Just In
- 8 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
- 10 hrs ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 12 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 1 day ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
Don't Miss!
- News
ವರ್ಷಕೊಮ್ಮೆ ಭದ್ರಾ ಜಲಾಶಯಕ್ಕೆ ಭೇಟಿ ನೀಡುವ ವಿಶೇಷ ಅತಿಥಿಗಳು!
- Movies
ಕೆ.ಎಲ್.ರಾಹುಲ್ ಜೊತೆ ಜರ್ಮನಿಗೆ ಹಾರಿದ ಆತಿಯಾ ಶೆಟ್ಟಿ
- Sports
ಟೈಮ್ಪಾಸ್ ಮಾಡಲು ರಮೀಜ್ ರಾಜಾ ಪಿಸಿಬಿ ಅಧ್ಯಕ್ಷರಾಗದ್ದಾರೆ: ಕಿಡಿಕಾರಿದ ಪಾಕ್ ಮಾಜಿ ಕ್ರಿಕೆಟಿಗ
- Finance
Gold Rate Today: ನಿಮ್ಮ ನಗರದಲ್ಲಿ ಜೂ.26ರಂದು ಚಿನ್ನದ ಬೆಲೆ ಎಷ್ಟಿದೆ ನೋಡಿ
- Technology
ಬೇರೆಯವರು ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿದ್ದರೆ ತಿಳಿಯಲು ಹೀಗೆ ಮಾಡಿ?
- Education
PGCIL Recruitment 2022 : 32 ಡೆಪ್ಯುಟಿ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಮಳೆಗಾಲದಲ್ಲಿ ವಾಹನ ಚಾಲನೆ ಮಾಡಲು ಇಲ್ಲಿವೆ ಕೆಲವು ಪ್ರಮುಖ ಟಿಪ್ಸ್
ಭಾರೀ ಮಳೆ ಬರುವ ಟೈಮಲ್ಲಿ ಕಾರು ಡ್ರೈವ್ ಮಾಡುವುದು ದೊಡ್ಡ ತಲೆನೋವು ಆಗಿರುತ್ತದೆ. ಯಾಕೆಂದ್ರೆ ಬಿಡದೆ ಸುರಿಯುತ್ತಿರುವ ಮಳೆಯನ್ನು ದಾಟಿಕೊಂಡು ಕಾರನ್ನು ಮುಂದಕ್ಕೆ ಚಲಾಯಿಸುವುದು ಅಷ್ಟು ಸುಲಭವಲ್ಲ. ಕಾರಿನ ಮುಂಭಾಗದ ಕನ್ನಡಿಗೆ ಮಳೆ ನೀರು ರಪ ರಪ ಬಿದ್ದು ಕನ್ನಡಿಯೆಲ್ಲ ಮಂಜಾಗುವುದರಿಂದ ಮುಂದಿನ ರಸ್ತೆಯೂ ಸರಿಯಾಗಿ ಕಾಣಿಸುವುದಿಲ್ಲ.

ಭಾರೀ ಮಳೆ ಬರುವಾಗ ಉಂಟಾಗುವ ಪ್ರವಾಹ ರೀರು ನೀರು ರಸ್ತೆಯಲ್ಲಿ ತುಂಬಿರುವಾಗ ಸರಿಯಾಗಿ ರಸ್ತೆ ಕಾಣುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಡ್ರೈವ್ ಮಾಡೋದು ಅಷ್ಟು ಸುಲಭವಲ್ಲ. ಸ್ವಲ್ಪ ಏರುಪೇರಾದ್ದರೂ ಆಪಾಯ ಕಟ್ಟಿಟ್ಟ ಬುತ್ತಿ. ಅದಕ್ಕಾಗಿ ಈ ಸರಿಯಾದ ಮುಂಜಾಗ್ರತೆ ವಹಿಸಿಕೊಳ್ಳುವುದು ಅತ್ಯಗತ್ಯ. ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವುದು ಸಾಮಾನ್ಯ ದಿನಗಳಲ್ಲಿ ವಾಹನ ಚಾಲನೆ ಮಾಡುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಮಳೆಗಾಲದಲ್ಲಿ ತೇವ ಹಾಗೂ ಜಾರುವ ರಸ್ತೆಯಲ್ಲಿ ವಾಹನಗಳು ಚಲಿಸ ಬೇಕಾಗುತ್ತದೆ. ಇದರಿಂದ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

ಮಳೆಗಾಲದಲ್ಲಿ ವಾಹನಗಳನ್ನು ಚಾಲನೆ ಮಾಡುವಾಗ ಹಲವು ಸಂಗತಿಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು. ಈ ಲೇಖನದಲ್ಲಿ ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವಾಗ ಪಾಲಿಸಬೇಕಾದ ಸಂಗತಿಗಳು ಯಾವುವು ಎಂಬುದನ್ನು ನೋಡೋಣ.

ಅಪರಿಚಿತ ರಸ್ತೆಗಳಲ್ಲಿ ಸಂಚರಿಸದಿರಿ
ಮಳೆಗಾಲದಲ್ಲಿ ಯಾವಾಗಲೂ ಪರಿಚಿತ ರಸ್ತೆಯನ್ನು ಬಳಸುವುದು ಉತ್ತಮ. ಅತಿಯಾದ ಮಳೆ ನೀರಿನ ಪ್ರವಾಹ ಅಥವಾ ಭೂಕುಸಿತ ಕೂಡ ಸಂಭವಿಸಬಹುದು. ಇದಲ್ಲದೇ ಹೊಸ ರಸ್ತೆ ತಗ್ಗು ಪ್ರದೇಶದಲ್ಲಿ ಹಾದು ಹೋದರೆ ಇಂಜಿನ್ ಹಾಗೂ ಒಳಭಾಗಕ್ಕೆ ನೀರು ನುಗ್ಗುವ ಸಾಧ್ಯತೆಗಳು ಹೆಚ್ಚಿವೆ.

ಸ್ಥಗಿತಗೊಂಡ ಎಂಜಿನ್ ಮತ್ತೆ ಸ್ಟಾರ್ಟ್ ಮಾಡಬೇಡಿ
ನೀರಿನ ಆಳವನ್ನು ನಿರ್ಣಯಿಸಲು ಕಷ್ಟವಾಗುವುದರಿಂದ ಪ್ರವಾಹಕ್ಕೆ ಸಿಲುಕಿದ ರಸ್ತೆಗಳ ಮೂಲಕ ಓಡಿಸದಂತೆ ನಾವು ನಿಮಗೆ ಹೆಚ್ಚು ಶಿಫಾರಸು ಮಾಡುತ್ತೇವೆ. ಒಂದು ವೇಲೆ ನೀರು ತುಂಬಿದ ಪ್ರದೇಶದಲ್ಲಿ ಕಾರು ಸಿಲುಕಿಕೊಂಡ ಸಂದರ್ಭದಲ್ಲಿ ಎಂಜಿನ್ ಅನ್ನು ಮತ್ತೆ ಆನ್ ಮಾಡಬೇಡಿ. ಏಕೆಂದರೆ ನೀರು ಎಂಜಿನ್‌ಗೆ ಹೋಗಬಹುದು ಮತ್ತು ಇದು ಎಂಜಿನ್ ಅನ್ನು ಮತ್ತಷ್ಟು ಹಾನಿಗೊಳಿಸುತ್ತದೆ. ಈ ಪರಿಸ್ಥಿತಿಯಲ್ಲಿ, ಟೂಯಿಂಗ್ ವಾಹನವನ್ನು ಕರೆಯುವುದು ಉತ್ತಮವಾಗಿದೆ.

ನೀರು ಹಾರಿಸುವುದು
ರಸ್ತೆಯಲ್ಲಿ ನಿಂತ ನೀರಲ್ಲಿ ವೇಗವಾಗಿ ವಾಹನ ಓಡಿಸಿ ನೀರು ಹಾರಿಸುವುದು ತುಂಬಾ ಮಜಾ ಕೊಡುತ್ತದೆ. ಆದರೆ, ಅದು ಅಷ್ಟೇ ಪ್ರಮಾಣದಲ್ಲಿ ಅಪಾಯಕಾರಿ ಎಂಬುದನ್ನು ಕೂಡ ಮರೆಯಬಾರದು. ಇದರಿಂದ ನಿಯಂತ್ರಣ ತಪ್ಪವ ಸಾಧ್ಯತೆಗಳು ಕೂಡ ಇದೆ.

ಅದೇ ರೀತಿ ನೀರಿನೊಳಗೆ ಅಂಟು ಮಣ್ಣು ಇದ್ದರೆ ಟಯರ್ ಗ್ರಿಪ್ ಕಳೆದುಕೊಳ್ಳಬಹುದು. ಕೆಲವೊಮ್ಮೆ ನೀರು ನೀಮ್ಮ ಕಾರಿನ ಗಾಜಿಗೆ ಎರಗುವುದರಿಂದ ಮುಂದಿನ ರಸ್ತೆ ಅಗೋಚರವಾಗುತ್ತದೆ. ಇದು ಕೂಡಾ ಅಪಾಯಕ್ಕೆ ಆಹ್ವಾನ ಕೊಟ್ಟಂತಯೇ. ಕಾರಿನ ಕೆಳಭಾಗದಲ್ಲಿ ಹೆಚ್ಚು ಕೊಳೆಯನ್ನು ಸಂಗ್ರಹಿಸುತ್ತದೆ

ಹಠಾತ್ ಬ್ರೇಕಿಂಗ್
ಹಠಾತ್ ಬ್ರೇಕಿಂಗ್ ಮಾಡಿದರೆ ನಿಮ್ಮ ಕಾರನ್ನು ಹಿಂಬದಿಯಿಂದ ಯಾರಾದರೂ ಹೊಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಇದು ಎಂಜಿನ್ ಒಳಗೆ ನೀರು ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆನೀರು ಎಂಜಿನ್‌ಗೆ ಪ್ರವೇಶಿಸಬಹುದು ಮತ್ತು ಇದು ಅನಾಹುತ ಸೃಷ್ಟಿಸುತ್ತದೆ. ಇನ್ನು ಹೆಚ್ಚು ನೀರು ತುಂಬಿರುವ ಸ್ಥಳದಲ್ಲಿ ನೀರು ಎಕ್ಸಾಸ್ಟ್ ಮೂಲಕ ಎಂಜಿನ್‌ನೊಳಗೆ ಪ್ರವೇಶಿಸಬಹುದು.

ಔಟರ್ ಲೇನ್‌ನಲ್ಲಿ ವಾಹನ ಚಾಲನೆ
ಔಟರ್ ಲೇನ್‌ನಲ್ಲಿ ವಾಹನ ಚಲಾಯಿಸದಿರಿ. ಅದರ ಮೇಲೆ ಚಾಲನೆ ಮಾಡಿದರೆ ನಿಮ್ಮ ಕಾರು ಪ್ರವಾಹಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಯಾಕೆಂದರೆ ತಗ್ಗು ಪ್ರದೇಶದಲ್ಲಿ ನೀರು ಬೇಗ ತುಂಬುತ್ತದೆ. ಈ ಸಂದರ್ಭದಲ್ಲಿ ಈ ಮಾರ್ಗದ ಮೂಲಕ ಕಾರು ಚಾಲನೆ ಮಾಡುವುದು ಅಸಾಧ್ಯವಾಗುತ್ತದೆ.

ಬ್ರೇಕ್‌ಗಳು, ಲೈಟ್‌ಗಳು, ವೈಪರ್‌ಗಳು ಮತ್ತು ವಾಷರ್‌ಗಳನ್ನು ಪರಿಶೀಲಿಸಿ
ಆ ಮಳೆಗಾಲದ ಮೊದಲು ನಿಮ್ಮ ಬ್ರೇಕ್‌ಗಳು, ಲೈಟ್‌ಗಳು, ವೈಪರ್ ಮತ್ತು ವಾಷರ್‌ಗಳನ್ನು ಪರಿಶೀಲಿಸುವುದು ಉತ್ತಮ, ಏಕೆಂದರೆ ಇವುಗಳು ಭಾರೀ ಮಳೆಯ ಸಮಯದಲ್ಲಿ ನಿರ್ಣಾಯಕ. ಇದರಿಂದ ಕಾರು ಚಲಾಯಿಸುವ ಮುನ್ನ ಇವುಗಳನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ.

ಕಾದುನೋಡಿ
ಮಳೆಯು ಭಾರೀ ಪ್ರಮಾಣದಲ್ಲಿದ್ದರೆ ಮತ್ತು ರಸ್ತೆಯಲ್ಲಿ ಪ್ರವಾಹದ ಸ್ಥಿತಿಯ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ ಕಾದುನೋಡಿ. ಮಳೆ ಕಡಿಮೆಯಾದ ಬಳಿಕ ತೆರಳಬಹುದು. ಒಂದು ವೇಳೆ ನೀರಿನಲ್ಲಿ ಕಾರು ಸಿಲುಕಿಕೊಂಡರೆ ಮತ್ತಷ್ಟು ಕಷ್ಟಕರವಾಗುತ್ತದೆ.

ನಿಮ್ಮ ಕಾರಿನಲ್ಲಿ ತಿಂಡಿಗಳು ಮತ್ತು ನೀರನ್ನು ಇರಿಸಿ
ಮಳೆಗಾಲದ ಸಮಯದಲ್ಲಿ ದೀರ್ಘ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯವಾಗಿದೆ, ಆದ್ದರಿಂದ ಒಂದೆರಡು ನೀರಿನ ಬಾಟಲಿಗಳನ್ನು ಇರಿಸಿಕೊಳ್ಳವುದು ಉತ್ತಮ. ಕೆಲವು ಬಾರೀ ಸಂಪೂರ್ಣವಾಗಿ ರಸ್ತೆಗಳು ಬ್ಲಾಕ್ ಆದ ಸಂದರ್ಭದಲ್ಲಿ ಹೆಚ್ಚಿನ ಸಮಯ ಅಲ್ಲೇ ಕಳೆಯಬಹುದು.

ಸರ್ವೀಸ್ ಮಾಡಿಸಿ
ಮಳೆಗಾಲದಲ್ಲಿ ನಿಮ್ಮ ವಾಹನವನ್ನು ಸರ್ವೀಸ್ ಮಾಡಿಸಿ, ಇದನ್ನು ಮರೆಯದಿರಿ. ಮಳೆಗಾಲದಲ್ಲಿ ವಾಹನಗಳು ವಿವಿಧ ಸಮಸ್ಯೆಗಳಿಗೆ ಸಿಲುಕುತ್ತವೆ. ಒಂದು ವೇಳೆ ವಾಹನದಲ್ಲಿ ಬೇರೆ ಸಣ್ಣ ಸಮಸ್ಯೆ ಇದ್ದರೆ ಅದರಿಂದ ದೊಡ್ಡ ಸಮಸ್ಯೆಗಳು ಉಂಟಾಗಬಹುದು. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಂದ ಪ್ರತಿ ವರ್ಷ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಗಳು ಬಳಸಲಾಗದಷ್ಟು ರೀತಿಯಲ್ಲಿ ಹದಗೆಡುತ್ತವೆ. ಹದಗೆಟ್ಟ ರಸ್ತೆಗಳು ಸಹ ರಸ್ತೆ ಅಪಘಾತಳಿಗೆ ಕಾರಣವಾಗುತ್ತಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರೀ ಮಳೆ ಬರುವಾಗ ರಸ್ತೆಗಳು ಸ್ಪಷ್ಟವಾಗಿ ಕಾಣದೇ ಇದ್ದರೆ ಅಪಘಾತಗಳಾಗುವ ಸಾಧ್ಯತೆಗಳಿರುತ್ತವೆ. ಕಾರುಗಳು ಮಳೆಯಲ್ಲಿ ಸಂಪೂರ್ಣವಾಗಿ ತೇವವಾದರೆ ವೈಪರ್'ಗಳನ್ನು ಆನ್ ಮಾಡಿ ವಿಂಡ್ ಶೀಲ್ಡ್ ಸ್ಪಷ್ಟವಾಗಿ ಕಾಣಿಸಿದ ನಂತರವೇ ಮುಂದೆ ಚಲಿಸಿ.