Just In
Don't Miss!
- Lifestyle
ಆಯುರ್ವೇದ ಔಷಧಿ ಸೇವಿಸುವ ಮುನ್ನ ಈ ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಲೇಬೇಕು
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಕಾರುಗಳಲ್ಲಿ ಅತ್ಯಾಧುನಿಕ ಫಿಚರ್ಸ್ ಬಳಸುವುದು ಹೇಗೆ? ಈ ಸಿಂಪಲ್ ಟಿಪ್ಸ್ ತಪ್ಪದೇ ಅನುಸರಿಸಿ..
ಕಾರುಗಳಲ್ಲಿ ಇತ್ತೀಚೆಗೆ ಕಂಡುಬರುತ್ತಿರುವ ಹೊಸ ತಲೆಮಾರಿನ ಫೀಚರ್ಸ್‌ಗಳು ಕಾರು ಪ್ರಯಾಣಕ್ಕೆ ಸಾಕಷ್ಟು ಅನುಕೂರವಾಗಿದ್ದರೂ ಕೆಲವು ಬಾರಿ ಅವುಗಳು ಕಾರು ಪ್ರಯಾಣದಲ್ಲಿ ಗೊಂದಲ ಉಂಟುಮಾಡಬಹುದು. ಹೀಗಾಗಿ ಹೊಸ ಕಾರುಗಳಲ್ಲಿ ತಾಂತ್ರಿಕ ಅಂಶಗಳ ಬಳಕೆ ಕುರಿತಾದ ಗೊಂದಲಗಳಿಗೆ ತೆರೆ ಎಳೆದು ಹೊಸ ಫೀಚರ್ಸ್ ಬಳಕೆ ಕಲಿಕೆಗೆ ಸಹಕಾರಿಯಾಗುವ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಕಳೆದ ಒಂದು ದಶಕದ ಅವಧಿಯಲ್ಲಿ ಹೊಸ ಕಾರುಗಳಲ್ಲಿ ತಾಂತ್ರಿಕ ಸೌಲಭ್ಯಗಳು ಸಾಕಷ್ಟು ಬದಲಾವಣೆಗೊಂಡಿದ್ದು, ಹೊಸ ಕಾರು ಮಾದರಿಯಲ್ಲಿನ ತಾಂತ್ರಿಕ ವೈಶಿಷ್ಟ್ಯತೆಗಳು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸುತ್ತವೆ. ಆದರೆ ಹೊಸ ತಾಂತ್ರಿಕ ಸೌಲಭ್ಯಗಳ ಬಳಕೆಯಲ್ಲಿ ವ್ಯತ್ಯಾಸಗಳು ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುವುದಲ್ಲದೆ ಅನಾಹುತಗಳಿಗೂ ಎಡೆಮಾಡಿಕೊಡುತ್ತವೆ. ಹೀಗಾಗಿ ಹೊಸ ಮಾದರಿಯ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳುವಾಗ ಕೆಲವು ಸರಳ ಸಲಹೆಗಳನ್ನು ಅನುಸರಿ ನಿಮ್ಮ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತವಾಗಿಸಬಹು.

ಹೊಸ ಕಾರುಗಳಲ್ಲಿ ಇತ್ತೀಚೆಗೆ ನೀಡಲಾಗುತ್ತಿರುವ ತಾಂತ್ರಿಕ ಸೌಲಭ್ಯಗಳನ್ನು ನೋಡುವ ಕೆಲವು ಗ್ರಾಹಕರು ಇದನ್ನೆಲ್ಲ ಬಳಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂದು ಹೇಳುವಷ್ಟು ದೂರ ಹೋಗುತ್ತಾರೆ. ಆದರೆ ಅದು ನಿಜವಲ್ಲ. ಗ್ರಾಹಕರು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ತಾಂತ್ರಿಕ ವೈಶಿಷ್ಟ್ಯಗಳನ್ನು ಕಾರು ಉತ್ಪಾದನಾ ಕಂಪನಿಗಳು ಎಂದಿಗೂ ಒದಗಿಸುವುದಿಲ್ಲ. ಅಂದರೆ ಹೊಸ ತಂತ್ರಜ್ಞಾನವನ್ನು ಬಳಸುವುದು ತುಂಬಾ ಸರಳವಾದ ವಿಷಯವಾಗಿದೆ ಎನ್ನಬಹುದು.

ಹೀಗಾಗಿ ಇನ್ನು ಮುಂದೆ ಇದು ನಮಗೆ ಸರಿ ಹೊಂದುವುದಿಲ್ಲ ಎಂದುಕೊಂಡು ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಬೇಡಿ. ಬದಲಿಗೆ ಹೊಸ ತಂತ್ರಜ್ಞಾನಗಳ ಕಾರ್ಯಗಳ ಬಗೆಗೆ ಆತ್ಮವಿಶ್ವಾಸದಿಂದ ಕಲೆತು ಬಳಕೆಗೆ ಪ್ರಯತ್ನಿಸಿ. ಹಾಗಾದರೆ ನಿಮ್ಮ ಹೊಸ ಕಾರಿನಲ್ಲಿ ಒದಗಿಸಲಾಗುವ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲು ನೀವು ಏನು ಮಾಡಬೇಕು?

ಮುಕ್ತ ಮನಸ್ಸಿನಿಂದ ಸ್ವಿಕರಿಸಿ!
ಕಾರುಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಬಳಸುವಾಗ ಕೆಲವರು ಗೊಂದಲಕ್ಕೊಳಾಗುವುದು ಅಥವಾ ಈ ವೈಶಿಷ್ಟ್ಯವನ್ನು ಹೇಗೆ ಬಳಸುವುದು ಗೊತ್ತಿಲ್ಲವೆಂದು ಬಳಕೆ ಮಾಡದೆಯೇ ಭಯಪಡುತ್ತಾರೆ. ನೀವು ಈ ಎರಡನ್ನೂ ಮಾಡಬಾರದು. ಬದಲಿಗೆ ಹೊಸದನ್ನು ಕಲಿಯಲು ಸಿದ್ಧರಾಗಿರಿ. ನಿಮ್ಮ ಕಾರಿನ ಸೌಕರ್ಯಗಳನ್ನು ಹೇಗೆ ಬಳಸುವುದು? ಇದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ನೀವು ನಿಧಾನವಾಗಿ ತಿಳಿದುಕೊಳ್ಳಿ.

ಯಾವುದಕ್ಕೂ ಹಿಂಜರಿಕೆ ಮಾಡಿಕೊಳ್ಳಬೇಡಿ
ಕಳೆದ ಕೆಲವು ದಶಕಗಳ ಹಿಂದೆ ಕಾರಿನಲ್ಲಿರುವ ರೇಡಿಯೊವನ್ನು ಬಳಸುವುದು ಸಹ ಕಷ್ಟ ಕೆಲಸವಾಗಿತ್ತು. ಆದರೆ ಇಂದು ತಂತ್ರಜ್ಞಾನ ಬೆಳೆದು ನಿಂತಿದೆ ಆದ್ದರಿಂದ ಎಲ್ಲವೂ ಸರಳವಾಗಿದೆ. ನಿಮಗೆ ಕಲಿಯುವ ಆಸಕ್ತಿ ಇದ್ದರೆ, ನೀವು ಖಂಡಿತವಾಗಿಯೂ ಎಲ್ಲಾ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬಹುದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಲಿಕೆಗೆ ಸಮಯ ನೀಡಿ!
ಕೆಲವು ವಿಷಯಗಳನ್ನು ತಕ್ಷಣಕ್ಕೆ ತಿಳಿಯಲು ಆಗದಿದ್ದರೆ ಕೆಲವರಿಗೆ ಹತಾಶೆ ಉಂಟಾಗುತ್ತದೆ. ಆದರೆ ಕಲಿಕೆ ವೇಳೆ ಹತಾಶೆ ಉಂಟಾಗುವ ಅವಶ್ಯಕತೆ ಇಲ್ಲ. ಒಂದೇ ದಿನದಲ್ಲಿ ಗೊತ್ತಾಗದಿದ್ದರೆ ಮತ್ತೊಂದು ದಿನವಾದರೂ ತಪ್ಪದೇ ನಿಧಾನವಾಗಿ ಕಲಿಯಿರಿ.

ಎಲ್ಲರೂ ಎಲ್ಲಾ ವಿಷಯಗಳನ್ನು ಒಂದೇ ಬಾರಿಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ಉದಾಹರಣೆ ಕಟ್ಟಡವನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಅದು ಹಂತವಾಗಿ ನಿರ್ಮಾಣವಾಗಬೇಕು. ಹಾಗೆಯೇ ಕಲಿಕೆ ನಿರಂತರವಾಗಿರುತ್ತದೆ. ಹೀಗಾಗಿ ಬೇಗ ಕಲಿಯಲು ಸಾಧ್ಯವಿಲ್ಲವಾದರೆ ನಿಧಾನವಾಗಿ ಆದರೂ ಅದನ್ನು ಅರ್ಥೈಸಿಕೊಳ್ಳಿ. ಆದರೆ ಇದು ನನ್ನಿಂದ ಸಾಧ್ಯವೇ ಇಲ್ಲ ಎನ್ನುವ ಮಾತುಗಳು ಬೇಡ.

ವೀಡಿಯೊ ಟ್ಯುಟೋರಿಯಲ್ ಬಳಸಿಕೊಳ್ಳಿ
ನಿಮ್ಮ ಸೆಲ್ ಫೋನ್ ಅನ್ನು ಬ್ಲೂಟೂತ್ ಮೂಲಕ ಕಾರಿನ ಆಡಿಯೊ ಸಿಸ್ಟಂ ಸಂಪರ್ಕಿಸಿದಾಗ ನೀವು ವಿವಿಧ ವೈಶಿಷ್ಟ್ಯಗಳನ್ನು ಪಡೆಯಬಹುದಾಗಿದೆ. ಈ ಮೂಲಕ ನಿಮಗೆ ಗೊಂದಲ ಉಂಟುಮಾಡುವ ತಾಂತ್ರಿಕ ಸೌಲಭ್ಯಗಳನ್ನು ಹೇಗೆ ಬಳಸುವುದು? ಎನ್ನುವುದು ಸುಲಭವಾಗಿ ತಿಳಿದುಕೊಳ್ಳಬಹುದು.

ಅಥವಾ ನೀವು ಕಾರಿನ ಬಳಕೆದಾರರ ಕೈಪಿಡಿಯನ್ನು ಬಳಸಬಹುದಾಗಿದ್ದು, ಕಾರಿನ ಫೀಚರ್ಸ್ ಬಳಕೆ ಕುರಿತಂತೆ ಇತ್ತೀಚೆಗೆ ಸಾಕಷ್ಟು ಜನ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದನ್ನು ಸಹ ನೋಡಿ ಅನುಸರಿಸಬಹುದಾಗಿದೆ.

ಮಾರಾಟ ಪ್ರತಿನಿಧಿಯನ್ನು ಬಳಿ ಚರ್ಚಿಸಿ
ನೀವು ಹೊಸ ಕಾರನ್ನು ಖರೀದಿಸಿದಾಗ ಎಲ್ಲಾ ತಾಂತ್ರಿಕ ಸೌಕರ್ಯಗಳ ಬಗ್ಗೆ ಮಾರಾಟ ಪ್ರತಿನಿಧಿಯನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಳ್ಳಿ. ತಾಂತ್ರಿಕ ಅಂಶಗಳ ಬಗೆಗೆ ಕೂಲಂಕುಶವಾಗಿ ಕೇಳಿ ತಿಳಿದುಕೊಳ್ಳುವ ಬದಲು ಎಲ್ಲವನ್ನು ಹೇಗೆ ಕೇಳುವುದು ಎನ್ನುವ ನಾಚಿಕೆ ಸ್ವಭಾವ ಇದ್ದರೆ ಅದು ನಿಮ್ಮ ಸಂಕಷ್ಟಕ್ಕೆ ಸಿಲುಕಿಸಬಹುದು.

ಕಾರುಗಳ ತಾಂತ್ರಿಕ ಸೌಲಭ್ಯಗಳಿಗೆ ಸಂಬಂಧಪಟ್ಟಂತೆ ಮಾರಾಟ ಪ್ರತಿನಿಧಿ ಸಂಪರ್ಕಿಸಲು ಸಾಧ್ಯವಿಲ್ಲದಾಗ ಸಂಬಂಧಪಟ್ಟ ಕಾರು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ನೀವು ನಿಮ್ಮ ಕಾರುಗಳ ವಿವರಗಳನ್ನು ಕಾಣಬಹುದಾಗಿದೆ.

ಕೇಳಿ ತಿಳಿಯಿರಿ
ಹೊಸ ಕಾರುಗಳಲ್ಲಿನ ತಾಂತ್ರಿಕ ವೈಶಿಷ್ಟ್ಯತೆಗಳ ಬಗೆಗೆ ನಿಮಗೆ ಯಾವುದೇ ಸಂದೇಹಗಳಿದ್ದರೆ ವಿವರಣೆಗಳನ್ನು ಪಡೆಯಲು ನೀವು ಡೀಲರ್‌ಶಿಪ್‌ಗಳು ಮತ್ತು ನಿಮ್ಮ ಕಾರು ತಜ್ಞರನ್ನು ಫೋನ್ ಮೂಲಕ ಸಂಪರ್ಕಿಸಬಹುದು. ಅದೇ ರೀತಿ ನೀವು ಒಂದೇ ಕಾರು ಮಾದರಿಯನ್ನು ಹೊಂದಿರುವ ಇತರೆ ಕಾರು ಮಾಲೀಕರೊಂದಿಗೆ ನೀವು ಸಂಪರ್ಕಗಳನ್ನು ಮಾಡಬಹುದು.

ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿಯೊಬ್ಬ ಕಾರು ಮಾಲೀಕರು ಸಹ ತಮ್ಮ ಒಂದೊಂದು ಕಾರು ಮಾದರಿಗೂ ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯೇಕ ಗುಂಪನ್ನು ರಚಿಸಿಕೊಂಡಿದ್ದು, ಅದರಲ್ಲೂ ನೀವು ನಿಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಉದಾಹರಣೆಗೆ ನೀವು ಟಾಟಾ ಸಫಾರಿ ಮಾಲೀಕರಾಗಿದ್ದರೆ ಅದೇ ಕಾರಿನ ನೂರಾರು, ಸಾವಿರಾರು ಮಾಲೀಕರು ಸೇರಿ ಒಂದು ಪ್ರತ್ಯೇಕ ಗುಂಪನ್ನು ಹೊಂದಿರುತ್ತಾರೆ. ಸಫಾರಿಗೆ ಸಂಬಂಧಪಟ್ಟ ಏನಾದರೂ ಸಂದೇಹಗಳಿದ್ದರೆ ಆ ಗುಂಪಿನಲ್ಲಿ ಕೇಳಿ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಹೀಗಾಗಿ ತಂತ್ರಜ್ಞಾನ ಬಳಕೆಯ ವಿಚಾರದಲ್ಲಿ ನನಗೆ ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವ ಭಯಪಡುವ ಅಗತ್ಯವಿಲ್ಲ.

ಸುರಕ್ಷತೆಗೆ ಮೊದಲ ಆದ್ಯತೆ
ನೀವು ಚಾಲನೆಯನ್ನು ಪ್ರಾರಂಭಿಸುವ ಮೊದಲು ಪ್ರತಿ ಬಟನ್ ಮತ್ತು ಅದರ ವೈಶಿಷ್ಟ್ಯತೆ ಬಗೆಗೆ ತಿಳಿಯುವುದು ಮುಖ್ಯ. ಇಲ್ಲದಿದ್ದರೆ ಅದು ಕಾರು ಚಾಲನೆಯಲ್ಲಿ ಕಿರಿಕಿರಿ ಉಂಟುಮಾಡಬಹುದು. ಜೊತೆಗೆ ತಾಂತ್ರಿಕ ಸೌಲಭ್ಯಗಳ ಬಳಕೆಯಲ್ಲಿ ವ್ಯತ್ಯಾಸಗಳು ಕಾರನ್ನು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಳ್ಳುವಂತೆ ಮಾಡುವುದಲ್ಲದೆ ಅದು ಇತರರಿಗೆ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ.

ಹೀಗಾಗಿ ಹೊಸ ಕಾರಿನ ಸುಧಾರಿತ ತಾಂತ್ರಿಕ ವೈಶಿಷ್ಟ್ಯಗಳನ್ನು ಬಳಕೆ ಮಾಡುವ ಮುನ್ನ ನಿಧಾನವಾಗಿ ಒಂದೊಂದಾಗಿ ತಿಳಿದುಕೊಳ್ಳಲ್ಲಿ. ತಾಂತ್ರಿಕ ಅಂಶಗಳಲ್ಲಿ ಒಂದೊಂದಾಗಿ ಬಳಸಿದಾದ ಹೊಸ ಅಪ್‌ಗ್ರೆಡ್‌ಗಳ ಬಳಕೆಯು ಸುಲಭವಾಗಿರುತ್ತದೆ.
ಹ್ಯಾಪಿ ಜರ್ನಿ..