ಮಕ್ಕಳು ವಾಹನ ಡ್ರೈವಿಂಗ್ ಮಾಡುವುದು ಅಪರಾಧವೇ?

ಇತ್ತೀಚೆಗೆ ದೆಹಲಿಯಲ್ಲಿ ಹದಿನಾಲ್ಕು ವರ್ಷದ ಹುಡುಗನೊಬ್ಬ ಕಾರು ಚಾಲನೆ ಮಾಡಿ ಮುನ್ನಿ ಎಂಬ ಆರು ವರ್ಷದ ಬಾಲಕಿಯ ಸಾವಿಗೆ ಕಾರಣವಾಗಿದ್ದ. ಕನ್ನಿಕಾ(10) ಮತ್ತು ಹಿಮಾನ್ಶಿ(4) ಎಂಬಿಬ್ಬರು ಪುಟಾಣಿಗಳು ತೀವ್ರವಾಗಿ ಗಾಯಗೊಂಡಿದ್ದರು. ವೇಗವಾಗಿ ರಿವರ್ಸ್ ಮಾಡುವಾಗ ಮೂವರು ಬಾಲಕಿಯರು ಕಾರಿನಡಿಗೆ ಸಿಲುಕಿದ್ದರು.

ಕಾರನ್ನು ಚಾಲನೆ ಮಾಡುತ್ತಿದ್ದ ಹುಡುಗ 9ನೇ ತರಗತಿ ವಿದ್ಯಾರ್ಥಿ. ರಿವರ್ಸ್ ಮಾಡುವಾಗ ತಪ್ಪಿ ಆಕ್ಸಿಲರೇಷನ್ ಅದುಮಿದಾಗ ನಿಯಂತ್ರಣ ತಪ್ಪಿದಾಗಿ ಹುಡುಗ ಹೇಳಿಕೆ ನೀಡಿದ್ದಾನೆ. ಇಷ್ಟು ಚಿಕ್ಕವಯಸ್ಸಿನ ಹುಡುಗನಿಗೆ, ಡ್ರೈವಿಂಗ್ ಲೈಸನ್ಸ್ ಇಲ್ಲದ ವ್ಯಕ್ತಿಗೆ ಕಾರು ನೀಡಿರುವುದಕ್ಕೆ ಹುಡುಗನ ತಂದೆ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಇದು ಒಂದು ನಿದರ್ಶನಷ್ಟೇ. ಇತ್ತೀಚೆಗೆ ಚಿಕ್ಕಮಕ್ಕಳು ಬೈಕ್, ಕಾರು ಡ್ರೈವಿಂಗ್ ಮಾಡಿ ಅಪಘಾತ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ವಾಹನದ ಹುಚ್ಚು ಹತ್ತಿಸಿಕೊಳ್ಳುತ್ತಾರೆ. ಬೈಕ್ ಮುಂಭಾಗದ ಚಕ್ರವನ್ನು ಎತ್ತಿ ರೈಡ್ ಮಾಡುವ ವೀಲ್ಹಿಂಗ್ ಹುಚ್ಚಿನಿಂದ ಹಲವು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ವಾಹನ ಚಾಲನಾ ಪರವಾನಿಗೆ ಇಲ್ಲದೇ ಡ್ರೈವಿಂಗ್ ಮಾಡುವುದು ಗಂಭೀರ ಅಪರಾಧ. ಪರವಾನಿಗೆ ಇಲ್ಲದವರಿಗೆ ಸ್ವಂತ ವಾಹನವನ್ನು ನೀಡುವುದು ತಪ್ಪು. ಸಾರಿಗೆ ಇಲಾಖೆಯು ವಾಹನ ಚಾಲನಾ ಪರವಾನಿಗೆ ನೀಡಲು ವಯೋಮಿತಿ ನಿಗದಿಪಡಿಸಿದೆ.

ಪ್ರತಿರಾಜ್ಯಗಳು ದೇಶದಲ್ಲಿ ಡ್ರೈವಿಂಗ್ ಲೈಸನ್ಸ್ ವಿತರಣೆ ಮಾಡುತ್ತಿವೆ. ಪ್ರತಿ ರಾಜ್ಯಗಳು ಪ್ರಾದೇಶಿಕ ಸಾರಿಗೆ ಕಚೇರಿ(ಆರ್ ಟಿಒ) ಹೊಂದಿವೆ. ಆಯಾ ರಾಜ್ಯಗಳಲ್ಲಿ ಪಡೆದ ಲೈಸನ್ಸ್ ಹೆಚ್ಚಾಗಿ ಆ ರಾಜ್ಯ ವ್ಯಾಪ್ತಿಗೆ ಮಾತ್ರ ಒಳಪಟ್ಟಿರುತ್ತದೆ. ಆದರೆ ಬೇರೆ ರಾಜ್ಯಕ್ಕೆ ಚಾಲನಾ ಪರವಾನಿಗೆಯನ್ನು ಟ್ರಾನ್ಸ್ ಪರ್ ಮಾಡಲು ಸಾಧ್ಯವಿದೆ. ಅಥವಾ ಆಲ್ ಇಂಡಿಯಾ ಪರ್ಮಿಟ್ ಲೈಸನ್ಸ್ ಪಡೆಯಬಹುದು.

ದೇಶದಲ್ಲಿ ವಾಹನ ಚಾಲನೆ ಪರವಾನಿಗೆ ಪಡೆಯಲು ಕನಿಷ್ಠ 18 ವಯಸ್ಸಾಗಿರಬೇಕು. ಆದರೆ 50 ಸಿಸಿಗಿಂತ ಕಡಿಮೆ ಸಿಸಿಯ ದ್ವಿಚಕ್ರವಾಹನ ಚಾಲನೆ ಮಾಡಲು ಕನಿಷ್ಠ 16 ವಯಸ್ಸು ಆಗಿದ್ದರೆ ಸಾಕು. 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡುವ ಮುನ್ನ ಹೆತ್ತವರು ಗಂಭೀರವಾಗಿ ಯೋಚನೆ ಮಾಡಬೇಕಿದೆ.

Most Read Articles

Kannada
English summary
There has been a lot of incidents where under-age teens with no driving licence driving vehicles and creating panic on the roads. The minimum age limit for Driving licence is 18 years for all vehicles except for motorcycles with an engine capacity below 50cc (cubic capacity), which have a minimum age limit of 16.
Story first published: Tuesday, June 26, 2012, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X