ಬೆಂಗಳೂರಿನ ಮಹಿಳೆಯರಿಗೆ ದ್ವಿಚಕ್ರ ವಾಹನ ಸವಾರಿ ರಿಸ್ಕಿನ..?

Posted By:

ಇಂದಿನ ಯಾಂತ್ರಿಕ ಯುಗದಲ್ಲಿ ಪುರುಷರಂತೆಯೇ ಮಹಿಳೆಯರು ಸಹ ತಮ್ಮ ಆರ್ಥಿಕ ಸಾಮರ್ಥ್ಯವನ್ನು ಹುಡುಕುವಲ್ಲಿ ಸಮರ್ಥರೆನಿಸಿಕೊಂಡಿದ್ದಾರೆ. ಇದರಂತೆ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯವಾದ ವರ್ಧನೆ ಕಂಡುಬಂದಿದೆ.

ಕೆಲಸಕ್ಕೆ ತೆರಳುವ ಮಹಿಳೆಯರು ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನೇ ಆಶ್ರಯಿಸುತ್ತಾರೆ. ಆದರೆ ಇದು ಅಷ್ಟೇ ಅಪಾಯಕಾರಿ ಎಂಬುದು ಸಹ ಬೆಳಕಿಗೆ ಬಂದಿದೆ. ಇತರ ಮೆಟ್ರೋಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿಯಲ್ಲಿ ದ್ವಿಚಕ್ರ ವಾಹನ ಬಳಸುವ ಮಹಿಳೆಯರ ಸಂಖ್ಯೆ ತುಂಬಾನೇ ಕಡಿಮೆಯಾಗಿದೆ. ಇದು ಪ್ರಮುಖವಾಗಿ ಕೆಲಸ ಅರಸಿಕೊಂಡು ದೆಹಲಿಗೆ ಹೋಗಿರುವ ಮಹಿಳೆಯರಲ್ಲಿ ಈ ಪ್ರಕ್ರಿಯೆ ಕಂಡುಬಂದಿದೆ.

ವಾಹನ ತಯಾರಕ ಕಂಪೆನಿಗಳ ಸ್ಪಷ್ಟನೆ ಏನು..?

ಅನೇಕ ಕಾರಣಗಳಿಂದಾಗಿ ದೆಹಲಿಯು ದ್ವಿಚಕ್ರ ವಾಹನ ಓಡಿಸುವ ಮಹಿಳೆಯರಿಗೆ ಪೂರಕವಾಗ ವಾತಾವರಣ ನಿರ್ಮಾಣ ಮಾಡಿಲ್ಲ. ಸುರಕ್ಷಿತ ಹಾಗೂ ಆರಾಮದಾಯಕ ಮೆಟ್ರೋಗೆ ಮೊರೆ ಹೋಗಿರುವುದು ಹಾಗೂ ವಾಹನ ದಟ್ಟಣೆಯು ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

ಅಂದರೆ ನಮ್ಮ ಮೆಟ್ರೋ ಹೇಗೆ..?

ಇದರ ಪ್ರಕಾರ ಬೆಂಗಳೂರು, ಚಂಡೀಗಡ, ಪುಣೆ, ಅಹಮದಾಬಾದ್, ಉದಯ್‌ಪುರಗಳಂತಹ ನಗರ ಪ್ರದೇಶಗಳಲ್ಲಿ ಮಧ್ಯವಯಸ್ಕ ಮಹಿಳೆಯರು ಸಹ 'ಗೇರ್-ಲೆಸ್' ಸ್ಕೂಟರ್ ಓಡಿಸುವುದನ್ನು ಇಷ್ಟಪಡುತ್ತಾರೆ.

ಆದರೆ ಬೆಂಗಳೂರು ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದ್ದು, ಕಾರುಗಳನ್ನು ಹೊಂದಿರುವ ಮಹಿಳೆಯರು ಸಹ ದ್ವಿಚಕ್ರ ವಾಹನಗಳನ್ನು ಓಡಿಸುವುದನ್ನು ಇಷ್ಟಪಡುತ್ತಾರೆ. ಯಾಕೆಂದರೆ ಹೆಚ್ಚಿನ ವಾಹನ ದಟ್ಟನೆಯ ನಡುವೆಯೂ ಸ್ಕೂಟರ್‌ಗಳನ್ನು ಸಲೀಸಾಗಿ ಓಡಿಸಬಹುದಾಗಿದೆ.

ಬೆಂಗಳೂರಿನಂತಹ ಮೆಟ್ರೊ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಹೆಚ್ಚೇನು ಹೇಳುವಂತಹ ಅಗತ್ಯವಿಲ್ಲ. ಹಾಗಾಗಿ ಕೆಲಸಕ್ಕೆ ತೆರಳುವ ನಿಟ್ಟಿನಲ್ಲಿ ಮಹಿಳೆಯರು ಸ್ಕೂಟರ್/ಸ್ಕೂಟಿಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.

ಪಿಯಾಜಿಯೊ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ರವಿ ಚೋಪ್ರಾ ಅವರ ಪ್ರಕಾರ, ಕೆಲಸಗಳಿಗೆ ಹೆಚ್ಚು ದೂರ ಚಲಿಸಲಿರುವುದರಿಂದ ಇತರ ಮೆಟ್ರೊ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ದ್ವಿಚಕ್ರ ವಾಹನ ಬಳಸುವ ಮಹಿಳೆಯರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ಮಹಿಳೆಯರು ಪ್ರಮುಖವಾಗಿಯೂ ಕಾರುಗಳನ್ನು ಅಥವಾ ಇತರ ಖಾಸಗಿ ವಾಹನಗಳನ್ನು ಆಶ್ರಯಿಸುತ್ತಾರೆ. ಆದರೆ ಬೆಂಗಳೂರು, ಅಹಮದಾಬಾದ್, ಚೆನ್ನೈ ಹಾಗೂ ಪುಣೆ ನಗರಗಳಲ್ಲಿ ದ್ವಿಚಕ್ರ ಓಡಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.

English summary
According automobile companies, Two-Wheelers are considered not so safe for women riders, especially in the National Capital, it is not a very encouraging market for two-wheelers for women owing to a variety of reasons.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark