ಹೊಸ ಕಾರು ಖರೀದಿಗೆ ಆರು ಅತ್ಯುತ್ತಮ ಸಲಹೆಗಳು

Posted By: Staff

ಮೊದಲ ಸಲ ಕಾರು ಖರೀದಿಸುವುದೆಂದರೆ ಗೊಂದಲ ಸಾಮಾನ್ಯ. ಈ ಸಮಯದಲ್ಲಿ ಪಬ್ಲಿಕ್ ಪರೀಕ್ಷೆ ಬರೆಯುವ ವಿದ್ಯಾರ್ಥಿಯಂತೆ ಚಡಪಡಿಸುವರಿದ್ದಾರೆ. ಭಾರಿ ಮೊತ್ತವೊಂದನ್ನು ಹೂಡಿಕೆ ಮಾಡಿ ಆಮೇಲೆ ಮೋಸ ಹೋಗಬಾರದಲ್ವ? ಹೀಗಾಗಿ ಈ ಗೊಂದಲ, ಚಡಪಡಿಕೆ ಸಾಮಾನ್ಯ.

ನಿಮ್ಮ ಕಾರು ಖರೀದಿ ಪ್ರಕ್ರಿಯೆ ಸುಲಭವಾಗಲು ಇಲ್ಲೊಂದಿಷ್ಟು ಸಲಹೆಗಳಿವೆ. ಒಮ್ಮೆ ಓದಿಕೊಳ್ಳಿ. ಕೆಳಗಿರುವ ಫೋಟೊ ಫೀಚರ್ ನೋಡಿಕೊಂಡು ಸೂಕ್ತ ಮಾಹಿತಿ ಪಡೆಯಬಹುದು. ಇದು ಸುಲಭ, ಸರಳ, ಸಲಹೆ. ಹೆಚ್ಚಿನ ಮಾಹಿತಿಗಳು ಬೇಕಿದ್ದರೆ ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ಬರೆಯಿರಿ.

ನಿಮ್ ಬಜೆಟ್ ಎಷ್ಟು?: ಹೊಸ ಕಾರು ಖರೀದಿಸಲು ಎಷ್ಟು ದುಡ್ಡು ಹೂಡಿಕೆ ಮಾಡಲು ನಿಮಗೆ ಸಾಧ್ಯವಿದೆ ಎಂದು ತಿಳಿದುಕೊಳ್ಳಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿದ್ದರೆ ಲಗ್ಷುರಿ ಕಾರಿಗೆ ಬ್ಯಾಂಕ್ ಸಾಲ ಪಡೆಯದಿರಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂಬಂತೆ ಕಾರಿಗೆ ಬಜೆಟ್ ನಿರ್ಣಯಿಸಿ.

ಸೂಕ್ತ ಕಾರು ಆಯ್ಕೆ ಮಾಡ್ಕೊಳ್ಳಿ: ನಿಮ್ಮ ಮನೆಯಲ್ಲಿ ಬರೀ ಇಬ್ಬರು ಇರೋದು ಅಂದಿಟ್ಕೊಳ್ಳಿ. ಹಾಗಾದ್ರೆ ನಿಮಗೆ ಏಳು ಸೀಟಿನ ಕಾರಿನ ಅಗತ್ಯ ಅಷ್ಟಾಗಿ ಬರದು. ನಿಮ್ಮ ಅಗತ್ಯಕ್ಕೆ ತಕ್ಕಂತಹ ಸೂಕ್ತ ಕಾರೊಂದನ್ನು ಆಯ್ಕೆ ಮಾಡಿಕೊಳ್ಳಿ. ಅದಕ್ಕಾಗಿ ಕಾರು ವಿಮರ್ಶೆ ಓದಲು ಮರೆಯದಿರಿ.

ಡೀಸೆಲಾ? ಪೆಟ್ರೋಲಾ: ಇದು ಇತ್ತೀಚೆಗೆ ಆರಂಭವಾದ ಗೊಂದಲ. ತಿಂಗಳಿಗೆ ಕಡಿಮೆ ಪ್ರಯಾಣಿಸುವರು ನೀವಾದರೆ ಪೆಟ್ರೋಲ್ ಕಾರು ಖರೀದಿಸಿ. ತಿಂಗಳಿಗೆ ಸಾವಿರಾರು ಕಿ.ಮೀ. ಪ್ರಯಾಣಿಸುವ ಅಗತ್ಯ ಕಂಡು ಬಂದ್ರೆ ಡೀಸೆಲ್ ಕಾರು ಖರೀದಿಸಬಹುದು.

ಓಲ್ಡ್ ಮಾಡೆಲ್ ಬೇಡ: ಮಾರುಕಟ್ಟೆಯಿಂದ ಎತ್ತಂಗಡಿಯಾಗಲಿರುವ ಕಾರು ಖರೀದಿಸದಿರಿ. ಲೇಟೆಸ್ಟ್ ಆಗಿ ರಸ್ತೆಗಿಳಿದ ಕಾರನ್ನು ಆಯ್ಕೆ ಮಾಡಿಕೊಳ್ಳಿ. ಹಳೆ ಮಾಡೆಲ್ ಬೇಡ. ಹೊಸ ಮಾಡೆಲಿಗೆ ಮರು ಮಾರಾಟ ಮೌಲ್ಯ ಕೂಡ ಹೆಚ್ಚಿದೆ.

ರಿಸರ್ಚ್ ಮಾಡಿ: ಕಾರು ಖರೀದಿಗೆ ಮುನ್ನ ನಮ್ಮ ರಿಸರ್ಚ್ ಟೂಲ್ ಮೂಲಕ ಸಂಶೋಧನೆ ಮಾಡಲು ಮರೆಯದಿರಿ. ರಸ್ತೆಯಲ್ಲಿರುವ ಎಲ್ಲಾ ಕಾರುಗಳ ಕುರಿತು ಖಚಿತ ಮಾಹಿತಿ ಪಡೆಯಲು ಇದು ನೆರವಾಗಲಿದೆ. ಕಾರಿನೊಳಗೆ ಯಾವೆಲ್ಲ ಫೀಚರುಗಳಿವೆ ಎಂಬುದನ್ನೂ ತಿಳಿದುಕೊಳ್ಳಿರಿ. ಯಾವ ಕಂಪನಿಯ ಕಾರು ಸೂಕ್ತವೆನ್ನುವುದನ್ನೂ ರಿಸರ್ಚ್ ಮಾಡಿರಿ.

ಸೂಕ್ತ ಡೀಲರ್ ಯಾರು?: ಅನಾಧಿಕೃತ ಡೀಲರುಗಳಿಂದ ದೂರವಿರಿ. ಕಂಪನಿಯ ಅಧಿಕೃತ ಡೀಲರುಗಳಿಂದಲೇ ಕಾರು ಖರೀದಿಸಿ. ಖರೀದಿ ನಂತರದ ಸೇವೆಗಳು ಅಧಿಕೃತ ಡೀಲರುಗಳಿಂದ ದೊರಕುತ್ತದೆ.

To Follow DriveSpark On Facebook, Click The Like Button
ಮೊದಲ ಟಿಪ್ಸ್: ನಿಮ್ ಬಜೆಟ್ ಎಷ್ಟು?:

ಮೊದಲ ಟಿಪ್ಸ್: ನಿಮ್ ಬಜೆಟ್ ಎಷ್ಟು?:

ಹೊಸ ಕಾರು ಖರೀದಿಸಲು ಎಷ್ಟು ದುಡ್ಡು ಹೂಡಿಕೆ ಮಾಡಲು ನಿಮಗೆ ಸಾಧ್ಯವಿದೆ ಎಂದು ತಿಳಿದುಕೊಳ್ಳಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿದ್ದರೆ ಲಗ್ಷುರಿ ಕಾರಿಗೆ ಬ್ಯಾಂಕ್ ಸಾಲ ಪಡೆಯದಿರಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂಬಂತೆ ಕಾರಿಗೆ ಬಜೆಟ್ ನಿರ್ಣಯಿಸಿ.

ಟಿಪ್ಸ್ 2: ಸೂಕ್ತ ಕಾರು ಆಯ್ಕೆ ಮಾಡ್ಕೊಳ್ಳಿ:

ಟಿಪ್ಸ್ 2: ಸೂಕ್ತ ಕಾರು ಆಯ್ಕೆ ಮಾಡ್ಕೊಳ್ಳಿ:

ನಿಮ್ಮ ಮನೆಯಲ್ಲಿ ಬರೀ ಇಬ್ಬರು ಇರೋದು ಅಂದಿಟ್ಕೊಳ್ಳಿ. ಹಾಗಾದ್ರೆ ನಿಮಗೆ ಏಳು ಸೀಟಿನ ಕಾರಿನ ಅಗತ್ಯ ಅಷ್ಟಾಗಿ ಬರದು. ನಿಮ್ಮ ಅಗತ್ಯಕ್ಕೆ ತಕ್ಕಂತಹ ಸೂಕ್ತ ಕಾರೊಂದನ್ನು ಆಯ್ಕೆ ಮಾಡಿಕೊಳ್ಳಿ. ಅದಕ್ಕಾಗಿ ಕಾರು ವಿಮರ್ಶೆ ಓದಲು ಮರೆಯದಿರಿ.

ಟಿಪ್ಸ್ 3: ಡೀಸೆಲಾ? ಪೆಟ್ರೋಲಾ:

ಟಿಪ್ಸ್ 3: ಡೀಸೆಲಾ? ಪೆಟ್ರೋಲಾ:

ಇದು ಇತ್ತೀಚೆಗೆ ಆರಂಭವಾದ ಗೊಂದಲ. ತಿಂಗಳಿಗೆ ಕಡಿಮೆ ಪ್ರಯಾಣಿಸುವರು ನೀವಾದರೆ ಪೆಟ್ರೋಲ್ ಕಾರು ಖರೀದಿಸಿ. ತಿಂಗಳಿಗೆ ಸಾವಿರಾರು ಕಿ.ಮೀ. ಪ್ರಯಾಣಿಸುವ ಅಗತ್ಯ ಕಂಡು ಬಂದ್ರೆ ಡೀಸೆಲ್ ಕಾರು ಖರೀದಿಸಬಹುದು.

ಟಿಪ್ಸ್ ನಾಲ್ಕು: ಓಲ್ಡ್ ಮಾಡೆಲ್ ಬೇಡ:

ಟಿಪ್ಸ್ ನಾಲ್ಕು: ಓಲ್ಡ್ ಮಾಡೆಲ್ ಬೇಡ:

ಮಾರುಕಟ್ಟೆಯಿಂದ ಎತ್ತಂಗಡಿಯಾಗಲಿರುವ ಕಾರು ಖರೀದಿಸದಿರಿ. ಲೇಟೆಸ್ಟ್ ಆಗಿ ರಸ್ತೆಗಿಳಿದ ಕಾರನ್ನು ಆಯ್ಕೆ ಮಾಡಿಕೊಳ್ಳಿ. ಹಳೆ ಮಾಡೆಲ್ ಬೇಡ. ಹೊಸ ಮಾಡೆಲಿಗೆ ಮರು ಮಾರಾಟ ಮೌಲ್ಯ ಕೂಡ ಹೆಚ್ಚಿರುತ್ತದೆ.

ಟಿಪ್ಸ್ 5: ರಿಸರ್ಚ್ ಮಾಡಿ

ಟಿಪ್ಸ್ 5: ರಿಸರ್ಚ್ ಮಾಡಿ

ಕಾರು ಖರೀದಿಗೆ ಮುನ್ನ ನಮ್ಮ ರಿಸರ್ಚ್ ಟೂಲ್ ಮೂಲಕ ಸಂಶೋಧನೆ ಮಾಡಲು ಮರೆಯದಿರಿ. ರಸ್ತೆಯಲ್ಲಿರುವ ಎಲ್ಲಾ ಕಾರುಗಳ ಕುರಿತು ಖಚಿತ ಮಾಹಿತಿ ಪಡೆಯಲು ಇದು ನೆರವಾಗಲಿದೆ. ಕಾರಿನೊಳಗೆ ಯಾವೆಲ್ಲ ಫೀಚರುಗಳಿವೆ ಎಂಬುದನ್ನೂ ತಿಳಿದುಕೊಳ್ಳಿರಿ. ಯಾವ ಕಂಪನಿಯ ಕಾರು ಸೂಕ್ತವೆನ್ನುವುದನ್ನೂ ರಿಸರ್ಚ್ ಮಾಡಿರಿ.

ಟಿಪ್ಸ್ ಆರು: ಸೂಕ್ತ ಡೀಲರ್ ಯಾರು

ಟಿಪ್ಸ್ ಆರು: ಸೂಕ್ತ ಡೀಲರ್ ಯಾರು

ಅನಾಧಿಕೃತ ಡೀಲರುಗಳಿಂದ ದೂರವಿರಿ. ಕಂಪನಿಯ ಅಧಿಕೃತ ಡೀಲರುಗಳಿಂದಲೇ ಕಾರು ಖರೀದಿಸಿ. ಖರೀದಿ ನಂತರದ ಸೇವೆಗಳು ಅಧಿಕೃತ ಡೀಲರುಗಳಿಂದ ದೊರಕುತ್ತದೆ.

ಓದಿ: ಕಾರು ಖರೀದಿ ಗೊಂದಲಕ್ಕೆ ಟೆಕ್ಕಿ ಅರವಿಂದನ ಟ್ರಿಕ್

English summary
New Car Buying tips. Which Car to buy? Petrol or Diesel?, Which car company best? how to chose best dealer? How to research car? Read all about car buying tips.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark