಲಿ ತಮ್ಮ ವಾಹನ ಚಾಲನೆ ಮಾಡಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಿರುವ ನಮ್ಮ ಡ್ರೈವ್‌ಸ್ಪಾರ್ಕ್ ತಂಡವು ನಿಮ್ಮ ಕಾರಿನಿಂದ ಗರಿಷ್ಠ ಮೈಲೇಜ್ ಹೇಗೆ ಗಿಟ್ಟಿಸಿಕೊಳ್ಳಬಹುದು ಎಂಬುದರ ಬಗ್ಗೆ 15 ಪಾಯಿಂಟ್‌ಗಳ ಮೂಲಕ ಮಾಹಿತಿಯನ್ನು ಕೊಡಲಿದ್ದೇವೆ.

ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು 15 ಬಹುಮೂಲ್ಯ ಟಿಪ್ಸ್‌ಗಳು

ಖಂಡಿತವಾಗಿಯೂ ಇಲ್ಲಿ ಕೊಡಲಾಗಿರುವ ಅಮೂಲ್ಯ 15 ಟಿಪ್ಸ್‌ಗಳು ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು ನೆರವಿಗೆ ಬರುವ ನಂಬಿಕೆ ನಮ್ಮದ್ದು. ಇದಕ್ಕಾಗಿ ಒಂದೊಂದೇ ಸ್ಲೈಡರ್ ಕ್ಲಿಕ್ಕಿಸುತ್ತಾ ಮುಂದೆ ಸಾಗಿರಿ...

1. ನಿಧಾನವಾಗು

1. ನಿಧಾನವಾಗು

ಬಹುತೇಕ ಕಾರುಗಳು ಗಂಟೆಗೆ 60ರಿಂದ 80 ಕೀ.ಮೀ. ವೇಗತೆಯಲ್ಲಿ ಸಂಚರಿಸಿದ್ದಲ್ಲಿ ಅತ್ಯುತ್ತಮ ಇಂಧನ ಕ್ಷಮತೆಯನ್ನು ನೀಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮೇಲೆ ತಿಳಿಸಲಾದ ವೇಗತೆಯಲ್ಲಿ ಕಾರು ಚಾಲನೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ಗಂಟೆಗೆ 80-90 ಕೀ.ಮೀ.ಗಿಂತಲೂ ಹೆಚ್ಚು ವೇಗತೆಯಲ್ಲಿ ಚಲಿಸಿದ್ದಲ್ಲಿ ಇಂಧನ ಕ್ಷಮತೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಹಾಗೆಯೇ ಟ್ರಾಫಿಕ್ ಪ್ರದೇಶಗಳಲ್ಲಿ ಎರಡು ಕಾರುಗಳ ನಡುವಣ ಅಂತರ ಕಡಿಮೆ ಮಾಡುವ ಗೋಜಿಗೆ ಹೋಗದೇ ಸಾಧ್ಯವಾದಷ್ಟು ಸ್ಥಿರವಾದ ವೇಗತೆ ಕಾಪಾಡಲು ಪ್ರಯತ್ನಿಸಿರಿ.

2. ನಯವಾದ ಚಾಲನೆ

2. ನಯವಾದ ಚಾಲನೆ

ಬಹುಶ: ಇದು ಹೆಚ್ಚಿನ ಇಂಧನ ದಕ್ಷತೆ ಪಡೆಯಲಿರುವ ಅತ್ಯುತ್ತಮ ಸಲಹೆಯಾಗಿರಲಿದೆ. ಕಾರಿನಲ್ಲಿ ಸಂಚರಿಸುವಾಗ ಗೇರ್ ಬದಲಾವಣೆ ಹಾಗೂ ವೇಗವರ್ಧನೆಯನ್ನು (accelerator) ನಯವಾಗಿ ಬಳಕೆ ಮಾಡಿ. ಇದಕ್ಕಾಗಿ ಈ ರೀತಿಯಾಗಿ ಊಹೆ ಮಾಡಿ. ನಿಮ್ಮ ವೇಗವರ್ಧನೆಯ ಪೆಡಾಲ್‌ನಲ್ಲಿ ಮೊಟ್ಟೆಯನ್ನಿರಿಸಿಕೊಳ್ಳಲಾಗಿದೆ ಎಂದಿಟ್ಟುಕೊಳ್ಳಿ. ಸಹಜವಾಗಿಯೇ ಮೊಟ್ಟೆ ಒಡೆಯದಿರಲು ನೀವು ನಿಧಾನವಾಗಿ ಪೆಡಲು ಅದುಮುತ್ತೀರಿ ತಾನೇ? ಇದು ನಿಮ್ಮ ಆಕ್ಸಿಲೇಟರ್ ನಯವಾಗಿ ಕೆಲಸ ಮಾಡಲು ನೆರವಾಗುತ್ತದೆ. ಇದರ ಜೊತೆಗೆ ಸಿಗ್ನಲ್ ಅಥವಾ ವಾಹನವನ್ನು ನಿಲ್ಲಿಸಲು ಬಯಸಿದ್ದಲ್ಲಿ ತುರಂತ್ ಆಗಿ ಬ್ರೇಕ್ ಅದುಮಲು ಹೋಗದೇ ನಿಧಾನವಾಗಿ ಸ್ವಲ್ಪ ಸ್ವಲನೇ ಬ್ರೇಕ್ ಅದುಮಿರಿ.

3. ಸರಿಯಾದ ರೀತಿಯಲ್ಲಿ ಗೇರ್ ಬಳಕೆ

3. ಸರಿಯಾದ ರೀತಿಯಲ್ಲಿ ಗೇರ್ ಬಳಕೆ

ಹೆಚ್ಚಿನ ಮೈಲೇಜ್ ಗಿಟ್ಟಿಸಿಕೊಳ್ಳಲು ಸಹಜ ಚಾಲನಾ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ. ನಾವು ನೋಡಿರುವಂತೆಯೇ ಅನೇಕ ಮಂದಿ ಚಾಲಕರು ವಾಹನ ಚಲಿಸುತ್ತಿರುವಾಗಿ ಗೇರ್ ಕಡಿಮೆ (low Gear) ಮಾಡಲು ಮರೆತುಬಿಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ರಸ್ತೆ ಬದಿಯಲ್ಲಿ ನಿಂತು ಮೇಲ್ಖುಖವಾಗಿ ಚಲಿಸುತ್ತಿರುವ ಅಥವಾ ಸ್ಪೇಡ್ ಬ್ರೇಕರ್ ದಾಟುತ್ತಿರುವ ವಾಹನಗಳನ್ನು ವೀಕ್ಷಿಸಿದರೆ ಇದು ನಿಮ್ಮ ಗಮನಕ್ಕೆ ಬರಲಿದೆ. ಈ ವೇಳೆ ವಿಚಿತ್ರವಾದ ಶಬ್ದ ನಿಮ್ಮ ಗಮನಕ್ಕೆ ಬಂದಿರಬಹುದು. ಇದರ ಮರ್ಮ ಏನೆಂದರೆ ಚಾಲಕರ ಸೋಮಾರಿತನ ಅಥವಾ ತಿಳಿದೋ ತಿಳಿಯದೆಯೋ ಗೇರ್ ಶಿಫ್ಟ್ (downshifting) ಕಡಿಮೆ ಮಾಡಲು ಮರೆತುಬಿಡುತ್ತಾರೆ. ಇಲ್ಲಿ ಇಂಧನ ಬಚತ್ ಆಗುವ ಬದಲು ಹೆಚ್ಚು ಪೋಲಾಗುತ್ತದೆ. ಇದರ ಮಗದೊಂದು ಕೆಟ್ಟ ಪರಿಣಾಮವೆಂದರೆ ದೀರ್ಘ ಬಾಳ್ವಿಕೆ ದೃಷ್ಟಿಯಲ್ಲಿ ಕಾರಿಗೆ ಕೇಡು ಸಂಭವಿಸುವ ಭೀತಿಯೂ ಇದೆ. ಹಾಗಾಗಿ ಗೇರ್ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿರಿ.

4. ಟ್ರಾಫಿಕ್‌ಗಳಲ್ಲಿ ಗಾಡಿ ಆಫ್ ಮಾಡಿ

4. ಟ್ರಾಫಿಕ್‌ಗಳಲ್ಲಿ ಗಾಡಿ ಆಫ್ ಮಾಡಿ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಂದೊಂದು ಸಾಧಾರಣ ನಿಯಮ. ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ 30 ಸೆಕೆಂಡುಗಳಿಗಿಂತಲೂ ಹೆಚ್ಚು ಸಮಯ ವಾಹನ ನಿಲ್ಲಿಸುತ್ತಿದ್ದಲ್ಲಿ ನಿಮ್ಮ ಗಾಡಿಯ ಎಂಜಿನ್ ಆಫ್ ಮಾಡಿರಿ. ಇಲ್ಲಿ ಗಮನ ಹರಿಸಬೇಕಾದ ವಿಷಯವೆಂದರೆ ಯಾವುದೇ ಕಾರಣಕ್ಕೂ ಕೆಲವೇ ಕೆಲವು ಸೆಕೆಂಡುಗಳಿಗಾಗಿ ಗಾಡಿ ಆಫ್ ಮಾಡಬೇಡಿರಿ. ಯಾಕೆಂದರೆ ಎಂಜಿನ್ ಸ್ಟಾರ್ಟ್ ಆಗಲು ಮತ್ತೆ ಇಂಧನ ವ್ಯಯವಾಗಲಿದೆ ಎಂಬದನ್ನು ನೆನಪಿನಲ್ಲಿಟ್ಟಕೊಳ್ಳಿರಿ.

5. ಎಸಿ ಮಿತವಾಗಿ ಬಳಸಿ

5. ಎಸಿ ಮಿತವಾಗಿ ಬಳಸಿ

ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಸ್ವಚ್ಛಂದವಾಗಿ ಸಂಚರಿಸುವುದು ತುಂಬಾ ಕಷ್ಟಕರ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹಾಗೂ ತಾಪಮಾನ ಏರಿಕೆಯಿಂದಾಗಿ ಎಸಿ ಬಳಕೆ ಮಾಡಲು ಪ್ರೇರಿತರಾಗುತ್ತೀರಿ. ಆದರೆ ಎಸಿಯಿಂದಾಗಿ ಹೆಚ್ಚು ಪವರ್ ಹಾಗೂ ಇಂಧನ ವ್ಯಯವಾಗುತ್ತದೆ. ಈ ನಿಟ್ಟಿನಲ್ಲಿ ವಾತಾವರಣ ಸಹನೀಯವಾದ್ದಲ್ಲಿ ಎಸಿ ಆಫ್ ಮಾಡಿರಿ. ಹಾಗೊಂದು ನಿಮ್ಮ ಕಾರಲ್ಲಿ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಯಿದ್ದಲ್ಲಿ, ಅದನ್ನು ಆಟೋ ಮೋಡ್‌ನಲ್ಲಿಟ್ಟು, ಏರ್ ಕಾನ್ ಕಡಿಮೆ ಮಾಡಿರಿ. ಇದು ಕಡಿಮೆ ಇಂಧನಕ್ಕೆ ವ್ಯಯವಾಗಲು ಸಹಕಾರಿಯಾಗಲಿದೆ. ಇನ್ನುಳಿದಂತೆ ಹೆದ್ದಾರಿಗಳಲ್ಲಿ ವೇಗದಲ್ಲಿ ಚಲಿಸುವಾಗ ವಿಂಡೋಗಳನ್ನು ಮುಚ್ಚಿಟ್ಟುಕೊಂಡು ಎಸಿ ಬಳಕೆ ಮಾಡುವುದು ಸೂಕ್ತ.

6. ಟೈರ್ ಒತ್ತಡ

6. ಟೈರ್ ಒತ್ತಡ

ಇದನ್ನು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಶಿಫಾರಸು ಮಾಡಲಾದ ಟೈರ್ ಒತ್ತಡ ನಿರ್ವಹಣೆಯಿಂದ ನಿಮ್ಮ ಕಾರಿನ ಮೈಲೇಜ್ ಶೇಕಡಾ ಮೂರರಷ್ಟು ಹೆಚ್ಚಲಿದೆ. ಇಂದೊಂದು ಚಿಕ್ಕ ವಿಚಾರವಾದರೂ, ದೀರ್ಘ ಬಾಳ್ವಿಕೆಯ ವಿಚಾರದಲ್ಲಿ ಮಹತ್ವದೆನಿಸುತ್ತದೆ. ಹಾಗೆಯೇ ಕಡಿಮೆ ಉರುಳುವಿಕೆ ಪ್ರತಿರೋಧಕ ಟೈರ್ (lower rolling resistance) ಲಗತ್ತಿಸುವುದರಿಂದ ಹೆಚ್ಚು ಶಕ್ತಿ ವ್ಯಯವಾಗುವುದನ್ನು ಕಡಿಮೆ ಮಾಡಲಿದೆ. ಹಾಗೊಂದು ವೇಳೆ ಸಣ್ಣ ಚಕ್ರಗಳಲ್ಲಿ ಅಲಾಯ್ ವೀಲ್ ಲಗತ್ತಿಸಿದ್ದಲ್ಲಿ ಪೂರ್ವ ರೂಪಕ್ಕೆ ಬರುವುದು (ಸಾಮಾನ್ಯ ಚಕ್ರಗಳ ಬಳಕೆ) ಉತ್ತಮ. ಇದು ದೀರ್ಘ ಪಯಣದಲ್ಲಿ ಇಂಧನ ಉಳಿಸಲು ನೆರವಾಗಲಿದೆ. ಗರಿಷ್ಠ ನಿರ್ವಹಣೆಯ ಚಕ್ರಗಳು ಅತ್ಯಧಿಕ ಗ್ರಿಪ್ ಹಾಗೂ ಹ್ಯಾಂಡ್ಲಿಂಗ್ ಪ್ರದಾನ ಮಾಡುತ್ತಿದ್ದರೂ ಸಹಜವಾಗಿಯೇ ಹೆಚ್ಚು ರೊಲ್ಲಿಂಗ್ ರೆಸಿಸ್ಟನ್ಸ್ ಬೇಕಾಗುವುದರಿಂದ ಇಂಧನ ಸಹ ಹೆಚ್ಚು ವ್ಯಯವಾಗುತ್ತದೆ.

7. ನಿಯಮಿತವಾಗಿ ಕಾರು ಸರ್ವೀಸ್ ಮಾಡಿಸಿ

7. ನಿಯಮಿತವಾಗಿ ಕಾರು ಸರ್ವೀಸ್ ಮಾಡಿಸಿ

ಸರಿಯಾಗಿ ಸರ್ವೀಸ್ ಮಾಡದ ಕಾರುಗಳಿಂದ ಉತ್ತಮ ಮೈಲೇಜ್ ನಿರೀಕ್ಷಿಸುವುದು ತಪ್ಪು. ಈ ನಿಟ್ಟಿನಲ್ಲಿ ನಿಯಮಿತವಾಗಿ ಕಾರನ್ನು ಸರ್ವೀಸ್ ಮಾಡಿಸಿಕೊಳ್ಳಿರಿ. ಏರ್ ಫಿಲ್ಟರ್, ಫ್ಯೂಯಲ್ ಫಿಲ್ಟರ್ ಹಾಗೂ ಸ್ಪಾರ್ಕ್ ಪ್ಲಗ್‌ಗಳನ್ನು ಪರಿಶೀಲಿಸುವುದನ್ನು ರೂಢಿ ಮಾಡಿಸಿಕೊಳ್ಳಿ. ಜತೆಗೆ ಪ್ರತಿ 60,000 ಕೀ.ಮೀ.ಗಳಿಗೆ ಕಾರಿನ ಓಕ್ಸಿಜನ್ ಸೆನ್ಸಾರ್ ಪರೀಶೀಲಿಸಿಕೊಳ್ಳಿ. ಕೆಟ್ಟು ಹೋದ ಓಕ್ಸಿಜನ್ ಸೆನ್ಸಾರ್ ಬಳಕೆಯಿಂದ ಶೇಕಡಾ 20ರಷ್ಟು ಹೆಚ್ಚು ಇಂಧನ ವ್ಯಯವಾಗುತ್ತದೆ ಎಂಬುದನ್ನು ತಜ್ಞರೇ ಹೇಳುತ್ತಾರೆ. ಎಂಜಿನ್ ಕಂಟ್ರೋಲ್ ಸಿಸ್ಟಂನ ಭಾಗವಾಗಿರುವ ಓಕ್ಸಿಜನ್ ಸೆನ್ಸಾರ್, ಎಂಜಿನ್ ಪರಿಣಾಮಕಾರಿಯಾಗಿ ಚಾಲನೆ ಮಾಡಲು ಸಹಕಾರಿಯಾಗುತ್ತದೆ.

8. ಕಾರನ್ನು ಹಗುರವಾಗಿಸಿ

8. ಕಾರನ್ನು ಹಗುರವಾಗಿಸಿ

ನಿಮ್ಮ ಕಾರಿನ ಭಾರ ಹೆಚ್ಚಾದಷ್ಟು ಹೆಚ್ಚು ಇಂಧನ ಪೋಲಾಗುತ್ತದೆ. ಹಾಗಾಗಿ ಅವಶ್ಯಕವಲ್ಲದ ಲಗ್ಗೇಜ್‌ಗಳನ್ನು ಕಾರಿನಿಂದ ಹೊರಗಿಡಿರಿ. ಇದು ಇಂಧನ ಕ್ಷಮತೆಯ ಜೊತೆ ಕಾರು ನಯವಾಗಿ ಚಾಲನೆ ಮಾಡಲು ನೆರವಾಗಲಿದೆ.

9. ತಂಪಾದ ದಿನಗಳಲ್ಲಿ ಇಂಧನ ಖರೀದಿಸಿ

9. ತಂಪಾದ ದಿನಗಳಲ್ಲಿ ಇಂಧನ ಖರೀದಿಸಿ

ಕೂಲಾದ ಇಂಧನ ಸಾಂದ್ರತೆ ಹೆಚ್ಚಲಿದೆ. ಹಾಗಾಗಿ ಬೆಳ್ಳಂಬೆಳಗ್ಗೆ ಬೇಗನೇ ಎದ್ದು ಇಂಧನ ತುಂಬಿಸುವುದು ಉತ್ತಮ. ಈ ಸಂದರ್ಭದಲ್ಲಿ ಪಂಪ್‌ಗಳು ಪರಿಮಾಣಕ್ಕೆ ತಕ್ಕ ಇಂಧನ ಅಳತೆ ಮಾಡುವುದರಿಂದ ನಿಮ್ಮ ಹಣಕ್ಕೆ ತಕ್ಕ ಇಂಧನ ದೊರೆಯಲು ನೆರವಾಗಲಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ಬೆಳಗ್ಗಿನ ಸಮಯದಲ್ಲೇ ಇಂಧನ ತುಂಬಿಸುವುದು ಉತ್ತಮ. ಪೆಟ್ರೋಲ್ ತುಂಬಿಸಿದ ಬಳಿಕ ಫ್ಯೂಯಲ್ ಕ್ಯಾಪ್ ಸರಿಯಾಗಿ ಮುಚ್ಚಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಮರೆಯದಿರಿ.

10. ಮುಂಚಿತವಾಗಿ ಪ್ರವಾಸ ನಿಗದಿಪಡಿಸಿ

10. ಮುಂಚಿತವಾಗಿ ಪ್ರವಾಸ ನಿಗದಿಪಡಿಸಿ

ವಾರಂತ್ಯದ ಪಯಣಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸುಮ್ ಸುಮ್ಮನೇ ಶಾಂಪಿಗ್ ಮಾಲ್, ಕಾಪಿ ಶಾಪ್‌ಗಳಿಗೆ ತೆರಳುವುದಕ್ಕಾಗಿ ಕಾರುಗಳಲ್ಲಿ ವ್ಯರ್ಥ ತಿರುಗಾಡುವುದಕ್ಕಿಂತಲೂ ಮೊದಲು ನಿಮ್ಮ ಪ್ರವಾಸವನ್ನು ಪೂರ್ವಯೋಜಿತವಾಗಿ ನಿಗದಿಪಡಿಸಿದರೆ ಒಳಿತು. ಬಳಿಕ ಇದಕ್ಕೆ ತಕ್ಕ ರೀತಿಯಲ್ಲಿ ರೂಟ್ ಪ್ಲಾನ್ ಮಾಡಿ. ಇನ್ನು ಟ್ರಾಫಿಕ್ ಜಾಮ್ ಮುಂತಾದವುಗಳನ್ನು ತಪ್ಪಿಸಲು ಜಿಪಿಎಸ್ ಸಹ ನೆರವಿಗೆ ಬರಲಿದೆ.

11. ಶಿಫಾರಸು ಮಾಡಿರುವ ಇಂಧನ ಬಳಕೆ ಮಾಡಿ

11. ಶಿಫಾರಸು ಮಾಡಿರುವ ಇಂಧನ ಬಳಕೆ ಮಾಡಿ

ಕೆಲವೊಂದು ಪಂಪ್ ಗಟ್ಟೆಗಳಲ್ಲಿ 'ಸ್ಪೆಷಲ್ ಇಂಧನ'ಗಳೆಂಬ ಬೋರ್ಡ್‌ಗಳನ್ನು ಲಗತ್ತಿಸಿರುವುದು ಗಮನಿಸಿರಬಹುದು. ಇದು ಹೆಚ್ಚು ಮೈಲೇಜ್ ನೀಡುತ್ತದೆ ಎಂಬುದನ್ನು ಅಧಿಕೃತರು ವಾದಿಸಬಹುದು. ಆದರೆ ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅರಿತುಕೊಳ್ಳಿ. ಯಾಕೆಂದರೆ ಅಂತಹ ಇಂಧನಗಳ ಪ್ರಯೋಜನ ಪಡೆಯಬಹುದಾದ ಎಂಜಿನ್ ವಿನ್ಯಾಸ ನಿಮ್ಮ ಕಾರು ಪಡೆದುಕೊಂಡಿರಬೇಕೇಂದಿಲ್ಲ. ಈ ಮೂಲಕ ಹಣ ಉಳಿಸುವ ಬದಲು ಇಂಧನಕ್ಕಾಗಿ ಹೆಚ್ಚು ಹಣ ವ್ಯಯವಾಗುತ್ತದೆ. ಹಾಗಾಗಿ ವಾಹನ ತಯಾರಕರು ಶಿಫಾರಸು ಮಾಡಿರುವ ಇಂಧನ ಹಾಗೂ ಎಂಜಿನ್ ಆಯಿಲ್‌ಗಳನ್ನೇ ಬಳಕೆ ಮಾಡಲು ಪ್ರಯತ್ನಿಸಿ.

12. ಆಟೋಮ್ಯಾಟಿಕ್ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿ ಚಾಲನೆ ಮಾಡಿರಿ

12. ಆಟೋಮ್ಯಾಟಿಕ್ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿ ಚಾಲನೆ ಮಾಡಿರಿ

ಸಾಧ್ಯವಾದ್ದಲ್ಲಿ ನಿಮ್ಮ ಆಟೋಮ್ಯಾಟಿಕ್ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿಯೇ ಚಾಲನೆ ಮಾಡಲು ಪ್ರಯತ್ನಿಸಿ. ಸಾಧಾರಣವಾಗಿ ಆಟೋಮ್ಯಾಟಿಕ್ ಬಾಕ್ಸ್‌ಗಳಲ್ಲಿ ನಿರ್ದಿಷ್ಟ ವೇಗದ ಬಳಿಕವೇ ಅಪ್‌ಶಿಫ್ಟ್ ಮಾಡಲಾಗುತ್ತದೆ. ಇಲ್ಲಿ ಅಪ್‌ಶಿಫ್ಟ್ ವೇಳೆ ಸರಿಯಾದ ಟಾರ್ಕ್ ಜತೆಗೆ ಇಂಧನ ವ್ಯಯವಾಗುತ್ತದೆ. ಆದರೆ ಸಾಧಾರಣವಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ಗಳಲ್ಲಿ ಕಡಿಮೆ ಟಾರ್ಕ್ ಅಗತ್ಯವಿರುವ ಸಂದರ್ಭಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಪರಿಣಾಮವಾಗಿ ಎಂಜಿನ್ ಅಗತ್ಯಕ್ಕಿಂತಲೂ ಕಡಿಮೆ ಗೇರ್‌ನಲ್ಲಿದ್ದರೆ ಇಂಧನ ಹೆಚ್ಚು ವ್ಯಯವಾಗಲಿದೆ. ಹಾಗಾಗಿ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿಡುವುದರಿಂದ ಸಹಜ ಚಾಲನೆಗೆ ಎಡೆಮಾಡಿಕೊಡಲಿದ್ದು, ಇಂಧನ ವೃದ್ಧಿಗೆ ನೆರವಾಗಲಿದೆ. ವಿ.ಸೂ: ಎಲ್ಲ ಆಟೋಮ್ಯಾಟಿಕ್ ಕಾರಿನಲ್ಲೂ ಮ್ಯಾನುವಲ್ ಮೋಡ್ ಇರುವುದಿಲ್ಲ. ಉದಾಹರಣೆಗೆ ಹ್ಯುಂಡೈ ಐ10 ಕಾರುಗಳಲ್ಲಿ ಬೇಸಿಕ್ ಆಟೋಮ್ಯಾಟಿಕ್ ತಂತ್ರಜ್ಞಾನ ಆಳವಡಿಸಲಾಗಿದ್ದು, ಮ್ಯಾನುವಲ್ ಮೋಡ್ ಇರುವುದಿಲ್ಲ. ಅದೇ ಹೊತ್ತಿಗೆ ಬಿಎಂಡಬ್ಲ್ಯುಗಳಂತಹ ಐಷಾರಾಮಿ ಕಾರುಗಳಲ್ಲಿ ಇದರ ಪ್ರಯೋಜನ ಪಡೆಯಬಹುದಾಗಿದೆ. (ನೀವಿಲ್ಲಿ ಬಿಎಂಡಬ್ಲ್ಯು ಕಾರಿನ ಗೇರ್ ಬಾಕ್ಸ್ ಚಿತ್ರವನ್ನು ನೋಡಬಹುದು.)

13. ಘನ ವಾಹನಗಳನ್ನು ಹಿಂಬಾಲಿಸಿ

13. ಘನ ವಾಹನಗಳನ್ನು ಹಿಂಬಾಲಿಸಿ

ನಿಮ್ಮ ಗುರಿ ಮುಟ್ಟಲು ಆತುರವಿಲ್ಲದಿದ್ದರೆ ಇದನ್ನೊಮ್ಮೆ ಅನುಸರಿಸಿ. ಘನ ವಾಹನಗಳನ್ನು ಹಿಂಬಾಲಿಸುವುದರಿಂದ ಒತ್ತಡ ಮುಕ್ತ ಚಾಲನೆಯನ್ನು ಪ್ರದಾನ ಮಾಡಲಿದೆ. ಸಾಮಾನ್ಯವಾಗಿ ಇಂತಹ ವಾಹನಗಳು ಸರಿಯಾದ ಲೇನ್ ಪಾಲಿಸುತ್ತಿದ್ದು, ಟ್ರಾಫಿಕ್ ಅಥವಾ ಹೈವೇ ಪರಿಸ್ಥಿತಿಯನ್ನು ತ್ವರಿತ ರೀತಿಯಲ್ಲಿ ನಿಭಾಯಿಸುತ್ತದೆ. ಸಹಜವಾಗಿಯೇ ಟ್ರಕ್ ಅಥವಾ ಬಸ್ಸುಗಳಿಂದ ಸುರಕ್ಷಿತ ಅಂತರ ಕಾಪಾಡುತ್ತಾ ಚಲಿಸಿದ್ದಲ್ಲಿ ಎಂಜಿನ್ ಸಹ ಒತ್ತಡ ರಹಿತವಾಗಲಿದೆ. ಸದ್ಯ ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಹೀಗೆ ಮಾಡುವುದು ಪ್ರಯಾಸಕರ.

14. ಸ್ಟಾರ್ಟ್ ಮಾಡುವ ಮೊದಲು ಚಾಲನೆಗೆ ಸಿದ್ಧರಾಗಿ

14. ಸ್ಟಾರ್ಟ್ ಮಾಡುವ ಮೊದಲು ಚಾಲನೆಗೆ ಸಿದ್ಧರಾಗಿ

ಇದು ಎಲ್ಲರಲ್ಲೂ ಸಂಭವಿಸಬಹುದಾದ ದೋಷವಾಗಿದೆ. ಸಾಧಾರಣವಾಗಿ ಚಾಲಕರು ಕಾರು ಸ್ಟಾರ್ಟ್ ಮಾಡಿದ ಬಳಿಕವಷ್ಟೇ, ಸನ್ ಗ್ಲಾಸ್ ಕೆಳಕ್ಕೆ ಮಾಡುವುದು, ಸೀಟು ಬೆಲ್ಟ್ ಧರಿಸುವುದು, ಡೋರ್ ಲಾಕ್ ಮಾಡುವುದು ಮುಂತಾದ ಪ್ರಕ್ರಿಯೆಗಳನ್ನು ಮಾಡುತ್ತಿರುತ್ತಾರೆ. ಇದು ತುಂಬಾನೇ ಚೊಕ್ಕದಾದ ವಿಷಯವಾಗಿ ಅನಿಸಿದರೂ ಮೊದಲು ಇಂತಹ ಮೂಲಭೂತ ಪ್ರಕ್ರಿಯೆಗಳನ್ನು ಮಾಡಿದರೆ ಪ್ರತಿ ದಿನವೂ ಒಂದು ಅಥವಾ ಎರಡು ನಿಮಿಷಗಳಷ್ಟು ಕಾಲ ವ್ಯರ್ಥವಾಗುವ ಐಡೆಲಿಂಗ್ ಇಂಧನವನ್ನು ಉಳಿಸಬಹುದಾಗಿದೆ.

15. ರಿವರ್ಸ್ ಪಾರ್ಕ್

15. ರಿವರ್ಸ್ ಪಾರ್ಕ್

ನಿಮ್ಮ ದೈನಂದಿನ ಚಟುವಟಿಕೆಗಳ ಬಳಿಕ ಮನೆಗೆ ಹಿಂತಿರುಗಿದ ಬಳಿಕ ಮೇಲೆ ತಿಳಿಸಿದ ರೀತಿಯಲ್ಲೇ ನಿಮ್ಮ ಕಾರನ್ನು ರಿವರ್ಸ್ ಪಾರ್ಕ್ ಮಾಡಿಟ್ಟುಕೊಳ್ಳಿರಿ. ಇದರಿಂದ ಬೆಳಗ್ಗಿನ ಜಾವದಲ್ಲಿ ಎಂಜಿನ್ ಕೂಲಾಗಿದ್ದಾಗ ರಿವರ್ಸ್ ಮಾಡುವ ಗೋಜಿನಿಂದ ತಪ್ಪಿಸಬಹುದಾಗಿದೆ. ಈ ಮೂಲಕ ಬಹುಮೂಲ್ಯ ಇಂಧನವನ್ನು ಬಚತ್ ಮಾಡಬಹುದಾಗಿದೆ. ವಿ.ಸೂ: ಸಮತಲ ಪಾರ್ಕಿಂಗ್ ಪ್ರದೇಶ ಹೊಂದಿದವರು ಮಾತ್ರ ಹೀಗೆ ಮಾಡಬೇಕು. ಇಲ್ಲದಿದ್ದಲ್ಲಿ ಮೇಲ್ಗುಖದತ್ತ ರಿವರ್ಸ್ ಮಾಡುವುದರಿಂದ ಹೆಚ್ಚಿನ ಇಂಧನ ವ್ಯಯವಾಗಲಿದೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು 15 ಬಹುಮೂಲ್ಯ ಟಿಪ್ಸ್‌ಗಳು

ಈ ಉಪಯುಕ್ತ ಲೇಖನ ನಿಮ್ಮ ನೆರವಿಗೆ ಬಂದಿರುವ ವಿಶ್ವಾಸ ನಮ್ಮದ್ದು. ಇದು ಇಂಧನ ಜತೆಗೆ ನಿಮ್ಮ ದುಡ್ಡನ್ನು ಉಳಿತಾಯ ಮಾಡಲಿದೆ. ಈ ಎಲ್ಲ ಸಲಹೆಗಳನ್ನು ಅನುಸರಿಸುವುದರಿಂದ ಖಂಡಿತವಾಗಿಯೂ ದೀರ್ಘ ಪಯಣದಲ್ಲಿ ಗಮನಾರ್ಹ ಫಲಿತಾಂಶ ಕಾಣಲಿದೆ. ಹಾಗೊಂದು ವೇಳೆ ಕೆಲವೊಂದು ಮಹತ್ವದ ಟಿಪ್ಸ್‌ಗಳನ್ನು ನಾವಿಲ್ಲಿ ಉಲ್ಲೇಖಿಸಲು ಮಿಸ್ ಮಾಡಿಕೊಂಡಿದ್ದೇವೆ ಎಂಬ ಭಾವನೆ ನಿಮ್ಮಲ್ಲಿದ್ದರೆ ನಿಮ್ಮ ಚಾಲನಾ ಅನುಭವದ ಮಹತ್ವದ ಟಿಪ್ಸ್‌ಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Most Read Articles

Kannada
English summary
We’ve put together a list of to-dos to get the most mileage out your car, but safely and without doing your car harm. We hope that these tips will not only keep the wallet from shedding weight, but make you a more aware and improved driver.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X