ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಕಳೆದ ಕೆಲವಾರು ತಿಂಗಳುಗಳಿಂದ ಪೆಟ್ರೋಲ್ ದರವಂತೂ ಕಡಿಮೆಯಾಗುವ ಮಾತೇ ಇಲ್ಲ. ಡೀಸೆಲ್ ಕೂಡ ಹೆಚ್ಚು ದಿನ ಅಗ್ಗವಾಗಿ ಉಳಿಯುವ ನಿರೀಕ್ಷೆಯಿಲ್ಲ. ಇಂತಹ ಸಮಯದಲ್ಲಿ ಕಿಸೆಯಲ್ಲಿ ದುಡ್ಡು ಉಳಿಯಬೇಕಾದರೆ ನಮ್ಮ ನಮ್ಮ ಕಾರುಗಳ ಮೈಲೇಜ್ ಹೆಚ್ಚಿಸಲೇಬೇಕು. ಹಾಗಾದ್ರೆ ಕಾರುಗಳ ಮೈಲೇಜ್ ಹೆಚ್ಚಿಸೋದು ಹೇಗೆ? ನೋಡೋಣ ಬನ್ನಿ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಇಂಧನ ಸಮರ್ಥ ವಾಹನವನ್ನು ಆರಿಸಿಕೊಳ್ಳಬೇಕು

ಅಂದರೆ ನಮ್ಮ ಬಜೆಟ್‌ಗೆ ಸಂಭಂಧಿಸಿದಂತೆ ಅದರಲ್ಲಿ ಯಾವ ಕಾರಿಗೆ ಉತ್ತಮ ಎಂಜಿನ್‌ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಇದೆಯೋ ಅಂತಹ ಇಂಜಿನನ್ನು ನಾವು ಆರಿಸಿಕೊಳ್ಳಬೇಕು. ಅದಕ್ಕಾಗಿ ಹಲವಾರು ವೆಬ್‌ಸೈಟ್‌ಗಳಲ್ಲಿ ಯಾವ ಯಾವ ಕಾರು ಎಷ್ಟೆಷ್ಟು ಇಂಧನ ಆರ್ಥಿಕತೆಯ ರೇಟಿಂಗ್‌ ಅನ್ನು ಪಡೆದಿದೆ ಎಂದು ತಜ್ಙರ ಸಹಾಯದಿಂದ ವಿವರಿಸಿರುತ್ತಾರೆ. ನಾವು ಕಾರು ತೆಗೆದುಕೊಳ್ಳುವಾಗ ಇಂತಹ ಅಂಶಗಳನ್ನು ನೋಡಿ ತೆಗೆದುಕೊಂಡರೆ ನಮಗೇ ಲಾಭ. ಮಾತ್ರವಲ್ಲದೇ ಆನ್‌ಲೈನ್‌ಗಳಲ್ಲಿ ಬೇರೆ ಬೇರೆ ಕಾರು ಖರೀದಿ ವೆಬ್‌ಸೈಟ್‌ಗಳಿವೆ, ಅಲ್ಲಿಯೂ ಪರೀಕ್ಷಿಸಬಹುದು.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ನಿಯಮಿತ ಕಾರಿನ ವೇಗ

ಬಹುತೇಕ ಕಾರುಗಳು ಗಂಟೆಗೆ 60 ರಿಂದ 80 ಕೀ.ಮೀ. ವೇಗದಲ್ಲಿ ಸಂಚರಿಸಿದಲ್ಲಿ ಅತ್ಯುತ್ತಮ ಇಂಧನ ಕ್ಷಮತೆಯನ್ನು ನೀಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಈ ವೇಗದಲ್ಲಿ ಕಾರು ಚಾಲನೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ಗಂಟೆಗೆ 80-90 ಕೀ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಚಲಿಸಿದಲ್ಲಿ ಇಂಧನ ಕ್ಷಮತೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಯಾಕೆಂದರೆ ಅಧೀಕ ವೇಗದಲ್ಲಿ ಕಾರು ಚಲಾಯಿಸುವಾಗ ಅಲ್ಲಿ ಅಧಿಕ ಶಕ್ತಿಯ ಪ್ರಮಾಣಧ ಶಕ್ತಿಯ ಬಿಡುಗಡೆಯಾಗುತ್ತದೆ. ಹೀಗಾದಾಗ ಅಲ್ಲಿ ಅಧಿಕ ಇಂಧನದ ಅವಶ್ಯಕತೆ ಉಂಟಾಗುತ್ತದೆ. ಹೀಗಾದಾಗ ಮೈಲೇಜ್‌ ಕಮ್ಮಿಯಾಗುತ್ತದೆ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಅನಗತ್ಯ ಬ್ರೇಕಿಂಗ್‌ ಬೇಡ

ಹೌದು, ಕಾರು ಚಲಾಯಿಸುವಾಗ ಅನಗತ್ಯ ಬ್ರೇಕಿಂಗ್‌ ಮಾಡುವುದರಿಂದ ಕಾರಿನ ಇಂಧನದ ದಕ್ಷತೆ ಕಡಿಮೆಯಾಗುತ್ತದೆ. ಕೆಲವರು ಚಲಿಸುತ್ತಿರುವಾಗ ಒಂದು ಸಣ್ಣ ಅಡೆತಡೆ ಎದುರಾದರೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬ್ರೇಕಿಂಗ್‌ ಹಾಕುತ್ತಾರೆ. ಹೀಗಾದಾಗ ವೇಗವಾಗಿ ಚಲಿಸುತ್ತಿದ್ದ ವಾಹನ ಒಮ್ಮೆಲೇ ನಿಂತು ಹೋಗುತ್ತದೆ. ನಿಂತ ವಾಹನ ಮತ್ತೆ ತನ್ನ ಹಿಂದಿನ ಸ್ಪೀಡಿಗೆ ಮರಳಲು ಅಲ್ಲಿ ಹೆಚ್ಚಿನ ಇಂಧನದ ನೆರವನ್ನು ಪಡೆದುಕೊಳ್ಳುತ್ತದೆ. ಹೀಗಾದಾಗ ಇಂಧನದ ಕ್ಷಮತೆ ಕಾರಿನಲ್ಲಿ ಕಡಿಮೆಯಾಗುತ್ತದೆ. ಹಾಗಾಗಿ ತುರ್ತು ಪರಿಸ್ಥಿತಿ ಹೊರತುಪಡಿಸಿ, ಬೇರೆ ಸಂಧರ್ಭದಲ್ಲಿ ಅನಗತ್ಯ ಬ್ರೇಕಿಂಗ್‌ ಬೇಡ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಗೇರ್‌ನ ಸರಿಯಾದ ಬಳಕೆ

ಕಡಿಮೆ ಗೇರ್‌ನಲ್ಲಿ ಹೆಚ್ಚು ವೇಗವಾಗಿ ಹೋಗುವುದರಿಂದ ಇಂಧನವು ಹೆಚ್ಚು ವ್ಯಯವಾಗುತ್ತದೆ. ಹೆಚ್ಚಿನ ಮೈಲೇಜ್ ಗಿಟ್ಟಿಸಿಕೊಳ್ಳಲು ಸಹಜ ಚಾಲನಾ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕಾಗಿರುವುದು ಅತೀ ಅಗತ್ಯ. ಅನೇಕ ಮಂದಿ ಚಾಲಕರು ವಾಹನ ಚಲಿಸುತ್ತಿರುವಾಗ ಗೇರ್ ಕಡಿಮೆ ಮಾಡಲು ಮರೆತುಬಿಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಇದರಿಂದ ಇಂಧನ ಉಳಿತಾಯದ ಬದಲು ಹೆಚ್ಚು ಪೋಲಾಗುತ್ತದೆ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಟ್ರಾಫಿಕ್‌ಗಳಲ್ಲಿ ಕಾರನ್ನು ಆಫ್‌ ಮಾಡಿ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಂದೊಂದು ಸಾಧಾರಣ ನಿಯಮ. ಟ್ರಾಫಿಕ್ ಇರುವೆಡೆಯಲ್ಲಿ 30 ಸೆಕೆಂಡುಗಳಿಗಿಂತಲೂ ಹೆಚ್ಚು ಸಮಯ ವಾಹನ ನಿಲ್ಲಿಸುತ್ತಿದ್ದಲ್ಲಿ ನಿಮ್ಮ ಗಾಡಿಯ ಎಂಜಿನ್ ಆಫ್ ಮಾಡಿರಿ. ಸುಖಾ ಸುಮ್ಮನೆ ಎಂಜಿನ್‌ನಲ್ಲಿ ಗಾಡಿಗಳನ್ನು ಆನ್‌ ಮಾಡಿಕೊಂಡೇ ಇರುವುದರಿಂದ ಇಂಧನ ಪೋಲಾಗುತ್ತದೆ. ಹೀಗೆ ಇಂಧನ ಪೋಲಾದರೆ ಅದು ನಮ್ಮ ಆರ್ಥಿಕತೆಯ ಮೇಲೆ ಹೊರೆಯಾಗುತ್ತದೆ. ಇದರಿಂಧ ಕಾರಿಗೆ ಮೈಲೇಜ್‌ ಕಮ್ಮಿ ಇದೆ ಎಂದೇ ತಿಳಿದುಕೊಳ್ಳುತ್ತಾರೆ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ವಿನಾಕಾರಣವಾಗಿ ಎಸಿಯನ್ನು ಬಳಸಬೇಡಿ

ಭಾರತೀಯ ರಸ್ತೆಗಳ ಪರಿಸ್ಥಿತಿಯಲ್ಲಿ ಸ್ವಚ್ಛಂದವಾಗಿ ಸಂಚರಿಸುವುದು ತುಂಬಾ ಕಷ್ಟಕರ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹಾಗೂ ತಾಪಮಾನ ಏರಿಕೆಯಿಂದಾಗಿ ಎಸಿ ಬಳಕೆ ಮಾಡಬೇಕಾಗುತ್ತಿದೆ. ಆದರೆ ಎಸಿಯಿಂದಾಗಿ ಹೆಚ್ಚು ಪವರ್ ಹಾಗೂ ಇಂಧನ ವ್ಯಯವಾಗುತ್ತದೆ. ನೀವು ಎಸಿ ಇಲ್ಲದೇ ಪ್ರಯಾಣಿಸಿದರೆ ಶೇ ೨೦ ರಿಂ ೨೫ ಪ್ರಮಾಣದ ಇಂಧನ ಉಳಿಯುತ್ತದೆ. ಹಾಗಾಗಿ ಕಾಡು ಅಥವಾ ಸಿಟಿಯಿಂದ ಹೊರಗೆ ಡ್ರೈವ್‌ ಮಾಡುವಾಗ ಎಸಿಯನ್ನು ಬಳಸದಿರಿ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಸರಿಯಾದ ಸಮಯದಲ್ಲಿ ಕಾರ್‌ ಸರ್ವೀಸ್‌ ಮಾಡಿಸಿ

ಸರಿಯಾಗಿ ಸರ್ವೀಸ್ ಮಾಡದ ಕಾರುಗಳಿಂದ ಉತ್ತಮ ಮೈಲೇಜ್ ನಿರೀಕ್ಷಿಸುವುದು ತಪ್ಪು. ಹಾಗಾಗಿ ಸರಿಯಾದ ಸಮಯದಲ್ಲಿ ನಿಯಮಿತವಾಗಿ ಕಾರನ್ನು ಸರ್ವೀಸ್ ಮಾಡಿಸಿಕೊಳ್ಳಿರಿ. ಏರ್ ಫಿಲ್ಟರ್, ಫ್ಯೂಯಲ್ ಫಿಲ್ಟರ್ ಹಾಗೂ ಸ್ಪಾರ್ಕ್ ಪ್ಲಗ್‌ಗಳನ್ನು ಪರಿಶೀಲಿಸುವುದನ್ನು ರೂಢಿ ಮಾಡಿಸಿಕೊಳ್ಳಿ. ಜತೆಗೆ ಪ್ರತಿ 60,000 ಕೀ.ಮೀ.ಗಳಿಗೆ ಕಾರಿನ ಆಕ್ಸಿಜನ್ ಸೆನ್ಸಾರ್ ಪರೀಶೀಲಿಸಿಕೊಳ್ಳಿ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಅನಾವಶ್ಯಕ ಲಗೇಜನ್ನು ತೆಗೆದಿಡಿ

ಕಾರಿನಲ್ಲಿ ನಿಮಗೆ ಅಗತ್ಯವಿಲ್ಲದೇ ಇರುವಂತಹ ಲಗೇಜನ್ನು ತೆಗೆದಿಡಿ. ಅನಗತ್ಯ ಲಗೇಜ್‌ಗಳಿಂದ ನಿಮ್ಮ ಕಾರಿನ ಭಾರ ಹೆಚ್ಚಾದಷ್ಟು ಹೆಚ್ಚು ಇಂಧನ ಪೋಲಾಗುತ್ತದೆ. ಹಾಗಾಗಿ ಅವಶ್ಯಕವಲ್ಲದ ಲಗ್ಗೇಜ್‌ಗಳನ್ನು ಕಾರಿನಿಂದ ಹೊರಗಿಡಿರಿ. ಇದು ಇಂಧನ ಕ್ಷಮತೆಯ ಜೊತೆ ಕಾರು ನಯವಾಗಿ ಚಾಲನೆ ಮಾಡಲು ನೆರವಾಗಲಿದೆ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿ ಚಲಾಯಿಸಿ

ಆಟೋಮ್ಯಾಟಿಕ್ ಕಾರುಗಳಿಗಿಂತ ಮ್ಯಾನುವಲ್‌ ಗೇರ್‌ಗಳಿರುವ ಕಾರುಗಲೂ ಅಧಿಕ ಮೈಲೇಜನ್ನು ನೀಡುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿರುವ ವಿಚಾರ. ಸಾಧ್ಯವಾದಲ್ಲಿ ನಿಮ್ಮ ಆಟೋಮ್ಯಾಟಿಕ್ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿಯೇ ಚಾಲನೆ ಮಾಡಲು ಪ್ರಯತ್ನಿಸಿ. ಸಾಧಾರಣವಾಗಿ ಆಟೋಮ್ಯಾಟಿಕ್ ಬಾಕ್ಸ್‌ಗಳಲ್ಲಿ ನಿರ್ದಿಷ್ಟ ವೇಗದ ಬಳಿಕವೇ ಅಪ್‌ಶಿಫ್ಟ್ ಮಾಡಲಾಗುತ್ತದೆ. ಇಲ್ಲಿ ಅಪ್‌ಶಿಫ್ಟ್ ವೇಳೆ ಸರಿಯಾದ ಟಾರ್ಕ್ ಜತೆಗೆ ಇಂಧನ ವ್ಯಯವಾಗುತ್ತದೆ. ಆದರೆ ವಿಶೇಷವೇನೆಂದರೆ ಎಲ್ಲಾ ಆಟೋಮ್ಯಾಟಿಕ್ ಕಾರಿನಲ್ಲೂ ಮ್ಯಾನುವಲ್ ಮೋಡ್ ಇರುವುದಿಲ್ಲ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ರಿವರ್ಸ್ ಪಾರ್ಕ್

ನಿಮ್ಮ ದೈನಂದಿನ ಚಟುವಟಿಕೆಗಳ ಬಳಿಕ ಮನೆಗೆ ಹಿಂತಿರುಗಿದ ಬಳಿಕ ಕಾರನ್ನು ರಿವರ್ಸ್ ಪಾರ್ಕ್ ಮಾಡಿಟ್ಟುಕೊಳ್ಳಿರಿ. ಇದರಿಂದ ಬೆಳಗ್ಗಿನ ಜಾವದಲ್ಲಿ ಎಂಜಿನ್ ಕೂಲಾಗಿದ್ದಾಗ ರಿವರ್ಸ್ ಮಾಡುವ ಗೋಜಿನಿಂದ ತಪ್ಪಿಸಬಹುದಾಗಿದೆ. ಈ ಮೂಲಕ ಅಮೂಲ್ಯ ಇಂಧನವನ್ನು ಉಳಿಸಬಹುದಾಗಿದೆ. ವಿ.ಸೂ: ಸಮತಲ ಪಾರ್ಕಿಂಗ್ ಪ್ರದೇಶ ಹೊಂದಿದವರು ಹೀಗೆ ಮಾಡಬಹುದು. ಇಲ್ಲದಿದ್ದಲ್ಲಿ ಮೇಲ್ಮುಖ ರಿವರ್ಸ್ ಮಾಡುವುದರಿಂದ ಹೆಚ್ಚಿನ ಇಂಧನ ವ್ಯಯವಾಗುತ್ತದೆ.

ನಿಮ್ಮ ಕಾರಿನ ಮೈಲೇಜನ್ನು ಹೆಚ್ಚಿಸಿಕೊಳ್ಳಲು ಈ ವಿಧಾನಗಳನ್ನು ಅನುಸರಿಸಿದರೆ ಸಾಕು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಾರನ್ನು ನಿಯಮಿತವಾಗಿ ಸೂಕ್ಷ್ಮಮವಾಗಿ ಚಲಾಯಿಸುವುದರಿಂದ ಕಾರಿನ ಮೈಲೇಜನ್ನು ಹೆಚ್ಚಿಸಬಹುದು. ಅದಕ್ಕೆ ಹೀಗೆಯೇ ಮಾಡಬೇಕು ಎಂದು ಕೇವಲ ಒಂದು ವಿಧಾನಗಳಷ್ಟೇ ಇಲ್ಲ. ಆದರೆ ಕಾರಿನ ಮೈಲೇಜು, ಅದು ಕಾರು ಚಲಾಯಿಸುವವನ ಕೈಯಲ್ಲಿರುತ್ತದೆ ಎಂಬುದು ಮಾತ್ರ ಸತ್ಯ.

Most Read Articles

Kannada
English summary
How to get more mileage in car
Story first published: Monday, July 11, 2022, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X