ಕಾರಿನ ಸ್ಟೀರಿಂಗ್ ಹಿಡಿಯುವುದು ಹೇಗೆ?

Posted By:

ಇದರಲ್ಲೇನಿದೆ; ಕಾರಿನ ಸ್ಟೀರಿಂಗ್ ಹಿಡಿಯುವುದು ಅಷ್ಟೊಂದು ದೊಡ್ಡ ವಿಷಯವೇ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ ಬಹುತೇಕ ಚಾಲಕರು ತಪ್ಪಾಗಿ ಅಥವಾ ನಿರ್ಲಕ್ಷ್ಯದಿಂದ ಸ್ಟೀರಿಂಗ್ ವೀಲ್ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿ ಅಪಾಯವನ್ನು ಆಹ್ವಾನಿಸುತ್ತಾರೆ.

ಚಾಲನೆ ಕಲಿಕಾ ಸಂದರ್ಭದಲ್ಲಿ ಈ ಬಗ್ಗೆ ಹೇಳಿಕೊಡಲಾಗುತ್ತದೆ. ಆದರೆ ವಾಹನವನ್ನು ಓಡಿಸಲು ಕಲಿತ ಬಳಿಕವೂ ಅಜಾಗರೂಕತೆಯಿಂದ ಇಂತಹ ತಪ್ಪು ಪುನಾರವರ್ತಿಸಿದರೆ ಏನಾಗಬಹುದು? ಹೌದು, ಪ್ರತಿಯೊಬ್ಬ ಚಾಲಕನೂ ತಮ್ಮ ಹಾಗೂ ತಮ್ಮ ಸಹ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಇದಕ್ಕಾಗಿ ಸ್ಟೀರಿಂಗ್ ವೀಲ್ ಹೇಗೆ ಹಿಡಿಯಬೇಕೆಂಬುದನ್ನು ಕಲಿಯುವುದು ಅತಿ ಮುಖ್ಯ.

ವಾಹನದ ಸ್ಟೀರಿಂಗ್ ಹಿಡಿದಾಗ ನಿಗದಿತ ದಿಕ್ಕಿನಲ್ಲೇ ಅದು ತಿರುಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ವಾಹನದ ಸುತ್ತಮುತ್ತಲಿನ ಪರಿಸರವನ್ನು ಬಹು ಎಚ್ಚರಿಕೆಯಿಂದ ಗಮನಿಸುತ್ತಿರಬೇಕು. ಇಂದಿನ ಈ ಲೇಖನದ ಮೂಲಕ ಹೇಗೆ ಸ್ಟೀರಿಂಗ್ ಹಿಡಿಯಬೇಕು ಹಾಗೆಯೇ ತಪ್ಪಾದ ಸ್ಟೀರಿಂಗ್ ವೀಲ್ ಹಿಡಿಯುವ ಕ್ರಮಗಳ ಬಗ್ಗೆ ವಿವರಣೆ ಕೊಡಲಿದ್ದೇವೆ.

ಕಾರಿನ ಸ್ಟೀರಿಂಗ್ ಹಿಡಿಯುವುದು ಹೇಗೆ?

ಮೊದಲು ನಾನು ಚೆನ್ನಾಗಿ ಚಾಲನೆ ಮಾಡಭಲ್ಲೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿಯೇ ಮೂಡಬೇಕು. ಹಾಗೆಯೇ ಏಕಾಗ್ರತೆಗೆ ಭಂಗವುಂಟಾಗದಂತೆ ನೋಡಬೇಕು. ಮುಂದಿನ ಸ್ಲೈಡರ್ ಮುಖಾಂತರ ಸ್ಟೀರಿಂಗ್ ವೀಲ್ ಸರಿ ತಪ್ಪುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿರಿ...

ಸ್ಟೀರಿಂಗ್ ಮೇಲಿನಿಂದ ಹಿಡಿಯುವುದು- ತಪ್ಪು

ಸ್ಟೀರಿಂಗ್ ಮೇಲಿನಿಂದ ಹಿಡಿಯುವುದು- ತಪ್ಪು

ಅನೇಕರು ಕಾರು ಚಾಲನೆ ಮಾಡುವ ಸಂದರ್ಭದಲ್ಲಿ ಸ್ಟೀರಿಂಗನ್ನು ಮೇಲ್ಭಾಗದಿಂದ ಹಿಡಿಯುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ನಿಮ್ಮ ಮಾಹಿತಿಗಾಗಿ, ಇದು ತುಂಬಾನೇ ಅಪಾಯಕಾರಿ ಪ್ರವೃತ್ತಿ ಆದಷ್ಟು ಬೇಗನೇ ಇಂತಹ ಚಟದಿಂದ ಹೊರಬರುವುದು ಅತಿ ಅಗತ್ಯವಾಗಿದೆ.

10ರಿಂದ 2 ಗಡಿಯಾರದ ದಿಕ್ಕು- ತಪ್ಪು

10ರಿಂದ 2 ಗಡಿಯಾರದ ದಿಕ್ಕು- ತಪ್ಪು

ಗಡಿಯಾರದ ಮುಳ್ಳುಗಳು ತೋರಿಸುತ್ತಿರುವಂತೆಯೇ 10ರಿಂದ 2 ದಿಕ್ಕಿಗೆ ಸರಿಯಾಗಿ ಸ್ಟೀರಿಂಗ್ ಹಿಡಿಯುವುದು ತಪ್ಪಾದ ಕ್ರಮವಾಗಿದೆ. ಇದು ಸ್ಟೀರಿಂಗ್ ಮೇಲೆ ಲಂಬವಾಗಿ ನಿಮ್ಮ ಕೈ ಬಾಗುವಂತೆ ಮಾಡಲಿದ್ದು ತಿರುವುಗಳಲ್ಲಿ ಅಪಾಯವನ್ನು ಆಹ್ವಾನಿಸಲಿದೆ.

ತಿರುವಿನ ಸಂದರ್ಭದಲ್ಲಿ ಕೈ ಮೇಲೆ- ತಪ್ಪು

ತಿರುವಿನ ಸಂದರ್ಭದಲ್ಲಿ ಕೈ ಮೇಲೆ- ತಪ್ಪು

ಇದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ. ತಿರುವಿನ ಸಂದರ್ಭದಲ್ಲಿ ಚಾಲಕರು ಸ್ಟೀರಿಂಗ್ ವೀಲ್ ತಮಗೆ ತಿಳಿಯದಂತೆಯೇ ಕೈಗಳನ್ನು ಮೇಲ್ಮುಖವಾಗಿ ಬಾಗಿಸುತ್ತಾರೆ. ಇದು ಇಕ್ಕಟ್ಟಾದ ತಿರುವುಗಳಲ್ಲಿ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ.

ಒಂದೇ ಕೈಯಲ್ಲಿ ಸ್ಟೀರಿಂಗ್ ಹಿಡಿಯುವುದು- ತಪ್ಪು

ಒಂದೇ ಕೈಯಲ್ಲಿ ಸ್ಟೀರಿಂಗ್ ಹಿಡಿಯುವುದು- ತಪ್ಪು

ನಾನು ಡ್ರೈವಿಂಗ್ ಸಂಪೂರ್ಣ ಕರಗತ ಮಾಡಿಕೊಂಡಿದ್ದೇನೆ. ಹಾಗಾಗಿ ಇನ್ನು ಮುಂದೆ ಒಂದೇ ಕೈಯಲ್ಲಿ ಚಾಲನೆ ಮಾಡಭಲ್ಲೆ ಎಂಬ ಅಹಂಭಾವ ಮೂಡಿದರೆ ಏನು ಮಾಡಲು ಸಾಧ್ಯ ಹೇಳಿ? ಹಾಗೊಂದು ವೇಳೆ ಹಠಾತ್ತಾಗಿ ಅಪಾಯದ ಸ್ಥಿತಿ ಎದುರಾದ್ಧಲ್ಲಿ ನಿಮ್ಮಿಂದ ಕಾರನ್ನು ನಿಯಂತ್ರಿಸುವುದು ಅಸಾಧ್ಯ.

180 ಡಿಗ್ರಿಯಲ್ಲಿ ಸ್ಟೀರಿಂಗ್ ಹಿಡಿಯುವುದು- ಸರಿಯಾದ ಕ್ರಮ

180 ಡಿಗ್ರಿಯಲ್ಲಿ ಸ್ಟೀರಿಂಗ್ ಹಿಡಿಯುವುದು- ಸರಿಯಾದ ಕ್ರಮ

ಯಾವತ್ತೂ ಕಾರಿನ ಸ್ಟೀರಿಂಗನ್ನು 180 ಡಿಗ್ರಿ ಅನುಪಾತದಲ್ಲಿ ಹಿಡಿಯಿರಿ. ಇದು ಕಾರನ್ನು ನಯವಾಗಿ ಓಡಿಸಲು ನೆರವಾಗುವುದಲ್ಲದೆ ಸುರಕ್ಷತೆ ದೃಷ್ಟಿಕೋನದಿಂದಲೂ ಹೆಚ್ಚು ಸಹಾಯಕವಾಗಿದೆ. ಯಾಕೆಂದರೆ ಈ ರೀತಿಯಾಗಿ ಸ್ಟೀರಿಂಗ್ ಹಿಡಿಯುವುದರಿಂದ ಅಪಘಾತ ಸಂದರ್ಭದಲ್ಲಿ ಸ್ಟೀರಿಂಗ್ ಮಧ್ಯೆ ಲಗತ್ತಿಸಿರುವ ಏರ್ ಬ್ಯಾಗ್ ಕೂಡಾ ಸರಿಯಾಗಿ ಕಾರ್ಯ ನಿರ್ವಹಿಸಲು ನೆರವಾಗಲಿದೆ.

9ರಿಂದ 3 ಗಡಿಯಾರದ ದಿಕ್ಕು- ಸರಿ

9ರಿಂದ 3 ಗಡಿಯಾರದ ದಿಕ್ಕು- ಸರಿ

ಯಾವಾಗಲೂ ಸ್ಟೀರಿಂಗನ್ನು ಗಟ್ಟಿಯಾಗಿ ಹಿಡಿಯುವ ಪ್ರಯತ್ನಕ್ಕೆ ಮುಂದಾಗದಿರಿ. ಸುಲಭವಾಗಿ ತಿರುಗಿಸುವಂತೆ ನಯವಾಗಿ ಹಿಡಿದಿಟ್ಟುಕೊಳ್ಳಿರಿ. ನಿಮ್ಮ ಮುಷ್ಠಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡದಿರಿ. ನಾಲ್ಕು ಬೆರಳುಗಳು ಕೆಳಮುಖವಾಗಿ ಹಾಗೆಯೇ ಹೆಬ್ಬರೆಳು ಮೇಲ್ಮುಖವಾಗಿ ಬರುವಂತೆಯೇ ನೋಡಿಕೊಳ್ಳಿರಿ...

8ರಿಂದ 4 ಗಡಿಯಾರದ ದಿಕ್ಕು- ಸರಿ

8ರಿಂದ 4 ಗಡಿಯಾರದ ದಿಕ್ಕು- ಸರಿ

ಇನ್ನೊಂದು ಅಧ್ಯಯನದ ಪ್ರಕಾರ 8ರಿಂದ 4 ಗಡಿಯಾರದ ಕ್ರಮವನ್ನು ಅನುಸರಿಸುವುದು ಸಹ ಸರಿಯಾಗಿದೆ. ದೀರ್ಘ ಪ್ರಯಾಣ, ಹೆದ್ದಾರಿ ಹಾಗೂ ವಾಹನ ದಟ್ಟಣೆ ಕಡಿಮೆಯಿರುವ ಪ್ರದೇಶದಲ್ಲಿ ಇದನ್ನು ಅನುಸರಿಸಬಹುದಾಗಿದೆ.

ಸ್ಥಾನ ಬದಲಾವಣೆ

ಸ್ಥಾನ ಬದಲಾವಣೆ

ಹಾಗೆಯೇ ಇನ್ನೊಂದು ಅಧ್ಯಯನದ ಪ್ರಕಾರ ಸ್ಟೀರಿಂಗ್ ಹಿಡಿಯುವುದಕ್ಕೆ ಯಾವುದೇ ನಿರ್ದಿಷ್ಟ ಸ್ಥಾನಗಳಿಲ್ಲ. ಇದನ್ನು ಡ್ರೈವಿಂಗ್‌ಗೆ ಅನುಸಾರವಾಗಿ ನಿಮಗೆ ಹೊಂದಿಕೆಯಾಗುವ ರೀತಿಯಲ್ಲಿ ಬದಲಾಯಿಸುತ್ತಿರಬೇಕು ಎಂಬ ಬಗ್ಗೆ ಮಾಹಿತಿ ನೀಡಿದೆ.

ಸ್ಟೀರಿಂಗ್ ಹಿಡಿದಿಟ್ಟುಕೊಂಡು ಮೊಬೈಲ್ ಬಳಕೆ- ತಪ್ಪು

ಸ್ಟೀರಿಂಗ್ ಹಿಡಿದಿಟ್ಟುಕೊಂಡು ಮೊಬೈಲ್ ಬಳಕೆ- ತಪ್ಪು

ಇನ್ನು ಕೆಲವು ಸಂದರ್ಭಗಳಲ್ಲಿ ಡ್ರೈವಿಂಗ್ ಸಂದರ್ಭದಲ್ಲಿ ಒಂದು ಕೈಯಲ್ಲಿ ಸ್ಟೀರಿಂಗ್ ಹಿಡಿದಿಟ್ಟುಕೊಂಡು ಮೊಬೈಲ್ ಬಳಕೆ ಮಾಡುವ ಪದ್ಧತಿ ರೂಢಿ ಮಾಡಿಕೊಂಡರೆ ಅದನ್ನು ತಕ್ಷಣವೇ ಬಿಟ್ಟುಬಿಡಿರಿ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

ರಿವರ್ಸ್ ಸಂದರ್ಭದಲ್ಲಿ

ರಿವರ್ಸ್ ಸಂದರ್ಭದಲ್ಲಿ

ಇನ್ನು ಚಿತ್ರದಲ್ಲಿ ತೋರಿಸಿರುವಂತೆಯೇ ಸ್ಟೀರಿಂಗನ್ನು ಒಂದು ಕೈಯಲ್ಲಿ ಹಿಡಿದಿಟ್ಟುಕೊಂಡು ನಿಮಗೆ ಬೇಕಾದ ದಿಶೆಯತ್ತ ನಿಧಾನವಾಗಿ ಹಿಂದಕ್ಕೆ ಚಲಿಸಿ ವಾಹನ ಪಾರ್ಕ್ ಮಾಡಿರಿ...

ಸ್ಟೀರಿಂಗ್ ವೀಲ್ ಅಂತರ

ಸ್ಟೀರಿಂಗ್ ವೀಲ್ ಅಂತರ

ಇನ್ನೊಂದು ಪ್ರಮುಖ ವಿಚಾರ ಗಮನಿಸಬೇಕೆಂದರೆ ಸ್ಟೀರಿಂಗ್ ವೀಲ್ ಹಾಗೂ ನಿಮ್ಮ ನಡುವೆ 25 ಸೆಂಟಿಮೀಟರ್‌ಗಳಷ್ಟು ಅಂತರವಿರಬೇಕು. ಇದು ಅಪಘಾತ ಸಂದರ್ಭದಲ್ಲಿ ಏರ್ ಬ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸಲು ಹಾಗೂ ಸ್ಟೀರಿಂಗ್ ವೀಲ್ ಮೇಲೆ ಸರಿಯಾದ ನಿರ್ವಹಣೆ ಮಾಡಲು ನೆರವಾಗಲಿದೆ.

English summary
Do you know ho to hold steering wheel? If you want become a better driver then you must know that how to keep your hand on steering wheel correctly. Here we are going to give some detail about, how to hold car steering wheel?

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark