ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

Written By: Rahul TS

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಪಾಲು ಹೊಂದಿರುವ ಹೀರೋ ಮೋಟೊಕಾರ್ಪ್ ಸಂಸ್ಥೆಯು ತನ್ನ ಹೊಸ ಪ್ಯಾಷನ್ ಪ್ರೊ ಮತ್ತು ಎಕ್ಸ್ ಪ್ರೋ ಬೈಕ್ ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಮಧ್ಯಮ ವರ್ಗದ ಗ್ರಾಹಕರಿಗೆ ಮತ್ತೊಂದು ಹೊಸ ಆಯ್ಕೆಯನ್ನು ನೀಡುತ್ತಿದೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಹೊಸ ಬೈಕ್‌ಗಳ ಬೆಲೆ

ದೆಹಲಿ ಎಕ್ಸ್ ಶೋರುಂ ಪ್ರಕಾರ ಪ್ಯಾಷನ್ ಪ್ರೋ ಬೆಲೆಯು ರೂ.53,189ಕ್ಕೆ ಹಾಗೂ ಎಕ್ಸ್ ಪ್ರೋ ಬೆಲೆಯನ್ನ ರೂ.54,189ಕ್ಕೆ ನಿಗದಿ ಪಡಿಸಲಾಗಿದ್ದು, ಈ ಎರಡು ಬೈಕು ಗಳು ದೇಶಿಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯನ್ನು ಹೊಂದಿವೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಹೀರೊ ಮೋಟೋಕಾರ್ಪ್ ಸಂಸ್ಥೆಯು 100ರಿಂದ 110ಸಿಸಿ ಬೈಕ್ ಸರಣಿಯಲ್ಲಿ ಶೇಕಡಾ 75ರಷ್ಟು ಬೈಕ್ ಮಾರಾಟ ಹೊಂದಿದ್ದು, ಇದರಲ್ಲಿ ಪ್ಯಾಷನ್ ಎರಡನೇ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿರುವ ಬೈಕ್ ಆಗಿದ್ದು, ಮೊದಲನೇ ಸ್ಥಾನವನ್ನು ಹೀರೋ ಸ್ಪ್ಲೆಂಡರ್ ಪಡೆದುಕೊಂಡಿದೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಹೀರೋ ಪ್ಯಾಷನ್ ಪ್ರೋ

ಸಂಸ್ಥೆಯು ಪ್ಯಾಷನ್ ಪ್ರೋ ಬೈಕ್ ಅನ್ನು ಇಂದಿನ ಸ್ಮಾರ್ಟ್ ಪೀಳಿಗೆಯನ್ನು ಆಧರಿಸಿ ತಯಾರಿಸಲಾಗಿದ್ದು, 11 ಲೀಟರ್ ಫ್ಯುಯಲ್ ಟ್ಯಾಂಕ್ ನೊಂದಿಗೆ ಫ್ಲಷ್-ಟೈಪ್ ಕ್ಯಾಪ್ ಪಡೆದುಕೊಂಡಿದೆ. ಬೈಕಿನ ಟೈಲ್‍ಲ್ಯಾಂಪ್ ರಿವರ್ಸ್ ಮಾಡಲಾಗಿದ್ದು, ಹೊಸ ಪ್ಯಾಷನ್ ಪ್ರೋ ಎರಡು ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಹೊಂದಿರುವ ವೇರಿಯಂಟ್‍ಗಳಲ್ಲಿ ಲಭ್ಯವಿರಲಿದೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಇದಲ್ಲದೆ ಸೆಮಿ ಡಿಜಿಟಲ್ ಇನ್ಸ್ಟ್ರೂಮೆಂಟ್ ಕಂಸೋಲ್ ಫ್ಯುಯಲ್ ಗೌಜ್, ಟ್ರಿಪ್ ಮೀಟರ್ ಮತ್ತು ಸೈಡ್ ಸ್ಟಾಂಡ್ ಇಂಡಿಕೇಟರ್ ಕಾಣಬಹುದಾದ ಆಯ್ಕೆಗಳನ್ನು ಪಡೆದಿದ್ದು, ಸ್ಪೋರ್ಟ್ಸ್ ರೆಡ್, ಬ್ಲಾಕ್ ಮೊನೊಟೋನ್, ಫೋರ್ಸ್ಡ್ ಸಿಲ್ವರ್, ಹೆವಿ ಗ್ರೇ ಮತ್ತು ಫ್ರೋಸ್ಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿರಲಿದೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಹೀರೋ ಪ್ಯಾಷನ್ ಎಕ್ಸ್ ಪ್ರೋ

ಪ್ಯಾಷನ್ ಎಕ್ಸ್ ಪ್ರೋ ಬೈಕ್ ಯುವ ಸಮುದಾಯವನ್ನು ಸೆಳೆಯಲು ಆಧರಿಸಿ ತಯಾರು ಮಾಡಲಾಗಿದ್ದು, ಡೈನಾಮಿಕ್ ಷ್ರಾಡ್ಸ್, ವಿವಿಧ ಕೌಲ್ ಡಿಸೈನ್ ಮತ್ತು ಎಲ್ಇಡಿ ಟೈಲ್‍ಲ್ಯಾಂಪ್ ಗಳನ್ನು ಪಡೆದಿದೆ. ಇದು ಹೀರೋ ಬೈಕಿನಂತೆಯೇ ಇನ್ಸ್ಟ್ರೂಮೆಂಟ್ ಕಂಸೋಲ್ ಪಡೆದಿದ್ದು, 9.2 ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಪಡೆದಿರಲಿದೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಹೊಸ ಎಕ್ಸ್ ಪ್ರೋ ಬೈಕ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿದ್ದು, ಸ್ಫೊರ್ಟ್ಸ್ ರೆಡ್ + ಬ್ಲಾಕ್, ಬ್ಲಾಕ್+ ಸ್ಪೋರ್ಟ್ಸ್ ರೆಡ್, ಬ್ಲಾಕ್ + ಟೆಕ್ನೊ ಬ್ಲೂ, ಬ್ಲಾಕ್ + ಹೆವಿ ಗ್ರೇ, ಮತ್ತು ಫೋರ್ಸ್ ಸಿಲ್ವರ್ + ಬ್ಲಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದಲ್ಲದೆ ಜೊತೆಗೆ ಟ್ಯೂಬ್‍ಲೆಸ್ ಟೈರ್ ಆಯ್ಕೆ ಕೂಡ ಪಡೆದಿದೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಎಂಜಿನ್ ಸಾಮರ್ಥ್ಯ

ಹೊಸ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ ಬೈಕ್ ಬಿಎಸ್ 4 110ಸಿಸಿ ಅಳವಡಿಸಲಾಗಿದ್ದು, 9.3 ಬಿಹೆಚ್‍ಪಿ ಮತ್ತು 9ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಯಾಯ್ತು ಹೀರೋ ಪ್ಯಾಷನ್ ಪ್ರೋ ಮತ್ತು ಎಕ್ಸ್ ಪ್ರೋ..

ಬೈಕ್‍ಗಳ ಏಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, 7.45 ಸೆಕೆಂಡುಗಳಿಗೆ ಗಂಟೆಗೆ 60 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಹೀರೋ ಸಂಸ್ಥೆಯ ಐ3ಎಸ್ ತಂತ್ರಜ್ಞಾನವನ್ನು ಕೂಡ ಬಳಸಲಾಗಿದೆ.

English summary
Hero Passion PRO & XPRO Launched In India.
Story first published: Wednesday, March 14, 2018, 10:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark