ಕರ್ನಾಟಕ ಆರ್‌ಟಿಒ ಡಿಜಿಟಲ್‌ಮಯ; ಕೂತಲ್ಲೇ ವಾಹನ ಶೋಧಿಸಿ!

Written By:

ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿ ಡಿಜಿಟಲ್‌ಮಯವಾಗಿದ್ದು, ನೀವೀಗ ಕೂತಲ್ಲಿಂದಲೇ ವಾಹನ ದಾಖಲೆಗಳನ್ನು ಶೋಧಿಸಬಹುದಾಗಿದೆ. ಈ ಮೂಲಕ ರಾಜ್ಯದ ಆರ್‌ಟಿಎ ವಿಭಾಗ ಮಗದೊಂದು ಮೈಲುಗಲ್ಲನ್ನಿರಿಸಿದೆ.

ಸಾರ್ವಜನಿಕರು ಈಗ ಅತಿ ಸುಲಭವಾಗಿ ವಾಹನಗಳ ಸಮಗ್ರ ವಿವರಗಳನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ನಿಮ್ಮ ನೆಚ್ಚಿನ ವಾಹನ ಜಾಲತಾಣ ಡ್ರೈವ್ ಸ್ಪಾರ್ಕ್‌ನಲ್ಲಿ ಇದನ್ನು ಹಂತ ಹಂತವಾಗಿ ಚಿತ್ರಪುಟದಲ್ಲಿ ವಿವರಿಸಲಾಗಿದೆ.

ಹಂತ 1

ಹಂತ 1

ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕೃತ ವೆಬ್ ಸೈಟ್ (http://rto.kar.nic.in/) ಭೇಟಿ ಕೊಟ್ಟು ಎಡಬದಿಯಲ್ಲಿ ಕೊಟ್ಟಿರುವ 'Vehicle Search' ವಿಭಾಗವನ್ನು ಕ್ಲಿಕ್ಕಿಸಬೇಕು. ಇದನ್ನು ಕನ್ನಡ ಆವೃತ್ತಿಯಲ್ಲೂ 'ವಾಹನ ಶೋಧನೆ' (http://rto.kar.nic.in/kannada/index.asp) ವಿಭಾಗದಲ್ಲಿ ಪಡೆಯಬಹುದಾಗಿದೆ. ಇದೂ ಅಲ್ಲದಿದ್ದರೆ ನೇರವಾಗಿ (http://164.100.80.164/vehiclesearch/) ಎಂಬ ಲಿಂಕ್ ಗೆ ಭೇಟಿ ಕೊಡಬಹುದಾಗಿದೆ.

ವಾಹನ ಶೋಧನೆಗಾಗಿ ಇಲ್ಲಿ ಕ್ಕಿಕ್ಕಿಸಿರಿ

ಕರ್ನಾಟಕ ಆರ್ ಟಿಒ ಲಿಂಕ್ ಗಾಗಿ ಇಲ್ಲಿ ಕ್ಕಿಕ್ಕಿಸಿ

ಕರ್ನಾಟಕ ಆರ್ ಟಿಒ ಕನ್ನಡ ಆವೃತ್ತಿ

ಹಂತ 2

ಹಂತ 2

ತೆರೆದ ಪುಟದಲ್ಲಿ (http://164.100.80.164/vehiclesearch/) ಬಹಳ ಸರಳವಾಗಿ ಹೇಗೆ ವಾಹನ ಶೋಧನೆ ಮಾಡಬೇಕೆಂಬುದನ್ನು ಹೇಳಿಕೊಡಲಾಗಿದೆ. ವಾಹನ ದಾಖಲಾತಿ ನಂಬರ್, ಚಾಸೀ ನಂಬರ್ ಅಥವಾ ಎಂಜಿನ್ ನಂಬರ್ ಉಪಯೋಗಿಸಿ ಶೋಧನೆ ಮಾಡಬಹುದಾಗಿದೆ.

ಹಂತ 3

ಹಂತ 3

ಇಲ್ಲಿ ಕೊಟ್ಟಿರುವ ಸೂಚನೆಗಳ ಪ್ರಕಾರ ವಾಹನ ದಾಖಲಾತಿ ನಂಬರ್ ಮೂಖಾಂತರ ಇಲ್ಲಿ ವಾಹನ ಶೋಧಿಸುವ ಪ್ರಯತ್ನ ಮಾಡಲಾಗುತ್ತಿದೆ.

ಮೊದಲ ಕಾಲಂನಲ್ಲಿ ವಾಹನದ ಪ್ರಾರಂಭದ ಸೀರಿಯಲ್ ನಂಬರ್ (KA32V) ಹಾಗೂ ಎರಡನೇ ಕಾಲಂನಲ್ಲಿ ಕೊನೆಯ ನಾಲ್ಕು ಅಂಕಿಗಳ ನಂಬರ್ (7050) ನಮೂದಿಸಿದ ಬಳಿಕ ಶೋಧನೆಗಾಗಿ ಎಂಟರ್ ಬಟನ್ ಒತ್ತಿರಿ.

ಹಂತ 4

ಹಂತ 4

ಇಷ್ಟು ಮಾಡಿದರಾಯಿತು. ಮಾಲಿಕ ವಿವರ, ವಾಹನ ವಿವರ ಮತ್ತು ತೆರಿಗೆ ವಿವರಗಳೆಂಬ ಮೂರು ವಿಭಾಗಗಳಲ್ಲಾಗಿ ದಾಖಲೆಗಳು ತೆರೆದುಕೊಳ್ಳುತ್ತದೆ.

ಮಾಲಿಕ ವಿವರ: ಈ ಪೈಕಿ ವಾಹನ ಮಾಲಿಕ ವಿಭಾಗದಲ್ಲಿ ಮಾಲಿಕನ ಹೆಸರು, ದಾಖಲಾತಿ ನಂಬರ್, ದಾಖಲಾತಿ ದಿನಾಂಕ, ಮಾಲಿಕ ಸೀರಿಯಲ್ ನಂಬರ್ ಹಾಗೂ ಪ್ರಸ್ತುತ ಆರ್.ಟಿ.ಒ. ಹೆಸರು ಕಂಡುಬರುತ್ತದೆ.

ವಾಹನ ವಿವರ: ಇನ್ನು ವಾಹನ ವಿವರಗಳಲ್ಲಿ ವಾಹನ ವಿಭಾಗ, ಚಾಸೀ ನಂಬರ್, ತಯಾರಕ ಸಂಸ್ಥೆ, ವಾಹನ ಮಾದರಿ, ಎಂಜಿನ್ ನಂಬರ್, ವಾಹನ ವಿಭಾಗ ಮತ್ತು ಆರ್‌ಸಿ/ಫಿಟ್ನೆಸ್ ವಾಯಿದೆ ತೆರೆದುಕೊಳ್ಳುತ್ತದೆ.

ತೆರಿಗೆ ವಿವರ: ಅಂತಿಮವಾಗಿ ತೆರಿಗೆ ವಿವರದಲ್ಲಿ ತೆರಿಗೆ ವಿಧ ಹಾಗೂ ತೆರಿಗೆ ಪಾವತಿಸಿದ ಸಮಯದ ವಿವರಗಳು ಲಭ್ಯವಾಗುತ್ತದೆ.

ಕರ್ನಾಟಕ ಆರ್‌ಟಿಒ ಡಿಜಿಟಲ್‌ಮಯ; ಕೂತಲ್ಲೇ ವಾಹನ ಶೋಧಿಸಿ!

ವಿ.ಸೂ: ಮೇಲೆ ಕೊಟ್ಟಿರುವ ವಿವರಗಳು ವಾಹನ ನೊಂದಣಿ ದಾಖಲಾತಿಗೆ ಬದಲಿಯಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಲ್ಲದೆ ಪ್ರಮಾಣೀಕೃತ ಪ್ರತಿಗಳಿಗಾಗಿ ಸಂಬಂಧಿತ ಆರ್‌ಟಿಒಕಚೇರಿ ಅಥವಾ ಮೊಬೈಲ್ ಒನ್ ಸೇವೆಯನ್ನು ಸಂಪರ್ಕಿಸತಕ್ಕದ್ದು.

English summary
Karnataka has yet another feather in its cap by digitizing all vehicle information. Transport department has put up all vehicular information online so that citizens can easily check and verify vehicle details.
Story first published: Wednesday, September 9, 2015, 9:42 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more