ಮಳೆಗಾಲದಲ್ಲಿ ಕಾರಿನ ಕಾಯಿಲೆ ತಪ್ಪಿಸಲು 15 ಟಿಪ್ಸ್

By Nagaraja

ಮುಂಗಾರು ಮಳೆ ಈಗಾಗಲೇ ಕೇರಳ ಗಡಿಭಾಗವಾಗಿ ಕರ್ನಾಟಕಕ್ಕೆ ಕಾಲಿಟ್ಟಿದೆ. ಮಳೆಯಲ್ಲಿ ನೆನೆದರಂತೂ ಶೀತ, ತಲೆನೋವು ಗ್ಯಾರಂಟಿ. ಇದೇ ರೀತಿ ನಮ್ಮ ನಿಮ್ಮ ಪ್ರೀತಿಯ ಕಾರು, ಬೈಕ್‌ಗಳಿಗೂ ಕಾಯಿಲೆ ತಪ್ಪಿದ್ದಲ್ಲ.

ಗೇರ್ ಬದಲಾವಣೆಯ ಒಳಗುಟ್ಟು ಗೊತ್ತೇನು?

ಇದೇ ಕಾರಣಕ್ಕಾಗಿ ಮಳೆಗಾಲದಲ್ಲೂ ಚಾಲನೆ ವೇಳೆ ಕೆಲವೊಂದು ಎಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಾಗಿರುವುದು ಅತಿ ಅಗತ್ಯವಾಗಿದೆ. ಈ ಮೂಲಕ ಮಳೆಗಾಲದಲ್ಲಿ ಎದುರಾಗುವ ತೊಂದರೆಗಳಿಂದ ಪಾರಾಗಬಹುದು. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ನಿಮಗಾಗಿ ಮಳೆಗಾಲದಲ್ಲಿ ಪಾಲಿಸಬೇಕಾದ ಅತ್ಯಮೂಲ್ಯ ಟಿಪ್ಸ್‌ಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದಕ್ಕಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

ಚಕ್ರ

ಚಕ್ರ

ಚಕ್ರಗಳು ಗ್ರಿಪ್ ಹೊಂದಿರಬೇಕಾಗಿರುವುದು ಅತ್ಯಗತ್ಯವಾಗಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ನಿಮ್ಮ ಚಾಲನೆಗೆ ಸವಾಲೊಡ್ಡಲಿರುವುದಂತೂ ಗ್ಯಾರಂಟಿ. ಹಾಗಾಗಿ ನಿಮ್ಮ ಕಾರಿನ ಚಕ್ರಗಳ ಮಧ್ಯದ ಥ್ರೆಡ್ ಸಮಪರ್ಕವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

ಬ್ರೇಕ್

ಬ್ರೇಕ್

ಈ ಮೊದಲೇ ತಿಳಿಸಿರುವಂತೆಯೇ ಒದ್ದೆಯಾದ ರಸ್ತೆಗಳಿಂದಾಗಿ ಮಳೆಗಾಲದಲ್ಲಿ ಸ್ಕಿಡ್ ಆಗುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾಗಿ ಬ್ರೇಕ್ ಅತ್ಯುತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಬ್ರೇಕ್ ಪ್ಯಾಡ್ ಹಳೆಯದಾಗಿದ್ದರೆ ಬದಲಾಯಿಸಿರಿ. ಹಾಗೆಯೇ ಬ್ರೇಕ್ ಡಿಸ್ಕ್ ಚೆಕಪ್ ಮತ್ತು ಬ್ರೇಕ್ ಆಯಿಲ್ ಸಮರ್ಪಕವಾಗಿದೆಯೇ ಎಂಬುದರತ್ತವೂ ಗಮನ ವಹಿಸಿರಿ.

ಫ್ಲೋರ್ ಮ್ಯಾಟ್

ಫ್ಲೋರ್ ಮ್ಯಾಟ್

ಕೊಳಕಾದ ಇಂಟಿರಿಯರ್ ಮಳೆಗಾಲದ ನೇರ ಪರಿಣಾಮ ಎಂದೇ ಹೇಳಬಹುದು. ಹಾಗಾಗಿ ಎಲ್ಲ ವಾತಾವರಣಕ್ಕೂ ಹೊಂದಿಕೆಯಾಗುವಂತಹ ಫ್ಲೋರ್ ಮ್ಯಾಟ್ ಬಳಕೆ ಮಾಡಲು ಗಮನ ವಹಿಸಿ.

ಏರ್ ಫ್ರೆಶನರ್

ಏರ್ ಫ್ರೆಶನರ್

ದೇಶದ ರಸ್ತೆ ಪರಿಸ್ಥಿತಿಯಲ್ಲಿ ರಸ್ತೆ ಬದಿಗಳಿಂದ ಕೊಳಕು ದುರ್ವಾಸನೆ ಬೀರುವುದು ಸಾಮಾನ್ಯ. ಹಾಗಾಗಿ ಏರ್ ಫ್ರೆಶನರ್ ಬಳಕೆ ಮಾಡುವುದು ಹೆಚ್ಚು ಸೂಕ್ತ.

ಡೋರ್ ವೈಸರ್

ಡೋರ್ ವೈಸರ್

ಇದೇ ಸಂದರ್ಭದಲ್ಲಿ ಕಾರಿನ ನಾಲ್ಕು ಡೋರ್ ವೈಸರ್‌ಗಳಿಗೆ ಕೇಡು ಸಂಭವಿಸಿದೆಯೇ ಎಂಬುದನ್ನು ಸೂಕ್ಷ್ಮವಾಗಿ ಪರೀಕ್ಷಿಸುವುದು ಉತ್ತಮ.

ವೈಪರ್

ವೈಪರ್

ಮಳೆಗಾಲದಲ್ಲಿ ವೈಪರ್ ಸರಿಯಿದೆಯೇ ಎಂದು ನೋಡದೇ ಪ್ರಯಾಣ ಆರಂಭಿಸಬೇಡಿ. ಕೆಟ್ಟಿರುವ ವೈಪರ್ ಅಪಾಯಕಾರಿ. ಧೂಳು, ಬಿಸಿಲು, ಎಣ್ಣೆಯಂಶಗಳು ವೈಪರ್ ಹಾಳುಗೆಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾತಾವರಣ ತಂಪಾಗಿದ್ದರೆ ವೈಪರ್ ಗಟ್ಟಿಯಾಗುತ್ತದೆ. ಬಿಸಿಲಿಗೆ ವೈಪರ್ ರಬ್ಬರ್ ಬೇಗ ಹಾಳಾಗುತ್ತದೆ. ವೈಪರಿನಲ್ಲಿರುವ ರಬ್ಬರ್ ಭಾಗ ಹಾಳಾಗುವುದು, ಕಳಚಿಕೊಳ್ಳುವುದು ಬೇಗ. ಹಾಗಾಗಿ ಮಳೆಗಾಲದಲ್ಲಿ ವಾಹನದಲ್ಲಿ ಡ್ರೈವಿಂಗ್ ಮಾಡುವ ಮುನ್ನ ವೈಪರ್ ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿರಿ.

ಲೈಟ್, ವಿಂಡ್‌ಸ್ಕ್ರೀನ್, ಮಡ್‌ಫ್ಯಾಪ್

ಲೈಟ್, ವಿಂಡ್‌ಸ್ಕ್ರೀನ್, ಮಡ್‌ಫ್ಯಾಪ್

ಡ್ರೈವಿಂಗ್ ಮಾಡುವಾಗ ಎದುರಿನ ರಸ್ತೆ ಸ್ಪಷ್ಟವಾಗಿ ಕಾಣಬೇಕಾದ್ದು ಅತ್ಯಂತ ಅಗತ್ಯ. ಹಾಗಾಗಿ ವರ್ಷವಿಡೀ ಚಾಲನೆಯಿಂದಾಗಿ ಹೆಡ್‌ಲೈಟ್ ಧೂಳಿನಿಂದ ಮುಸುಕುದಿದ್ದರೆ ಅದನ್ನು ತಕ್ಷಣ ಸ್ವಚ್ಛಗೊಳಿಸತಕ್ಕದ್ದು. ಹೆಡ್ ಲೈಟ್ ಬೀಮ್ ಗಳು ಸರಿಯಾಗಿ ಫೋಕಸ್ ಆಗುತ್ತಿದೆಯೇ ಪರಿಶೀಲಿಸಿರಿ. ಪಾರ್ಕಿಂಗ್ ಲೈಟ್ ಸೇರಿದಂತೆ ಇತರ ಲೈಟ್ ಗಳನ್ನು ಪರಿಶೀಲಿಸಿರಿ. ಏನಾದರೂ ಸಮಸ್ಯೆ ಕಂಡುಬಂದಲ್ಲಿ ಬಲ್ಬ್ ಬದಲಾಯಿಸಿರಿ. ಅದೇ ರೀತಿ ವಿಂಡ್ ಸ್ಕ್ರೀನ್ ಹಾಗೂ ಮಡ್‌ಫ್ಯಾಪ್ ಮೇಲೂ ಗಮನ ವಹಿಸಿ.

ಎಸಿ

ಎಸಿ

ಅದೇ ರೀತಿ ಮಳೆಗಾಲ ಆರಂಭಕ್ಕೂ ಮುನ್ನ ನಿಮ್ಮ ಕಾರಿನ ಎಸಿ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕಾರಿನೊಳಗಿನ ತಾಪಮಾನ ನಿಯಂತ್ರಣದಲ್ಲಿಡುವ ಮೂಲಕ ಹೊರಗಡೆ ಮಳೆ ಸುರಿದರೂ ವಿಂಡ್‌ಸ್ಕ್ರೀನ್ ಮೇಲೆ ಮಂದು ಆವರಿಸುವುದನ್ನು ತಪ್ಪಿಸಬಹುದಾಗಿದೆ.

ವ್ಯಾಕ್ಸ್ ಪೊಲಿಶ್

ವ್ಯಾಕ್ಸ್ ಪೊಲಿಶ್

ಇದೀಗ ತ್ರಿಎಂಗಳಂತಹ ಕಾರು ಕೇರ್ ಸೆಂಟರುಗಳು ಕಾರಿನ ಬಾಹ್ಯ ಭಾಗಗಳಿಗೆ ವಿಶೇಷವಾದ ವ್ಯಾಕ್ಸ್ ಪೊಲಿಶ್ ಹಚ್ಚುತ್ತಿದ್ದು, ಇದು ಮಳೆಗಾಲದಲ್ಲೂ ಕಾರಿನ ಪೈಂಟ್‌ ಹಾಳಾಗದಂತೆ ನೋಡಿಕೊಳ್ಳುತ್ತದೆ.

ಪಾರ್ಕಿಂಗ್

ಪಾರ್ಕಿಂಗ್

ಇನ್ನು ಮಳೆಗಾಲದಲ್ಲಿ ಎಲ್ಲೆಲ್ಲಿ ಮರದಡಿಯಲ್ಲಿ ಪಾರ್ಕ್ ಮಾಡಬೇಡಿ. ಮಳೆಗಾಲದಲ್ಲಿ ಮರದ ರೆಂಬೆಕೊಂಬೆ ಬಿದ್ದರೆ ವಾಹನ ಜಕಂ ಆದೀತು. ಹಾಗೆಯೇ ಸವಾರಿ ಮಾಡದೇ ಇರುವಾಗ ವಾಹನವನ್ನು ಕವರ್ ಮಾಡಿರಿ.

ರಾತ್ರಿ ಪಯಣ ಬೇಡ

ರಾತ್ರಿ ಪಯಣ ಬೇಡ

ಈ ಮೊದಲೇ ತಿಳಿಸಿರುವಂತೆಯೇ ರಾತ್ರಿ ಪಯಣವನ್ನು ಸಾಧ್ಯವಾದಷ್ಟು ತಪ್ಪಿಸಿ. ಅದರಲ್ಲಂತೂ ಧಾರಾಕಾರ ಮಳೆಯಾಗುತ್ತಿರುವ ಸಂದರ್ಭದಲ್ಲಿ ಹಾಗೆಯೇ ರಾತ್ರಿ ವೇಳೆಯಲ್ಲಿ ದೂರ ಪ್ರಯಾಣವನ್ನು ಕೈಗೊಳ್ಳದಿರಿ. ಇದು ಮಳೆಗಾಲದಲ್ಲಿ ನಿಮ್ಮ ಸುರಕ್ಷಿತ ಚಾಲನೆಗೆ ನೆರವಾಗಲಿದೆ.

ನಿಧಾನವೇ ಪ್ರಧಾನ

ನಿಧಾನವೇ ಪ್ರಧಾನ

ನಿಧಾನವೇ ಪ್ರಧಾನ. ಅವಸರವೇ ಅಪಘಾತಕ್ಕೆ ಕಾರಣ ಎಂಬ ವಾಹನ ವೇದ ವ್ಯಾಕವನ್ನು ಮರೆಯದಿರಿ. ಮಳೆಗಾಲದಲ್ಲಿ ಅಜಾಗರೂಕ ಚಾಲನೆಯನ್ನು ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು.

ಲೇನ್ ಪಾಲಿಸಿ

ಲೇನ್ ಪಾಲಿಸಿ

ಜೋರಾಗಿ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಮುಂದಿರುವ ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ. ಅಲ್ಲದೆ ಎದುರಿನ ವಾಹನದೊಂದಿಗೆ ಸರಿಯಾದ ಅಂತರ ಕಾಪಾಡಿರಿ.

ಜನರಲ್ ಚೆಕಪ್

ಜನರಲ್ ಚೆಕಪ್

ಇವೆಲ್ಲಕ್ಕೂ ಮಿಗಿಲಾಗಿ ಮಳೆಗಾಲದಲ್ಲಿ ಸವಾರಿಗೂ ಮುನ್ನ ನಿಮ್ಮ ವಾಹನದ ಎಂಜಿನ್ ನಿಯಮಿತವಾಗಿ ಪರಿಶೀಲಿಸಿ. ಅದರಲ್ಲಿ ಯಾವುದಾದರೂ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎಚ್ಚರಿಕೆಯಿಂದ ಸರಿಪಡಿಸಿರಿ.

ಜೊತೆಗೆ ಏನೆಲ್ಲ ಇರಬೇಕು?

ಜೊತೆಗೆ ಏನೆಲ್ಲ ಇರಬೇಕು?

ಅದೇ ಹೊತ್ತಿಗೆ ಈ ಐದು ವಸ್ತುಗಳನ್ನು ಕಾರಿನಲ್ಲಿಡಲು ಮರೆಯದಿರಿ.

ಕಾರಿನ ಮೇಲ್ಮೈ ಶುಚಿಯಾಗಿಡಲು ಒರೆಸುವ ಬಟ್ಟೆ,

ವಿಂಡ್‌ಸ್ಕ್ರೀನ್ ಉಜ್ಜಲು ಕಾಗದ,

ಕಾರಿನಿಂದ ಇಳಿದು ಹೊರ ಹೋಗುವಾಗ ಕೊಡೆ,

ಇನ್ನಿತರ ಅಗತ್ಯ ಆಕ್ಸೆಸರಿಗಳು

ಮಳೆಗಾಲದಲ್ಲಿ ಕಾರಿನ ಕಾಯಿಲೆ ತಪ್ಪಿಸಲು 15 ಟಿಪ್ಸ್

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ. ಹ್ಯಾಪಿ ಡ್ರೈವಿಂಗ್!


Most Read Articles

Kannada
English summary
Car driving in the rain can be challenging some times. You have to check 15 most important things in your car, before you start driving in monsoon. Here is the list. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X