ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ದೇಶದೆಲ್ಲೆಡೆಯಲ್ಲಿಯೂ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹುಡುಗ, ಹುಡುಗಿಯರೆಲ್ಲಾ ಓಕುಳಿ ಆಡುವುದರಲ್ಲಿ ತೊಡಗಿದ್ದಾರೆ. ಈ ವೇಳೆ ಬಣ್ಣಬಣ್ಣದ ಬಲೂನುಗಳಲ್ಲಿ ಕಲರ್ ಕಲರ್ ನೀರನ್ನು ತುಂಬಿ ಎಸೆಯುವುದು ಮಾಮೂಲು.

ದೇಶದೆಲ್ಲೆಡೆಯಲ್ಲಿಯೂ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹುಡುಗ, ಹುಡುಗಿಯರೆಲ್ಲಾ ಓಕುಳಿ ಆಡುವುದರಲ್ಲಿ ತೊಡಗಿದ್ದಾರೆ. ಈ ವೇಳೆ ಬಣ್ಣಬಣ್ಣದ ಬಲೂನುಗಳಲ್ಲಿ ಕಲರ್ ಕಲರ್ ನೀರನ್ನು ತುಂಬಿ ಎಸೆಯುವುದು ಮಾಮೂಲು. ಹೀಗಾಗಿ ಸಂಭ್ರಮದ ಮಧ್ಯೆ ನಿಮ್ಮ ವಾಹನ ಕೂಡಾ ರಕ್ಷಣೆ ಕೂಡಾ ಮುಖ್ಯ.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಇದಲ್ಲದೇ ರಾಸಾಯನಿಕಯುಕ್ತ ಬಣ್ಣದಿಂದಾಗಿ ಕೆಲ ಬಾರಿ ಕಾರುಗಳ ಅಂದವು ಕುಗ್ಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡವು ಹೋಳಿ ಹಬ್ಬದಲ್ಲಿ ಬಣ್ಣದಿಂದ ನಿಮ್ಮ ವಾಹನಗಳನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬಹುದು ಎನ್ನಲು ಕೆಲವು ಸಿಂಪಲ್ ಟಿಪ್ಸ್‌ಗಳನ್ನು ಇಲ್ಲಿ ನೀಡಲಾಗಿದೆ.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಕಾರ್ ಕವರ್‍ ತಪ್ಪದೇ ಹಾಕಿ..

ನೀವು ಅಪಾರ್ಟ್‍‍ಮೆಂಟ್ ನಲ್ಲಿ ವಾಸಿಸುತ್ತಿದ್ದರೆ ನಿಮ್ಮ ಕಾರನ್ನು ಪಾರ್ಕಿಂಗ್ ಲಾಟ್ ನಿಂದ ಹೊರಗೆ ಪಾರ್ಕಿಂಗ್ ಮಾಡದೇ ಕಾರ್ ಕವರ್ ನಿಂದ ಕಾರನ್ನು ಕವರ್ ಮಾಡಿ. ಅಲ್ಲದೇ ನಿಮ್ಮ ಕಾರನ್ನು ರಸ್ಥೆಯ ಬದಿಯಲ್ಲಿ ಪಾರ್ಕಿಂಗ್ ಮಾಡಿದರು ಸಹ ಅದನ್ನು ಕಾರ್ ಕವರ್ ನಿಂದ ಕವರ್ ಮಾಡಿದಲ್ಲಿ ನಿಮ್ಮ ಕಾರನ್ನು ಬಣ್ಣದಿಂದ ರಕ್ಷಿಸಬಹುದು.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ವ್ಯಾಕ್ಸ್ ಪಾಲಿಶ್

ಈ ಹೋಳಿ ಸಮಯದಲ್ಲಿ ನಿಮ್ಮ ವಾಹನವನ್ನು ರಕ್ಷಿಸುವ ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೇ ಮುನ್ನೆಚ್ಚರಿಕೆಯ ಕ್ರಮದ ಒಂದು ಭಾಗವಾಗಿ ವ್ಯಾಕ್ಸ್ ಪಾಲಿಶ್ ಮಾಡುವುದರ ಮೂಲಕವು ಕಾರಿನ ಹೊಳಪನ್ನು ರಕ್ಷಿಸಬಹುದು.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ವ್ಯಾಕ್ಸ್ ಪಾಲಿಶ್ ಮಾಡುವ ಮೊದಲು ಸರಿಯಾಗಿ ನಿಮ್ಮ ವಾಹನವನ್ನು ತೊಳೆಯಿರಿ. ನಿಮ್ಮ ವಾಹನ ಟೆಫ್ಲಾನ್ ಕೋಟೆಡ್ ಅನ್ನು ಸಹ ನೀವು ಆರಿಸಬಹುದು. ಇದು ವ್ಯಾಕ್ಸ್ ಕೋಟಿಂಗ್ ಮತ್ತೊಂದು ರಕ್ಷಣಾ ಪದರವಾಗಿದೆ.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಮನೆಯಲ್ಲಿರುವ ಡಿಟರ್ಜಂಟ್‍ ಬಳಕೆ ಬೇಡ...

ಕಾರಿಗೆ ಅಂಟಿಕೊಂಡಿರುವ ಕಲೆಯನ್ನು ತೊಲಗಿಸಲು ನೀವು ನಿಮ್ಮ ಮನೆಯಲ್ಲಿ ಉಪಯೋಗಿಸುವ ಡಿಟರ್ಜಂಟ್‍‍ಗಳನ್ನು ಬಳಸಿದ್ದಲ್ಲಿ ಕಾರಿನ ಕಲೆಯನ್ನು ತೆಗೆಯಬಹುದಾದರೂ ಇದರಿಂದ ಕಾರಿನ ಅಂದಕ್ಕೆ ಮಾರಾಕವಾಗಿರುತ್ತದೆ.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಡಿಟರ್ಜಂಟ್‍ ಬಳಸುವುದರಿಂದ ನಿಮ್ಮ ಕಾರಿನ ಪಾಲಿಶ್ ನಾಶಾವಾಗುತ್ತದೆ. ಹೀಗಾಗಿ ನಿಮ್ಮ ಕಾರನ್ನು ಕಾರ್ ಶಾಂಪು ಮತ್ತು ನೀರಿನಿಂದ ಸ್ವಚ್ಛಗೊಳಿಸುವುದರಿಂದಲೂ ನಿಮ್ಮ ಕಾರಿಗೆ ಅಂಟಿಕೊಂಡಿರುವ ಬಣ್ಣದ ಕಲೆಗಳಿಂದ ಕಾಪಾಡಿಕೊಳ್ಳಬಹುದು.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಕಾರಿನ ಒಳಭಾಗದ ಸ್ವಚ್ಛತೆ

ನಿಮ್ಮ ಕಾರಿನ ಒಳಗೆ ನೀವು ಹೋಳಿ ಆಚರಿಸಲು ಮುಂದಾದರೇ ಅದಕ್ಕೂ ಮುನ್ನ ನಿಮ್ಮ ಕಾರಿನ ಒಳಭಾಗದ ಹೆಡ್‍‍ರೆಸ್ಟ್ ಮತ್ತು ಬ್ಯಾಕ್‍‍ರೆಸ್ಟ್ ಅನ್ನು ಪಾಲಿಥಿನ್ ಬ್ಯಾಗ್‍‍ಗಳೊಂದಿಗೆ ಕವರ್ ಮಾಡಿ.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಪಾಲಿಥಿನ್ ಬ್ಯಾಗ್‍ ಇಲ್ಲದಿದ್ದಲ್ಲಿ ಮನೆಯಲ್ಲಿರುವ ಟವಲ್ ಅಥವಾ ಕರ್ಟೈನ್‍ಗಳಿಂದ ಕವರ್ ಮಾಡಬಹುದಾಗಿದೆ. ಇನ್ನು ಕಾರಿನ ಸ್ಟೀರಿಂಗ್ ವೀಲ್, ಗೇರ್ ನಾಬ್ ಮತ್ತು ಕಾರಿನ ಒಳಬಾಗಿಲನ್ನು ಮನೆಯಲ್ಲಿ ಉಳಿದ ಆಹಾರವನ್ನು ಕವರ್ ಮಾಡಲು ಬಳಸುವ ಫುಡ್ ವ್ರಾಪ್‍ನಿಂದ ಸುತ್ತಿ ಬಣ್ಣ ಬೀಳದಂತೆ ಕಾಪಾಡಿಕೊಳ್ಳಬಹುದು.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಕಾರಿನ ಕಿಟಕಿಗಳನ್ನು ತಪ್ಪದೇ ಮುಚ್ಚಿರಿ

ಒಂದು ವೇಳೆ ನೀವು ಹೋಳಿ ಆಚರಿಸಲು ನಿಮ್ಮ ಕಾರನ್ನು ಕೂಡ ಬಳಸಿದಲ್ಲಿ ನಿಮ್ಮ ಕಾರಿನ ಕಿಟಕಿಗಳನ್ನು ಸಂಪೂರ್ಣವಾಗಿ ಮುಚ್ಚಿರಿ. ಹೀಗೆ ಮಾಡಿದಲ್ಲಿ ಬಣ್ಣಗಳು ಗಾಳಿಗೆ ಅಥವಾ ಹೋಳಿ ನೀರಿನ ಹನಿಗಳು ನಿಮ್ಮ ಕಾರಿನ ಒಳಭಾಗದಲ್ಲಿ ಬೀಳದ ಹಾಗೆ ಮಾಡಬಹುದು.

ಬಣ್ಣದ ಹಬ್ಬದಂದು ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ..?

ಈ ಮೇಲೆ ನೀಡಲಾಗಿರುವ ಅಂಶಗಳು ನಿಮ್ಮ ಕಾರನ್ನು ಹೋಳಿ ಬಣ್ಣದ ಕಲೆಗಳಿಂದ ರಕ್ಷಿಸಲು ಸೂತ್ರಗಳಾಗಿದ್ದು, ಹೋಳಿ ಆಚರಿಸುವಾಗ ನಿಮ್ಮ ಕಾರನ್ನು ಆಚರಣೆಯಲ್ಲಿ ಬಳಸದಿರಿ. ಒಂದು ವೇಳೆ ಮನೆಯ ಹೊರಗೆ ಸಂಚರಿಸಲು ನೀವು ನಿರ್ಧರಿಸಿದ್ದಲ್ಲಿ ಕ್ಯಾಬ್‍ಗಳನ್ನು ಬಳಕೆ ಮಾಡುವುದು ಒಳಿತು.

Most Read Articles

Kannada
Read more on auto tips driving tips
English summary
Here's How To Protect Your Car From Colour Stains This Holi Season!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X