ಬೈಕ್ ರೈಡಿಂಗ್ ಹೇಗೆ? 10 ಸರಳ ಚಾಲನಾ ಪಾಠ

Written By:

ಪ್ರತಿಯೊಬ್ಬ ಸವಾರನೂ ತಮ್ಮ ಮೊದಲ ಚಾಲನಾ ದಿನವನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಹಲವು ರೋಚಕತೆಗೆ ಸಾಕ್ಷಿಯಾಗಿರುವ ಆ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬೈಕ್ ಓಡಿಸುವ ಅನುಭವ ಪದಗಳಲ್ಲಿ ವಿವರಿಸುವುದು ಕಷ್ಟ. ಏಕೆಂದರೆ ಬೈಕ್ ರೈಡಿಂಗ್ ಮಾಡುವಾಗ ಸಿಗುವ ಖುಷಿ ಅಷ್ಟಿಷ್ಟಲ್ಲ.

12 ವರ್ಷದ ಬಾಲಕರಿಂದ ಹಿಡಿದು ಚಿಕ್ಕ ಹುಡುಗಿಯರು ಸ್ಕೂಟಿ ಮೇಲೆ ಸವಾರಿ ಹೊರಡುತ್ತಾರೆ. ಕಾನೂನು ಪ್ರಕಾರ ಮಕ್ಕಳ ವಾಹನ ಸವಾರಿ ತಪ್ಪಾದರೂ ಚಾಲನಾ ಕಲೆ ಕರಗತ ಮಾಡಲು ಪ್ರಾಯದ ಪರಿಧಿಯಿರುವುದಿಲ್ಲ ಎಂಬುದು ಇದರಿಂದಲೇ ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ಮೊದಲ ಬಾರಿ ಬೈಕ್ ಓಡಿಸುವವರಿಗಾಗಿ 10 ಸರಳ ಸಲಹೆಗಳನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಒದಗಿಸಲಿದೆ.

ಬೈಕ್ ರೈಡಿಂಗ್ ಹೇಗೆ? 10 ಸರಳ ಚಾಲನಾ ಪಾಠ

ಬೈಕ್‌ನಲ್ಲಿ ಕುಳಿತುಕೊಳ್ಳುವ ಮೊದಲು ನೀವು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಕಲಿಕಾ ಚಾಲನಾ ಪರವಾನಗಿ (ಎಲ್ ಎಲ್) ಗಿಟ್ಟಿಸಿಕೊಳ್ಳಬೇಕಾಗಿರುವುದು ಕಡ್ಡಾಯ. ಆರು ತಿಂಗಳ ಕಾಲಾವಧಿಯನ್ನು ಹೊಂದಿರುವ ಕಲಿಕಾ ಪರವಾನಗಿ ನಿಮಗೆ ಸಾರಿಗೆ ಇಲಾಖೆ ನೀಡುತ್ತಿರುವ ಮೊದಲ ಅಧಿಕೃತ ಮಾನ್ಯತೆಯಾಗಿದೆ.

1. ಮಾನಸಿಕವಾಗಿ ಸಿದ್ಧತೆ

1. ಮಾನಸಿಕವಾಗಿ ಸಿದ್ಧತೆ

ಯಾವುದೇ ಒಂದು ವಿಷಯವನ್ನು ಆರಂಭಿಸುವ ಮೊದಲು ಮಾನಸಿಕ ಸಿದ್ಧತೆ ಅತಿ ಅಗತ್ಯವಾಗಿದೆ. ಪ್ರಪ್ರಥಮ ಬಾರಿಗೆ ಬೈಕ್ ಓಡಿಸುವವರಿಗೆ ಸಹಜವಾಗಿಯೇ ಮನದಲ್ಲಿ ಭಯ ಕಾಡುತ್ತದೆ. ಎಲ್ಲಿಯಾದರೂ ಎಡವಟ್ಟಾದಿತೇ ಎಂಬ ಬಗ್ಗೆ ಆತಂಕವಿರುತ್ತದೆ. ಪರಿಣಾಮ ನೀವು ಮಾಡಿದ ಸಿದ್ಧತೆಗಳೆಲ್ಲವೂ ತಲೆ ಕೇಳಾಗುವ ಸಾಧ್ಯತೆಯಿದೆ. ಹಾಗಾಗಿ ಮೊದಲು ಮಾನಸಿಕವಾಗಿ ಸಿದ್ಧರಾಗಿರಿ.

2. ಸರಿಯಾದ ಬೈಕ್ ಆಯ್ಕೆ

2. ಸರಿಯಾದ ಬೈಕ್ ಆಯ್ಕೆ

ಬೈಕ್ ಕಲಿಯುವವರಿಗೆ ಹಳೆಯ ಬೈಕ್ ಸೂಕ್ತ ಎಂಬ ಮಾತಿದೆ. ಸಮರ್ಪಕ ಗೇರ್ ಬದಲಾವಣೆ ಬಗ್ಗೆ ಅರಿವಿಲ್ಲದಿರುವುದರಿಂದ ಗೇರ್ ಬಾಕ್ಸ್‌ಗೆ ಪೆಟ್ಟಾಗುವ ಸಾಧ್ಯತೆಯಿದ್ದು ಹಾಗೂ ತಾವೇ ಮಾಡುವ ಎಡವಿಟ್ಟಿನಿಂದಾಗಿ ಸಣ್ಣ ಪುಟ್ಟ ಅಪಘಾತ ಸಂದರ್ಭಗಳು ಎದುರಾಗುವ ಭೀತಿಯಿರುವುದರಿಂದ ಬೈಕ್ ಕಲಿಕಾ ಕಾಲದಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಆಯ್ಕೆ ಹೆಚ್ಚು ಸೂಕ್ತವೆನಿಸುವುದು. ಇನ್ನು ಗರಿಷ್ಠ ನಿರ್ವಹಣೆಯ ಅಥವಾ ಭಾರದ ಬೈಕ್‌ಗಳಿಗೆ ಮೊರೆ ಹೋಗದೇ ಸಾಮಾನ್ಯ 100 ಸಿಸಿ ಪ್ರಯಾಣಿಕ ಬೈಕ್‌ಗಳನ್ನು ಆಯ್ಕೆ ಮಾಡುವುದು ಹೆಚ್ಚು ಹೊಂದಿಕೆಯಾಗುವುದು. ಅಂತೆಯೇ ನಿಮ್ಮ ದೇಹಕಾಯಕ್ಕೆ ಅನುಗುಣವಾಗಿ ಬೈಕ್ ಆಯ್ಕೆ ಮಾಡಿ.

3. ಸುರಕ್ಷತೆ

3. ಸುರಕ್ಷತೆ

ಸಾಮಾನ್ಯವಾಗಿ ಬೈಕ್ ಕಲಿಕಾ ಕಾಲಘಟ್ಟದಲ್ಲಿ ಹೆಲ್ಮೆಟ್ ಮುಂತಾದ ಅಗತ್ಯ ಸುರಕ್ಷಾ ಘಟಕಗಳನ್ನು ಧರಿಸಲು ಮರೆತು ಬಿಡುತ್ತೇವೆ. ಬೈಕ್ ಕಲಿಕೆಯಲ್ಲಿ ಇದರ ಅಗತ್ಯವಿರುವುದಿಲ್ಲ ಅಥವಾ ಕಾಳಜಿಯ ಕೊರತೆಯಿಂದಾಗಿ ಇಂತಹ ತಪ್ಪುಗಳು ನಡೆಯುತ್ತದೆ. ಹಾಗಾಗಿ ಬೈಕ್ ಕಲಿಕಾ ಸಂದರ್ಭದಲ್ಲಿ ಕನಿಷ್ಠ ಪಕ್ಷ ಹೆಲ್ಮೆಟ್, ಕೈ ಗವಸು, ಶೂ ಹಾಗೂ ದೇಹ ರಕ್ಷಣೆಗೆ ರೈಡರ್ ಸೇಫ್ಟಿ ಜಾಕೆಟ್ ಹಾಗೂ ಪ್ಯಾಂಟ್ ಧರಿಸಲು ಮರೆಯದಿರಿ. ಏಕೆಂದರೆ ಕಲಿಕಾ ವೇಳೆಯಲ್ಲಿ ಬೈಕ್ ಸ್ಕಿಡ್ ಆಗುವ ಸಂಭವ ಜಾಸ್ತಿಯಿದ್ದು, ಗಾಯಗಳಾಗುವ ಸಾಧ್ಯತೆಯಿದೆ.

4. ಸಲಹೆ ಹಾಗೂ ಮಾರ್ಗದರ್ಶನ

4. ಸಲಹೆ ಹಾಗೂ ಮಾರ್ಗದರ್ಶನ

ಬೈಕ್ ಸವಾರಿಗೂ ಮುನ್ನ ಬೈಕ್ ಚಾಲನೆ ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿರುವ ನಿಮ್ಮ ಆಪ್ತ ಸ್ನೇಹಿತ ಅಥವಾ ನಿಕಟವರ್ತಿಗಳಿಂದ ನುರಿತ ಸಲಹೆ ಹಾಗೂ ಮಾರ್ಗದರ್ಶನ ಪಡೆದರೆ ಒಳ್ಳೆಯದು. ಮೊದಲ ಬಾರಿಗೆ ಬೈಕ್ ಓಡಿಸುವಾಗ ಇಂತವರು ನಿಮ್ಮ ಜೊತೆಗಿದ್ದರೆ ನಿಮ್ಮ ಆತ್ಮವಿಶ್ವಾಸ ಇಮ್ಮಡಿಯಾಗಲಿದ್ದು, ತಪ್ಪು ಮಾಡುವ ಸಾಧ್ಯತೆ ಕಡಿಮೆಯಾಗಿರುತ್ತದೆ.

5. ಸೂಕ್ತ ಜಾಗ ಆಯ್ಕೆ ಮಾಡಿ

5. ಸೂಕ್ತ ಜಾಗ ಆಯ್ಕೆ ಮಾಡಿ

ನಾನೇನು ಬೈಕ್ ಕಲಿಯಲು ಹೊರಟ್ಟಿದ್ದೀನಿ ಅಂದುಕೊಂಡು ನೇರವಾಗಿ ಸಾರ್ವಜನಿಕ ರಸ್ತೆಗಳಿಗೆ ಧುಮಕಬೇಡಿರಿ. ಆರಂಭದಲ್ಲಿ ವಿಶಾಲವಾದ ಮೈದಾನ ಅಥವಾ ವಾಹನ ಸಂಚಾರವಿಲ್ಲದ ಅಗಲವಾದ ರಸ್ತೆಗಳಲ್ಲಿ ನೀವು ಬೈಕ್ ರೈಡಿಂಗ್ ಅಭ್ಯಾಸಿಸಬಹುದಾಗಿದೆ.

6. ಬೈಕ್ ನಿಯಂತ್ರಣದ ಬಗ್ಗೆ ಅರಿವು - ಬ್ರೇಕ್

6. ಬೈಕ್ ನಿಯಂತ್ರಣದ ಬಗ್ಗೆ ಅರಿವು - ಬ್ರೇಕ್

ಬೈಕ್ ರೈಡಿಂಗ್ ಮಾಡುವ ಮೊದಲು ಪ್ರತಿಯೊಂದು ಘಟಕ ಹಾಗೂ ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಸ್ಪಷ್ಟ ಅರಿವು ಹೊಂದಿರಬೇಕು. ನಾವೀಗ ಬ್ರೇಕ್‌ನಿಂದ ಆರಂಭಿಸೋಣ. ಗೇರ್ ಬೈಕ್‌ನಲ್ಲಿ ಮುಂಭಾಗದ ಬ್ರೇಕ್ ಅನ್ನು ಬಲಬದಿಯಲ್ಲಿರುವ ಹ್ಯಾಂಡಲ್ ಬಾರ್ ಹಾಗೂ ಹಿಂಭಾಗದ ಬ್ರೇಕ್ ಅನ್ನು ಫೂಟ್ ಪೆಗ್ ಮುಂಭಾಗದಲ್ಲಿ ಲಗ್ಗತ್ತಿಸಿರುವ ಬ್ರೇಕನ್ನು ಬಲಗಾಲಿನಿಂದ ನಿಯಂತ್ರಿಸಲಾಗುತ್ತದೆ. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿ ಮಿಕ್ಕಿದ್ದೆಲ್ಲ ಚಾಲನಾ ಪರಿಸ್ಥಿತಿಯಲ್ಲಿ ಹಿಂಬದಿಯ ಬ್ರೇಕ್ ಬಳಕೆ ಹೆಚ್ಚು ಯೋಗ್ಯವೆನಿಸುತ್ತದೆ.

7. ಬೈಕ್ ನಿಯಂತ್ರಣದ ಬಗ್ಗೆ ಅರಿವು - ಕ್ಲಚ್

7. ಬೈಕ್ ನಿಯಂತ್ರಣದ ಬಗ್ಗೆ ಅರಿವು - ಕ್ಲಚ್

ಬೈಕ್ ಚಾಲನೆಯಲ್ಲಿ ಕ್ಲಚ್ ಅತಿ ಮುಖ್ಯ ಘಟಕವಾಗಿದೆ. ಒಂದು ಬೈಕ್‌ನ ಸಂಪೂರ್ಣ ನಿಯಂತ್ರಣ ಸಾಧಿಸಲು ಕ್ಲಚ್‌ನಿಂದ ಮಾತ್ರ ಸಾಧ್ಯ. ಹಾಗಾಗಿ ಸರಿಯಾದ ರೈಡಿಂಗ್‌ನಲ್ಲಿ ಕ್ಲಚ್ ಸಮರ್ಪಕ ಬಳಕೆ ಅತ್ಯಗತ್ಯವಾಗಿದೆ. ಗಾಡಿಯ ಎಡಬದಿಯ ಹ್ಯಾಂಡಲ್ ಬಾರ್ ನಲ್ಲಿ ಸ್ಥಿತಗೊಂಡಿರುವ ಕ್ಲಚ್ ಅನ್ನು ಎಡಗೈಯಿಂದ ನಿಯಂತ್ರಿಸಬಹುದಾಗಿದೆ. ಹಾಗಾಗಿ ಸಮರ್ಥವಾಗಿ ಕ್ಲಚ್ ಬಳಸಿಕೊಳ್ಳಲು ಕಲಿತರೆ ಸಲೀಸಾಗಿ ರೈಡ್ ಮಾಡಬಹುದು.

8. ಬೈಕ್ ನಿಯಂತ್ರಣದ ಬಗ್ಗೆ ಅರಿವು - ಗೇರ್

8. ಬೈಕ್ ನಿಯಂತ್ರಣದ ಬಗ್ಗೆ ಅರಿವು - ಗೇರ್

ಕೆಳಗಡೆ ಎಡಬದಿಯಲ್ಲಿರುವ ಗೇರ್ ಶಿಫ್ಟರ್ ಅನ್ನು ಎಡಗಾಲಿನಿಂದ ನಿಯಂತ್ರಿಸಬಹುದಾಗಿದೆ. ಇದು ನಿಮ್ಮ ಸಂಚಾರಕ್ಕೆ ಅನುಸಾರವಾಗಿ ಸಮರ್ಥವಾಗಿ ಬಳಕೆ ಮಾಡಬೇಕಾಗುತ್ತದೆ. ಬೇಕಾಬಿಟ್ಟಿ ಗೇರ್ ಬಳಕೆಯಿಂದ ಗೇರ್ ಬಾಕ್ಸ್‌ಗೆ ಪೆಟ್ಟಾಗುವ ಭೀತಿಯಿರುತ್ತದೆ. ಕಡಿಮೆ ವೇಗದಲ್ಲಿ ಹೈಯರ್ ಲೆವೆಲ್ ಗೇರ್ ಹಾಕೋದು ಅಥವಾ ಆರಂಭಿಕ ಗೇರ್ ನಲ್ಲಿ(ಫಸ್ಟ್ ಅಥವಾ ಸೆಕೆಂಡ್) ಗೇರ್ ನಲ್ಲಿ ಅತ್ಯಧಿಕ ವೇಗದಲ್ಲಿ ಹೋಗುವುದನ್ನು ಮಾಡಬಾರದು. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಕ್ಲಚ್ ಹಿಡುದುಕೊಂಡೇ ಗೇರ್ ಬದಲಾವಣೆ ಅಥವಾ ಬ್ರೇಕ್ ಅದುಮಬೇಕಾಗುತ್ತದೆ. ಸಾಮಾನ್ಯವಾಗಿ ಹೋಂಡಾ ಹಾಗೂ ಹೀರೊ ಬೈಕ್‌ಗಳಲ್ಲಿ ಹಿಂಬದಿಯತ್ತ 'ನ್ಯೂಟ್ರಲ್, 1,2,3,4' ಗೇರ್ ವ್ಯವಸ್ಥೆಯಿರುತ್ತದೆ. ಬಜಾಜ್ ಬೈಕ್‌ಗಳಲ್ಲಿ ಇದು ನೇರ ತದ್ವಿರುದ್ಧವಾದ ವ್ಯವಸ್ಥೆ ಹೊಂದಿರುತ್ತದೆ.

9. ಬೈಕ್ ಚಾಲನೆ ಹೇಗೆ?

9. ಬೈಕ್ ಚಾಲನೆ ಹೇಗೆ?

ಈಗ ಮೇಲೆ ತಿಳಿಸಿರುವ ಎಲ್ಲ ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕಿದ ಬಳಿಕ ನಿಧಾನವಾಗಿ ಬೈಕ್ ಕಲಿಕೆಯನ್ನು ಆರಂಭಿಸಿ. ಬೈಕ್ ಕೀಲಿ ಹಾಕಿದ ತಕ್ಷಣ ನ್ಯೂಟ್ರಲ್ (N)ಎಂದು ತೋರಿಸುತ್ತದೆ. ಬಳಿಕ ಕ್ಲಚ್ ಹಿಡಿದು ಗೇರ್ ಒಂದಕ್ಕೆ ಹಾಕಿ (ಎಡಗಾಲಿನಲ್ಲಿ ಗೇರ್ ಲಿವರ್ ಹಿಂಬದಿಯತ್ತ ಮೆಲ್ಲನೆ ಅದುಮಿ) ಬಲಗೈಯಿಂದ ನಿಧಾನವಾಗಿ ವೇಗವನ್ನು ಏರಿಸಿ. ಇದೇ ವೇಳೆ ಕ್ಲಚ್ ನಿಧಾನವಾಗಿ ರಿಲೀಸ್ ಮಾಡಲು ಮರೆಯಬಾರದು. ಈ ಎರಡು ಪ್ರಕ್ರಿಯೆ ಏಕಕಾಲಕ್ಕೆ ನಡೆಯಬೇಕಾಗುತ್ತದೆ. ಆರಂಭದಲ್ಲಿ ಈ ನಿರ್ವಹಣೆ ಸ್ವಲ್ಪ ಕಷ್ಟವಾಗಿದ್ದರಿಂದ ಸಡನ್ ಕ್ಲಚ್ ಬಿಡುವುದರಿಂದ ಗಾಡಿ ಆಫ್ ಆಗುವ ಸಂಭವವಿದೆ. ಪದೇ ಪದೇ ಈ ಪ್ರಕ್ರಿಯೆಯನ್ನು ಆವರ್ತಿಸುವುದರಿಂದ ಗಾಡಿ ನಿಮ್ಮ ನಿಯಂತ್ರಣಕ್ಕೆ ಬರಲಿದ್ದು, ಮುಂದಕ್ಕೆ ಸರಾಗವಾಗಿ ಚಲಿಸಲಿದೆ.

10. ನಿರಂತರ ಅಭ್ಯಾಸಿಸಿ

10. ನಿರಂತರ ಅಭ್ಯಾಸಿಸಿ

ನಿರಂತರ ಅಭ್ಯಾಸದಿಂದ ಮಾತ್ರ ಕ್ಲಚ್, ಗೇರ್, ಬ್ರೇಕ್ ಹಾಗೂ ವೇಗ ನಿಯಂತ್ರಣದ ಸಮರ್ಥ ಬಳಕೆ ಬಗ್ಗೆ ಅರಿವಾಗಬಹುದು. ಆರಂಭದಲ್ಲಿ ಗಾಡಿ ಸಮತೋಲನ ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟಕರವಾಗುವುದು. ಆದರೆ ನಿರಂತರ ಅಭ್ಯಾಸದಿಂದ ಮಾತ್ರ ಬೈಕ್ ಚಾಲನೆ ಕರಗತ ಮಾಡಿಕೊಳ್ಳಲು ಸಾಧ್ಯ. ಇದಾದ ಬಳಿಕ ಟರ್ನ್ ಇಂಡಿಕೇಟರ್, ಹೆಡ್ ಲೈಟ್ ಬಟನ್, ಹಾರ್ನ್ ಬಳಕೆ ಹಾಗೂ ಟ್ರಾಫಿಕ್ ನಿಯಮಗಳ ಬಗ್ಗೆ ಹಂತ ಹಂತವಾಗಿ ಅಭ್ಯಾಸಿಸಬೇಕಾಗುತ್ತದೆ.

ಬೈಕ್ ರೈಡಿಂಗ್ ಹೇಗೆ? 10 ಸರಳ ಚಾಲನಾ ಪಾಠ

ಈಗ ಬೈಕ್ ಚಾಲನೆ ಬಗ್ಗೆ ನಾವು ನೀಡಿರುವ 10 ಸುಲಭ ಸಲಹೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಲು ಮರೆಯದಿರಿ. ಹ್ಯಾಪಿ ರೈಡಿಂಗ್!

 

English summary
How to ride a Motorcycle or Bike ? Here are the 10 Easy Steps To Start Riding A Motorcycle.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark