ವಾಹನ ಸಲಹೆ: ಲಾಕ್ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು!

ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ಸುರಕ್ಷತೆಯ ದೃಷ್ಠಿಯಿಂದ ದೇಶಾದ್ಯಂತ ಹಲವು ರಾಜ್ಯಗಳು ಲಾಕ್‌ಡೌನ್ ವಿಧಿಸಿವೆ. ಲಾಕ್‌ಡೌನ್ ವೇಳೆ ವಾಹನ ಸಂಚಾರವು ಸಂಪೂರ್ಣವಾಗಿ ನಿಷೇಧಿಸಿರುವ ಕಾರಣಕ್ಕೆ ಯಾವುದೇ ವಾಹನಗಳನ್ನು ಹೊರಕ್ಕೆ ತೆಗೆಯಲು ಸಾಧ್ಯವಿಲ್ಲ. ಈ ಸಮಯದಲ್ಲಿ ಒಂದೇ ಬದಿಯಲ್ಲಿ 15 ದಿನಗಳ ಕಾಲ ಪಾರ್ಕ್ ಮಾಡಲಾಗುವ ವಾಹನಗಳ ತಾಂತ್ರಿಕ ಅಂಶಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಹೇಗೆ ಎಂಬ ಸರಳ ಸಲಹೆಗಳು ಇಲ್ಲಿವೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಕರ್ನಾಟಕ ಸರ್ಕಾರವು ಕೂಡಾ ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಫ್ಯೂ ಜಾರಿಗೆಗೊಳಿಸಿದೆ.

ವಾಹನ ಸಲಹೆ: ಲಾಕ್ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು!

ಏಪ್ರಿಲ್ 27ರಿಂದ 14 ದಿನಗಳ ಕಾಲ ವಿಧಿಸಲಾಗಿರುವ ಕರ್ಫ್ಯೂ ವೇಳೆ ಸಾರ್ವಜನಿಕರಿಗೆ ಬೆಳಗಿನ 6ರಿಂದ 10ರ ತನಕ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದು, ನಿಗದಿತ ಅವಧಿ ನಂತರ ಟೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ.

ವಾಹನ ಸಲಹೆ: ಲಾಕ್ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು!

ಕರ್ಫ್ಯೂ ಸಂದರ್ಭದಲ್ಲಿ ಸಾಮಾನ್ಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಅಗತ್ಯ ಸೇವೆಗಳಿಗಾಗಿ ಬಳಕೆಯಾಗುವ ವಾಹನ ಸಂಚಾರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಹನ ಹೊರಗೆ ಸಂಚರಿಸುವಂತಿಲ್ಲ.

ವಾಹನ ಸಲಹೆ: ಲಾಕ್ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು!

ಅಗತ್ಯ ಸೇವೆಗಳನ್ನು ಒದಗಿಸುವ ವಾಹನಗಳಿಗೆ, ಸರಕುಸಾಗಣೆ ವಾಹನಗಳಿಗೆ, ಆರೋಗ್ಯ ಸೇವೆಯ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.ಅಗತ್ಯ ಸೇವೆಗಳ ವಾಹನಗಳ ಸಂಚಾರಕ್ಕೆ ಅವಕಾಶ ಹೊರತು ಇನ್ನುಳಿದ ಯಾವುದೇ ವಾಹನಗಳಿಗೆ ಯಾವುದೇ ರೀತಿಯ ಎಮರ್ಜೆನ್ಸಿ ಪಾಸ್ ನೀಡುತ್ತಿಲ್ಲ.

ವಾಹನ ಸಲಹೆ: ಲಾಕ್ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು!

ಬದಲಾಗಿ ಉತ್ಪಾದನಾ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳ ವಾಹನ ಸಂಚಾರಕ್ಕೆ ಸೂಕ್ತ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಇದರಿಂದ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಕರ್ಫ್ಯೂ ವೇಳೆ ಅನಗತ್ಯವಾಗಿ ವಾಹನಗಳನ್ನು ಹೊರೆಗೆ ತೆಗೆದಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಲ್ಲದೆ ದುಬಾರಿ ಮೊತ್ತದ ದಂಡ ತೆತ್ತಬೇಕಾದ ಸಂದರ್ಭ ಎದುರಾಗಬಹುದು.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಹೀಗಾಗಿ ನಿಮ್ಮ ವಾಹನಗಳನ್ನು ಒಂದೇ ಬದಿಯಲ್ಲಿ 15 ದಿನಗಳ ಕಾಲ ಪಾರ್ಕ್ ಮಾಡುವುದರಿಂದಲೂ ಕೆಲವು ತಾಂತ್ರಿಕ ಸಮಸ್ಯೆ ಎದುರಿಸಬಹುದಾಗಿದ್ದು, ಅದರಲ್ಲೂ ಕಾರುಗಳನ್ನು ಹೇಗೆ ಕಾಪಾಡಿಕೊಳ್ಳಲು ಕೆಲವು ಸರಳ ವಿಧಾನಗಳನ್ನು ನಾವಿಲ್ಲಿ ಚರ್ಚಿಸಿದ್ದೇವೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಕಾರನ್ನು ಹಲವು ದಿನಗಳವರೆಗೆ ಚಾಲನೆ ಮಾಡದೇ ಒಂದೇ ಬದಿಯಲ್ಲಿ ನಿಲುಗಡೆ ಮಾಡಿದ್ದಲ್ಲಿ ವಿವಿಧ ಸಮಸ್ಯೆಗಳು ಉಂಟಾಗಬಹುದು. ಲಾಕ್‌ಡೌನ್ ಸಂದರ್ಭದಲ್ಲಿ ಕಾರ್ ಅನ್ನು ಹೊರಗೆ ತೆಗೆಯಲು ಸಾಧ್ಯವೇ ಆಗದ ಪರಿಸ್ಥಿತಿ ಎದುರಾಗಿದೆ. ಪ್ರತಿದಿನ ಓಡಾಡಲು ಕಾರುಗಳನ್ನು ಬಳಸುವ ಜನರು ಅವುಗಳನ್ನು ರಸ್ತೆ ಬದಿಗೆ ಪಾರ್ಕ್ ಮಾಡುವುದು ಸಹಜ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ದೀರ್ಘಕಾಲದವರೆಗೆ ರಸ್ತೆಯಲ್ಲಿ ಪಾರ್ಕ್ ಮಾಡುವ ಬದಲು ಸಾಧ್ಯವಿದ್ದರೆ ಮನೆಯಲ್ಲಿರುವ ಪೋರ್ಟಿಕೊದಲ್ಲಿಯೇ ನಿಮ್ಮ ಕಾರುಗಳನ್ನು ನಿಲ್ಲಿಸಿ. ಕಾರಿನ ಹೊರಭಾಗ ಹಾಗೂ ಒಳಭಾಗವನ್ನು ಪೂರ್ತಿಯಾಗಿ ಸ್ವಚ್ವಗೊಳಿಸುತ್ತಿರಿ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ನೀರಿನಿಂದ ತೊಳೆದರೆ ಇನ್ನೂ ಒಳ್ಳೆಯದು. ಕಾರಿನಲ್ಲಿ ಯಾವುದಾದರೂ ಅನಗತ್ಯ ವಸ್ತುಗಳಿದ್ದರೆ ಅವುಗಳನ್ನು ಮನೆಯಲ್ಲಿಡಿ. ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದ್ದರೂ, ಪೋರ್ಟಿಕೊದಲ್ಲಿ ನಿಲ್ಲಿಸಿದ್ದರೂ ಕವರ್ ಹೊದಿಕೆಯನ್ನು ಹಾಕುವುದನ್ನು ಮರೆಯದಿರಿ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಪಾರ್ಕಿಂಗ್ ಜಾಗದಲ್ಲಿ ಇಲಿಗಳಿದ್ದರೆ, ಬೇರೆ ಕಡೆ ಪಾರ್ಕ್ ಮಾಡಿ. ಇಲಿಗಳು ಬರದಂತೆ ತಡೆಯಲು ತಂಬಾಕನ್ನು ಇಡಿ. ಸಾಧ್ಯವಾದರೆ, ಬೆಳಿಗ್ಗೆ, ಸಂಜೆ ಎಂಜಿನ್ ಹಾಗೂ ಕಾರಿನ ಇಂಟಿರಿಯರ್ ಅನ್ನು ಪರೀಕ್ಷಿಸುವುದನ್ನು ಮರೆಯಬೇಡಿ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಪ್ಲಾಟ್‌ಫಾರ್ಮ್‌ನ ಒಂದು ಬದಿಯಲ್ಲಿ ಹಾಗೂ ಸ್ಲೋಪ್ ಇರುವ ಒಂದು ಬದಿಯಲ್ಲಿ ಕಾರುಗಳನ್ನು ಪಾರ್ಕ್ ಮಾಡಬೇಡಿ. ಕಾರನ್ನು ಹೆಚ್ಚು ಸಮಯದವರೆಗೆ ಸ್ಟಾರ್ಟ್ ಮಾಡದೇ ನಿಲ್ಲಿಸಿದರೆ ಬ್ಯಾಟರಿ ಹಾಳಾಗಬಹುದು.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಬ್ಯಾಟರಿಗಳು ಐದು ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಇವುಗಳನ್ನು ವೇಗವಾಗಿ ಚಾರ್ಜ್ ಮಾಡುವ ಅಗತ್ಯವಿರುತ್ತದೆ. ಆದ್ದರಿಂದ, ಎರಡು ಅಥವಾ ಮೂರು ದಿನಗಳಿಗೊಮ್ಮೆ, ಕಾರಿನ ಎಂಜಿನ್ ಅನ್ನು ಆನ್ ಮಾಡಿ. ಸ್ವಲ್ಪ ಸಮಯದವರೆಗೆ ಆನ್ ಮಾಡಿ ನಂತರ ಆಫ್ ಮಾಡಿ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಕಾರಿನ ಗೇರ್ ಹಾಕಿ ಹ್ಯಾಂಡ್‌ಬ್ರೇಕ್ ಅಥವಾ ಪಾರ್ಕಿಂಗ್ ಮೋಡ್‌ನಲ್ಲಿ ಇಡುವುದು ಬಹಳ ಮುಖ್ಯ. ಇದು ಸಾಧ್ಯವಾಗದಿದ್ದರೆ ಕಾರು ಮುಂದಕ್ಕೆ ಚಲಿಸದಂತೆ ಇಟ್ಟಿಗೆ ಅಥವಾ ಮರದ ತುಂಡುಗಳನ್ನು ಕಾರಿನ ಹಿಂಭಾಗದಲ್ಲಿ ಇಡುವುದು ಸೂಕ್ತ. ಬ್ರೇಕ್ ಶೂ ದೀರ್ಘಕಾಲದವರೆಗೆ ರಿಮ್‌ಗೆ ಅಂಟಿಕೊಂಡಾಗ ತುಕ್ಕು ಹಿಡಿಯುವ ಸಾಧ್ಯತೆಗಳಿರುತ್ತವೆ.

ವಾಹನ ಸಲಹೆ: ಲಾಕ್ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು!

ಯಾಕೆಂದರೆ ಕಾರಿನನಲ್ಲಿ ಬ್ರೇಕ್ ಶೂ ದೀರ್ಘಕಾಲದವರೆಗೆ ರಿಮ್‌ಗೆ ಅಂಟಿಕೊಂಡಾಗ ತುಕ್ಕು ಹಿಡಿಯುವ ಸಾಧ್ಯತೆಗಳಿದ್ದು, ಬ್ರೇಕಿಂಗ್ ಸಂದರ್ಭದಲ್ಲಿ ಕರ್ಕಶವಾದ ಶಬ್ದ ಉಂಟಾಗುತ್ತದೆ.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಕಾರುಗಳು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಇದ್ದರೆ, ತೂಕವನ್ನು ಹೊಂದಿರುವ ಟಯರ್‌ಗಲಿರುವ ಜಾಗದ ಮೇಲೆ ಪರಿಣಾಮ ಉಂಟಾಗುತ್ತದೆ. ಇದನ್ನು ತಪ್ಪಿಸಲು, ಕಾರುಗಳನ್ನು ಮೂರು ದಿನಗಳಿಗೊಮ್ಮೆ ಚಾಲನೆ ಮಾಡುವುದು ಒಳ್ಳೆಯದು.

ವಾಹನ ಸಲಹೆ: ಲಾಕ್ ಡೌನ್ ಅವಧಿಯಲ್ಲಿ ಕಾರುಗಳನ್ನು ಕಾಪಾಡಿಕೊಳ್ಳುವ ಸರಳ ವಿಧಾನಗಳಿವು

ಸಾಧ್ಯವಾದಷ್ಟು ನಿಮ್ಮ ಕಾರುಗಳನ್ನು ನಿಮ್ಮ ಕಣ್ಣಿಗೆ ಬೀಳುವಂತಹ ಜಾಗದಲ್ಲಿ ಪಾರ್ಕ್ ಮಾಡುವುದು ಒಳ್ಳೆಯದು. ಇಲ್ಲವಾದರೆ ಕಾರುಗಳ ಟೈರ್‌ ಕಳ್ಳತನವಾಗುವ ಸಾಧ್ಯತೆಗಳಿದ್ದು, ಕೆಲವೊಮ್ಮೆ ಕಿಡಿಗೇಡಿಗಳು ಕಾರನ್ನು ಹಾನಿಗೊಳಿಸುವ ಸಂದರ್ಭಗಳಿರುತ್ತವೆ.

Most Read Articles

Kannada
English summary
How to keep your car during corona virus lock down period. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X