ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Written By:

ಎಷ್ಟೋ ಜನರು ತಮ್ಮ ಬೈಕ್ ಮೈಲೇಜ್ ನೀಡುತ್ತಿಲ್ಲ ಎಂಬ ಆರೋಪ ಮಾಡುವುದುಂಟು. ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಮೈಲೇಜ್ ಹೆಚ್ಚಿಸಿಕೊಳ್ಳುವ ಅವಕಾಶಗಳಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸದ್ಯದ ಪರಿಸ್ಥಿತಿಯಲ್ಲಿ ವಾಹನ ಪ್ರತಿಯೊಬ್ಬ ನಾಗರಿಕನ ಅವಶ್ಯಕತೆಯಾಗಿದ್ದು, ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದು ಬೈಕ್ ಇರಲೇಬೇಕು ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಮನಸ್ಸಿಗೊಪ್ಪುವ ಬೈಕ್ ಆಯ್ಕೆ ಮಾಡಿಕೊಳ್ಳುವುದು ಒಂದು ಕಡೆಯಾದರೆ, ಆ ಬೈಕಿನ ಮೈಲೇಜ್ ನಿರ್ವಹಣೆ ಮಾಡುವುದೂ ಸಹ ದೊಡ್ಡ ಸವಾಲು ಎನ್ನಬಹುದು.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮಧ್ಯಮ ಕುಟುಂಬದ ಜನರು ತಮ್ಮ ಬೈಕನ್ನು ಆಚೆ ತೆಗೆದರೆ ಸಾಕು, ಮನಸ್ಸಿನಲ್ಲಿ ಪೆಟ್ರೋಲ್ ಬಗ್ಗೆ ಚಿಂತೆ ಕಾಡದೆ ಇರದು. ಹಾಗಾದ್ರೆ, ಈ ಬೈಕಿನ ಮೈಲೇಜ್ ಹೆಚ್ಚಿಸಲು ಏನೆಲ್ಲಾ ಯೋಜನೆ ಹಾಕಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹೊಸದಾಗಿ ಬೈಕ್ ಖರೀದಿ ಮಾಡಿದ ನಂತರ ಸಾಕಷ್ಟು ಮುಂಜಾಗ್ರತೆ ವಹಿಸಲೇ ಬೇಕು. ಹೌದು, ಮೊದಲ ಐನೂರು ಕಿಲೋಮೀಟರ್ ಹೇಗೆ ಚಾಲನೆ ಮಾಡುತ್ತೀರಿ ? ಎನ್ನುವುದರ ಆದಾರದ ಮೇಲೆ ಬೈಕಿನ ಮೈಲೇಜ್ ನಿರ್ದಾರವಾಗುತ್ತದೆ.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೊದಲ ಐನೂರು ಕಿಲೋಮೀಟರ್ ಚಾಲನೆ ಮಾಡುವಾಗ ಆದಷ್ಟು 40 ಕಿ.ಮೀ ಇಂದ 60 ಕಿ.ಮೀ ಅಂತರದಲ್ಲಿ ಚಲಿಸಿದರೆ ಒಳ್ಳಯದು. ಎಂತಹ ಪರಿಸ್ಥಿತಿಯಲ್ಲಿಯೂ ಗಂಟೆಗೆ 60 ಕಿ.ಮೀ ವೇಗವನ್ನು ಹೆಚ್ಚಿಸದೇ ಡ್ರೈವ್ ಮಾಡಬೇಕು.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೈಕ್ ಕಂಪನಿ ನೀಡುವ ಉಚಿತ ಸೇವೆಗಳು ಮುಗಿದ ನಂತರ, ಪ್ರತಿ 2500 ಕಿ.ಮೀ ಚಾಲನೆಗೆ ತಪ್ಪದೆ ಸರ್ವಿಸ್ ಮಾಡಿಸಬೇಕು. ಇಲ್ಲದೆ ಹೋದರೆ ಎಂಜಿನ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳಲಿದೆ ಹಾಗು ಒಂದೇ ತರದ ಇಂಜಿನ್ ಆಯಿಲ್ ಬ್ರಾಂಡನ್ನು ಉಪಯೋಗಿಸುವುದು ಒಳ್ಳೆಯದು.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಆದಷ್ಟು ನಿಮ್ಮ ಟೈಯರ್‌ಗಳಲ್ಲಿ ಸಾಕಷ್ಟು ಗಾಳಿ ಇದೆಯೇ ? ಎಂದು ಪರೀಕ್ಷಿಸಿಕೊಳ್ಳಿ. ಟೈರಿನಲ್ಲಿ ಇರುವ ಗಾಳಿಯ ಮೇಲೆ ಕೂಡ ಮೈಲೇಜ್ ಆಧಾರವಾಗಿರುತ್ತದೆ. ಪ್ರತಿ ಮೂರು ದಿನಕ್ಕೆ ಒಮ್ಮೆ ಗಾಳಿ ಚೆಕ್ ಮಾಡಿಸಿಕೊಳ್ಳಬೇಕು.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೈಕಿಗೆ ಬಳಸುವ ಪೆಟ್ರೋಲ್ ಕೂಡ ಒಂದೇ ರೀತಿಯಲ್ಲಿ ಇದ್ದರೆ ಒಳ್ಳೆಯದು ಹಾಗು ಒಂದು ನಿಮಿಷಕ್ಕೂ ಹೆಚ್ಚು ಹೊತ್ತು ನಿಲ್ಲುವ ಪರಿಸ್ಥಿತಿ ಬಂದರೆ ಗಡಿ ಎಂಜಿನ್ ನಿಲ್ಲಿಸುವುದು ಒಳಿತು.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೊದಲ ಸರ್ವೀಸಿಂಗ್ ನಂತರ ಕೂಡ 45ರಿಂದ 60ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಹೋಗಬಾರದು. ಅದಕ್ಕಿಂತ ಹೆಚ್ಚಾಗಿ ಹೋದರೆ ಮೈಲೇಜ್ ಪೂರ್ತಿಯಾಗಿ ಬಿದ್ದು ಹೋಗುತ್ತದೆ. ಇದನ್ನು ಕಡ್ಡಾಯವಾಗಿ ಪಾಲಿಸಿ.

ಬೈಕ್ ಮೈಲೇಜ್ ಹೆಚ್ಚಿಸುವ ಟ್ರಿಕ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬ್ರೇಕ್ ಮತ್ತು ಎಕ್ಸ್‌ಸಲೇಟರ್ ಎರಡನ್ನೂ ಸಹ ಒಂದೇ ಬಾರಿಗೆ ಚಾಲನೆ ಮಾಡುವುದರಿಂದಲೂ ಸಹ ಮೈಲೇಜ್ ಕಡಿಮೆಯಾಗಲಿದೆ ಹಾಗು ಕ್ಲಚ್ ಆದಷ್ಟೂ ಕಡಿಮೆಯಾಗಿ ಉಪಯೋಗಿಸುವುದರಿಂದ ಮೈಲೇಜ್ ಹೆಚ್ಚಿಸಬಹುದಾಗಿದೆ.

English summary
Read in kannada about how to increase fule efficiency in bikes. Know more about bike, fuel efficiency tips, bike facts and much more
Story first published: Thursday, August 24, 2017, 18:12 [IST]
Please Wait while comments are loading...

Latest Photos