ಕೀಲಿಕೈ ಇಲ್ಲದೆ ಕಾರಿನ ಡೋರ್ ಓಪನ್ ಮಾಡಿ

ಒಮ್ಮೊಮ್ಮೆ ಹೀಗೂ ಆಗುವುದುಂಟು. ಕಾರಿನೊಳಗೆ ಕೀಲಿಕೈ ಬಿಟ್ಟು ಹೊರಗೆ ಬಂದು ಡೋರ್ ಹಾಕಿಬಿಡುತ್ತಿರಿ. ಅಥವಾ ಕಾರಿನ ಕೀಲಿಕೈ ತುರ್ತು ಪರಿಸ್ಥಿತಿಯಲ್ಲಿ ನಿಮಗೆ ದೊರಕದೆ ಇರಬಹುದು. ಅಂತಹ ಸಮಯದಲ್ಲಿ ಕಾರಿನ ಡೋರ್ ಅನ್ ಲಾಕ್ ಮಾಡಿ ಕಾರಿನೊಳಗೆ ಪ್ರವೇಶಿಸುವುದು ಹೇಗೆ?

ಕೀಲಿಕೈ ಅಪರೇಟರ್ ನಿಮ್ಮ ಅನಿವಾರ್ಯದ ಸಮಯಕ್ಕೆ ದೊರಕದೆ ಇರಬಹುದು. ಅಥವಾ ನೀವಿರುವ ಸ್ಥಳಕ್ಕೆ ಅವನನ್ನು ಕರೆದುಕೊಂಡು ಬಂದು ಅವನು ಬೇಡಿಕೆಯಿಟ್ಟಷ್ಟು ಹಣ ನೀಡುವ ಮನಸ್ಸು ನಿಮಗಿಲ್ಲದಿರಬಹುದು.

ಕಾರಿನ ಡೋರ್ ಅನ್ ಲಾಕ್ ಮಾಡಿ ಒಳಗಿರುವ ಕೀಲಿಕೈ ತೆಗೆದುಕೊಳ್ಳಬಹುದು. ಅದಕ್ಕೂ ನಮ್ಮಲ್ಲಿ ಸಲಹೆಗಳಿವೆ. ಆದರೆ ಈ ಸಲಹೆ ದುರ್ಬಳಕೆ ಆಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಸಲಹೆಯನ್ನು ಹೆಚ್ಚು ಸ್ಪಷ್ಟವಾಗಿ, ನಿಖರವಾಗಿ, ವಿವರವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತೆ ನೀಡಲಾಗಿಲ್ಲ. ಅರ್ಥಮಾಡಿಕೊಳ್ಳಿ.

* ಒಂದು ಚಪ್ಪಟೆ ಲೋಹದ ತುಂಡು ತೆಗೆದುಕೊಳ್ಳಿ. ವೆದರ್ ಸ್ಟ್ರೀಪಿಂಗ್ ಮತ್ತು ವಿಂಡೋ ಜಾಯಿಂಟ್ ಆಗೋ ಸ್ಥಳದಲ್ಲಿ ಈ ಲೋಹದ ಪೀಸ್ ತೂರಿಸಿಬಿಡಿ. ಕಾರಿನ ಒಳಭಾಗದಲ್ಲಿರುವ ಡೋರ್ ಅನ್ ಲಾಕ್ ಮಾಡೋ ಗುಂಡಿಯನ್ನು ಲಿವರ್ ಪೀಸ್ ಮೂಲಕ ಹುಡುಕಿ. ಆಮೇಲೆ ಸ್ವಲ್ಪ ಮೇಲೆ ಕೆಳಗೆ ಮಾಡುವ ಮೂಲಕ ನಾಜೂಕಾಗಿ ಡೋರ್ ಲಾಕ್ ಬಟನ್ ನ್ನು ಮೇಲಕ್ಕೆ ಮಾಡಿಬಿಡಿ. ಈ ಸಮಯದಲ್ಲಿ ವೆದರ್ ಸ್ಟ್ರೀಪಿಂಗ್ ವಯರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆಯಿರಲಿ.

* ಈ ವಿಧಾನದ ಮೂಲಕ ಹೈ ಎಂಡ್ ಕಾರುಗಳ ಡೋರ್ ಓಪನ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅದರಲ್ಲಿ ಆಂಟಿ ಥೆಫ್ಟ್ ಅಥವಾ ಕಳ್ಳರು ಡೋರ್ ತೆಗೆದಾಗ ಎಚ್ಚರಿಸುವ ಸಾಧನವಿರುತ್ತದೆ. ಆದರೆ ನಿಮ್ಮಲ್ಲಿ ಸ್ಯಾಟಲೈಟ್ ಸಿಸ್ಟಮ್ ಇದ್ದರೆ ಕಂಪನಿಗೆ ಮಾಹಿತಿ ನೀಡಿದರೆ ಕಾರು ತಯಾರಿಕಾ ಕಂಪನಿಯೇ ಸ್ಯಾಟಲೈಟ್ ಸಿಸ್ಟಮ್ ಮೂಲಕ ಡೋರ್ ಓಪನ್ ಮಾಡಿಕೊಡುತ್ತಾರೆ.

* ಇನ್ನೊಂದು ವಿಧಾನದ ಮೂಲಕ ಕಾರಿನ ಡೋರ್ ತೆರೆಯಬಹುದಂತೆ. ಈ ಕುರಿತು ನಮಗೆ ಖಚಿತತೆಯಿಲ್ಲ. ಆದರೂ ಕೊಂಚ ಇಂಟ್ರೆಸ್ಟಿಂಗ್ ಆಗಿರೋ ಕಾರಣ ನಿಮ್ಮ ಗಮನಕ್ಕೆ ತರಲಾಗಿದೆ. ನಿಮ್ಮ ಕಾರು ರಿಮೋಟ್ ಕಾರು ಕೀಲಿಕೈ ಆಪರೇಟಿಂಗ್ ಹೊಂದಿದ್ದರೆ ನಿಮ್ಮ ಮೊಬೈಲ್ ಫೋನ್ ಮೂಲಕವೂ ಕಾರಿನ ಡೋರ್ ತೆರೆಯಬಹುದಂತೆ. ಆದರೆ ಕೀಲಿಕೈ ಕಾರಿನೊಳಗಿದ್ದರೆ ಈ ವಿಧಾನ ಕೆಲಸ ಮಾಡದು. ಎಲ್ಲದರೂ ಮನೆಯಲ್ಲಿ ಕಾರಿನ ಕೀಲಿಕೈ ಇದ್ದು, ನಿಮ್ಮ ಕಾರು ದೂರದಲ್ಲಿದ್ದರೆ ಮೊಬೈಲ್ ಫೋನ್ ಮೂಲಕ ತೆರೆಯಬಹುದು. ರೇಡಿಯೋ ಅಲೆಗಳ ಮೂಲಕ ಕೆಲಸ ಮಾಡೋ ಕೀಲಿಕೈಗಳಿಗೆ ಮಾತ್ರ ಇದು ಅನ್ವಯಿಸುತ್ತದೆ.

ರಿಮೋಟ್ ಕಾರು ಕೀಲಿಕೈ ಮನೆಯಲ್ಲಿದ್ದರೆ ಮನೆಯಲ್ಲಿರುವರಿಗೆ ಫೋನ್ ಮಾಡಿರಿ. ನಿಮ್ಮ ಫೋನು ಕಾರಿನ ಸಮೀಪವಿರಲಿ. ಮನೆಯಲ್ಲಿರುವರು ರಿಮೋಟ್ ಕಾರು ಕೀಲಿಕೈ ಬಟನ್ ಅದುಮುತ್ತಿದ್ದರೆ ರೇಡಿಯೋ ಅಲೆ ನಿಮ್ಮ ಮೊಬೈಲ್ ಮೂಲಕ ಬಂದು ಕಾರಿನ ಡೋರ್ ಅನ್ ಲಾಕ್ ಮಾಡುವ ಸಾಧ್ಯತೆ ಹೆಚ್ಚಿದೆಯಂತೆ.

ವಿಶೇಷ ಸೂಚನೆ: ಅನ್ ಲಾಕ್ ಮಾಡುವ ಮುನ್ನ ಡೋರ್ ಲಾಕ್ ಆಗಿರುವ ಕಾರು ನಿಮ್ಮದೆಂದು ಖಚಿತಪಡಿಸಿಕೊಳ್ಳಿ.

More from DriveSpark

Article Published On: Tuesday, March 6, 2012, 10:44 [IST]
English summary
Open car door without key. Before trying to Open car door without key, confirm the car is yours to open. If it was your car then try to unlock car door without key with this Tips.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+